ವೈವಿಧ್ಯತೆಯ ಸಮಾಧಿ ಮೇಲೆ UPSC ಕಟ್ಟಲು ಹೊರಟ ಎಲೈಟ್ ವ್ಯವಸ್ಥೆ
– ವಸಂತ್ ಶೆಟ್ಟಿ
ಯು.ಪಿ.ಎಸ್.ಸಿ ತನ್ನ ಪರೀಕ್ಷಾ ನಿಯಮಾವಳಿಗಳನ್ನು ಬದಲಾಯಿಸಿದ್ದು, ಅದಕ್ಕೆ ಮಾನ್ಯ ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿಸಿರುವ ಸುದ್ದಿಯಿದೆ. ಈ ಬದಲಾವಣೆಗಳನ್ನು ಹಲವಾರು ರಾಜ್ಯಗಳು ವಿರೋಧಿಸಿವೆ. ಈ ಬದಲಾವಣೆಗಳೇನು ಮತ್ತು ರಾಜ್ಯಗಳು ಯಾಕೆ ವಿರೋಧಿಸಿವೆ ಎಂದು ಯು.ಪಿ.ಎಸ್.ಸಿ ಮಿಂಬಲೆ ತಾಣ (ಪುಟ 12) ನೋಡಿದಾಗ ಕಂಡಿದ್ದು ನಿಜಕ್ಕೂ ಅಚ್ಚರಿ ತರುವಂತದ್ದು. ಭಾರತದ ವೈವಿಧ್ಯತೆಯನ್ನು ಶವಪೆಟ್ಟಿಗೆಯೊಳಗೆ ಕೂರಿಸಿ ಪೆಟ್ಟಿಗೆಗೆ ಹೊಡೆಯುತ್ತಿರುವ ಮೊಳೆಗೆ ಇನ್ನೊಂದು ಮೊಳೆ ಸೇರ್ಪಡೆಯಾಗಿದೆ. ಯು.ಪಿ.ಎಸ್.ಸಿಯ ಬದಲಾದ ನಿಯಮಗಳು ಮತ್ತು ಕನ್ನಡಿಗನೊಬ್ಬನ ಮೇಲೆ ಅದರ ಪರಿಣಾಮಗಳು ಇಂತಿವೆ:
- ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಸಾಹಿತ್ಯದ ಪದವಿ ಪಡೆದವರು ಮಾತ್ರ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಮುಖ್ಯ ಪರೀಕ್ಷೆ ಬರೆಯಬಹುದು. ಹಿಂದಿನಂತೆ ಯಾವುದೇ ಮಾಧ್ಯಮದಲ್ಲಿ, ಯಾವ ವಿಷಯವನ್ನೇ ಓದಿದ್ದರೂ ಐಚ್ಛಿಕ ವಿಷಯವಾಗಿ ಅಭ್ಯರ್ಥಿಯ ತಾಯ್ನುಡಿಯಲ್ಲಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳಲಾಗದು. ಆದರೆ ಈ ನಿಯಮ ಐಚ್ಛಿಕ ವಿಷಯಗಳ ಪಟ್ಟಿಯಲ್ಲಿರುವ ಗಣಿತ, ಅರ್ಥಶಾಸ್ತ್ರ, ಇಂಜಿನಿಯರಿಂಗ್ ಮುಂತಾದ ವಿಷಯಗಳಿಗೆ ಅನ್ವಯಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರತಿಭೆಗಳು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಾಹಿತ್ಯದ ವಿಷಯಕ್ಕೆ ಮಾತ್ರ ರೂಪಿಸಲಾಗಿದೆ. ಕನ್ನಡದಂತಹ ನುಡಿಯಲ್ಲಿ ಲಭ್ಯವಿದ್ದಿದ್ದೇ ಸಾಹಿತ್ಯದಂತಹ ವಿಷಯಗಳು. ಈಗ ಕೇವಲ ಸಾಹಿತ್ಯ ಓದಿದವರಿಗೆ ಮಾತ್ರ ಅದನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಬಹುದು ಅನ್ನುವ ಮೂಲಕ ಇಂಜಿನಿಯರಿಂಗ್, ಕಾನೂನು, ವೈದ್ಯಕೀಯ ಪದವಿ ಪಡೆದು ಕನ್ನಡ ಸಾಹಿತ್ಯ ಆಯ್ದುಕೊಂಡು ಪರೀಕ್ಷೆ ಬರೆಯುತ್ತಿದ್ದ ಕನ್ನಡಿಗರಿಗೆ ಮೋಸವಾಗಲಿದೆ. ಇದೇ ಪಾಡು ಇತರೆ ಭಾಷಿಕರದ್ದು ಆಗಲಿದೆ.
