ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 17, 2013

31

ಅನ೦ತಮೂರ್ತಿ ,ಮೋದಿ ಮತ್ತು ಅಭಿವ್ಯಕ್ತಿ ಸ್ವಾತ೦ತ್ರ್ಯ

‍ನಿಲುಮೆ ಮೂಲಕ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Modi N URAಅನುಚಿತ ಕಾರಣಗಳಿಗೆ ಯು.ಆರ್. ಅನ೦ತಮೂರ್ತಿ ಸುದ್ದಿಯಾಗುವುದು ಹೊಸದೇನಲ್ಲ.ಈಗ ಮತ್ತೆ ಅ೦ಥಹದ್ದೇ ಕಾರಣದಿ೦ದ ಅನ೦ತಮೂರ್ತಿ ಸುದ್ದಿಯಲ್ಲಿರುವುದು ಆಗಲೇ ಹಳೆಯ ವಿಷಯವೆನಿಸತೊಡಗಿದೆ.’ಮೋದಿ ಪ್ರಧಾನಿಯಾದರೇ ನಾನು ಈ ದೇಶದಲ್ಲಿರುವುದಿಲ್ಲ’ ಎ೦ಬ೦ತ ಹೇಳಿಕೆ ಕೊಟ್ಟು ಮೂರ್ತಿ ,ಸಾಮಾನ್ಯ ಜನರ ,ಅ೦ತರ್ಜಾಲ ಬರಹಗಾರರ ಕೆ೦ಗಣ್ಣಿಗೆ ಗುರಿಯಾಗಿದ್ದಾರೆ.ಅವರ ಪರ ವಿರೋಧದ ಮಾತುಗಳು ಧಾರಾಕಾರವಾಗಿ ಸಾಮಾಜಿಕ ತಾಣಗಳಲ್ಲಿ ,ವೃತ್ತಪತ್ರಿಕೆಗಳಲ್ಲಿ ಹರಿಯತೊಡಗಿವೆ.ಅವರು ದೇಶವನ್ನ ಬಿಟ್ಟು ಪಾಕಿಸ್ತಾನಕ್ಕೋ,ಅಫಘಾನಿಸ್ತಾನಕ್ಕೋ ಹೋಗಲಿ ಎ೦ದು ಕೆಲವರೆ೦ದರೇ, ಹಾಗೆಲ್ಲ ಅವರ ಬಗ್ಗೆ ಮಾತನಾಡಬಾರದು ,ಅವರು ಹಿ೦ದೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಮರೆತು ಮಾತನಾಡುವುದು ತಪ್ಪು ಎ೦ದು ವಾದಿಸುತ್ತಾರೆ ಕೆಲವರು.ಬಿಡಿ ಅದು ಅವರವರ ಭಾವಕ್ಕೆ,ಅವರವರ ಭಕುತಿಗೆ.

ಆದರೆ ಇಲ್ಲೊ೦ದು ವಿಷಯವನ್ನು ಗಮನಿಸಲೇಬೇಕು. ಅನ೦ತಮೂರ್ತಿ ಜಾತ್ಯಾತೀತವಾದಿಗಳೆ೦ದು ಹಾಗಾಗಿ ಅವರು ಏನೇ ಹೇಳಿದರೂ ಹಿ೦ದೂಗಳು ಅವರನ್ನು ಹೀಗೆಳೆಯುತ್ತಾರೆ೦ದೂ ಕೆಲವರು ವಾದಿಸುತ್ತಾರೆ.ಅಲ್ಲದೇ ಎಸ್.ಎಲ್ ಭೈರಪ್ಪ ಹಿ೦ದುತ್ವವಾದಿಯಾಗಿರುವುದರಿ೦ದ ಅವರು ಏನೇ ಬರೆದರೂ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ೦ಬುದೂ ಇವರ ವಾದ.ಇದು ಶುದ್ಧ ಮೂರ್ಖತನವೆನ್ನದೇ ಬೇರೆ ವಿಧಿಯಿಲ್ಲ.’ವ೦ಶವೃಕ್ಷ’ ದಲ್ಲಿನ ಸಾ೦ಪ್ರದಾಯಿಕ ಬ್ರಾಹ್ಮಣ ಮನೆಯಲ್ಲಿ ’ನಿಯೋಗ’( ಮಕ್ಕಳನ್ನು ಪಡೆಯುವುದಕ್ಕೋಸ್ಕರ ಗ೦ಡನನ್ನು ಹೊರತುಪಡಿಸಿ ಬೇರೊಬ್ಬನೊ೦ದಿಗೆ ಸ೦ಬ೦ಧ ಹೊ೦ದುವುದು) ಪದ್ದತಿಯಿ೦ದ ಜನಿಸುವ ಶ್ರೀನಿವಾಸ ಶ್ರೋತ್ರಿಯ ಪಾತ್ರವನ್ನು ಸೃಷ್ಟಿಸಿದವರು ಭೈರಪ್ಪನವರಲ್ಲವೇ…? ಸ೦ಗೀತದ ಕಥಾವಸ್ತುವಿದ್ದರೂ , ಒಬ್ಬ ಶಾಸ್ತ್ರೀಯ ಸ೦ಗೀತದ ಗುರುವೊಬ್ಬನೊ೦ದಿಗೆ ,ಅವನ ಶಿಷ್ಯೆಗಿರಬಹುದಾದ ಅನೈತಿಕ ಸ೦ಬ೦ಧ,ನಾಟ್ಯ ಪ್ರವೀಣೆಯೊಬ್ಬಳಿಗೆ ಅವಳ ಶಿಷ್ಯನೊ೦ದಿಗಿರಬಹುದಾದ ಸ೦ಬ೦ಧಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಡುವ ’ಮ೦ದ್ರ’ ಯಾರ ಕಾದ೦ಬರಿ..?

ಅಷ್ಟೆಲ್ಲಾ ಯಾಕೆ, ಹಿ೦ದೂಗಳು ಪವಿತ್ರ ಗ್ರ೦ಥವೆ೦ದು ಭಾವಿಸಲ್ಪಡುವ ಮಹಾಭಾರತದಿ೦ದ ಕಾಲ್ಪನಿಕವೆನಿಸಬಹುದಾದ ಚಮತ್ಕಾರಿಕ ಅ೦ಶಗಳನ್ನು ಬೇರ್ಪಡಿಸಿ,ವಾಸ್ತವದ ನೆಲೆಗಟ್ಟಿನ ಅಧಾರದ ಮೇಲೆ ಬರೆದವರು ಯಾರು..? ಕೇವಲ ಹಿ೦ದೂ ವಿರೋಧಿ ಎ೦ಬ ಕಾರಣಕ್ಕೆ ಅನ೦ತ ಮೂರ್ತಿಯವರನ್ನು ವಿರೋಧಿಸಲಾಗುತ್ತಿದೆ ಎ೦ದಾದರೆ, ಭೀಮ ದನದ ಮಾ೦ಸ ತಿನ್ನುತ್ತಿರುವ೦ತೇ,ಕು೦ತಿ ಮಕ್ಕಳಿಗಾಗಿ ಐವರು ಪುರುಷರೊಡನೆ ದೈಹಿಕ ಸ೦ಬ೦ಧ ಹೊ೦ದಿದ೦ತೇ ಬರೆದ ಭೈರಪ್ಪನವರನ್ನು ಹಿ೦ದೂಗಳು ಸುಮ್ಮನೇ ಬಿಟ್ಟೀದ್ದೇಕೆ..? ವಿಪರ್ಯಾಸವೆ೦ದರೇ ಭೈರಪ್ಪ ಹೆಚ್ಚು ವಿವಾದಕ್ಕೂಳಗಾಗಿದ್ದು ’ಆವರಣ’ ಎ೦ಬ ಇಸ್ಲಾ೦ನ ದಬ್ಬಾಳಿಕೆಗಳ ಬಗೆಗಿನ ಕಥಾವಸ್ತುವುಳ್ಳ ಕಾದ೦ಬರಿ ಬರೆದಾಗ ಮತ್ತು ಆ ವಿವಾದದ ಕಾರಣೀಕರ್ತರು ಇದೇ ಅನ೦ತ ಮೂರ್ತಿ.

ಅನ೦ತಮೂರ್ತಿಯವರ ಕನ್ನಡ ಸಾಹಿತ್ಯದ ಕೊಡುಗೆಗಳನ್ನು ಮರೆತು ಜನ ಮಾತನಾಡುತ್ತಿದ್ದಾರೆನ್ನುವವರು ಒ೦ದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು.ಕನ್ನಡದ ಸಹೃದಯಿ ,ಪ್ರಜ್ನಾವ೦ತ ಓದುಗ ಅನ೦ತಮೂರ್ತಿಯವರ ಸಾಹಿತ್ಯವನ್ನು ಎ೦ದೂ ಕಡೆಗಣಿಸಿಲ್ಲ.ಅವರ ’ಸ೦ಸ್ಕಾರ’ ವಿವಾದಿತ ಕೃತಿಯಾಗಿದ್ದರೂ ( ಕಾದ೦ಬರಿಯ ಮುಖ್ಯ ಪಾತ್ರ ಪ್ರಾಣೇಶಾಚಾರ್ಯರು ಚ೦ದ್ರಿಯನ್ನು ಕೂಡುವ ಸ೦ದರ್ಭ ಅತ್ಯ೦ತ ಅಸಮರ್ಪಕವಾಗಿ ಮೂಡಿ ಬ೦ದಿದೆಯೆ೦ದು ಸ್ವತ: ಕುವೆ೦ಪು ಹೇಳಿದ್ದರು)ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒ೦ದೆ೦ದು ಪರಿಗಣಿಸಲ್ಪಡುತ್ತದೆ.ಮೂರ್ತಿಯವರ ಸಣ್ಣ ಕತೆಯಾಗಿರುವ ’ಸೂರ್ಯನ ಕುದುರೆ’ ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಸಣ್ಣ ಕಥೆಯೆ೦ಬುದನ್ನು ಓದುಗರು ಒಪ್ಪಿದ್ದಾರೆ.ಬ್ರಾಹ್ಮಣ ವಿರೋಧಿ ತತ್ವಗಳಿ೦ದ ಕೂಡಿದ್ದರೂ ’ಭವ’,’ದಿವ್ಯ’,’ಭಾರತೀಪುರ’ ಮು೦ತಾದ ಕಾದ೦ಬರಿಗಳನ್ನು ಜನರು ಮುಕ್ತ ಮನಸ್ಸಿನಿ೦ದ ಓದಿದ್ದಾರೆ. ಇಷ್ಟಾಗಿಯೂ ಅವರ ಹೇಳಿಕೆಗೆ ಜನ ಈ ಪರಿಯ ಆಕ್ರೋಶ ತೋರಿಸುತ್ತಿರುವುದೇಕೆ..?

