ಬಯಲು ಆಲಯದೊಳಗೊ?ಆಲಯವು ಬಯಲೊಳಗೊ?
-ಮು. ಅ. ಶ್ರೀರಂಗ, ಬೆಂಗಳೂರು
“ಚಿಂತನ ಬಯಲು”ಸಾಹಿತ್ಯಿಕ ತ್ರೈಮಾಸಿಕದ ಎಪ್ರಿಲ್-ಜೂನ್ ೨೦೧೩ರ ಸಂಚಿಕೆಯಲ್ಲಿ ಡ ರಾಜಾರಾಮ ಹೆಗಡೆಯವರ “ಸಾಮಾಜಿಕ ಸಂಶೋಧನೆಗೆ ಮುಳುವಾಗುತ್ತಿರುವ ಜನಪ್ರಿಯ ಧೋರಣೆಗಳು”ಎಂಬ ಲೇಖನ ಓದಿ ಮನಸ್ಸಿಗೆ ತುಂಬಾ ಖೇದವಾಯಿತು. ಪ್ರಗತಿಪರರೆಂದು ಹೇಳಿಕೊಳ್ಳುವ ನಮ್ಮ ಬುದ್ಧಿಜೀವಿಗಳು ಚಿಂತಕರು ಯಾವಾಗ ಯಾವ ರೀತಿ ನಡೆದುಕೊಳ್ಳುತ್ತಾರೆಂದು ಯಾವ ಜ್ಯೋತಿಷಿಯೂ ಹೇಳಲಾರ! ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಇವರಲ್ಲಿ ಕೆಲವರು,ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಇದಕ್ಕೆ ಕಂಟಕ ಬಂದಾಗ ಅದನ್ನು ವಿರೋಧಿಸಿ ಜೈಲಿಗೂ ಹೋಗಿಬಂದು ಹೀರೋಗಳಾಗಿದ್ದವರು. ಆದರೆ ಈಗ ತಾನೇ ಮುಗಿದ ಲೋಕಸಭೆಯ ಉಪ ಚುನಾವಣೆಯಲ್ಲಿ ಈ ಹಿಂದೆ ಯಾವ ಪಕ್ಷದ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿತ್ತೊ ಆ ಪಕ್ಷದ ಪರವಾಗಿ ಪ್ರಚಾರ ಮಾಡಿ ಅದರ ಅಭ್ಯರ್ಥಿಗಳ “ಕೈ”ಯನ್ನು ಬಲಪಡಿಸಿ ಗೆಲ್ಲಿಸಿದರು. ಸಮಾಜದ ಎಲ್ಲಾ ರಂಗಗಳಲ್ಲಿ ಈ ಗುಂಪುಗಳು ಹೇಳಿದ್ದೆ ಕೊನೆಯ ಮಾತು. ಅವರು ವ್ಯಾಖ್ಯಾನಿಸಿದ ಪ್ರಕಾರ ನಡೆದರೆ ಮಾತ್ರ ಅದು ಅಭಿವ್ಯಕ್ತಿ ಸ್ವಾತಂತ್ರ್ಯ,ಪ್ರಗತಿಪರ ಚಿಂತನೆ. ಇತರರದ್ದೆಲ್ಲಾ ಪ್ರಗತಿ ವಿರೋಧಿ,ಜಾತೀಯತೆ,ಸನಾತನವಾದಿ,ಪುರೋಹಿತಶಾಹಿಯ ಪುನರುತ್ಹಾನದ ಹಿಡನ್ ಅಜೆಂಡಾ ಹೊಂದಿರುವಂತಹುದು………. ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇದುವರೆಗೆ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳತ್ತ ಮಾತ್ರ ಗಮನವಿರಿಸಿದ್ದ ಈ ಗುಂಪುಗಳು ಈಗ ಸಾಮಾಜಿಕ ಸಂಶೋಧನಾ ವಲಯದ ಕಡೆಗೂ ಗಮನ ಹರಿಸಿ ಅದನ್ನೂ ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಈ ಗುಂಪಿನಲ್ಲಿ ಹಲವರು “ನಾನಾ ಕಾರಣಗಳಿಂದ”ರಾಜ್ಯದ ಶಕ್ತಿ ಕೇಂದ್ರಕ್ಕೆ ಹತ್ತಿರವಾಗಿರುತ್ತಾರೆ,ಬೇಕಾಗಿದವರಾಗಿರುತ್ತಾರೆ.