- ಯಾವ ಮಾಧ್ಯಮದಲ್ಲಿ ಅಭ್ಯರ್ಥಿಯ ಡಿಗ್ರಿ ಆಗಿದೆಯೋ ಅದೇ ಮಾಧ್ಯಮದಲ್ಲಿ ಆತ ಪರೀಕ್ಷೆ ಬರೆಯಬೇಕು. ಅಂದರೆ ಇಂಗ್ಲಿಶ್ ಮಾಧ್ಯಮದಲ್ಲಿ ಡಿಗ್ರಿ ಓದಿದ ಕನ್ನಡಿಗನೊಬ್ಬ ಕನ್ನಡ ಭಾಷೆಯಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತಿಲ್ಲ. ಕರ್ನಾಟಕದಿಂದ ಇತ್ತಿಚೆಗೆ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುತ್ತಿರುವವರಲ್ಲಿ ಬಹಳಷ್ಟು ಜನರು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಕಾನೂನು ವೃತ್ತಿಯಿಂದ ಬಂದವರು ಮತ್ತು ತಮ್ಮ ಡಿಗ್ರಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪಡೆದವರು, ಆದರೆ ಅವರಾರು ಈ ನಿಯಮದ ದೆಸೆಯಿಂದ ಬಯಸಿದರೂ ಕನ್ನಡದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲಾರರು.
- ಮತ್ತಷ್ಟು ಓದು

ಟಿಪ್ಪು ಹೊಗಳಿದ ಮೇಲೆ ಕೋವಿದನೂ ಅಲ್ಲ ಕೋದಂಡನೂ ಅಲ್ಲ
– ಸಂತೋಶ್ ತಮ್ಮಯ್ಯ
ಕೊಡವರಿಗೆ ಕಾವೇರಮ್ಮನ ಶಾಪವಿದೆಯಂತೆ, ಬ್ರಹ್ಮಹತ್ಯಾದೋಷವೂ, ನಾಗದೋಷವೂ ಕಾಡುತ್ತಿದೆಯಂತೆ. ಹಾಗಾಗಿ ಕೊಡವರಿಗೆ ಶಾಂತಿ ನೆಮ್ಮದಿ ಇಲ್ಲವಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಅದು ಕಂಡುಬಂದಿದೆಯಂತೆ. ಇದು ಸದ್ಯ ಕೊಡಗಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ದೋಷ, ಶಾಪ, ಪ್ರಶ್ನೆ, ಅದಕ್ಕಿರುವ ಪರಿಹಾರಗಳು ಏನೇನಿವೆಯೋ ಗೊತ್ತಿಲ್ಲ. ಆದರೆ ಒಂದು ಶಾಪವಂತೂ ಅಷ್ಟಮಂಗಲ ಪ್ರಶ್ನೆಯ ಹೊರತಾಗಿಯೂ ಪ್ರಜ್ನಾವಂತ ಕೊಡವರಿಗೆ ತಿಳಿದೇ ಇದೆ.
ಅದೆಂದರೆ ಕರ್ನಾಟಕದ ಎಲ್ಲರಿಗೂ ಕೊಡಗಿಗೆ ಹೋದಾಗ ಅಲ್ಲಿನ ಯೋಧರು, ಧೀರರು, ಶೂರರು ಎಲ್ಲರೂ ನೆನಪಾಗಿಬಿಡುತ್ತಾರೆ. ಮಡಿಕೇರಿಗೆ ಬಂದ ರಾಜಕಾರಣಿಗಳು, ಸಾಹಿತಿಗಳಿಗೆ ಯೋಧರನ್ನು ಹೊರತಾಗಿಸಿ ಮಾತು ಹೊರಬರುವುದೇ ಇಲ್ಲ. ಅವರೆಲ್ಲರಿಗೂ ಭಾಷಣಕ್ಕೆ, ಸಾಹಿತ್ಯಕ್ಕೆ, ಸಿನಿಮಾಕ್ಕೆ ಕೊಡಗಿನ ಯೋಧರು, ಬ್ರಹ್ಮಗಿರಿ, ಕಾವೇರಮ್ಮೆ, ಇಗ್ಗುತ್ತಪ್ಪರು ಬೇಕು. ಆದರೆ ಅವರೆಲ್ಲರೂ ಟಿಪ್ಪು ವಿಷಯಕ್ಕೆ ಬಂದರೆ ಟಿಪ್ಪು ಆ ಯೋಧರನ್ನೆಲ್ಲಾ ಮೀರಿ ನಿಂತುಬಿಡುತ್ತಾನೆ! ಅಂದರೇ ಧರ್ಮಕ್ಕಾಗಿ ಹೋರಾಡಿದ ಕೊಡಗಿನ ಯೋಧರು ಸಾಹಿತಿಗಳ ಪ್ರಕಾರ ಸೆಕ್ಯುಲರ್ ಆಗಿಬಿಡುತ್ತಾರೆ. ಈ ಸೆಕ್ಯುಲರ್ ವ್ಯಾದಿ ಸಾಹಿತಿಗಳ ಪ್ರಾರಬ್ಧವಾದರೂ ಕೊಡವರ ಪಾಲಿಗೆ ಅದು ಶಾಪ. ಅವರ ಭಾವನೆಗಳ ಮೇಲಿನ ಚೆಲ್ಲಾಟ. ಏಕೆಂದರೆ ಈ ಸೆಕ್ಯುಲರ್ ವ್ಯಾದಿ ಟಿಪ್ಪುವನ್ನು ಹೊಗಳಲು ಕೊಡವರ ಬಲಿದಾನವನ್ನೂ ತಿರುಚಲೂ ಹಿಂಜರಿಯುವುದಿಲ್ಲ. ಹೀಗೆ ಟಿಪ್ಪುವನ್ನು ಹೊಗಳುತ್ತಾ ಕೊಡವರ ಯೋಧತನವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ? ಸಾಧ್ಯವಿಲ್ಲ ನಿಜ. ಆದರೆ ಅದು ನಿರಂತರ ನಡೆಯುತ್ತಲೇ ಇದೆ. ಕೊಡಗಲ್ಲೇ ಕೆಲವರು ಭಂಡರಿದ್ದಾರೆ. ಅಂಥವರಿಗೆ ಅಷ್ಟು ಮಾತುಗಳು ಸಾಕಾಗುತ್ತವೆ. ಸಾಹಿತಿ-ರಾಜಕಾರಣಿಗಳಿಗೆ ಚಪ್ಪಾಳೆಗಳು ಭರಪೂರ ಗಿಟ್ಟುತ್ತವೆ. ಹಾಗಾಗಿ ಕಾರ್ನಾಡರೂ “ಟಿಪ್ಪು ಸುಲ್ತಾನ ಕಂಡ ಕನಸು” ಎಂದು ಬರೆಯುತ್ತಾರೆ. ಕೆಲವರು “ಟಿಪ್ಪು ಜನ್ಮದಿನವನ್ನು ಆಚರಿಸಲು ಶಾಲೆಗಳಿಗೆ ರಜಾ ಘೋಷಿಸಲಾಗುವುದು” ಎನ್ನುತ್ತಾರೆ. ಇನ್ನೊಬ್ಬರು ” ಟಿಪ್ಪು ಓರ್ವ ಸಂತ” ಎಂದುಬಿಡುತ್ತಾರೆ. ವಿಚಿತ್ರವೆಂದರೆ ಇವರೆಲ್ಲರೂ ಹೀಗೆ ಹೇಳುವ ಮೊದಲು ಮಡಿಕೇರಿಯ ಯುದ್ಧ ಸ್ಮಾರಕಗಳಿಗೆ ಹಾರ ಹಾಕಿ ಬಂದಿರುತ್ತಾರೆ. ಇವನ್ನೆಲ್ಲಾ ಕೇಳುವುದು, ನೋಡುವುದೇ ಕೊಡಗಿನವರ ಪಾಲಿನ ಶಾಪ. ಏಕೆಂದರೆ ಕೊಡಗಲ್ಲಿ ಬಂದು ಟಿಪ್ಪುವನ್ನು ಹೊಗಳುವುದೆಂದರೆ ಕೊಡಗಿನ ಪೂರ್ವಜರನ್ನು ನಿಂದಿಸಿದಂತೆಯೇ.
ಭಾರತ ಕಂಡ ವಿಶ್ವಶ್ರೇಷ್ಠ ಗುರು ಶ್ರೀರಾಮಕೃಷ್ಣ ಪರಮಹಂಸ
– ಶ್ರೀವಿದ್ಯಾ,ಮೈಸೂರು
ರಾಮಕೃಷ್ಣ ಪರಮಹಂಸರು ಪರಮದೈವಭಕ್ತ. ಯಾವಾಗಲೂ ದೇವರನ್ನು ಕುರಿತು ಚಿಂತಿಸುತ್ತಿದ್ದರು. ಅವರಿಗೆ ಎಲ್ಲರಲ್ಲಿಯೂ ದೇವರ ಭಾವನೆಯಿತ್ತು. ಅವರು ಸಾಧಾರಣ ಗುರುಗಳಲ್ಲ. ದೇವರನ್ನು ನೋಡುವ ಶಕ್ತಿಯ ಮಟ್ಟದಲ್ಲಿರುವ ಗುರುಗಳು. ಧ್ಯಾನ ಮಾಡುವಾಗಲೆಲ್ಲಾ ದೇವರ ಜೊತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು ಎಂದು ಅವರ ಶಿಷ್ಯರು ಹೇಳುತ್ತಿದ್ದರು. ಅವರು ನಮ್ಮನ್ನು ಪ್ರೀತಿಯಿಂದ ಮಕ್ಕಳ ತರಹ ನೋಡುವರು.