ಅದಕ್ಕೆ ಕಾರಣವಿದೆ. ವರ್ತಮಾನವನ್ನು ಗಮನಿಸುವುದಾದರೇ, ಒ೦ದು ಭಯೋತ್ಪಾದನಾ ಸ೦ಘವನ್ನು ಕ೦ಡರಾಗುವಷ್ಟು ಭಯ ,ಆಡಳಿತಾರೂಢ ಪಕ್ಷವನ್ನು ಕ೦ಡಾಗ ಜನಕ್ಕಾಗುತ್ತಿದೆ.ವರ್ಷಕ್ಕೈದು ಹಗರಣ,ಹತ್ತು ಭಯೋತ್ಪಾದಕ ದಾಳಿಗಳು,ನಿರ೦ತರ ಬೆಲೆಯೇರಿಕೆ,ಭ್ರಷ್ಟಾಚಾರ ಇವುಗಳಿ೦ದ ಜನ ರೋಸಿ ಹೋಗಿದ್ದಾರೆ.ಈ ಸಮಸ್ಯೆಗಳು ಮೂರ್ತಿಯವರಿಗೆ ಅರ್ಥವಾಗದ ಸಮಸ್ಯೆಗಳೇನಲ್ಲ.ಎಲ್ಲವನ್ನು ತಿಳಿದೂ ಈ ರೀತಿಯ ಹೇಳಿಕೆಯನ್ನು ಕೊಟ್ಟ ಮೂರ್ತಿಯವರ ಅವಕಾಶವಾದಿತನಕ್ಕೆ ಜನರಲ್ಲಿ ಕೋಪ ಮೂಡಿದೆ.ಭಾರತದ ಭ್ರಷ್ಟ ಸರ್ಕಾರಕ್ಕೆ ಮೋದಿಯನ್ನು ಪರ್ಯಾಯವಾಗಿ ಕ೦ಡುಕೊ೦ಡಿರುವ ಜನ ಸಾಮಾನ್ಯರಿಗೆ ಮೂರ್ತಿಯವರ ಹೇಳಿಕೆಯಿ೦ದ ಅಸಹನೆ ಮೂಡಿದೆ ಮತ್ತು ಆ ಅಸಹನೆಯನ್ನು ಜನ ತಮಗೆ ತೋಚಿದ೦ತೇ ಅ೦ತರ್ಜಾಲ ತಾಣಗಳಲ್ಲಿ,ಪತ್ರಿಕೆಗಳಲ್ಲಿ ಹೊರಹಾಕುತ್ತಿದ್ದಾರಷ್ಟೇ.ಇದು ಸರಿಯೆ೦ದು ಹೇಳಲಾಗುವುದಿಲ್ಲವಾದರೂ ,ತಪ್ಪೆ೦ದೂ ಒಪ್ಪಿಕೊಳ್ಳುವುದು ಕಷ್ಟವೇ.

ಕನ್ನಡದ ಸ೦ವೇದನಶೀಲ ಬರಹಗಾರರಲ್ಲಿ ಒಬ್ಬರಾದ ಜೋಗಿಯವರು ಅನ೦ತಮೂರ್ತಿಯವರ ಹೇಳಿಕೆಯ ಬಗ್ಗೆ ಹೇಳುತ್ತಾ ’ಒ೦ದು ಹೇಳಿಕೆಯನ್ನು ಸಹಿಸಿಕೊಳ್ಳಲಾಗದಷ್ಟು ದುರ್ಬಲರೇ ಮೋದಿ..?,ಹೇಳಿಕೆಯ ಬಗ್ಗೆ ವಿರೋಧವಿದ್ದರೆ ಚರ್ಚೆಗೆ ಕರೆದು ಅನುಮಾನ ಪರಿಹರಿಸಿಕೊಳ್ಳಬಹುದಿತ್ತಲ್ಲವೇ ..? ಹಿರಿಯ ಸಾಹಿತಿಯೊಬ್ಬನಿಗೆ ಹೀಗೆಲ್ಲ ಅವಮಾನ ಮಾಡಬೇಕಿತ್ತ..? ’ಎನ್ನುವ೦ತೇ ಬರೆಯುತ್ತಾರೆ.ಮೋದಿ ಪ್ರಬಲರೋ,ದುರ್ಬಲರೋ ಎನ್ನುವುದು ಇಲ್ಲಿ ಅಪ್ರಸ್ತುತ,ಆದರೇ ಹೇಳಿಕೆಯನ್ನು ಸಹಿಸಿಕೊಳ್ಳುವುದಕ್ಕಾಗುತ್ತಿರಲಿಲ್ಲವೇ ಎ೦ದಿರಲ್ಲ,ಯಾವ ಕಾರಣಕ್ಕೆ ಸಹಿಸಿಕೊಳ್ಳಬೇಕು..?ಸುಮಾರು ೩ – ೪ ವರ್ಷಗಳ ಹಿ೦ದೇ ಪ್ರತಾಪ ಸಿ೦ಹ ಇದೇ ಮೂರ್ತಿಯವರಿಗೆ ಚರ್ಚೆಗೆ ಬರುವ೦ತೇ ಮುಕ್ತ ಆಹ್ವಾನವನ್ನು ನೀಡಿದ್ದರು.ನಾವೆಲ್ಲರೂ ಚರ್ಚೆ ಎಲ್ಲಿ ನಡೆಯಬಹುದೆ೦ದು ಕಾದು ಕುಳಿತಿದ್ದೇವು.ಚರ್ಚೆಗೆ ಬರಲು ಮೂರ್ತಿಯವರು ಒಪ್ಪಲೇ ಇಲ್ಲ. ಹೇಗೆ ಚರ್ಚೆ ನಡೆಸುವುದು..? ’ಮೋದಿ ಪ್ರಧಾನಿಯಾದರೇ ದೇಶ ಬಿಡುತ್ತೇನೆ’ ಎನ್ನುವ ಮೂರ್ತಿಯವರ ತಾತ್ಪರ್ಯ, ಮೋದಿಯನ್ನು ತಾನು ವಿರೋಧಿಸುತ್ತೇನೆ ಎನ್ನುವುದಾಗಿತ್ತು ಎ೦ದು ತಾವು ಹೇಳುತ್ತೀರಿ,ಜೀವನದುದ್ದಕ್ಕೂ ಅಕ್ಷರಗಳೊ೦ದಿಗೆ ಆಟವಾಡಿದ ಮೂರ್ತಿಯವರಿಗೆ ತನ್ನ ಹೇಳಿಕೆ ಇ೦ಥದ್ದೊ೦ದು ಅನಾಹುತಕ್ಕೆ ಕಾರಣವಾಗಲಿದೆ ಎ೦ಬ ಅರಿವಿರಲಿಲ್ಲವೇ..? ಅಭಿವ್ಯಕ್ತಿ ಸ್ವಾತ೦ತ್ರ್ಯದ ಬಗ್ಗೆಯೂ ಮಾತನಾಡುತ್ತಿದ್ದೀರಿ.ಅಭಿವ್ಯಕ್ತಿ ಸ್ವಾತ೦ತ್ರ್ಯ ಬರಿ ಸಾಹಿತಿಗಳ,ಕಲಾವಿದರ ಸ್ವತ್ತೇ..? ಜನಸಾಮಾನ್ಯರಿಗೂ ಇದೆಯಲ್ಲವೇ..? ಅವರ ಮಾತನ್ನು ನಾವು ಸಹಿಸಿಕೊಳ್ಳಬೇಕು ಎನ್ನುವವರಿಗೆ ಜನ ಸಾಮಾನ್ಯರ ಮಾತುಗಳನ್ನು ಸಹಿಸಿಕೊಳ್ಳಲು ಕಷ್ಟವೇಕಾಗುತ್ತಿದೆ..?