ಅಲ್ಲಿನ ರಾಜಕಾರಣಿಗಳು ಈ ಚಿಂತಕರ ಚಾವಡಿಯ ಸದಸ್ಯರನ್ನು ಚದುರಂಗದ ಕಾಯಿಗಳಂತೆ ಉಪಯೋಗಿಸಿಕೊಳ್ಳುತ್ತಾ ಬಂದ್ದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಂದು ಕಿಟಕಿ ಬಾಗಿಲು ಕಂಬಗಳನ್ನು ಟೀಕಿಸಿದ ಬಂಡಾಯ ಸಾಹಿತಿಯೊಬ್ಬರು ಅದೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಕೊಠಡಿಯ ಮೆತ್ತನೆಯ ಖುರ್ಚಿ,ಓಡಾಡಲಿಕ್ಕೆ ಕಾರಿನ ಸುಖವನ್ನು ಅನುಭವಿಸಿದರು! ನಂತರ ಕೋಮುವಾದಿ ಎಂದು ತಾವೇ ಜರಿದಿದ್ದ ಪಕ್ಷವೊಂದರಿಂದ ಸಿಡಿದು ಬಂದ ನಾಯಕರು ಸ್ಥಾಪಿಸಿದ ಹೊಸ ಪಕ್ಷದಿಂದ ಚುನಾವಣೆಗೂ ನಿಂತರು. ಆಗ ಆ ನಾಯಕರು ಕೋಮುವಾದಿ ಎನಿಸಲ್ಲಿಲ್ಲ!
ನಮ್ಮ ಪತ್ರಿಕಾ ಮಾಧ್ಯಮಗಳು ಸಹ ಇದರಿಂದ ಹೊರತಾಗಿಲ್ಲ.ಕೆಲವು ಗುಂಪಿಗೆ,ಪಕ್ಷಕ್ಕೆ ಮುಖ ಪುಟದ ಮನ್ನಣೆ. ಉಳಿದವರಿಗೆ ಒಳ ಪುಟಗಳಲ್ಲಿ ಫಿಲ್ಲರ್ ತರಹ ಜಾಗ. ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ “ಕನ್ನಡದ ಅತ್ಯಂತ ವಿಶ್ವಾಸರ್ಹ”(!?)ದಿನ ಪತ್ರಿಕೆಯೊಂದು ನಾಲ್ಕೈದು ತಿಂಗಳ ಹಿಂದೆ ನಡೆದ “ವಚನಗಳು vs ಜಾತೀಯತೆ”ಚರ್ಚೆಯ ಸಮಯದಲ್ಲಿ ಯಾರಿಗೆ,ಯಾವ ರೀತಿಯ ಅಭಿಪ್ರಾಯಗಳಿಗೆ ಮನ್ನಣೆ ಕೊಟ್ಟಿತು ಎಂಬುದು “ನಿಲುಮೆ”ಯ ಓದುಗರಿಗೆ ತಿಳಿದಿದೆ.
ನಮ್ಮ ಬುದ್ಧಿಜೀವಿಗಳು ಚಿಂತಕರು ಯಾಕೆ ಹೀಗೆ ವರ್ತಿಸುತ್ತಾರೊ ತಿಳಿಯದು. ಅವರೆಲ್ಲಾ ಒಂದು ಬಾರಿ ಸಂಪೂರ್ಣ ರಾಜಕೀಯಕ್ಕೆ ಇಳಿದು ಬಿಡುವುದು ಒಳ್ಳೆಯದು. ೨೦೧೪ರ ಲೋಕಸಭೆಯ ಚುನಾವಣೆಗೆ ಈಗಲೇ ಸಿದ್ದತೆ ಮಾಡಿಕೊಳ್ಳಲಿ! ಸಂದರ್ಭ,ವಾತಾವರಣ ಚೆನ್ನಾಗಿದೆ. ಕೋಮುವಾದಿಗಳಿಂದ ಭಾರತಮಾತೆ ನೊಂದಿದ್ದಾಳೆ. ನಿರಾಸೆಗೊಳಿಸಬೇಡಿ!!!