ಅವರು ಹೇಳುತ್ತಿದ್ದರು “ಮುಗ್ಧ ಮನಸ್ಸುಳ್ಳವರು ದೊಡ್ಡ ಜ್ಞಾನಿಗಳಾಗುವರು”. ಅವರ ಮನಸ್ಸನ್ನು ನಾವು ಅರ್ಥ ಮಾಡಿಕೊಂಡರೆ ಅವರೆಷ್ಟು ಮಹಾತ್ಮರೆಂದು ಗೊತ್ತಾಗುವುದು. ಅವರು ಎಲ್ಲಾ ಧರ್ಮಗಳನ್ನು ಹಾಗೂ ದೇವರನ್ನು ಗೌರವದಿಂದ ನೋಡುತ್ತಿದ್ದರು. ಅವರು ತನ್ನ ಪತ್ನಿ ಶಾರದಾದೇವಿಯವರನ್ನು ತಾಯಿಯ ಭಾವನೆಯಿಂದ ನೋಡುತ್ತಿದ್ದರು. ಕಾಳಿಮಾತೆಯ ಭಕ್ತರಾಗಿದ್ದರು. ಅವರಿಗೆ ವಿಷಿಷ್ಟವಾದ ಶಕ್ತಿ ಇದ್ದರೂ ಕೂಡ ಜನರಿಗೆ ಸುಲಭವಾಗಿ ಹಂತ ಹಂತವಾಗಿ ವಿಗ್ರಹ ಪೂಜೆ ಮಾಡುವುದನ್ನು ತೋರಿಸಿದರು. ಅವರು ಕರುಣಾಮಯಿ. ವಿವೇಕಾನಂದನನ್ನು ತನ್ನ ಸ್ನೇಹಿತ ಹಾಗೂ ಮಗನಂತೆ ನೋಡಿಕೊಳ್ಳುತ್ತಿದ್ದರು. ರಾಮಕೃಷ್ಣರಿಗೆ ವಿವೇಕಾನಂದನಲ್ಲಿ ಅಪಾರ ವಿಶ್ವಾಸವಿತ್ತು ಹಾಗೂ ವಿವೇಕಾನಂದ ಮಹಾನ್ ವ್ಯಕ್ತಿ ಆಗುವನೆಂದು ಭರವಸೆ ಇತ್ತು. ಆದರೆ, ವಿವೇಕಾನಂದ ಅದನ್ನು ನನಸಾಗಿಸಿದರು. ವಿವೇಕಾನಂದ ರಾಮಕೃಷ್ಣರ ಸಂದೇಶಗಳನ್ನು ಜಗತ್ತಿಗೆ ಸಾರಿದರು.ರಾಮಕೃಷ್ಣರಲ್ಲಿ ಅಹಂಕಾರ, ಕಾಮ, ಮೋಹ, ವಂಚನೆ ಯಾವುದೂ ನುಸುಳುತ್ತಿರಲಿಲ್ಲ. ಆದರೆ ಕೆಲವರಿಗೆ ರಾಮಕೃಷ್ಣ- ಶಾರದಾದೇವಿ ಪ್ರೀತಿಯ ಮೇಲೆ ತಪ್ಪಾಗಿ ಭಾವಿಸಿದ್ದಾರೆ. ಆದರೆ ಅವರಿಗೆ ಲೈಂಗಿಕ ಜೀವನದ ಮೇಲೆ ಒಂದು ಚೂರು ಆಸಕ್ತಿ ಇರಲಿಲ್ಲ. ಶಾರದಾದೇವಿಯವರು ರಾಮಕೃಷ್ಣರ ಸೇವೆ ಮಾಡುತ್ತಿದ್ದರು. ರಾಮಕೃಷ್ಣರು ಶಾರದಾದೇವಿಯವರನ್ನು ತಾಯಿ-ಮಗು ಭಾವನೆಯಿಂದ ನೋಡುತ್ತಿದ್ದರು. ಶಾರದಾದೇವಿಯವರಿಗೆ ಆರೋಗ್ಯ ಸರಿ ಇಲ್ಲದಿರುವಾಗ ಮಹಿಳೆಯರನ್ನು ಕಳುಹಿಸಿ ಶುಶ್ರೂಷೆ ಮಾಡಿಸುತ್ತಿದ್ದರು. ಶಾರದಾಮಾತೆಗೆ ಒಂದು ಚೂರು ನೋವಾಗದಂತೆ ಹೂವಿನ ತರಹ ನೋಡಿಕೊಳ್ಳುತ್ತಿದ್ದರು. ಇದರಲ್ಲಿ ಯಾಕೆ ಅನುಮಾನ, ತಪ್ಪು ಭಾವನೆ ?? ಅವರ ಗುಣಗಳು, ಆದರ್ಶಗಳು ತುಂಬಾ ಅದ್ಭುತ. ಅವರಿಂದ ವಿವೇಕಾನಂದ ಜಗತ್ತಿನಲ್ಲಿ ಮಹಾನ್ ವ್ಯಕ್ತಿಯಾಗಿದ್ದು !! ಅವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ !! ಹಿಂದೂ ಪಂಚಾಂಗದ ಪ್ರಕಾರ ಇಂದು ಅವರ ಜನ್ಮಜಯಂತಿ ಪ್ರಯುಕ್ತ ಅವರ ಜೀವನವನ್ನು ಓದಿ ..
ಬಂಗಾಳದ ಕಾಮಾರಪುಕುರದಲ್ಲಿ ಧರ್ಮಿಷ್ಠ ಬ್ರಾಹ್ಮಣ ಕುಟುಂಬ. ಭಕ್ತಿ-ಭವ್ಯತೆಯ ಸಾತ್ವಿಕ ಜೀವನಕ್ಕೆ ಹೆಸರುವಾಸಿಯಾದ ಮನೆತನ. ಕ್ಷುದೀರಾಮ ಚಟ್ಟೋಪಾಧ್ಯಾಯ ಮನೆಯ ಯಜಮಾನ. ಚಿನ್ನ-ಬೆಳ್ಳಿ, ಹಣ-ಕಾಸು, ಭೂಮಿ-ಕಾಣಿ ಅಷ್ಟಾಗಿ ಏನೂ ಇಲ್ಲದ ದೌಭಾಗ್ಯ ದೇವತೆಯ ದಾಸನಾಗಿದ್ದರೂ, ಪ್ರಾಮಾಣಿಕತೆ, ಸತ್ಯಸಂಧತೆ, ನ್ಯಾಯನಿಷ್ಠತೆ, ಧರ್ಮ ಪರಾಯಣತೆಗೆ ಕಾಮಾರಪುಕುರದಲ್ಲಿಯೇ ಅಲ್ಲ, ನೆರೆಹೊರೆಯ ಗ್ರಾಮಗಳಲ್ಲಿಯೂ ಹೆಸರುವಾಸಿಯಾಗಿದ್ದನು.