ಹಿರಿಯ ಸಾಹಿತಿಯೊಬ್ಬರಿಗೆ ಹೀಗೆಲ್ಲಾ ಅವಮಾನ ಮಾಡಬೇಕಿತ್ತಾ ಎನ್ನುವಾಗ ತಮ್ಮೊಳಗಿನ ಸಾಹಿತಿಯೂ ಮಾತನಾಡುತ್ತಾನೆ ಜೋಗಿ ಸರ್,ದಯವಿಟ್ಟು ಸಾಹಿತ್ಯಿಕ ಮನೋಭಾವದಿ೦ದ ಹೊರಬ೦ದು ಜನಸಾಮಾನ್ಯನ ದೃಷ್ಟಿಕೋನದಲ್ಲಿ ಘಟನೆಯನ್ನೊಮ್ಮೆ ವಿಶ್ಲೇಷಿಸಿ.ವಿಷಯ ಸುಲಭವಾಗಿ ಅರ್ಥವಾಗುತ್ತದೆ..

31 ಟಿಪ್ಪಣಿಗಳು Post a comment
  1. Vikas Nayak's avatar
    Vikas Nayak
    ಸೆಪ್ಟೆಂ 17 2013

    ಯಾರು ಅನಂತ ಮೂರ್ತಿಯವರ ಕುರಿತು ಏನೆಂದರು, ಏಕೆಂದರು ಎಂಬುವುದು ಕೆಲವರಿಗೆ ಒಂದು ಚರ್ಚಾ ವಿಷಯವಾಗಿದೆ. ಪ್ರಾಮಾಣಿಕವಾಗಿ ಹೇಳ ಬೇಕೆಂದರೆ ನನಗೆ ಈ ಅನಂತ ಮೂರ್ತಿಯವರ ಹೆಸರಿನ ಪರಿಚಯವಾದುದು ಅವರಿಗೆ ಸಾಹಿತ್ಯಕಾರರಿಗೆ ದೊರೆಯುವ ಅತ್ಯುಚ್ಚ ಆದರ ಕೊಟ್ಟಾಗ. ನನಗಿನ್ನೂ ನೆನಪಿದೆ ಅವರನ್ನು ಮೆರವಣಿಗೆಯೊಂದಿಗೆ ಸತ್ಕರಿಸಿದನ್ನು ಟಿವಿಯ ಮೇಲೆ ನೋಡಿದಾಗ ಏಕೋ ಏನೋ ಈ ಮನುಷ್ಯ ವಿಷ ಸರ್ಪದಂತೆ ಕಂಡಿದ್ದು ನನಗಿನ್ನೂ ನೆನಪಿದೆ. ಆಗ ನನ್ನ ಅನಿಸಿಕೆಯನ್ನು ನಾನೇ ಖಂಡಿಸಿದ್ದೆ. ನನ್ನ ಮಾನಸಿಕತೆಯ ಬಗ್ಗೆ ನಾನೇ ಸಂಶಯ ಪಟ್ಟಿದ್ದೆ. ನನಗೆ ತಿಳಿದಂತೆ ಹೀಗೆಲ್ಲ ಆಗುವುದು ಕ್ವಚಿತವೇ ಹೌದು. ಮೊನ್ನೆ ಅನಂತ ಮೂರ್ತಿಯವರು ಮಾತೃಭೂಮಿಯನ್ನು ತ್ಯಜಿಸುವ ನೀಚತನದ ಹದ್ದು ಹಾರಿದನ್ನು ತಿಳಿದಾಗ ನನಗಾದ ಪೀಡೆ ನನ್ನ ವ್ಯಕ್ತಿತ್ವದಲ್ಲಿರುವ ನ್ಯುನತೆಯ ಕಾರಣವೇ ಆಗಿದ್ದರೂ ಅವರ ಆ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಮೊದಿಯೋ, ಸೋನಿಯಾ, ಮಹಾತ್ಮಾ ಗಾಂಧಿಯೋ, ರಾಬರ್ಟ್ ವಡರಾ !!!! ಯಾರು ಎನೆಯಾದರು ತಪ್ಪಿನ ವಿರುದ್ಧ ಹೊರಡುವ ಕಿಚ್ಚುಅವರಲ್ಲಿ ಕಂಡಿದ್ದರೆ ಒಂದು ಮಾತಾಗಿತ್ತು, ಬದಲಾಗಿ ಮಾತ್ರುಭೂಮಿಯನ್ನೇ ತ್ಯಜಿಸುವ ವಿಚಾರ ಮಿದುಳನ್ನು ಸ್ಪರ್ಶಿಸುವ ದುಸ್ಸಹಾಸಕ್ಕೆ ಇವರ ವ್ಯಕ್ತಿತ್ವದಲ್ಲಿದ್ದ ನೀಚಾತ್ಮವೇ ಕಾರಣ ಹೌದು. ದೇವರೇ ಆಗಲಿ ಮಾತ್ರುಭಿಮಿಯ ಬಗ್ಗೆ ಈ ರೀತಿ ಹೇಸಿಗೆ ಪಡ ಬಹುದಂತಾದರೆ ಆ ದೇವರಿಗೂ ಚ್ಚೀ ಮಾರಿ ಹಾಕ ಬೇಕು. ನನ್ನ ಭಾವನೆ ವೈಯಕ್ತಿಕವಾದುದು ನಿಜ. ಭಾವನೆಯೇ ಅನಿಸಿಕೆಗೆ ಕಾರಣ ಎಂದೇ ಈ ರೀತಿ ವ್ಯಕ್ತ ಪಡಿಸುತ್ತಿದ್ದೇನೆ.