ಚಿತ್ರ ಕೃಪೆ :sathiyam.tv





In the second line of my article instead of Dr|| by over sight I have typed D(in kannada).For this error I am very sorry and request Dr|| Rajarama Hegde to excuse me…Sriranga
ಮಾನ್ಯ ಶ್ರೀರಂಗ ಅವರೇ, ಹೆಸರಾಂತ ರಂಗಕರ್ಮಿ, ಕನ್ನಡದ ರಂಗಭೂಮಿಯ ಅಂತಃಸಾಕ್ಷಿ, ಪ್ರಸನ್ನ ಅವರು ಲಡಾಯಿ ಬ್ಲಾಗ್ ಸಂದರ್ಶನದಲ್ಲಿ ಏನು ಹೇಳಿದ್ದಾರೆ ನೋಡಿ:
ಹುಲಿಕುಂಟೆ ಮೂರ್ತಿ: ಇತ್ತೀಚೆಗೆ ಕರ್ನಾಟಕದ ಪ್ರಜ್ಞೆಯನ್ನು ಕಲಕಿದ ಎರಡು ವಿದ್ಯಮಾನಗಳು ಮಡೆಸ್ನಾನ ಮತ್ತು ಬಾಲಗಂಗಾಧರ ಗುಂಪಿನ ವಚನಗಳ ಕುರಿತ ಚರ್ಚೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ?
ಪ್ರಸನ್ನ: ಅದು ತಪ್ಪು ಎನ್ನದೆ ಇನ್ನೇನು ಹೇಳಲಿ ? ನಮ್ಮ ’ಚರಕ’ದಲ್ಲಿ ಇನ್ನೂರೈವತ್ತು ಜನ ಕೆಲಸ ಮಾಡ್ತಾರೆ. ಎಲ್ಲ ಬಡ ಹೆಣ್ಣುಮಕ್ಕಳು. ನಮ್ಮಲ್ಲಿ ಮೂರು ಟಾಯ್ಲೆಟ್ ಇದೆ. ಅವುಗಳನ್ನು ಎಲ್ಲರೂ ರೊಟೇಶನ್ನಲ್ಲಿ ಕ್ಲೀನ್ ಮಾಡಬೇಕು. ನಾವು ಅವರಿಗೆ ಮಡೆಸ್ನಾನ, ಜಾತಿವ್ಯವಸ್ಥೆ ಏನು ಹೇಳಲಿಲ್ಲ. ನಮ್ಮ ಪ್ರಾರ್ಥನಾ ಮಂದಿರದ ಮುಂದೆ ಕೆಲವರು ಗಣೇಶ ಮೂರ್ತಿ ಸ್ಥಾಪಿಸಬೇಕು ಅಂದ್ರು. ನಾನು ಒಪ್ಪಿದೆ, ಆದ್ರೆ ಅದಕ್ಕೆ ನೀವೇ ಪೂಜೆ ಮಾಡಬೇಕು ಅದನ್ನೂ ರೊಟೇಶನ್ ಮೂಲಕ ಮಾಡಬೇಕು ಅಂತ ಹೇಳಿದೆ. ಇಂಥ ಕಾರ್ಯಕ್ರಮಗಳ ಮೂಲಕ ಮಡೆಸ್ನಾನದಂಥಾ ಸಾಮಾಜಿಕ ಸಂಕಷ್ಟಗಳನ್ನು ಪರಿಹಾರ ಮಾಡ್ಕೋಬೇಕು. ತಡ ಆದರೂ ಇದು ಒಳ್ಳೆಯ ದಾರಿ. ಅದನ್ನೆಲ್ಲಾ ಒಂದೇ ಸಲ ಕಿತ್ತು ಹಾಕಿಬಿಡ್ತೀವಿ ಅಂತ ಹೋದ್ರೆ, ದೇಹದ ಒಂದು ಕಡೆ ಇದ್ದ ಕುರು ಇನ್ನೊಂದು ಕಡೆ ಆಗುತ್ತೆ ಅಷ್ಟೇ. ಬಾಲಗಂಗಾಧರ ಟೀಮಿನ ಸಮಸ್ಯೆಯೂ ಇಂಥಾದ್ದೇ. ನಾನೊಂದು ಸಲ ಅವರ ಕಾರ್ಯಕ್ರಮದಲ್ಲೇ ನನ್ನ ಅನುಭವದಲ್ಲಿ ಜಾತಿ ಇದ್ಯಪ್ಪ, ನೀವು ಏನೇನೋ ಹೇಳಿದ್ರೆ ನಾನು ಕೇಳಲ್ಲ ಅಂತ ಹೇಳಿದೆ. ಇಂಥಾದ್ದು ಅರ್ಧಸತ್ಯ. ಅಡ್ವಾಣಿ ಸೂಡೋ ಸೆಕ್ಯುಲರಿಸ್ಟ್ ಅಂತ ನಮ್ಮೆಲ್ಲರನ್ನೂ ಕರೆದಾಗ ಅದರಲ್ಲಿ ೨೦ ಪರ್ಸೆಂಟ್ ಸತ್ಯ ಇತ್ತು. ಆ ಇಪ್ಪತ್ತು ಪರ್ಸೆಂಟ್ ಸತ್ಯದಲ್ಲಿ ಅವರು ಬದುಕ್ತಾರೆ. ನಾವು ಅದನ್ನು ತಗೊಂಡು ತಿದ್ಕೋಬೇಕು. ಬಾಲಗಂಗಾಧರ ಹೇಳುವ ಸುಳ್ಳಿನಲ್ಲೂ ಇರಬಹುದಾದ ಸತ್ಯವನ್ನು ತಗೋಂಡು ಅವರನ್ನು ದೂರ ಇಡಬೇಕು.
http://ladaiprakashanabasu.blogspot.in/2013/08/blog-post_31.html
ಯಂತ್ರಗಳನ್ನು ಕಳಚಿದರೆ ಸಾಲದು, ಪಾಶ್ಚಾತ್ಯರು ಹೇಳಿಕೊಟ್ಟಿರುವ ಯಾಂತ್ರಿಕ ಜೀವನವನ್ನು ಕಳಚಿ..
ಮಾನ್ಯ ಸಂತೋಷ್, ಪ್ರಸನ್ನ ಅವರು ಕನ್ನಡದ ರಂಗಭೂಮಿಯ ಅಂತಃಸಾಕ್ಷಿ ಅಂತ ಹೆಸರುವಾಸಿ ಆದವರು. ಅವರ ಅನುಭವದಲ್ಲಿ ಜಾತಿ ಇದೆ. ಅನುಭವದ ಆಧಾರದ ಮೇಲೆ ಅವರು ಬಾಲಗಂಗಾಧರ ಟೀಮಿನ ಸಮಸ್ಯೆ ಏನು ಅಂತ ಹೇಳಿದ್ದಾರೆ. ಆದರೆ ತಾವು ವೈಯಕ್ತಿಕ ಟೀಕೆ ಮಾಡಿದ್ದೀರಿ.