ASER ವರದಿ 2012 ಮತ್ತು ಕರ್ನಾಟಕದ ಕಲಿಕೆ ಒಳನೋಟ – 1
-ಪ್ರಶಾಂತ ಸೊರಟೂರ
ASER (Annual Status Education Report – ಕಲಿಕೆ ಗುಣಮಟ್ಟದ ವರುಶದ ವರದಿ)
ಇದು ಸರಕಾರೇತರ ಸಂಸ್ಥೆಯಾದ ’ಪ್ರಥಮ್’ನಿಂದ ಕಲಿಕೆಯ ಗುಣಮಟ್ಟ ತಿಳಿದುಕೊಳ್ಳಲು 2005ರಿಂದ ಪ್ರತಿ ವರುಶ, ಇಂಡಿಯಾದ ಸುಮಾರು 15,000 ಹಳ್ಳಿ ಪ್ರದೇಶದ ಶಾಲೆಗಳಲ್ಲಿ ಅರಸುವಿಕೆ (ಸಮೀಕ್ಷೆ) ನಡೆಸಿ ಹೊರತರಲಾಗುತ್ತಿರುವ ವರದಿ.
ASER ಕಲಿಕೆಮಟ್ಟವನ್ನು ಒರೆಗೆಹಚ್ಚುವ ಬಗೆ:
ಇಂಡಿಯಾದ ಪ್ರತಿ ಜಿಲ್ಲೆಯಲ್ಲಿ 30 ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತದೆ. (ಹಿಂದಿನ ಎರಡು ವರುಶದ 20 ಮತ್ತು 10 ಹೊಸ ಹಳ್ಳಿಗಳು).
ಹಳ್ಳಿಗಳ ಗುಣಮಟ್ಟ (ರಸ್ತೆ, ಮನೆಗಳು ಇತ್ಯಾದಿ), ಕುಟುಂಬದ ಗುಣಮಟ್ಟ (ತಂದೆ-ತಾಯಿಯ ಕಲಿಕೆ, ಮನೆ ಇತ್ಯಾದಿ), ಶಾಲೆಯ ಗುಣಮಟ್ಟ (ಶಿಕ್ಶಕರು-ಮಕ್ಕಳ ಅನುಪಾತ, ಕಲಿಕೆಯ ಸಲಕರಣೆಗಳು, ಕುಡಿಯುವ ನೀರು, ಓದುಮನೆ) ಮುಂತಾದವುಗಳನ್ನು ಈ ಅರಸುವಿಕೆಯು (ಸಮೀಕ್ಶೆಯು) ಒಳಗೊಂಡಿರುತ್ತದೆ.
6 – 14 ವಯಸ್ಸಿನ (1 ರಿಂದ 7/8 ನೇ ತರಗತಿ) ಮಕ್ಕಳು ಈ ವರದಿಗೆ ಒಳಪಡುತ್ತಾರೆ.ಕಲಿಕೆಯ ಗುಣಮಟ್ಟವನ್ನು ASER ನ ಮೂರು ಸಲಕರಣೆಗಳಿಂದ ಅಳೆಯಲಾಗುತ್ತದೆ. 1) ತಾಯ್ನುಡಿಯಲ್ಲಿ ಓದುವಿಕೆಯ ಮಟ್ಟ 2) ಇಂಗ್ಲಿಶ ಓದುವಿಕೆಯ ಮಟ್ಟ 3) ಗಣಿತ ಕಲಿಕೆಯ ಮಟ್ಟ (ಕಳೆಯುವಿಕೆ ಮತ್ತು ಭಾಗಾಕಾರ)
ಜೊತೆಗೆ 2012ರ ವರದಿಯಲ್ಲಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ, ಸರಕಾರ ಮತ್ತು ಖಾಸಗಿ ಶಾಲೆಗಳ ಪ್ರಮಾಣ, ಹೊರಕಲಿಕೆಗೆ (ಟ್ಯೂಶನ್) ಹೋಗುವವರ ಪ್ರಮಾಣ ಮುಂತಾದವುಗಳ ಕುರಿತು ತಿಳಿಸಲಾಗಿದೆ.
2012 ರಲ್ಲಿ ಕರ್ನಾಟಕದ 778 ಹಳ್ಳಿಗಳ, ಸುಮಾರು 18,000 ಸಾವಿರ ಮಕ್ಕಳು ಈ ಆರಸುವಿಕೆಗೆ (ಸಮೀಕ್ಷೆಗೆ) ಒಳಪಟ್ಟಿದ್ದರು.