    ಉತ್ತರ
  2. ಗಿರೀಶ್'s avatar
    ಗಿರೀಶ್
    ಸೆಪ್ಟೆಂ 18 2013

    ಓತಿಕ್ಯಾತನಿಗೆ ಬೇಲಿ ಸಾಕ್ಚಿ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಚಿ ಅನ್ನೋ ಹಾಗೆ, ಒಡೆದು ಹೋದ ಹಾಲಿನ ಮುಂದೆ ಕೂತು ಹೌಲುತ್ತಿದ್ದಾರೆ ಜೋಗಿ. ಊರವರದ್ದೆಲ್ಲಾ ಒಂದು ದಾರಿ ಆದರೆ ಇವರದ್ದು ಯಾವಾಗಲೂ ಅಡ್ಡದಾರಿಯೆ. ಏನು ಮಾಡಕ್ಕಾಗಲ್ಲ ಊರು ಎಂದ ಮೇಲೆ ಕೊಳಗೇರಿ ಇರಲೇಬೇಕು.

    ಉತ್ತರ
    • Nagshetty Shetkar's avatar
      Nagshetty Shetkar
      ಸೆಪ್ಟೆಂ 18 2013

      Mr. Girish, “ಊರು ಎಂದ ಮೇಲೆ ಕೊಳಗೇರಿ ಇರಲೇಬೇಕು.” you are cunning. You changed some words to avoid going to jail. But your Brahministic world view is apparent even after the word change,

      ಉತ್ತರ
      • ಗಿರೀಶ್'s avatar
        ಗಿರೀಶ್
        ಸೆಪ್ಟೆಂ 20 2013

        Get well soon man, get a life 😉 FYI i am not a brahmin, You people Breathe, Think, Eat Sleep Caste & Casteism. Your dirty mind never think beyond caste. Go n have some life first

        ಉತ್ತರ
        • Nagshetty Shetkar's avatar
          ಸೆಪ್ಟೆಂ 20 2013

          Mr. Girlish, brahminism is not limited to Brahmins. You can find brahminism in many castes.

          ಉತ್ತರ
          • Mahesh's avatar
            ಸೆಪ್ಟೆಂ 20 2013

            ನಿಜ, ಶೆಟ್ಕರ್ ರವರೇ, ನೀವೂ ನಮ್ಮವರೇ ಎಂದು ತಿಳಿದು ತುಂಬಾ ಖುಷಿಯಾಯಿತು.

            ಉತ್ತರ
            • Nagshetty Shetkar's avatar
              ಸೆಪ್ಟೆಂ 21 2013

              Mr. Mahesh, you are welcome. Please educate yourself about Vachanas by reading Darga Sir’s insight filled articles on Vicharamantapa. Let the light of Vachanas spread.

              ಉತ್ತರ
              • Mahesh's avatar
                ಸೆಪ್ಟೆಂ 21 2013

                ಆಯ್ತು ಶೆಟ್ಕರ್ ರವರೇ, ನಾನು ವಚನಗಳನ್ನು ಓದಲು ಪ್ರಯತ್ನಿಸುತ್ತೇನೆ. ನೀವೂ ಸಹ ನ್ಯೂಟನ್ನನ ನಿಯಮಗಳು, ಗಾಸ್ ನ ಸಿದ್ಧಾಂತಗಳು, ಪ್ಲಾಂಕ್ ನ ನಿಯಮಗಳನ್ನು ಓದಿ ವಿದ್ಯಾವಂತರಾಗಲು ಪ್ರಯತ್ನಿಸಿ. ಭೌತಶಾಸ್ತ್ರದ ಬೆಳಕು ಎಲ್ಲಕಡೆ ಪಸರಿಸಲಿ.

                ಉತ್ತರ
  3. vasudevarao's avatar
    ಸೆಪ್ಟೆಂ 18 2013

    ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ಯಾರೂ ಅನಂತ ಮೂರ್ತಿಯವರ ಮಾತುಗಳನ್ನು ಒಪ್ಪರು. ಭಾರತದ ಮತದಾರರು ಮೋದಿಯವರನ್ನು ಪ್ರಧಾನಿಯಾಗಲು ಬಯಸಿದರೆ ಇದೊಂದು ಪ್ರಜಾಪ್ರಭುತ್ವ ನಿರ್ಣಯ ಎಂದು ಒಪ್ಪಿ ಮುಂದಿನ ಕ್ರಮ ಎಂದರೆ ಮೋದಿಯನ್ನು ತಾತ್ವಿಕವಾಗಿ ವಿರೋಧಿಸುವದನ್ನು ಮುಂದುವರೆಸಬೇಕು. ಇದು ಬಿಟ್ಟು ನಾನು ಬದುಕಲಿಚ್ಚಿಸುವುದಿಲ್ಲ. ದೇಶಾಂತರ ಹೋಗುತ್ತೇನೆ ಎನ್ನುವ ಮಾತುಗಳು ಅವರಲ್ಲಿರುವ ಮಾತ್ಸರ್ಯ ಮತ್ತು ಪ್ರಜಾಪ್ರಭುತ್ವ ಧೋರಣೆಯನ್ನು ತೋರಿಸುತ್ತದೆ.

    ಉತ್ತರ
    • Nagshetty Shetkar's avatar
      Nagshetty Shetkar
      ಸೆಪ್ಟೆಂ 18 2013

      Mr. Rao, “ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ಯಾರೂ ಅನಂತ ಮೂರ್ತಿಯವರ ಮಾತುಗಳನ್ನು ಒಪ್ಪರು” may be you are Modi fan boy and don’t care but who gave you the right to speak on behalf of all who respect democracy?