@Nagshetty, ಬರಿ ಪ್ರಸನ್ನ ಅವರ ಅನುಭವದಲ್ಲೊಂದಷ್ಟೆ ಅಲ್ಲ, ಎಲ್ಲರ ಅನುಭವದಲ್ಲೂ ಜಾತಿ ಎನ್ನುವದು ಇದೆ. ಅದನ್ನು ಬಾಲಗಂಗಾಧರರ ತಂಡ ನಿರಾಕರಿಸುತ್ತಲೂ ಇಲ್ಲ. ಆದರೆ ಅವರು ಹೇಳುತ್ತಿರುವದು ’ಜಾತಿ ಪದ್ದತಿ’ ಎನ್ನುವದು ಇಲ್ಲ ಎಂದಷ್ಟೆ. ಆದರೆ ಪದ್ದತಿ(ಸಿಸ್ಟಮ್) ಅಂಬುದನ್ನು ವೈಜ್ನಾನಿಕವಾಗಿ ಅರ್ಥೈಸಿಕೊಳ್ಳಲಾರದವರು ’ಜಾತಿ’ ಹಾಗೂ ’ಜಾತಿ ಪದ್ದತಿ’ ಎರಡನ್ನು ಒಂದೆ ಅರ್ಥದಲ್ಲಿ ಬಳಸುತ್ತಿದ್ದಾರೆ. ’ಜಾತಿ ಪದ್ದತಿ’ ಇಲ್ಲವೆಂದಾದರೆ ’ಜಾತಿ’ ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರಕೊಟ್ಟಷ್ಟೂ ಅದರ ಆಳಕ್ಕಿಳಿಯದೆ ಅಲ್ಲೆ ನಿಂತು ಬೊಬ್ಬಿಡುವದು ಬೌದ್ಧಿಕ ದಿವಾಳಿತನವಲ್ಲದೆ ಇನ್ನೇನು? ’ಪದ್ದತಿ’ ಎಂದರೆ ಏನು ಎನ್ನುವದನ್ನು ವ್ಯಾಖ್ಯಾನಿಸದೆ ಯಾಕೆ ಚರ್ಚೆ ಕೊನೆಯುಸಿರೆಳೆಯುತ್ತಿದೆ? ಹಾಗಾದರೆ ಇದೆ/ಇತ್ತು ಎನ್ನುವ ಪದ್ದತಿ(ಸಿಸ್ಟಮ್) ಉಳಿದುಕೊಂಡಿದ್ದರೆ ಅದಕ್ಕೆ ಸ್ಪಷ್ಟವಾದ ವ್ಯಾಖ್ಯಾನವೂ ಇರಬೇಕಲ್ಲವೇ? ಒಂದು ವೇಳೆ ಆ ಪದ್ದತಿಯ ರೂಪು ರೇಷೆ ಎನೆಂಬುದನ್ನು ಅವರಿಂದ ವಿವರಿಸಲು ಸಾಧ್ಯವಾಗಿದ್ದಿದ್ದರೆ ಆ ಪದ್ದತಿಯನ್ನು ಸುಲಭವಾಗಿಯೆ ಕಿತ್ತೊಗೆಯಬಹುದಿತ್ತಲ್ಲವೆ?
If there was no caste system why was untouchability practiced?
Dear Nagshetty, this question is answered by cslc team n number of times. Please read, analyze, and if their explanations are deprived of reasoning, then rise the same instead of mockery and abuse that dont add any substantial. If u are honest to listen I wud explain as I have understood. First of all, in general, please explain what do u mean by “system”? Please go here and come back: https://nilume.net/2013/05/26/%E0%B2%9C%E0%B2%BE%E0%B2%A4%E0%B2%BF%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86-%E0%B2%87%E0%B2%B2%E0%B3%8D%E0%B2%B2-%E0%B2%8E%E0%B2%82%E0%B2%A6%E0%B2%B0%E0%B3%86/
I dont disagree that untoucheability is not there. But I dont agree that it’s based on the system. For example, Is racial abuse that have been found in western countries(say in india too) is expounded by any system?
Racial abuse is there, but not the system that holds racial discrimination. In a similar manner we see castes, but not the caste system
Please first read and update your knowledge. You can argue for honesty later Mr Bhat.