ಮತ್ತಷ್ಟು ಓದು 
ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್
-ಡಾ. ಅಶೋಕ್ ಕೆ ಆರ್
ಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ. ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.
“ಸೆವೆನ್ ಸಿಸ್ಟರ್ಸ್” ಎಂದೇ ಹೆಸರಾಗಿರುವ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪುಟ್ಟ ಮತ್ತು ಕೊನೆಯ ರಾಜ್ಯ ತ್ರಿಪುರ. ತ್ರಿಪುರದಲ್ಲಿ 1998ರಿಂದಲೂ ಮುಖ್ಯಮಂತ್ರಿಯಾಗಿರುವವರು ಮಾಣಿಕ್ ಸರ್ಕಾರ್! ಜನವರಿ 22 1949ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಾಣಿಕ್ ಸರ್ಕಾರ್ ವಿಧ್ಯಾರ್ಥಿ ದೆಸೆಯಲ್ಲಿದ್ದಾಗ ನಕ್ಸಲ್ ವಿಚಾರಧಾರೆಗಳಿಗೆ ಆಕರ್ಷಿತರಾಗಿ ಕಮ್ಯುನಿಷ್ಟ್ ಪಕ್ಷ ಸೇರಿದರು. ಎಸ್ ಎಫ್ ಐನ ಪ್ರತಿನಿಧಿಯಾಗಿ, ಎಸ್ ಎಫ್ ಐನ ರಾಜ್ಯ ಕಾರ್ಯದರ್ಶಿಯಾಗಿ, ಅದೇ ಎಸ್ ಎಫ್ ಐನ ಅಖಿಲ ಭಾರತ ಸಮಿತಿಗೆ ಉಪಾಧ್ಯಕ್ಷನಾಗಿ ತಮ್ಮ ಹೋರಾಟದ ಹಾದಿಯನ್ನು ಮುಂದುವರೆಸಿದ ಮಾಣಿಕ್ 1972ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಮಿಟಿಯ ಸದಸ್ಯನಾಗಿ ಆಯ್ಕೆಯಾಗುತ್ತಾರೆ. 1978ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಾರ್ಯದರ್ಶಿಯಾಗುತ್ತಾರೆ. ಅದೇ ವರ್ಷ ಎಡರಂಗ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತದೆ. 1985ರಲ್ಲಿ ಮಾಣಿಕ್ ಸರ್ಕಾರ್ ಪಕ್ಷದ ಸೆಂಟ್ರಲ್ ಕಮಿಟಿಯ ಸದಸ್ಯರಾಗುತ್ತಾರೆ.
‘ಮಾನವ ಹಕ್ಕು ಉಲ್ಲಂಘನೆ’ ಅನ್ನುವುದು ಮೋದಿಗೆ ಮಾತ್ರ ಅನ್ವಯವೇ?
– ರಾಕೇಶ್ ಶೆಟ್ಟಿ
ಕಳ್ಳಬೆಕ್ಕು ತೀರ್ಥಯಾತ್ರೆಗೆ ಹೊರಟು ನಿಂತ ಕತೆ ಗೊತ್ತಿದೆಯಲ್ವಾ! ಅಮೇರಿಕಾದ ವಾರ್ಟನ್-ಇಂಡಿಯಾ ಎಕಾನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಭಾಷಣ ಮಾಡಲು ಆಹಾನ ಕೊಟ್ಟು ಕಡೆಗೆ ಎಡಪಂಥೀಯರ ಒತ್ತಾಯಕ್ಕೆ ಮಣಿದು ಅದನ್ನು ರದ್ದುಗೊಳಿಸಿ ಭಾರತದ ಸಂವಿಧಾನದಡಿ ಜನರಿಂದ ಚುನಾಯಿಸಿ ಬಂದ ಮುಖ್ಯಮಂತ್ರಿಯೊಬ್ಬರಿಗೆ ಅವಮಾನ ಮಾಡುವುದಿದೆಯಲ್ಲ ಅದು ಮೋದಿಗಾದ ಅವಮಾನವಲ್ಲ.ಬದಲಿಗೆ ಆ ರಾಜ್ಯಕ್ಕಾದ ಅವಮಾನ ಕೂಡ ಹೌದು.ಗುಜರಾತ್ ಗಲಭೆಯ ನಂತರ ಮೋದಿಯೆಡೆಗೆ ಬೆನ್ನು ತಿರುಗಿಸಿ ನಿಂತಿದ್ದ ಐರೋಪ್ಯ ಒಕ್ಕೂಟ ಇವತ್ತು ಸ್ನೇಹ ಹಸ್ತಚಾಚಿ ನಿಂತಿದೆ.ಆದರೆ ತೀರ್ಥಯಾತ್ರೆಗೆ ಹೊರಟು ನಿಂತ ಕಳ್ಳಬೆಕ್ಕು ಅಮೇರಿಕಾ ಮಾತ್ರ ಇನ್ನು ಹುಸಿ ಧ್ಯಾನದಲ್ಲಿದ್ದಂತಿದೆ.ಮೋದಿಯ ವಿಷಯದಲ್ಲಿ ಅದೂ ಈಗಲೂ ಹಟಮಾರಿ ಧೋರಣೆಯನ್ನು ಮುಂದುವರೆಸಿಕೊಂಡು ಬಂದಿದೆ.
“ನೀವು ಬಯಸುವ ಬದಲಾವಣೆ ನೀವೆ ಆಗಿ ತೋರಿಸಿ” ಅಂದಿದ್ದರು ಗಾಂಧೀಜಿ.ಆದರೆ ಅಮೇರಿಕಾದ ವರಸೆ ಸಲ್ಪ ಉಲ್ಟಾ ಈ ವಿಷಯದಲ್ಲಿ “ತಾನು ಬಯಸುವ ಬದಲಾವಣೆ ಬೇರೆಡೆಯಲ್ಲಿ,ಬೇರಯವರಿಂದ ಆಗಬೇಕು.ತಾನು ಮಾತ್ರ ತನ್ನ ಚಾಳಿ ಬಿಡಲಾರೆ” ಅನ್ನುವಂತೆ.ಮೋದಿಯ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಭಾಷಣ ಬಿಗಿಯುವ ಈ ಅಮೇರಿಕಾ ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವುದೇನು?
ಕನ್ನಡ ಶಿಕ್ಷಕರು ಬೇಕಾಗಿದ್ದಾರೆ – ಕನ್ನಡಿಗರಿಗೆ ಆದ್ಯತೆ
ನಮಸ್ಕಾರ ಗೆಳೆಯರೇ,
ಬೆಂಗಳೂರಿನಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ” ಕನ್ನಡ ಲರ್ನಿಂಗ್ ಸ್ಕೂಲ್ ” ಸಂಸ್ಥೆ ಕೆಲಸ ಮಾಡುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ.
ಸಂತೋಷದ ವಿಷಯವೆಂದರೆ ಬಹಳಷ್ಟು ಜನ ಕನ್ನಡೇತರರು ಕನ್ನಡ ಕಲಿಯಲು ಆಸಕ್ತರಾಗಿದ್ದಾರೆ. ಇವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಗೆ ” ಕನ್ನಡ ಶಿಕ್ಷಕರು” ಬೇಕಾಗಿದ್ದಾರೆ.
ಕನ್ನಡ ಕಲಿಸುವ ಆಸಕ್ತಿ ಇದ್ದರೆ ಮತ್ತು ಈ ಕೆಳಗಿನ ನಿಯಮಗಳು ಒಪ್ಪಿಗೆಯಾದರೆ ನೀವು ನಮ್ಮನ್ನು ಸಂಪರ್ಕಿಸಬಹುದು:
************************************************************************************************************************
೧. ಕನ್ನಡ ಕಲಿಸುವ ತರಗತಿಗಳು ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಮಾತ್ರ ನಡೆಯುವುದರಿಂದ, ಪ್ರತಿ ವಾರಾಂತ್ಯ ೪ ಗಂಟೆ ನಿಮ್ಮ ಸಮಯವನ್ನು ಮೀಸಲಿಡುವಂತಿದ್ದರೆ ಮಾತ್ರ ನಿಮ್ಮ ಒಪ್ಪಿಗೆ ಸೂಚಿಸಿ.
೨. ಮೊದಲು ೨ ತಿಂಗಳು ” ಕನ್ನಡ ಕಲಿಸುವುದು ಹೇಗೆ” ಎನ್ನುವುದನ್ನು ತರಬೇತಿ ನೀಡಲಾಗುತ್ತದೆ. ಆ ನಂತರವಷ್ಟೇ ಶಿಕ್ಷಕರು ತರಗತಿಗಳನ್ನು ತಾವಾಗಿಯೇ ತೆಗೆದುಕೊಳ್ಳಬಹುದು.
೩. ಕನ್ನಡೇತರರಿಗೆ ಕನ್ನಡ ಕಲಿಸುವ ಆಸಕ್ತಿ ಇರುವ ಅಭ್ಯರ್ಥಿಗಳಿಗೆ, “ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿರಬೇಕು ಹಾಗು ಸ್ವಲ್ಪ ಮಟ್ಟಿಗಿನ ಹಿಂದಿ ಭಾಷೆಯನ್ನೂ ತಿಳಿದಿರಬೇಕು”.
೪. ಬಿ. ಎ; ಬಿ.ಎಡ್ ಅಥವಾ ಎಮ್. ಎ ; ಎಂ.ಎಡ್ ಮಾಡಿದ ಅಥವಾ ಮಾಡುತ್ತಿರುವ ಅಭ್ಯರ್ಥಿಗಳಿಗೂ ಅವಕಾಶವಿದೆ.
೫. ಕನ್ನಡ ಪಾಠ ಹೇಳಿ ಕೊಡುವ ಶಿಕ್ಷಕರಿಗೆ ಇಂತಿಷ್ಟು ಸಂಭಾವನೆ ಕೊಡಲಾಗುವುದು.
೬. ವಯಸ್ಸಿನ ಮಿತಿ ೨೫ ರಿಂದ ೪೦ ರ ವರೆಗೆ.
೭. ಕೊನೆಯದಾಗಿ ತಮಗೆ ಆಸಕ್ತಿ ಇದ್ದರಷ್ಟೇ ನಮಗೆ ಉತ್ತರವನ್ನು ಬರೆಯಿರಿ.
೮. ಆಸಕ್ತರು ತಮ್ಮ ಜಾತಕವನ್ನು ನಮಗೆ ಕಳಿಸಬಹುದು: school.kannada@gmail.com
೯. ಖಾಲಿ ಇರುವ ಹುದ್ದೆಗಳ ಸಂಖ್ಯೆ : ೦೨.
************************************************************************************************************************
ಧನ್ಯವಾದಗಳೊಂದಿಗೆ,
ಕನ್ನಡ ಲರ್ನಿಂಗ್ ಸ್ಕೂಲ್ ತಂಡ.
“ಕನ್ನಡ ಕಲಿಸಲು ಕೈ ಜೋಡಿಸಿ”.
೯೯೦೦೫೭೭೨೨೫
ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ
-ಕ.ವೆಂ.ನಾಗರಾಜ್
ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಅವರುಗಳು, ವಿಶೇಷವಾಗಿ ಸ್ತ್ರೀಯರು, ಸಿಲುಕಿದ್ದಾರೆ. ರಾಷ್ಟ್ರೀಯತೆಯ ಸಮಸ್ಯೆ, ಪಾಸ್ ಪೋರ್ಟ್ ಪಡೆಯಲು ಸಮಸ್ಯೆ, ಆಸ್ತಿ-ಪಾಸ್ತಿಗಳ ಹಕ್ಕು ವರ್ಗಾವಣೆ ಸಮಸ್ಯೆ, ದೇಶದೊಳಗೆಯೇ ಪ್ರಯಾಣ ಮಾಡಲೂ ಸಮಸ್ಯೆ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಘೋರ ಸಮಸ್ಯೆ ಎಂದರೆ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಅಪಹರಿಸಿ, ಮತಾಂತರಿಸಿ, ಬಲವಂತ ವಿವಾಹಗಳನ್ನೂ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂ ಸ್ತ್ರೀಯರ ರಕ್ಷಣೆಗೆ ಅಲ್ಲಿ ಸೂಕ್ತ ಕಾನೂನುಗಳೇ ಇರದಿರುವುದು.
ಭಾರತದಲ್ಲಿ ಎಲ್ಲರಿಗೂ ಜಾತಿ-ಮತ ಭೇದವಿಲ್ಲದೆ ಸಮಾನ ಸಿವಿಲ್ ಮತ್ತು ಕ್ರಿಮಿನಲ್ ಕಾಯದೆಗಳಿರಬೇಕೆಂಬ ಒತ್ತಾಯಕ್ಕೆ ವಿರೋಧವಿರುವುದು ಮುಸಲ್ಮಾನರಿಂದಲೇ ಮತ್ತು ಅವರನ್ನು ಬೆಂಬಲಿಸುವ ಬುದ್ಧೂಜೀವಿಗಳು ಮತ್ತು ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಿಂದಲೇ. ಭಾರತದಲ್ಲಿ ಮುಸ್ಲಿಮರ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಅವರಿಗೇ ಪ್ರತ್ಯೇಕ ಕಾನೂನು-ಕಾಯದೆಗಳನ್ನು ಅವರ ಶರೀಯತ್ ಪ್ರಕಾರವೇ ರಚಿಸಲಾಗಿದೆ. ನೂರಾರು ಜನರ ಬಲಿ ತೆಗೆದುಕೊಂಡ/ತೆಗೆದುಕೊಳ್ಳುವ ಉಗ್ರರಿಗೂ ಇಲ್ಲಿ ರಕ್ಷಣೆಯಿದೆ. ಆದರೆ ಅಮಾಯಕ ಅತ್ಯಂತ ಅಲ್ಪಸಂಖ್ಯಾತರೆನಿಸಿರುವ ಹಿಂದೂಗಳಿಗೆ ಕನಿಷ್ಠ ಮೂಲಭೂತ ಸ್ವಾತಂತ್ರ್ಯವನ್ನೂ ಪಾಕಿಸ್ತಾನದಲ್ಲಿ ನಿರಾಕರಿಸಲಾಗಿದೆ. ಹಿಂದೂ ವಿವಾಹಗಳನ್ನು ಮಾನ್ಯ ಮಾಡಲು ಸೂಕ್ತ ಕಾನೂನು ರಚಿಸಬೇಕೆಂಬ ಒಟ್ಟು ಜನಸಂಖ್ಯೆಯ ಕೇವಲ ಶೇ. 3ರಷ್ಟು ಮಾತ್ರ ಉಳಿದಿರುವ ಹಿಂದೂಗಳ ಕೂಗು ಅಲ್ಲಿನ ಸರ್ಕಾರದ ಕಿವುಡು ಕಿವಿಗಳಿಗೆ ಇದುವರೆವಿಗೂ ಮುಟ್ಟಿಲ್ಲ. ಮಾನವ ಹಕ್ಕುಗಳ ಆಯೋಗದವರು, ಬುದ್ಧಿಜೀವಿಗಳೆನಿಸಿಕೊಂಡವರು, ಮುಂತಾದವರಿಗೆ ಇದು ಯೋಚಿಸಬೇಕಾದ ಸಂಗತಿಯೇ ಆಗಿಲ್ಲ.
ಮತ್ತಷ್ಟು ಓದು 