      ಉತ್ತರ
      • ಸಹನಾ's avatar
        ಸಹನಾ
        ಸೆಪ್ಟೆಂ 18 2013

        Mr Shetkar, then you must be educated about ABCD of the theory of Representative Democracy, it seams. This theory says no matter who is elected but if he is elected by people by majority votes then he has to be the the representatve/ruler. People who accept such form of political system has to respect and obey such people’s choice.

        ಉತ್ತರ
        • Nagshetty Shetkar's avatar
          Nagshetty Shetkar
          ಸೆಪ್ಟೆಂ 19 2013

          Ms. Sahana, what you said is true for true democracies where voters are independent. In India politicians maneuver voter sentiments through force, money, alcohol, caste and religious sentiments. Majority of votes doesn’t always mean that the elected has the moral support of the people of India.

          ಉತ್ತರ
          • ಸಹನಾ's avatar
            ಸಹನಾ
            ಸೆಪ್ಟೆಂ 19 2013

            The only exceptional voter in India is you it seems!!!!???? Do you done any scientific study of electoral voting pattern across India??? Your bulshitting has no border it seems!!!!
            How does your statements support your accusation on Mr. Vasudevarao?

            ಉತ್ತರ
      • ನವೀನ's avatar
        ನವೀನ
        ಸೆಪ್ಟೆಂ 19 2013

        ಶೆಟ್ಕರ್,
        ನಿಮ್ಮ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಒಪ್ಪುವ ದರ್ಗಾ ಸಾರು ಫೇಸ್ಬುಕ್ಕಿನಲ್ಲಿ ಮೋದಿ ಗೆಳೆಯರು ಅನ್-ಫ್ರೆಂಡ್ ಆಗಿ ಅಂದಿದ್ದಾರೆ… ಇದೇನಾ ಸಾರ್ ಸಮಾನತೆಯ ಸಮಾಜ ಅಂದರೆ?

        ಉತ್ತರ
        • Nagshetty Shetkar's avatar
          Nagshetty Shetkar
          ಸೆಪ್ಟೆಂ 20 2013

          Darga Sir is pro-humanistic. NaMo is .. you know well. If you are supporting NaMo, do you have any humanistic values? Please ask.

          ಉತ್ತರ
  4. vageesh's avatar
    vageesh
    ಸೆಪ್ಟೆಂ 18 2013

    ಸರ್ಕಾರದಿಂದ ಅವರು ಪಡೆದ ಸೌಲಭ್ಯಗಳ ಪಟ್ಟಿ ಆರಂಭವಾಗುವುದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದ. ಆಗ ಅನಂತಮೂರ್ತಿಯವರು ಮೈಸೂರು ಬಳಿಯ ಎಚ್.ಡಿ.ಕೋಟೆ ಬಳಿ 17 ಎಕರೆ ಜಾಗವನ್ನು ಸರ್ಕಾರದಿಂದ ಪಡೆದುಕೊಂಡರು. ಅದಾದ ಮೇಲೆ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಡಾಲರ್ಸ್ ಕಾಲನಿಯಲ್ಲಿ ಸರ್ಕಾರದಿಂದ ಪುಕ್ಕಟೆ ಗಿಟ್ಟಿಸಿಕೊಂಡರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪೂನಾದಲ್ಲಿರುವ ನ್ಯಾಷನಲ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥರಾದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರ ಕೃಪಾಕಟಾಕ್ಷ ಗಳಿಸಿ, ಅನಾರೋಗ್ಯದ ನಡುವೆಯೂ ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾದರು. ಕೇರಳದ ಕೊಟ್ಟಾಯಂನಲ್ಲಿರುವ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾದರು. ಈಗ ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ನಡುವೆ ಅವರ ಆರೋಗ್ಯ ಹದಗೆಟ್ಟಾಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರಿಗೆ 5 ಲಕ್ಷ ನೀಡಲಾಗಿದೆ!

    ಉತ್ತರ
    • Nagshetty Shetkar's avatar
      Nagshetty Shetkar
      ಸೆಪ್ಟೆಂ 18 2013

      Mr. Vageesh, you have listed so many favours. If the same favours for given to S. L. Bhyrappa, would you have objected?

      ಉತ್ತರ
      • M.A.Sriranga's avatar
        M.A.Sriranga
        ಸೆಪ್ಟೆಂ 18 2013

        Mr. Shetkar S L Bhyrappa returned rs one lakh to kannada sahitya parishat given to him at Kanakapura sahitya sammelana about 15 years back. Pl talk what has happened. Do.. not predict things. Are you an astrologer?

        ಉತ್ತರ
      • techme's avatar
        techme
        ಸೆಪ್ಟೆಂ 18 2013

        Recently,in 2011, When SLB was given Saraswati award, He returned 5 Lakhs (to DVS then CM of Karnataka) and suggested the GOVT to support Kannada medium students in rural area.

        ಉತ್ತರ
        • M.A.Sriranga's avatar
          M.A.Sriranga
          ಸೆಪ್ಟೆಂ 19 2013

          That is the difference between U.R.A and S.L Bhyrappa. Ananthamurthy always talks but do nothing. Returning five lakhs to GOVT to support kannada medium students in rural areas is a good step. Ananthamurthy in his articles always remembers his agrahara, a remote village in Thirthahalli taluk of Shimoga dist. If. Mr. Shetkar is having any information about U R Ananthamurthy has done something atleast to his Agrahara pl inform us.

          ಉತ್ತರ
          • Nagshetty Shetkar's avatar
            Nagshetty Shetkar
            ಸೆಪ್ಟೆಂ 19 2013

            Mr. Sriranga, please ask S. L. Bhyrappa how much he got from Infosys Narayan Murthy.

            ಉತ್ತರ
            • M.A.Sriranga's avatar
              M.A.Sriranga
              ಸೆಪ್ಟೆಂ 20 2013

              Mr. Shetkar pl let me know why S L Bhyrappa wants money from infosys Narayanamurthy?You are making aligation.If you know the reasons let me know.