See http://avadhimag.com/2013/09/06/%E2%80%99%E0%B2%AE%E0%B3%88%E0%B2%AF%E0%B3%87-%E0%B2%B8%E0%B3%82%E0%B2%B0%E0%B3%81-%E0%B2%AE%E0%B2%A8%E0%B2%B5%E0%B3%87-%E0%B2%AE%E0%B2%BE%E0%B2%A4%E0%B3%81%E2%80%99-%E0%B2%AC%E0%B2%B8%E0%B2%B5/
“ಇತ್ತೀಚೆಗೆ ಕೆಲವು ದಾಖಲಾಪಂಡಿತ ವಿದ್ವಾಂಸರು ದಾಖಲೆಯಾಗಿರುವ ವಚನಗಳನ್ನು ಇಟ್ಟುಕೊಂಡು ಪದಬಳಕೆಯ ಶೇಕಡಾವಾರು ಸಂಖ್ಯೆಯ ಆಧಾರದ ಮೇಲೆ, ಚಳುವಳಿಗೆ ಸಾಮಾಜಿಕ ಗುಣಗಳನ್ನು ಆದೇಶಿಸುತ್ತಿದ್ದೇವೆ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ದೇಹವು ಸತ್ಯ, ದೇಹದ ಸತ್ವವೂ ಸತ್ಯ ಎಂದು ಹೇಳುವ ಪರಂಪರೆಗಳಿಗೆ ಶ್ರೇಣೀಕರಣ ಹಾಗೂ ಜಾತಿ-ಕುಲ ತಾರತಮ್ಯದ ವಿರೋಧವು ಬಹು ಸಹಜವಾದ ಪ್ರಕ್ರಿಯೆಯಾಗಿರುತ್ತದೆ. ಈ ವಿರೋಧದ ಪ್ರಕ್ರಿಯೆಯು ಎಷ್ಟು ತೀವ್ರತರವಾಗಿರುತ್ತದೆನ್ನುವುದನ್ನು ಪದ ದಾಖಲಾತಿಗಳಲ್ಲಿ ಮಾತ್ರ ಕಾಣಲಾಗುವುದಿಲ್ಲ. ಕನ್ನಡದ ಮೌಖಿಕ ಪರಂಪರೆಗಳಲ್ಲಿ, ಐತಿಹ್ಯಗಳಲ್ಲಿ ಇದು ಎದ್ದು ಕಾಣುವ ಅಂಶವಾಗಿದೆ. ಹರಳಯ್ಯ-ಮಧುವರಸರ ಮಕ್ಕಳ ಮದುವೆಯ ಐತಿಹ್ಯ, ಶ್ರೇಷ್ಠತೆಯನ್ನು ಸಾರುತ್ತಿದ್ದ ಮೇಲುವರ್ಣದ ವಿರುದ್ಧ, ಅನೇಕ ತಳವರ್ಗದ ವಚನಕಾರರು ತಮ್ಮ ಕಾಯಕದ ಶ್ರೇಷ್ಠತೆಯನ್ನು ಮೆರೆಯುವ ಅನೇಕ ಕಥನಗಳು, ಉಳ್ಳಿಯನ್ನು ಶ್ರೇಷ್ಠ ಭೋಜ್ಯ ಪದಾರ್ಥವೆಂದು ಸಾರುವ ಬಸವಣ್ಣನ ಸಂಬಂಧದಲ್ಲಿ ನಡೆದ ಘಟನೆ, ಹೀಗೆ ಹಲವಾರು ಮೌಖಿಕ ಪರಂಪರೆಯ ಕಥನಗಳನ್ನು ಉದಾಹರಿಸಬಹುದು. ಜಾತಿ-ಮೂಲದ ಬಣ್ಣಗಳ ಹಾಗೂ ವರ್ಣಶ್ರೇಷ್ಠತೆಯ ಉಚ್ಚಾಟನೆಯ ಅಂಶಗಳೇ ಇಲ್ಲಿ ಪ್ರಧಾನವಾಗಿವೆ. “
ವಚನಗಳಿಗೆ, ಶರಣ ಚಳವಳಿಗೆ ಕಾರ್ಲ್ ಮಾರ್ಕ್ಸ, ವಿಶ್ವಸಂಸ್ಥೆ, ಮಾನವ ಹಕ್ಕು, ಮಹಿಳಾ ಹಕ್ಕು, ಕಾಯಕ ಜೀವಿಗಳ ಸಂಘಟನೆ ಮೊದಲಾದ ‘ಜಾಗತಿಕ’ ಗುಣಗಳನ್ನು ಅಪಾದಿಸಿದವರನ್ನು ಕೂಡ ನೋಡಿದ್ದೇವೆ..:). ಯಾರಾದ್ರೂ ನ್ಯುಟ್ರಲ್ ಆಗಿರೋರು, ಅಜೆಂಡಾಗಳನ್ನು ಇಟ್ಟುಕೊಳ್ಳದೇ ಪುಸ್ತಕ ಬರೆದೊರ ಲಿಂಕ್ ಇದ್ರೆ ಕೊಡಿ..ಓತಿಕಾಟಕ್ಕೆ ಬೇಲಿ ಸಾಕ್ಷಿಯ ಉದಾಹರಣೆಗಳು ಬೇಡ.
Darga Sir has answered all your questions and neutralised your criticism already. If you have new set of questions, please send it across. Ultimately Basavaprajne is going to win.
ನಿಮಗೆ, ಆ ನಿಮ್ಮ ಗುರುಗಳಿಗೆ ನಾನು ಪ್ರಶ್ನೆ ಹಾಕಿ..ನೀವು ಉತ್ತರಿಸುವ ಬದಲಿಗೆ ಹಾಕಿದ ಪ್ರಶ್ನೆಗೆ ಸಂಬಂಧವಿಲ್ಲದ ‘ಹಾಡಿದ್ದೆ ಹಾಡು’ ರೀತಿಯ ಇನ್ನೊಂದು ಅಸಂಬಧ್ಧ ಪ್ರಶ್ನೆ ಹಾಕಿ…ಅಷ್ಟೆಲ್ಲ ಕಷ್ಟ ಬೇಡ ಬಿಡಿ. ನಿಮ್ಮ ಕೈಯಲ್ಲಿ ಸಿಕ್ಕ ಆ ಬಸವಪ್ರಜ್ಞೆಯ ಭವಿಷ್ಯ ನಿಚ್ಚಳವಾಗಿ ಕಂಡುಬರುತ್ತಿದೆ! 🙂
Please quote exactly of those texts of basavanna and other sharanas, and let’s analyze. For your information, analysis is not that hypothesis made based on some folklore, stories etc, but objectivity of substantial factual information. And you havent yet answered my question what’s according to u a ‘system’? If there was a caste system existed, what are all those factual data that support your understanding of ‘caste system’. I want you to be analytical in the discussion, otherwise that ensures u dont want to face the truth.
angai hunnige kannadi beke mr. bhat?
ಕನ್ನಡಿ ಅಲ್ಲ, ಬೇಕಾಗಿದ್ದು ’ದರ್ಪಣ’. Why do u always fail to put your points rationally and dodging the questions? Are u incapable or it’s difficult to come out of prejudice? Then what’s the point in discussing?
i asked u “do u deny that BJP government and Sangh Parivar supported CSLC agenda?”. give me rational answer.
Yeah I deny that. Do u have any evidence to prove that? Anyways, even if they have given, they have all right give their moral support, and it’s none of ur business to put ur nose into it. Neither it’s blamable.
ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ ..ಆದ್ರೆ ಕಣ್ಣಿಗೆ ಪೊರೆ ಬಂದ್ರೆ ಆಪರೇಶನ್ ಮಾಡಿಸಿಕೊಳ್ಳಬೇಕು…!
In my article I have written about the “double acting” of some of our intellectuals.But Mr.Nagaesh Shetty Shetkar has invited Madesnana, Prof. Balagangadhara’s team and Advani to the”stage”.So I have to tell something about this.
1.Madesnana—–Whether any body of the temple authorities are forcing the people to do this? Why Govt is not stopping by using law and police?
2.Balagangadhara’s team——Balagangadhara’s team is not telling that there is NO CASTES in India. Castes are there. But is there any controlling authority/person is existing in India to follow this?Ours is a secular country is it not?Then why from LKG to P.hd caste is necessary for getting some benefits,Starting from getting jobs to promotions caste is considered in govt offices itself.I am NOT against reservation. Due to some social and economical problems it is necessary. Please note this. But this reservation itself does not means CASTE SYSTEM is existing in India
3 Advani——Advani knows what is INDIA better than any intellectuals of our country. He is in different capacities in our parliament,which is the POWER CENTRE of our democracy. We should not forget this.
“Ours is a secular country is it not?Then why from LKG to P.hd caste is necessary for getting some benefits” ನೀವು ಹೇಳುವ ಸುಳ್ಳಿನಲ್ಲೂ ಇರಬಹುದಾದ ಸತ್ಯವನ್ನು ತಗೋಂಡು ನಿಮ್ಮನ್ನು ದೂರ ಇಡಬೇಕು.
Ok. As you wish.