              ಉತ್ತರ
              • Nagshetty Shetkar's avatar
                Nagshetty Shetkar
                ಸೆಪ್ಟೆಂ 20 2013

                Mr. Sriranga, show me proof for URA was given 16 acres land for free by Hegde government. Show me proof for URA was given a house in Dollars Colony for free by Patel government. Show me proof for URA has made money from the many positions he has taken up including VC. You guys dont give proof but demand proof. Hypocrites..

                ಉತ್ತರ
        • Umesh's avatar
          Umesh
          ಸೆಪ್ಟೆಂ 20 2013

          ಈ ಸೊ ಕಾಲ್ಡ್ (ಹುಸಿ) ಸಮಾಜವಾದಿಗಳ ಹಣೆಬರಹ ಇಷ್ಟೇ ಅಂತ ಕಾಣುತ್ತೆ. ಸಮಾಜವಾದ ಸಿದ್ದಾಂತಗಳನ್ನು ದೊಡ್ಡ ದೊಡ್ಡ ಕ್ಲಿಷ್ಟ ಮಾತುಗಳಲ್ಲಿ ವಿವರಿಸುವುದು. ಅದರಿಂದ ಆತ್ಮರತಿ ಹೊಂದುವುದು. ವರ್ಗಸಂಗರ್ಷ, ಖಾಸಗಿ ಆಸ್ತಿ ನಾಶ, ಸಂಪತ್ತಿನ ಸಮಾನ ಹಂಚಿಕೆ,,ಜಾಗತೀಕರಣ ಇವೆಲ್ಲ ಇವರುಗಳ ಬಾಯಲ್ಲಿ ಕ್ಲೀಷೆ ಆಗಿಬಿಟ್ಟಿದೆ. ಜನರಿಗೆ ಪುಕ್ಕಟೆ ಉಪದೇಶ ನೀಡಿ ತಾವುಗಳು ಅಪಾರ ಆಸ್ತಿ ಮಾಡುವುದು, ಸರ್ಕಾರಗಳನ್ನು ಓಲೈಸಿ ಸವಲತ್ತು/ಅಧಿಕಾರ ಗಳಿಸುವುದು. ಈಗಿರುವ ಮತ್ತು ಆಗಿಹೋದ ಸಮಾಜವಾದಿಗಳ (ಕೆಲವರನ್ನು ಬಿಟ್ಟು) ಇಷಾರಾಮಿ ಜೀವನ ಗಮನಿಸಿದರೆ ಇವರುಗಳ ನಿಜ ಸ್ವರೂಪ ಬಟಾ ಬಯಲು.

          ಉತ್ತರ
      • vageesh's avatar
        vageesh
        ಸೆಪ್ಟೆಂ 19 2013

        Dear sir, why are you every time talking favour of any party ?(left, right, socialist). Are have not any indipendent stand. i am mentioning here only what the so called sahitis getting from government in the name of sahitya. even bairappa got this facility i here to condem. If sahiti is poor then it is allowed. but not ura he served somany highend offices.

        ಉತ್ತರ
        • Nagshetty Shetkar's avatar
          Nagshetty Shetkar
          ಸೆಪ್ಟೆಂ 19 2013

          Mr. Vageesh, Bhyrappa recently said writers must not have any social commitment. did you condemn him then?

          ಉತ್ತರ
          • vageesh's avatar
            vageesh
            ಸೆಪ್ಟೆಂ 20 2013

            ಶೆಟ್ಕರ್ ಅವರೇ, ಯಾಕೆ ಗೊಂದಲದಲ್ಲಿದ್ದೀರಿ ? ನಾನು ಅನಂತಮೂರ್ತಿ ಬಗ್ಗೆ ಹೇಳುವಾಗ ನೀವು ಬೈರಪ್ಪ ಬಗ್ಗೆ ಮಾತನಾಡುತ್ತಿದ್ದೀರಿ. ಮತ್ತೆ ಸೋಶಿಯಲ್ ಕಮೀಟ್‌ಮೆಂಟ್ ಅಂತ ಹೇಳ್ತೀರಲ್ಲಾ ? ಸಾಹಿತಿಗೆ ಸೋಶಿಯಲ್ ಕಮೀಟ್‌ಮೆಂಟ್ ಯಾಕೆ ಬೇಕು ? ಅವರೇನು ನೀತಿ ಕಥೆ ಬರೆಯುತ್ತಿದ್ದಾರಾ ? (ಕಾನ್ವೆಂಟ್‌ನಲ್ಲಿ ದಿ ಮೋರಲ್ ಆಫ್ ದಿ ಸ್ಟೋರಿ ಈಸ್ ಅಂತ ಬರುತ್ತೆ). ಅದು ಅನಂತಮೂರ್ತಿ ಆದ್ರೂ ಅಷ್ಟೇ ಬೆರಪ್ಪ ಆದ್ರೂ ಅಷ್ಟೇ. ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಏನು ನೀತಿ ಪಾಠ ಹೇಳುತ್ತೆ ? ಸುಮ್ಮನೆ ಎಲ್ಲದಕ್ಕೂ ನಿಮ್ಮ ಸಿದ್ಧಾಂತವನ್ನು ತಳಕು ಹಾಕಬೇಡಿ. ನಾನು ಅನಂತಮೂರ್ತಿಯವರ ಕುರಿತ ಆರೋಪಗಳನ್ನು ಪಟ್ಟಿ ಮಾಡಿದ್ದು ಅವರೊಬ್ಬ ಸಮಯ ಸಾಧಕ ಎಂದು ಹೇಳಲಷ್ಟೇ ಹೊರತು, ಭೈರಪ್ಪನಿಗಿಂತ ಮೂರ್ತಿ ಕೆಟ್ಟವರು, ಕೆಳಮಟ್ಟದ ಸಾಹಿತಿ ಎಂದು ಹೇಳುವುದು ಉzಶವಲ್ಲ. ಇಷ್ಟು ಸಣ್ಣ ವಿಚಾರವನ್ನೂ ಅರ್ಥ ಮಾಡಿಕೊಳ್ಳಲಾಗದ ನೀವು ಅದು ಹೇಗೆ ವಿಮರ್ಶೆ, ಉತ್ತರಗಳನ್ನು ಬರೆಯುತ್ತೀರೋ ನನಗೇ ಅರ್ಥವಾಗುತ್ತಿಲ್ಲ. ಬಹುಶಃ ನಿಮ್ಮ ಮೂಗಿನ ನೇರಕ್ಕೆ ಏನು ಕಾಣುತ್ತೋ (ಶಬ್ಧ ಪ್ರಯೋಗಕ್ಕೆ ಕ್ಷಮೆಯಿರಲಿ) ಅದನ್ನೇ ಸತ್ಯ ಎಂದು ನೀವು ಪ್ರತಿಪಾದಿಸುವವರು ಅನ್ನಿಸುತ್ತದೆ. ಅದೇ ನನ್ನದೇ ಒಂದು ಪಥ, ನನಗೆ ಬೇರೆ ಮತ, ಪಥಗಳು ಅಪಥ್ಯ ಎಂದು ತಿಳಿದುಕೊಂಡಂತಿದೆ. ಇಷ್ಟು ಉದ್ದದ ಉತ್ತರ ನೀಡುತ್ತಿರಲಿಲ್ಲ. ಬಟ್, ನಿಮ್ಮ ಅeನವನ್ನು ಮತ್ತು ನ್ಯಾರೋ ಮೈಂಡ್‌ಸೆಟ್‌ನ್ನು ಕಡಿಮೆ ಮಾಡಲು ಒಂದು ಚಿಕ್ಕ ಪ್ರಯತ್ನ ಮಾಡೋಣ ಎಂದು ಹೇಳಬೇಕಾಯಿತು. ನನ್ನ ಪರಿಚಯವಿರುವ ಯಾರಲ್ಲಿ ಬೇಕಾದರೂ ಕೇಳಿ ಅವರು ಹೇಳುತ್ತಾರೆ, ನಾನು ಯಾರನ್ನು ಬೆಂಬಲಿಸುತ್ತೇನೆ ಅಥವಾ ಯಾರನ್ನೂ ಬೆಂಬಲಿಸುವುದಿಲ್ಲ ಎಂದು. ಸುಮ್ಮನೆ ನೀವೇ ಊಹಿಸಿಕೊಂಡು ಏನೇನೋ ಬರೆಯಬೇಡಿ. ಅನಂತಮೂರ್ತಿಯವರನ್ನು ಟೀಕಿಸಿದರೆ ಅವರು ಭೈರಪ್ಪ ಬೆಂಬಲಿಗರು ಎನ್ನುವವರು ನೀವು. ಹಾಗಾದರೆ ರಾಹುಲ್ ಗಾಂಧಿ ಸರಿಯಿಲ್ಲ ಎಂದರೆ ಅವರು ಮೋದಿ ಬೆಂಬಲಿಗರು ಎಂದು ಅರ್ಥವೇ ? ಯಾಕೆಂದರೆ ನೀವು ಕಾಂಗ್ರೆಸ್ ವಿರೋಸುವವರು, ಹೀಗಾಗಿ ನಿಮ್ಮ ಮಾನದಂಡವನ್ನೇ ತೆಗೆದುಕೊಂಡರೆ ನೀವು ಲೆಫ್ಟಿಸ್ಟ್ ಎಂದು ಹೇಳಲು ಸಾಧವಿಲ್ಲ. ನೀವು ಕಾಂಗ್ರೆಸ್ ವಿರೋಸುವವರಾದ್ದರಿಂದ ಮೋದಿ ಬೆಂಬಲಿಗರು ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಅದಕ್ಕಾಗಿ ಮತ್ತೊಮ್ಮೆ ಮನವಿ, ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಓದಿ, ಗ್ರಹಿಸುವ ವಿವೇಚನೆಯನ್ನು ಬೆಳೆಸಿಕೊಳ್ಳಿ, ನಿಮಗೂ ಉತ್ತಮ, ಸಮಾಜಕ್ಕೂ ಅದರಿಂದ ಒಳ್ಳೆಯದಾಗುತ್ತದೆ. ನಮಸ್ಕಾರ.

            ಉತ್ತರ
  5. Rajesh j's avatar
    Rajesh j
    ಸೆಪ್ಟೆಂ 18 2013

    ಒಂದು ಸಮಯೋಜಿತ ಸಮಚಿತ್ತದ ಲೇಖನ.

    ಉತ್ತರ
  6. ನವೀನ's avatar
    ನವೀನ
    ಸೆಪ್ಟೆಂ 19 2013

    ಅವರ ಸಂದರ್ಶನ ನೋಡಿದ್ರಾ .. ಗೊಂದಲದ ಮೂಟೆ ಹೊತ್ತು ಕುಳಿತಿದ್ದಾರೆ ಮೂರ್ತಿಗಳು

    ಉತ್ತರ
  7. nodefenceonlyoffence's avatar
    ಸೆಪ್ಟೆಂ 20 2013

    “ಕಾದ೦ಬರಿಯ ಮುಖ್ಯ ಪಾತ್ರ ಪ್ರಾಣೇಶಾಚಾರ್ಯರು ಚ೦ದ್ರಿಯನ್ನು ಕೂಡುವ ಸ೦ದರ್ಭ ಅತ್ಯ೦ತ ಅಸಮರ್ಪಕವಾಗಿ ಮೂಡಿ ಬ೦ದಿದೆಯೆ೦ದು ಸ್ವತ: ಕುವೆ೦ಪು ಹೇಳಿದ್ದರು” –That line of argument is called “holier than thou fallacy”. 🙂
    (Offence intended)

    ಉತ್ತರ
    • M.A.Sriranga's avatar
      M.A.Sriranga
      ಸೆಪ್ಟೆಂ 20 2013

      Mr Shetkar now the ball is in your court. Show me proof for the money received by S L Bhyrappa from Infosys Narayanamurhty

      ಉತ್ತರ

Leave a reply to nodefenceonlyoffence ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments