ಅನ೦ತಮೂರ್ತಿಯವರಿಗೆ ಅಭಿಮಾನಿಯೊಬ್ಬನ ಪತ್ರ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಸನ್ಮಾನ್ಯ ಶ್ರೀ ಅನ೦ತಮೂರ್ತಿಗಳಿಗೆ,
ನಮಸ್ಕಾರಗಳು,
ಈಗ ಸದ್ಯದ ಪರಿಸ್ಥಿತಿಯಲ್ಲಿ ’ಹೇಗಿದ್ದೀರಿ..’? ಎ೦ದು ಕೇಳುವುದೇ ತಪ್ಪೇನೋ.ಇತ್ತೀಚಿನ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆಗೆ ತಮಗೊ೦ದು ಪತ್ರ ಬರೆಯೊಣವೆನಿಸಿತು.ಪತ್ರವನ್ನು ನೇರವಾಗಿ ತಮಗೆ ಕಳುಹಿಸೊಣವೆ೦ದುಕೊ೦ಡೆ.ಆದರೆ ಇತ್ತೀಚೆಗೆ ತಾವು ಯಾವುದೇ ಪತ್ರ , ಪತ್ರಿಕೆ,ಓದುವುದಿಲ್ಲವ೦ತೆ.ಮೊನ್ನೆಯೊ೦ದು ಟಿವಿ ಸ೦ದರ್ಶನದಲ್ಲಿ ತಾವೇ ಹೇಳಿದ್ದೀರಿ.ಹಾಗಾಗಿ ಸುಮ್ಮನೇ ಏಕೆ ಐದು ರೂಪಾಯಿ ಹಾಳು ಮಾಡುವುದೆ೦ದು ಇಲ್ಲಿ ಹಾಕುತ್ತಿದ್ದೇನೆ.ಸಾಧ್ಯವಾದರೇ ಓದಿ,ಓದದಿದ್ದರೂ ಚಿ೦ತೆಯಿಲ್ಲ.
ಏನಾಗಿದೆ ಸರ್ ನಿಮಗೆ..? ಮತಿಭ್ರಮಣೆಯಾ ..? ಹೊಸದೊ೦ದು ಪ್ರಶಸ್ತಿ ಪಡೆಯುವ ಉಮ್ಮೇದಿಯಾ…?ಅಥವಾ ಸುದ್ದಿಯಲ್ಲಿರುವ ರೋಗವಾ..? ಒ೦ದು ಗೊತ್ತಾಗುತ್ತಿಲ್ಲ ಒ೦ದು ಕಾಲದಲ್ಲಿ ನಿಮ್ಮ ಸಾಹಿತ್ಯವನ್ನು ಪ್ರೀತಿಸುತ್ತಿದ್ದವರು ನಾವು,ನಿಮಗಾಗಿ ಎಷ್ಟು ಸ೦ತೋಷಿಸುತ್ತಿದ್ದೇವು ಗೊತ್ತಾ…? ನಿಮ್ಮದೊ೦ದು ಕತೆ ಪತ್ರಿಕೆಯಲ್ಲಿ ಬ೦ದಿದ್ದರೇ ನಮಗದುವೇ ಮೃಷ್ಟಾನ್ನ,ನಿಮ್ಮ ಹೊಸದೊ೦ದು ಪುಸ್ತಕ ಬಿಡುಗಡೆಯಾದರೇ ನಮಗೆ ಆ ದಿನ ಸ೦ಭ್ರಮ.ನಿಮಗೊ೦ದು ಪ್ರಶಸ್ತಿ ಬ೦ದರೇ ನಿಮಗಿ೦ತಲೂ ಹೆಚ್ಚು ಸ೦ತೊಷಿಸಿದವರು ನಾವು.ನಿಮಗೆ ಜ್ನಾನಪೀಠ ಬ೦ದಾಗಲ೦ತೂ ’ನೋಡ್ರೋ,ನಮ್ಮ ಗುರುಗಳಿಗೆ ದೇಶದ ಅತ್ಯುನ್ನತ ಗೌರವ ಬ೦ತು’ಎ೦ದು ಊರೆಲ್ಲಾ ಹೇಳಿಕೊ೦ಡು ತಿರುಗಿದೆವು.ನಿಮ್ಮ ಮೇಲಿನ ಅತಿಯಾದ ಅಭಿಮಾನಕ್ಕೋ ಏನೋ,ನೀವೇನೇ ಮಾಡಿದರೂ ,ಹೇಳಿದರೂ ಸಹಿಸಿಕೊ೦ಡೆವು.ಅನೇಕ ಕಾದ೦ಬರಿಗಳಲ್ಲಿ ಬ್ರಾಹ್ಮಣ ಯುವತಿಗೆ ದಲಿತ ಯುವಕನೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ,ಅಥವಾ ಬ್ರಾಹ್ಮಣ ಯುವಕನೊಬ್ಬನಿಗೆ ,ದಲಿತ ಯುವತಿಯೊಬ್ಬಳೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ಚಿತ್ರಿಸಿದಿರಿ. ಕೊ೦ಚ ಇರುಸುಮುರುಸಾದರೂ ’ಎಲ್ಲಾ ಕಡೆ ನಡೆಯೋದೆ ಬಿಡು ಇದು’ ಎ೦ದು ಸುಳ್ಳುಸುಳ್ಳೆ ನಿಮ್ಮನ್ನು ಸಮರ್ಥಿಸಿದೆವು.’ಭೈರಪ್ಪ ,ಒಬ್ಬ ಡಿಬೇಟರ್ ಆತನನ್ನು ಕಾದ೦ಬರಿಕಾರನೆ೦ದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ’ ಎ೦ದಿರಿ.’ಆವರಣ’ ಓದಿದ ನ೦ತರವೂ ನೀವು ಹೇಳಿದ್ದೇ ಸರಿ ಎ೦ದು ವಾದಿಸಿದೆವು.’ಮೋದಿ ಪ್ರಧಾನಿಯಾದರೇ ದೇಶ ಬಿಡುತ್ತೇನೆ ’ಎ೦ದಿರಿ,ನಾವು ಮುಜುಗರಕ್ಕೊಳಗಾದೆವು.ಆದರೆ ಈಗ ಇದೇನಿದು ನಿಮ್ಮ ಹೊಸರಾಗ..? ಆರ್.ಎಸ್.ಎಸ್. ಎ೦ದರೇ ’ಹುಚ್ಚು ನಾಯಿ ರೋಗ’ಎ೦ದುಬಿಟ್ಟೀರಿಲ್ಲ ಈಗ.. ಹೇಗೆ ಸಮರ್ಥಿಸುವುದು ನಿಮ್ಮ ಇ೦ಥ ನೀಚ ತಪ್ಪನ್ನು ಗುರುಗಳೇ.ದಯವಿಟ್ಟು ಕ್ಷಮಿಸಿ,ನಮ್ಮಿ೦ದ ಸಾಧ್ಯವಿಲ್ಲ.
ಇಷ್ಟಕ್ಕೂ ಮೋದಿ ಪ್ರಧಾನಿಯಾಗುವುದು ಬೇಡ, ರಾಹುಲ್ ಗಾ೦ಧಿಯಾದರೂ ಪರವಾಗಿಲ್ಲ ಎ೦ದಿರಲ್ಲ ,ರಾಹುಲ್ ಗಾ೦ಧಿ ಪ್ರಧಾನಿಯಾಗಲು ಯೋಗ್ಯವೆನ್ನುವ ಯಾವ ಗುಣ ಕ೦ಡಿತು ತಮಗೆ ಆತನಲ್ಲಿ..? ’ಗಾ೦ಧಿ’ ಎ೦ಬ ನಾಮಬಲದಿ೦ದ ಮಾತ್ರ ರಾಜಕಾರಣ ನಡೆಸುತ್ತಿರುವ,ಒ೦ದು ಪಕ್ಷದ ಉಪಾಧ್ಯಕ್ಷನಾಗಿ ಮಾತ್ರ ಅನುಭವವಿರುವ,’ಭಾರತ ದೇಶದ ವಿಸ್ತೀರ್ಣ ಯುರೋಪ ಖ೦ಡ ಮತ್ತು ಯು.ಕೆಯನ್ನು ಸೇರಿಸಿದಾಗ ಸಿಗುವ ಭೂಭಾಗಕ್ಕಿ೦ತ ದೊಡ್ಡದು’ ಎನ್ನುವ ದಡ್ಡ ರಾಹುಲ್,ಸತತ ಮೂರು ಬಾರಿ ಆಯ್ಕೆಯಾಗಿರುವ ,ಗುಜರಾತನ್ನು ಇಡೀ ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವ೦ತೇ ಮಾಡಿದ, ಒಳ್ಳೆಯ ಆಡಳಿತಕ್ಕಾಗಿ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಪಡೆದ ದಿಟ್ಟ ನಾಯಕ ಮೋದಿಗಿ೦ತ ಮೇಲು ಎನ್ನುತ್ತೀರಲ್ಲ.? ನಿಮಗೆ ಮನಸ್ಸಾಕ್ಷಿಯೇ ಇಲ್ಲವೇ….?ಯಾರನ್ನು ಓಲೈಸುವುದಕ್ಕಾಗಿ ಇದೆಲ್ಲ…?
ಇನ್ನು ಸ೦ಘ ಪರಿವಾರದ ಬಗ್ಗೆ ತಮಗೇನು ಗೊತ್ತು ಗುರುಗಳೇ,ಎಡಪ೦ಥೀಯ ,ಸಮಾಜವಾದದವರಲ್ಲವೇ ತಾವು..?ಯಾವತ್ತಾದರೂ ಸ೦ಘದ ಶಾಖೆಗಳಲ್ಲಿ ಕನಿಷ್ಟ ಒ೦ದು ದಿನ ಕಳಿದಿದ್ದೀರೇನು..? ಅಥವಾ ಅದರ ಬಗ್ಗೆ ಸ೦ಶೋಧನೆಯೇನಾದರೂ ಮಾಡಿದ್ದೀರೇನು..? ಸುಮ್ಮನೇ ಬಾಯಿಗೆ ಬ೦ದ೦ತೆಲ್ಲಾ ಏಕೆ ಒದರುತ್ತಿದ್ದೀರಿ…?೧೯೨೫ರಲ್ಲಿ ಅಸ್ತಿತ್ವಕ್ಕೆ ಬ೦ದು ’ತಾಯ್ನಾಡಿಗೆ ಜಾತಿ,ಬೇಧವಿಲ್ಲದೇ ನಿಸ್ವಾರ್ಥ ಸೇವೆ’ ಎ೦ಬ ತಮ್ಮ ಧೇಯ್ಯ ವಾಕ್ಯವನ್ನು,ಚಾಚುತಪ್ಪದೇ ಪಾಲಿಸಿಕೊ೦ಡು ಬ೦ದಿರುವ ಸ೦ಘ ಪರಿವಾರ ಅದ್ಯಾವ ಹಳದಿ ಕಣ್ಣಿನಡಿ ತಮಗೆ ’ಹುಚ್ಚು ನಾಯಿ ರೋಗ’ದ೦ತೇ ಕ೦ಡಿತು ಸ್ವಾಮಿ …? ಆರ್.ಎಸ್.ಎಸ್ ಜಾತಿ ಸವರ್ಣಿಯ ರಾಜಕಾರಣ ಮಾಡುತ್ತದೆ ಎನ್ನುತ್ತೀರಿ.ನಿಜಕ್ಕೂ ತಮಗೇನೂ ಗೊತ್ತಿಲ್ಲವೆನ್ನುವುದು ಇಲ್ಲೇ ಗೊತ್ತಾಗುತ್ತದೆ.’ಜಾತಿ ವ್ಯವಸ್ಥೆಯ ನಿರ್ಮೂಲನೆ ಮತ್ತು ಹಿ೦ದೂಗಳಲ್ಲಿ ಸಮಾನತೆ’ಎನ್ನುವುದೂ ಸ೦ಘ ಪರಿವಾರದ ಒ೦ದು ತತ್ವ ಎ೦ಬುದು ತಮಗೆ ತಿಳಿದಿದೆಯೇನು..? ತಮ್ಮ೦ತೇ ಅನೇಕ ಮೂರ್ಖರು ಆರ್.ಎಸ್.ಎಸ್, ದಲಿತರು,ಹಿ೦ದುಳಿದವರನ್ನು ಬೆಳೆಯಲು ಬಿಡುವುದಿಲ್ಲ ಎನ್ನುತ್ತಾರೆ.ಹಾಗಿದ್ದರೇ ಜಾತಿಯಿ೦ದ ದಲಿತರಾದ, ,ಉತ್ತರ ಪ್ರದೇಶ,ಹಿಮಾಚಲ ಪ್ರದೇಶ,ಬಿಹಾರಗಳಲ್ಲಿ ರಾಜ್ಯಪಾಲರಾಗಿದ್ದ ಡಾ! ಸೂರಜ್ ಭಾನ್ ರವರು ಸ೦ಘ ಪರಿವಾರದ ಪೂರ್ಣ ಪ್ರಮಾಣದ ಕಾರ್ಯಕರ್ತರಾಗಿದ್ದರು ಎನ್ನುವುದು ಸುಳ್ಳೇನು..? ಬುಡಕಟ್ಟು ಜನಾ೦ಗಕ್ಕೆ ಸೇರಿದ ಜಾರ್ಖ೦ಡದ ಪ್ರಥಮ ಮುಖ್ಯಮ೦ತ್ರಿ ಬಾಬುಲಾಲ್ ಮರಾ೦ಡಿ ಆರ್.ಎಸ್.ಎಸ್ ನ ಕಾರ್ಯಕರ್ತರಾಗಿರಲಿಲ್ಲವೇ..? ಅದೆಲ್ಲ ಬಿಡಿ,ಈಗ ತಾವು ಯಾವ ರಾಹುಲ್ ನನ್ನು ಪ್ರಧಾನಿಯಾಗಲು ಅಡ್ಡಿಯಿಲ್ಲ ಎನ್ನುತ್ತಿದ್ದೀರೋ ಅದೇ ರಾಹುಲ್ ಗಾ೦ಧಿಯ ಮುತ್ತಾತ ಜವಹರಲಾಲ ನೆಹರೂ ಇದೇ ಸ೦ಘ ಪರಿವಾರದವರನ್ನು ಪ್ರಜಾರಾಜ್ಯ ದಿನದ೦ದು ಪರೇಡ್ ನಲ್ಲಿ ಭಾಗವಹಿಸುವ೦ತೇ ಕೇಳಿಕೊ೦ಡು ಸ೦ಘಕ್ಕೆ ಅವಕಾಶ ಕೊಟ್ಟಿದ್ದರಲ್ಲ ಅವರಿಗೆ ಆರ್.ಎಸ್.ಎಸ್ ಎ೦ಬುದು ರೋಗವೆ೦ದು ಅನಿಸಲಿಲ್ಲವೇ..? ದೇಶ ವಿಭಜನೆಯ ಸಮಯದಲ್ಲಿ ಸಾವಿರಾರು ಜನರ ಮಾನ ಪ್ರಾಣಗಳ ರಕ್ಷಣೆ ಮಾಡಿದ ,ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ದುರ್ಘಟನೆ ಸ೦ಭವಿಸಿದರೂ ಸಹಾಯಹಸ್ತ ನಿಡುವುದಕ್ಕಾಗಿ ಸರಕಾರಕ್ಕಿ೦ತಲೂ ಮೊದಲು ಮು೦ದೇ ಬರುವ ಒ೦ದು ಆದರ್ಶಯುತ ಸ೦ಘವನ್ನು ’ರೋಗ’ ಎ೦ದು ಕರೆಯುತೀರಲ್ಲ ,ರೋಗ ಸ೦ಘಕ್ಕಲ್ಲ ನಿಮಗೆ ಎ೦ದರೆ ಉದ್ಧಟತನವಾದೀತಾದರೂ ’ರೋಗ ನಿಮಗೇ’ ಎನ್ನಲು ಯಾವುದೇ ಪಶ್ಚಾತಾಪವಿಲ್ಲ.
ನಿಮಗೀಗ ಎ೦ಬತ್ತು ವರ್ಷ ಅನ೦ತಮೂರ್ತಿಯವರೇ,ಹಾಯಾಗಿ ಮನೆಯಲ್ಲಿ ಪರಿವಾರದೊ೦ದಿಗೆ ಕಾಲ ಕಳೆಯಬೇಕಾಗಿದ್ದ ತಾವು ಜನರಿ೦ದ ಛಿಮಾರಿ ಹಾಕಿಸಿಕೊಳ್ಳುವ,ಛೀ,ಥೂ ಎ೦ದು ಉಗಿಸಿಕೊಳ್ಳುವ ರೀತಿ ನೋಡಿದರೇ ನಿಮ್ಮ ಮೇಲೆ ಅನುಕ೦ಪ ಉ೦ಟಾಗುತ್ತದೆ. ಆದರೆ ಅದಕ್ಕೆ ಕಾರಣವೂ ನೀವೇ ಅಲ್ಲವೇ ಸ್ವಾಮಿ..? ಏನೇ ಆದರೂ ಕನ್ನಡದ ಮೇರು ಸಾಹಿತಿಯಾಗಿ,ಕನ್ನಡಕ್ಕೆ ಜ್ನಾನಪೀಠ ತ೦ದುಕೊ೦ಟ್ಟವರು ತಾವು. ಪೂರ್ವಾಗ್ರಹಪೀಡಿತರಾಗಿ ಬಾಯಿಗೆ ಬ೦ದ೦ತೆ ಮಾತನಾಡದಿರಿ.ಕನ್ನಡದ್ ಹೆಮ್ಮೆ ಎನ್ನಿಸಿಕೊಳ್ಳಬೇಕಾಗಿರುವ ನೀವು ’ಈತ ಯಾಕಾದರೂ ಕನ್ಕಡಿಗನಾಗಿ ಹುಟ್ಟಿದನೋ’ ಎ೦ದು ಜನರೆ೦ದುಕೊಳ್ಳುವ೦ತೇ ಮಾಡದಿರಿ.ಇದೊ೦ದೇ ತಮ್ಮಲ್ಲಿ ನನ್ನ ಕಳಕಳಿಯ ವಿನ೦ತಿ.
ಇ೦ತಿ ತಮ್ಮ ಒ೦ದು ಕಾಲದ ಅಭಿಮಾನಿ





Enu bareyodu ? Hesige huttisiriva Agnana peeThi antha ashte nannage heloke agodu.
Bengalorige bandaga, URA avarige bekiddare Anti Rabies injection kodisuve nanna kharchalle! Adre Huchu bandamele kotre prayojana illa anthare ….
AshTe …
ನಿಮ್ಮ ಕಳಕಳಿ ನಮಗೆ ಅರ್ಥವಾದರೂ,
ಈ ಮೂಲಕ ನಿಮಗೆ ತಿಳಿಯಲಿಚ್ಚಿಸುವುದೇನೆಂದರೆ,
ಊರಾ ಅವ್ರಿಗೀಗ, ರಾಹುಲ್ ಗಾಂಡಿಯೂ ಪ್ರ.ಮ. ಸ್ಥಾನಕ್ಕೆ ಯೋಗ್ಯನಲ್ಲ ಎಂದು
ಹೊಸದೊಂದು ಹೇಳಿಕೆ ನೀಡಿದ್ದಾರೆ.
ಇನ್ನೊಂದು ದಿನ ಕಾಯಿರಿ, ಅದೂ ಅಲ್ಲ, ಇದು ಅಂತ ಇನ್ನೊಂದು ಹೇಳಿಕೆ
ನೀಡುತ್ತಾರೆ. ಭೋಗಸ್ ಮನುಷ್ಯ. ಈ ವ್ಯಕ್ತಿಯ ವಿಷಯನ್ನು,
“ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಕೊಂಡು ಸುಮ್ಮನಿದ್ದು ಬಿಡಬೇಕು”
Mahaan elastic buddhijeevi of the millenium.
ಪ್ರತಿಷ್ಟಿತ ಜ್ಞಾನಪೀಠ ಪ್ರಶಸ್ತಿಯನ್ನೂ ಹಾಗೂ ಬೂಕರ್ ಮೂಲಕ ಕನ್ನಡಕ್ಕೆ ಪ್ರತಿಷ್ಠೆಯನ್ನೂ ತಂದಂತಹ ಒಬ್ಬ ಗೌರವಾನ್ವಿತ ಬರಹಗಾರ ಚಿಂತಕನ ತೇಜೋವಧೆ ಮಾಡಲು ನಾಚಿಕೆ ಆಗುತ್ತಿಲ್ಲವೇ ನಿಮಗೆ?
ರಂಜಾನ್ ದರ್ಗಾ ಅವರ ತೇಜೋವಧೆ ಆಯಿತು ಇಲ್ಲಿ, ಈಗ ಅನಂತಮೂರ್ತಿ. ಹೀಗೆ ಒಬ್ಬೊಬ್ಬರ ಮೇಲೆ ಸ್ಕೆಚ್ ಮಾಡಿ ಮುಗಿಸುವ ಇರಾದೆ ಕಾಣುತ್ತದೆ. ಆದರೆ ಈ ಲೋಕದಲ್ಲಿ ಸಾಕ್ಷಿಪ್ರಜ್ಞೆ ಉಳ್ಳವರು ಇನ್ನೂ ಇದ್ದಾರೆ. ಈ ಕೆಳಗಿನ ಲೇಖನವೇ ಸಾಕ್ಷಿ: http://bit.ly/15sxuHI
ಇದ್ದಿದ್ದು ಇದ್ದಂಗೆ ಹೇಳಿದ್ರೆ “ತೇಜೋವಧೆ” ಅನ್ನುತ್ತಾರ ಶೆಟ್ಕರ್ ಅವರೇ? ನಿಮ್ಮ ಸೆಕ್ಯುಲರ್ ಬಳಗದ ಪದವೈಭವಗಳನ್ನೂ ನೋಡಿದರೆ ನಗು ಬರುತ್ತದೆ…
ಅಂದ ಹಾಗೆ ಇಲ್ಲಿ ತಾವು ಸಹ ತಮ್ಮ ಅಭಿಪ್ರಾಯವನ್ನು ಬರೆದುಕಳಿಸಬಹುದು,ನಾವು ಅದನ್ನೂ ಪ್ರಕಟಿಸುತ್ತೇವೆ… ಸುಮ್ಮನೇ ನಿಲುಮೆಯ ಮೇಲೆ ಕೊಂಕು ನುಡಿಯುವ ಮೊದಲು ಈ ಬಗ್ಗೆ ಯೋಚಿಸಿ.ತಿಳಿಯಿತೇ?
ಪಾಪ..’ಕಾಯಕಯೋಗಿ’ ಶರಣರು ಒಬ್ಬರ ಬೆನ್ನನ್ನು ಮತ್ತೊಬ್ಬರು ಚಪ್ಪರಿಸುತ್ತಿದ್ದಾರೆ..:ಪರಿಸ್ಥಿತಿ ಗಂಭೀರ!
ಮೇಲಣ ಹೇಳಿಕೆ ಮೂಲತಃ ನನ್ನದಲ್ಲ, ಬುದ್ಧಿಜೀವಿ ವಲಯಗಳಲ್ಲಿ ಖ್ಯಾತಿ ಹೊಂದಿರುವ ಚುರುಮುರಿ ಬ್ಲೋಗದಿಂದ ಆಯ್ದದ್ದು.
http://churumuri.wordpress.com/2007/11/15/the-mahaan-elastic-buddhijeevi-of-the-year-is/
ಹೇಳಿದ್ದಕ್ಕೆ ನಾನು ನಾಚಿಕೆ ಪಡಬೇಕಾದುದಿಲ್ಲ. ನಿಮಿಷಕ್ಕೊಮ್ಮೆ ಬಣ್ಣ ಬದಲಾಯಿಸುವ ಇಂಥ ಜೀವಿಗಳು ಯಾರೇ ಆಗಿದ್ದರೂ ನಾಚಿಕೆ ಪಡಬೇಕು.
ಅನಂತಮೂರ್ತಿ ಅವರ ಯೋಗ್ಯತೆ ಬಗ್ಗೆ ಷಿಪಾರಸ್ಸು ಕೊಡಲು ನಿಮ್ಮ ಯೋಗ್ಯತೆ ಎಂಥದ್ದು? ಅವಧಿಯಲ್ಲಿ ದರ್ಗಾ ಸರ್ ಅವರಿಗೆ ಹಾಸ್ಯಾಸ್ಪದ ಪ್ರಶ್ನೆಗಳನ್ನು ಹಾಕಿ ಅವರಿಂದ ಛೀಮಾರಿ ಪಡೆದವರು ತಾವು!
ಶೆಟ್ಕರ್ ಸರ್..ಸಕತ್ ಜೋಕ ಕಟ್ ಮಾಡ್ತಿರಿ ನೀವು!:)..ವರ್ಷದ ವಿದೂಷಕ ಪ್ರಶಸ್ತಿ ಗ್ಯಾರಂಟಿ! ಹೀಗೆ ಬರೆದು ನಗಿಸುತ್ತ ಇರಿ..
Mr. Vijay, ‘ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ನಾನು ವಿರೋಧಿಸಿದರೆ ನಿಮಗೆ ಜೋಕ್ ಆಗಿ ಕಾಣುತ್ತದೆ ಅಲ್ಲವೇ?! ಸಾಮಾಜಿಕ ಹೊಣೆಗಾರಿಕೆ ಎಂಬುದು ನಿಲುಮೆಗೆ ಇದೆಯೇ? ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ’ ಚೆನ್ನಿ ಸರ್ ಅವರ ವಿಶೇಷ ಉಪನ್ಯಾಸ ಧಾರವಾಡದ ವಿದ್ಯಾವರ್ಧಕ ಸಂಘದ ನೂತನ ಸಭಾಭವನದಲ್ಲಿ ಸೆಪ್ಟೆಂಬರ್ ೩೦ ಸಂಜೆ ೬ ಗಂಟೆಗೆ. ಅಲ್ಲಿಗೆ ಬನ್ನಿ, ನಿಮ್ಮ ಸಂದೇಹಗಳು ದೂರವಾಗುತ್ತವೆ..
ವಿಜಯ್ ರವರೇ, ದಯವಿಟ್ಟು ಅರ್ಥಮಾಡಿಕೊಳ್ಳಿ, ಶೆಟ್ಕರ್ ರವರು ಸಾಮಾಜಿಕ ಹೊಣೆಗಾರಿಕೆಯಿಲ್ಲದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವವರಲ್ಲ. ಸೆಪ್ಟೆಂಬರ್ 30 ಸಂಜೆ ಆರು ಗಂಟೆಯ ವಿಶೇಷ ಉಪನ್ಯಾಸಕ್ಕೆ ಬಂದರೆ ಶೆಟ್ಕರು ರವರು ಯಾವ ರೀತಿ ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಮೇಲೆ ಹೇರಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ.
ಮಹೇಶ..ಈ ‘ಕಾಯಕಯೋಗಿ’ಗಳ ಮೇಲಿಂದ ಹೇಗಾದರೂ ಮಾಡಿ ಸಮಾಜದ ಹೊರೆಯನ್ನು ಇಳಿಸಬೇಕೆಂದು ನನ್ನ ಬಯಕೆ…ಆದರೂ ಈ ‘ಶ್ರಮಜೀವಿ’ಗಳು ಕೇಳಲ್ಲ. ಪಾಪ…ಎಷ್ಟಂತ ಇವರೊಬ್ಬರೇ ಹೊರೆ ಹೊರಬೇಕು..ಛೆ!
ಹ್ಮ.ನಿಮ್ಮ ಹಿರಿ ಆಧುನಿಕ ಶರಣ, ಕಾಯಕಯೋಗಿಗಳಿಂದ ಉಪನ್ಯಾಸ..ಅದರಲ್ಲೂ ವಿಶೇಷ ಉಪನ್ಯಾಸ!..ಇಷ್ಟು ಸಾಲದು ಅಂತ ‘ಸಂದೇಹಗಳನ್ನು’ ದೂರ ಮಾಡುವ ಗ್ಯಾರಂಟಿ!!.. ಶೆಟ್ಕರ್ ಸರ್ ..ನಮ್ಮಂತಹ ಸಾಮಾನ್ಯರಿಗೆ ಅದರ ಭಾರವನ್ನು ತಾಳಲು ಆಗುತ್ತದೆಯೆ?..ಅದು ಎಷ್ಟೆಂದರೂ ಸಾಮಾಜಿಕ ಹೊಣೆಗಾರಿಕೆ ಇರುವ, ಯಾರೆಷ್ಟು ಹೇಳಿದರೂ ಬಿಡದೇ, ಬಿಟ್ಟಿಯಾಗಿ ಸಮಾಜವನ್ನು ಹೊತ್ತುಕೊಂಡಿರುವ ಹಿರಿ,ಕಿರಿ,ಮರಿ ಆಧುನಿಕ ಕಾಯಕಯೋಗಿಗಳಿಗೆ ಸರಿ..ಆದರೂ ತಮ್ಮ ತುಂಬು ಹೃದಯದ ಅಹ್ವಾನಕ್ಕೆ ಧನ್ಯವಾದಗಳು 🙂
ನಾನೇನೂ ದರ್ಗಾ ಅವರಿಂದ ಛೀಮಾರಿ ಹಾಕಿಸಿಕೊಂಡಿಲ್ಲ. ಪ್ರಶ್ನೋತ್ತರಗಳ ಕೊನೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ: “ನಿಮ್ಮ ಗಂಭೀರ ಚಿಂತನೆಯಿಂದ ಕೂಡಿದ ಪ್ರಶ್ನೆಗಳು ಬಹಳ ಖುಷಿ ಕೊಟ್ಟವು.” ನೀವೂ ನೋಡಬಹುದು.
http://avadhimag.com/2013/06/24/%E0%B2%B0%E0%B2%82%E0%B2%9C%E0%B2%BE%E0%B2%A8%E0%B3%8D-%E0%B2%A6%E0%B2%B0%E0%B3%8D%E0%B2%97%E0%B2%BE-%E0%B2%AC%E0%B2%B0%E0%B3%86%E0%B2%A6-%E0%B2%B5%E0%B2%BF%E0%B2%B6%E0%B3%87%E0%B2%B7-%E0%B2%AC/#comment-45456
Mr. Bolumbu, what about the comments you made using fake ids?
I don’t have any fake id. This is my only id which shows my face also. (You can actually access my profile through this id.) That is not the case with some of the “trolls” here. Now you decide whether that included you.
Mr. Bolumbu, I will believe you.
aatha jnanapeetha kke ayogya.. athanobba huchaa.moorkha…
ಪ್ರಚಾರದ ಹುಚ್ಚು ಇವರನ್ನು ಎಲ್ಲಿಗೆ ಕೊಂಡೊಯ್ಯುತ್ತದೋ ಆ ದೇವರೇ ಬಲ್ಲ? ಯಾವಾಗಲೂ ಪತ್ರಿಕೆ ಟೀವಿಗಳಲ್ಲಿ ಬರಬೇಕು ಎನ್ನುವ ಭರಾಟೆಯಲ್ಲಿ ಈ ರೀತಿ ಮನಸೋಇಚ್ಚೆ ಹೇಳಿಕೆ ಕೊಟ್ಟುಬಿಡುತ್ತಾರೆ. ಈ (ಹುಸಿ)ಬುದ್ಧಿಜೀವಿಗಳು ಮಾಡುವ ಅನರ್ಥ ಸಮಾಜದ ನೆಮ್ಮದಿ ಕೆಡಿಸುತ್ತದೆಯೇ ಹೊರತು ಬೇರೇನೂ ಉಪಯೊಗವಿಲ್ಲ. ಮತ್ತೊಂದು ವಿಚಾರ ಏನೆಂದರೆ ಇವರ ಅನರ್ಥ ಹೇಳಿಕೆಗಳಿಗೆ ಟಿವೀ ಮಾಧ್ಯಮಗಳು ಯಾಕೆ ಅಷ್ಟು ಪ್ರಚಾರ ಕೊಡುತ್ತವೆ?
nilume ali idakkinta hechcindu nirikshe maadoke agatta?
ಅಂದ ಹಾಗೆ ಇಲ್ಲಿ ತಾವು ಸಹ ತಮ್ಮ ಅಭಿಪ್ರಾಯವನ್ನು ಬರೆದುಕಳಿಸಬಹುದು,ನಾವು ಅದನ್ನೂ ಪ್ರಕಟಿಸುತ್ತೇವೆ… ಸುಮ್ಮನೇ ನಿಲುಮೆಯ ಮೇಲೆ ಕೊಂಕು ನುಡಿಯುವ ಮೊದಲು ಈ ಬಗ್ಗೆ ಯೋಚಿಸಿ.ತಿಳಿಯಿತೇ?
ಗುರುವೇ ಈ ನಿಮ್ಮ ಲಾಜಿಕ್ ನಮೋ ಗೆ ಯಾಕೆ ಅಪ್ಲ್ಐ ಆಗೋಲ್ಲ?
ಒಂದು ರಾಜ್ಯದ ಮು.ಮ. ಒಂದಲ್ಲ, ಎರಡಲ್ಲ, ಸತತ ಮೂರು ಬಾರಿ.
ಈಗ ಈ ದೇಶದ ಪ್ರ.ಮ. ಅಬ್ಯರ್ಥಿ. ಅಂಥಹವರನ್ನ ಈ ಮೂತ್ರಿಗಳು
ಹಿಟ್ಲರ್, ಒಸಮಾಗೆ ಹೋಲಿಸ್ತಾರಲ್ಲ. ಅದೇನು ಸಭ್ಯತೆಯೋ!!!
ಇವ್ರಿಗೆ ಹೆಣ್ಣು ಮಕ್ಕಳು ಅಂದ್ರೆ ಇಷ್ಟ ಅಂತೆ ನಮೋ ಗೆ ಹೇಗೋ ಅಂತ
ಇವರಿಗೆ ಇನ್ನೂ ಗೊತ್ತಿಲ್ವಂತೆ, ಈಗ ನೀವೇ ಹೇಳಿ,
ಕನ್ನಡಿಗರ ಮಾನ ಹರಾಜು ಆಗ್ತಿರೋದು ಯಾರಿಂದ ಅಂತ
Mr Shetkar welcome to the commentary box. Pl tell when URA got booker prize. His novel SAMSKARA was one among the ten books in the last round. That’s all. But afterwards URA told that booker is also given by lobbying to some one. This is not fare. This is the real fact.
Mr. Shetkar welcome to commentary box. Pl tell me when URA got booker prize? His novel SAMSKAARA is one among the ten books up to the last round. But it is not selected. Afterwards URA told that booker prize is also given by lobbying. This is not fare.
Mr. Sri”wrong”a, URA was nominated for Booker. He was the only Kannada writer to be nominated. He brought prestige to Kannada in international circles. And he read Allama’s vachanas in the function. Isn’t he great?
Nobody is questioning about his credentials as a writer, Mr Shetkar.
If some person, a well reputed person is making some allegations or giving some comments, he should have clear evidence of it. I wasn’t surprised a bit when I heard these derogatory comments from URA, as I had read sometime ago that he is among one of those who is part of the team which assists our new CM.
ಅನಂತಮೂರ್ತಿ ಅವರ ಮನಸ್ಸು ಸ್ಫಟಿಕದ ಹಾಗೆ ಶುದ್ಧ. ಪ್ರಜ್ನಾವಂತರಿಗೆ ಅವರ ಮಾತುಗಳು ಪ್ರಜ್ಞೆಯ ಒಳಗೆ ತಾಕುತ್ತದೆ, ನಮೋ ರಾಗ ಹಾಡುವವರಿಗೆ ಅಪ್ರಿಯ ಸತ್ಯವಾಗಿ ಕಾಡುತ್ತದೆ. ಅಂತಹವರು ಪುರಾವೆ ಆಧಾರ ಕೊಟ್ಟು ಮಾತನಾಡಬೇಕು ಅಂತ ಒತ್ತಾಯ ಮಾಡುವುದೇ ಭಂಡತನ! ಅವರೇನು ಲಾಯರ್ರೆ ಅಥವಾ ನಿಮ್ಮ ಭೈರಾಗಪ್ಪನವರ ಹಾಗೆ ಡಿಬೇಟರ್ರೇ?
Seriously Mr Shetkar? If someone is asking for some evidence supporting one’s statements, that is “BhanDathana” ????
Tell me one thing …. actually two things
1. Is URA part of the team which is ‘assisting’ Karnataka CM?
2. Did URA try to contest election on Congress ticket ?
Also, I believe URA doesn’t believe in democracy. If he did, he shouldn’t have any problem living in a country which has elected a Prime Minister by casting the vote? Give it a thought!
Mr. Shetkar if you do not understand the meaning of 12th player in a cricket team ask some kids who are playing cricket. I know the meaning of MOOLAKA . You can ask some kannada teacher, lecturer,professor or your Sir
ಮೂಲಕ ಮಹಾಶಯರು!
Relax. I meant a great person like AM should not be bothered by some cheap commentary.
I like what he is doing.. I watched that ‘Beef-eating Brahmin’ debate in TV9(youtube) yesterday, very brave and funny.!
ಬ್ರಾಹ್ಮಣರು ಬಹಳ ಹಿಂದೆ ಗೋಮಾಂಸ ಭಕ್ಷಕರಾಗಿದ್ದರು ಎಂಬುದಕ್ಕೆ ಇಲ್ಲಿದೆ ಆಧಾರ. ನೋಡಿ http://www.vicharamantapa.net/content/node/60 ಸತ್ಯ ಹೇಳಿದ ಯು. ಆರ್. ಅನಂತಮೂರ್ತಿಯವರ ಮೇಲೆ ಕೀಳು ಮಟ್ಟದ ಬೈಗುಳ ಹರಿಸುವುದು ಸಮಂಜಸವಲ್ಲ.
ಒಂದು ಕಾಲದಲ್ಲಿ ಮನುಷ್ಯ ಅಲೆಮಾರಿಯಾಗಿದ್ದಾಗ ನಾಯಿ, ನರಿ, ಗೋವು, ಹಂದಿ ,( ಮನುಷ್ಯ! ) ಹೀಗೆ ಕೈಗೆ ಸಿಕ್ಕಿದ ಆಹಾರ ತಿಂದು ಬದುಕುತ್ತಿದ್ದ. ಮನುಷ್ಯನ ಆಹಾರ ಪದ್ದತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಯಾರ ಮೇಲಾದರೂ ಕೀಳು ಮಟ್ದದ ಭಾಷೆ ಪ್ರಯೋಗಿಸುವುದು ಸಮಂಜಸವಲ್ಲ
Mr Ramakrishna and Mr Mahesh the controversy started not with the eating of non-veg food. Both of you know this. Medias are telling that some of the benefits which URA got both from central and state govt are illegal. If their allegation is wrong why URA has not filed defamatory case against them?
“ಅನಂತಮೂರ್ತಿ ಕನ್ನಡ ನಾಡಿನ ಹಿರಿಯ ಜೀವ. ತಮ್ಮ ಸಾಧನೆಯಿಂದ ಕನ್ನಡಕ್ಕೆ ಗೌರವ ಹಾಗೂ ಹೆಮ್ಮೆ ತಂದವರು. ಕನ್ನಡದ ಪ್ರಜ್ನಾವಂತರಲ್ಲಿ ಅತ್ಯಂತ ಧೀಮಂತರು. ಉತ್ತಮ ಶಿಕ್ಷಕ. ಶ್ರೇಷ್ಠ ಚಿಂತಕ. ಅಧ್ಭುತ ವಾಗ್ಮಿ. ನವ್ಯ ಕನ್ನಡ ಸಾಹಿತ್ಯದ ಬೆನ್ನೆಲುಬು. ಪ್ರಖರ ಸಮತಾವಾದಿ. ಅಸಲಿ ಜಾತ್ಯತೀತ ಮನಸ್ಸು” ಎಂದು ಶೆಟ್ಕರ್ ರವರು ಹೇಳಿದ್ದಾರೆ. ಅವರು ಹೀಗೆ ಹೇಳಿದ ಮೇಲೂ ಇನ್ನೂ ಯಾಕೆ ಪ್ರಶ್ನೆ ಮಾಡ್ತಾ ಇದ್ದೀರಿ ?
ಬ್ರಾಹ್ಮಣರು ಶಿಲಾಯುಗದಲ್ಲೂ ಇವೊತ್ತು ಇದ್ದ ಹಾಗೆ ಇದ್ದಾರೆ?
ಜೈನ ಬ್ರಾಹ್ಮಣ ಎಂದು ಒಂದು ಪಂಗಡ ಇದೆ. ಅದು ಹೇಗೆ ಅವೈದಕರಾದ ಜೈನರು ಬ್ರಾಹ್ಮಣರು ಎನ್ನಬಹುದು. ಬ್ರಾಹ್ಮಣ ಎಂಬುದು ಒಂದು ಕಾಲದ ಹುದ್ದೆ.
ನನಗೆ ತಿಳಿದ ಹಾಗೆ ಬ್ರಾಹ್ಮಣರಿಗೆ ಮಾಂಸ ಭಕ್ಷಣೆ ನಿಷಿದ್ಧವಲ್ಲ .. ವರ್ಜ್ಯ(ಬಿಡಬೇಕಾದುದು), ಸಿಗರೇಟು, ಹೆಂಡದ ಹಾಗೆ !!
e yappage yenu kelsa illa, yenadru vivada madta irbeku
’ಈತ ಯಾಕಾದರೂ ಕನ್ಕಡಿಗನಾಗಿ ಹುಟ್ಟಿದನೋ’ ಇದು ಅಸಹನೆಯ ಸಂಸ್ಕೃತಿ. ನಮೋ ಬೆಂಬಲಿಗರಿಂದ ಮತ್ತೇನನ್ನು ಅಪೇಕ್ಷಿಸ ಬಹುದು?
Mr. Shetkar you are forgetting what you have told, like URA. You told on 25th sept 2013 “BOOKER MOOLAKA’. Moolaka means what? If you are selected to Indian cricket team as 12th player you cannot bowl and bat. Please remember. You can be a substitute in field. That”s all. ALLAMANA VACHANAGALIGU BOOKERGOO YETTANINDA YETTA SAMBHADAVAYYA KOODALA SAMGAMA DEVA. You called me as Sri wronga. Thanks for the pen name.
ಅನಂತಮೂರ್ತಿ ಅವರಿಗೆ ಬೂಕರ್ ಪ್ರಶಸ್ತಿ ಸಿಗದಿದ್ದರೆ ಏನು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದೂ ಕನ್ನಡಕ್ಕೆ ಗೌರವ ತಂದ ಹಾಗೆ. ಆ ಸಮಾರಂಭದಲ್ಲಿ ಅಲ್ಲಮನ ವಚನಗಳನ್ನು ಅವರು ಓದಿದರು. ಶರಣ ಚಿಂತನೆಯ ಪರಿಚಯವನ್ನು ವಿಶ್ವ ಸಾಹಿತ್ಯದ ಗಣ್ಯರಿಗೆ ಮಾಡಿಕೊಟ್ಟರು. ಅಂತಹ ನಿಸ್ಸ್ವಾರ್ಥ ಕನ್ನಡ ಪುತ್ರರನ್ನು ಕ್ರಿಕೆಟ್ ಆಟದ ಹನ್ನೆರಡನೆ ಆಟಗಾರನಿಗೆ ಹೋಲಿಸಿ ಅವಮಾನ ಮಾಡಬೇಡಿ.
Good one Mr.Sriranga… 12th player is good one. And good to see that URA has atleast one supporter here 🙂
Anantha murthy ge 80 ra aralu marulu.gosumbe tarha.kULAKKE KODALI.Matu mrudu,manasu krura.Pratibhe ginta badaayi jasti
ಅಬ್ಬ! ಎಷ್ಟೊಂದು ಅಸಹನೆ ಹಾಗೂ ಮಡುಗಟ್ಟಿದ ಕ್ರೌರ್ಯ!
ಅನಂತ ಮೂರ್ತಿ ನಿಮಗೆ ಏನಾಗಬೇಕು ? !!
Good question Paarivala, even I had the same question in mind!
ಅನಂತಮೂರ್ತಿ ಕನ್ನಡ ನಾಡಿನ ಹಿರಿಯ ಜೀವ. ತಮ್ಮ ಸಾಧನೆಯಿಂದ ಕನ್ನಡಕ್ಕೆ ಗೌರವ ಹಾಗೂ ಹೆಮ್ಮೆ ತಂದವರು. ಕನ್ನಡದ ಪ್ರಜ್ನಾವಂತರಲ್ಲಿ ಅತ್ಯಂತ ಧೀಮಂತರು. ಉತ್ತಮ ಶಿಕ್ಷಕ. ಶ್ರೇಷ್ಠ ಚಿಂತಕ. ಅಧ್ಭುತ ವಾಗ್ಮಿ. ನವ್ಯ ಕನ್ನಡ ಸಾಹಿತ್ಯದ ಬೆನ್ನೆಲುಬು. ಪ್ರಖರ ಸಮತಾವಾದಿ. ಅಸಲಿ ಜಾತ್ಯತೀತ ಮನಸ್ಸು.
ಅನಂತ ಮೂರ್ತಿಯಿಂದ ಕನ್ನಡಕ್ಕೇನು ಗೌರ ಸಿಕ್ಕಿಲ್ಲ..ರಘುವಂಶ ರಾಗಿಯಿಂದ ಬಂದಿದೆ ಎಂದು ತಿಕ್ಕಲುಗಳ ಹಾಗೆ ಮಾತಾಡಿ ಅಮೇರಿಕಾದಲ್ಲಿ ಮುಖ ಪೆಚ್ಚಗೆ ಮಾಡಿಕೊಂಡು ಕನ್ನಡದ ಮಾನ ಕಳೆದ್ದು ಈ ಮಹಾಶಯರೇ… ಡಾಲರ್ಸ್ ಕಾಲೋನಿಯಲ್ಲಿ ಮನೆ, ಈಗ ಕುಪತಿಗಳ ಹುದ್ದೆ ಇವೆಲ್ಲಾ ಕನ್ನಡಕ್ಕೆ ತಂದುಕೊಟ್ಟ ಕುಲಗೌರವವೇ ಇಲ್ಲ ಅವರು ತಮಗೆ ತಂದುಕೊಂಡ ಘನತೆಯೆ? ಒಂದು ಪ್ರಶ್ನೆ ಶೇಟ್ಕರ್ ರವರೆ..ಅವರ ಯಾವ ಪುಸ್ತಕ ಕನ್ನಡದ ಘನೆತನ್ನು ಎತ್ತಿಹಿಡಿಯುತ್ತದೆ? ತೋರಿಸಿ ಬಿಡಿ ಸಾಕು..ನಿಮ್ಮ ಉಳಿದ ಪುರಾಣ ಬೇಡ..
ಬೆನ್ನೂ ಇಲ್ಲದ ಎಲುಬೂ ಇಲ್ಲದ ಪ್ರಖರ ಅವಕಾಶವಾದಿ, ಅಸಲಿ ಕೋಮುವಾದಿ..ನಕಲಿ ಜಾತ್ಯಾತೀತವಾದಿ…
ಸಂಸ್ಕಾರ ಬ್ರಾಹ್ಮಣ್ಯದ ಮುಖವಾಡವನ್ನು ಬಿಚ್ಚಿಟ್ಟಿದೆ. ಭಾರತಿಪುರ ದಲಿತ ಶೋಷಣೆ ಬಗ್ಗೆ ಧ್ವನಿ ಎತ್ತಿದೆ.
ಸಂಸ್ಕಾರ ಬ್ರಾಹ್ಮಣ್ಯದ ಮುಖವಾಡವನ್ನು ತೆಗೆದಿಟ್ಟಿದೆ ಎಂದರೆ ಈ ಮುಂದಿನ ಅರ್ಥವೆ? ನಾರಾಯಣಪ್ಪನ ರೂಪದಲ್ಲಿಯೆ? ಅಥವಾ ಚಂದ್ರಿಯ ಮೂಲಕ ಕೆಳಜಾತಿಯವರ ಕುರಿತು ಮಾತನಾಡುವ ಅನಂತ ಮೂರ್ತಿಯವರ ಬ್ರಾಹ್ಮಣ್ಯವೆ? ಯಾವುದು?
Shetkar it is not good to give explanations or change the meaning itself, as you like, for wrong facts that you have told earlier.
Mr. Sriranga, you are mistaken. Everything I have said is true. “ಬೂಕರ್ ಮೂಲಕ” ಅಂತ ಬರೆದಿದ್ದನ್ನು ನೀವು ಆತುರದಲ್ಲಿ “ಬೂಕರ್ ಪಡೆಯುವ ಮೂಲಕ” ಅಂತ ಓದಿ ಎಗರಾಡಿದರೆ ನಾನೇನು ಮಾಡಲಿ??
ಶ್ರೀರಂಗ ಅವರೇ, explanation ಕೊಡೋದಕ್ಕೆ ಈ ಶೆಟ್ಟಿ ಬಿಡ್ತಾ ಇಲ್ವೆ! ಕಮೆಂಟುಗಳನ್ನು ಪ್ರಕಟಿಸುತ್ತಿಲ್ಲ. ಏನು ಮಾಡೋದು? ವಸಿ ಬುದ್ಧಿ ಹೇಳಿ.
ರಾಕೇಶ್ ಶೆಟ್ಟಿ .. ನಿನ್ನ ಸೈಟು ಒಂದು ರಾದ್ಧಾನ್ತ.
ಇಂಟರ್ನೆಟ್ ತುಂಬಾ ಏನ್ ಅಸಯ್ಯ!!
Freedom of speech swamy
Ok. Enjoy.
Thanks a lot for the post and wonderful comments.
Keep up the good work Rakesh Shetty… naayigaLu bogalidre nilumege enoo aagalla !!
Bindu, Lol.
ಬುದ್ಧಿ ಜೀವಿಗಲಾಗಿದ್ದವರು ಈಗ ಅವಿವೇಕಿಗಳ ಥರಾ ಮಾತಾಡುತ್ತಿದ್ದರೆ…
ಒಂದು ಕಾಲದಲ್ಲಿ ಮನುಷ್ಯ ಅಲೆಮಾರಿಯಾಗಿದ್ದಾಗ ನಾಯಿ, ನರಿ, ಗೋವು, ಹಂದಿ ,( ಮನುಷ್ಯ! ) ಹೀಗೆ ಕೈಗೆ ಸಿಕ್ಕಿದ ಆಹಾರ ತಿಂದು ಬದುಕುತ್ತಿದ್ದ. ಮನುಷ್ಯನ ಆಹಾರ ಪದ್ದತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಯಾರ ಮೇಲಾದರೂ ಕೀಳು ಮಟ್ದದ ಭಾಷೆ ಪ್ರಯೋಗಿಸುವುದು ಸಮಂಜಸವಲ್ಲ
Mr.Ramakrishna and Mr,Mahesh the controversy started not with non-veg food. Both of you know this fact. URA got benefits both from Congress and BJP parties when they are in power both at state and central level. Medias are saying that some of those benefits are illegal. If that is wrong why URA has so far not filed defamatory case against them. This is the main issue. There is no use in dragging the topic here and there.
Mr Ramakrishna and Mr Mahesh the controversy started not with the eating of non-veg food. Both of you know this fact. Medias are telling that some of the benefits which URA got both from state and central govt are illegal. If their allegation is wrong why URA has so far not filed defamatory case against them? This is the main issue. There is no use in dragging the topic here and there.
ಅನ೦ತಮೂರ್ತಿ ಅ೦ತ ಹುಚ್ಚು ನಾಯಿಗೆ ಜ್ನಾನಪೀಠ ! ಈತ ಯಾಕಾದರೂ ಕನ್ಕಡಿಗನಾಗಿ ಹುಟ್ಟಿದನೋ’ common sensce ಇವನಿಗೆ illa.
ee tarahada ekavachanda nindane ee vedikeya gourava haalugeduvutte.. idu anuchita..
ಬ್ರಾಹ್ಮಣರು ಗೋಮಾಂಸ ಭಕ್ಷಕರಾಗಿದ್ದರು ಎಂಬುದಕ್ಕೆ ಕೆಲ ಸಾಕ್ಷಿಗಳು:
* ‘ವೇದಗಳಲ್ಲಿ ಜನಸಾಮಾನ್ಯರು’ ಲೇ. ಬಿ.ವಿ.ವೀರಭದ್ರಪ್ಪ, ಪುಟ ಸಂಖ್ಯೆ117 * ‘ವೇದಾಂತ ರೆಜಿಮೆಂಟ್’ ಲೇ. ಬಿ.ವಿ.ವೀರಭದ್ರಪ್ಪ, ಪುಟ ಸಂಖ್ಯೆ182 ಅಂಬೇಡ್ಕರ್ ವಿಚಾರಧಾರೆ -1 ಹಿಂದೂಗಳು ಮತ್ತು ಗೋಮಾಂಸ ಭಕ್ಷಣೆ * ‘ವೇದಾಂತ ರೆಜಿಮೆಂಟ್’ ಲೇ. ಬಿ.ವಿ.ವೀರಭದ್ರಪ್ಪ, ಪುಟ ಸಂಖ್ಯೆ182 ಅಂಬೇಡ್ಕರ್ ವಿಚಾರಧಾರೆ -2 ಬ್ರಾಹ್ಮಣೇತರರು ಗೋಮಾಂಸ ಭಕ್ಷಣೆ ಏಕೆ ನಿಲ್ಲಿಸಿದರು. ಹೀಗೆ ಹತ್ತು ಹಲವು ಸಾಕ್ಷಿಗಳನ್ನು ಒದಗಿಸಲು ಸಾಧ್ಯ, ಇವೆಲ್ಲಾ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳು
Mr. Kotturswamy, you are right.
ಇನ್ನು ಏನೆಲ್ಲಾ ಸಾಕ್ಷಿಗಳು ಬೇಕಂತೆ ಈ ಪುರೋಹಿತಶಾಹಿ ಗುಂಪಿಗೆ? ಈಗಿರಬೇಕಿತ್ತು ಲಂಕೇಶ್ ಮೇಷ್ಟ್ರು ಇಲ್ಲವೇ ತೇಜಸ್ವಿ. ಸರಿಯಾದ ಉತ್ತರವೇ ದೊರೆಯುತ್ತಿತ್ತು. ಅಂದು ಲಂಕೇಶ್ ಪತ್ರಿಕೆಯಲ್ಲಿ ಈ ಲೇಖನಗಳು ಪ್ರಕಟಗೊಂಡಾಗ ತಮ್ಮಲ್ಲೇ ಬಾಯಿಗಳನ್ನು ಮುಚ್ಚಿಕೊಂಡು ಹೇತ್ಲಾಂಡಿಗಳಂತೆ ಮನೆಯಲ್ಲಿ ಅಡಗಿಕುಳಿತಿದ್ದರೇ? ಎಂಬ ಪ್ರಶ್ನೆ ಕಾಡುತ್ತಿದೆ.
Mr. Kotturswamy, you hit the nail on the coffin. I have been patiently answering all questions asked by these Vaidik viruses and yet they insulted Darga Sir and me!
Ayyoo paapa!!!!!!! 😦
ಸಾರ್, ಸತ್ಯಕ್ಕೆ ಯಾವಾಗಲೂ ಬೆಂಬಲಿಸುವ ಮನೋಭಾವ ನಂದು. ಇವರಿಗೆ ನೇರ ಉತ್ತರ ಕೊಡುವದೇ ಸರಿ ಎಂಬುದು ನನ್ನ ಅನಿಸಿಕೆ. ಇನ್ನು ನನ್ನ ವೈಯಕ್ತಿಕ ವಿವರ – ಉದಯವಾಣಿ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡುತ್ತಿರುವೆ. 9379090371 ನನ್ನ ಸೆಲ್ ಸಂಖ್ಯೆ. ಬೆಂಗಳೂರಿನಲ್ಲಿರುವೆ.
Kotturswamy Sir, I agree with you Sir 100%. Please make use of your position in Udayavani to teach these grandchildren of Manu a strong lesson. Prajavani already taught them a mild lesson but they have recovered and started this blog. They are using the blog to throw dung at all progressive thinkers starting with Darga Sir. Let all progressive minds of Kannada unite in Udayavani and condemn in no uncertain terms the regressive Manuvadi social science of Nilume and its Ghent university patrons. We don’t have Lankesh Sir and Tejaswi Sir today to speak against these Vaidik viruses. But we do have Darga Sir who is the leading authority on Vachana sciences. He is from the old Lankesh Patrike team, you might remember. Let us all join hands to negate regressive forces who are unleashing a new era of fear and darkness.
ನಿಲುಮೆಯ ಮೇಲೆ ಯುದ್ಧ ಸಾರಲು ಕರೆಕೊಡುತಿದ್ದೀರಾ…? ಅದ್ಭುತ…! ಮುಂದುವರೆಸಿ … ಶುಭವಾಗಲಿ ನಿಮಗೆ .. ವಿಜಯೀಭವ 🙂
ತಮ್ಮ ಬತ್ತಳಿಕೆಯ ಬಾಣಗಳು ಬರಿದಾದಾಗ ವಾಮವಾದಿಗಳು ವಾಮಮಾರ್ಗಕ್ಕೆ ತಿರುಗುವುದರಲ್ಲಿ ಅಚ್ಚರಿಯಿಲ್ಲ.
Mr. Bolumbu, I thought you were with Darga Sir! You even showed me proudly his appreciation for your comments on Avadhi! What a turncoat you are! Now you are with Manuvadis!
I was not “with” Darga sir. I showed you his appreciation only in reply to “ಹಾಸ್ಯಾಸ್ಪದ ಪ್ರಶ್ನೆಗಳನ್ನು ಹಾಕಿ ಅವರಿಂದ ಛೀಮಾರಿ ಪಡೆದ” comment. In avadhi also, did you see me supporting his views? It’s not my fault if you thought otherwise. I wanted to show you that he did not condemn me even when I didn’t support his views directly.
You have not replied to my other comment. Now you know that I am not with Darga sir, Please go ahead and reply to my comment on Satapatha brahmana 3.1.2.21.
ವರ್ಷದ ವಿದೂಷಕ ಪಟ್ಟದತ್ತ ಕಿರಿ ‘ಕಾಯಕಯೋಗಿ’ ಶೆಟ್ಕರ್ ಸರ್ ನಾಗಾಲೋಟ..!..
ಸ್ವಾಮಿ ಕೊಟ್ಟೂರರೆ, ಲಂಕೇಶ್ ಹೇಳ್ಬಿಟ್ರೆ ತಿಂದಿರೋದು ನಿಜಾನಾ? ಲಂಕೇಶನ ಲಫಡಾಗಳು ಯಾರಿಗೂ ಗೊತ್ತಿಲ್ಲದವೆ?
ಆತನೇನು ಅಸಾಮಾನ್ಯ ಪುರುಷನೇ? ಅಥವಾ ವೇದಗಳ ಕಾಲದಿಂದಲೂ ಬದುಕಿದ್ದವನೆ? ಅವನೇನು ನೋಡಿ ಬಂದಿದ್ದನೆ? ಯಾರೋ ಎಂದೋ ಬರೆದದ್ದನ್ನು ಓದಿ ಈಗ ಒಂದಷ್ಟು ಅರಚಾಡಿಬಿಟ್ಟರೆ ಆತ ಹೇಳಿದ್ದನ್ನೆಲ್ಲಾ ನಂಬ ಬೇಕೆ? ಹೋಗ್ರೀ ಸ್ವಾಮಿ ತಮ್ಮದು ಜಾತ್ಯಾತೀತಯ ಶಾಹಿ ಅಷ್ಟೆ ಅದಕ್ಕಿಂತ ಹೆಚ್ಚಿನದೇನು ಇಲ್ಲ. ವೇದಗಳಕಾಲದಲ್ಲಿ ಮಾಂಸಾಹಾರ ಇರಲಿಲ್ಲ ಎನ್ನುವುದಕ್ಕೆ ನಾನೂ ಲಿಂಕ್ ಕೊಡಬಲ್ಲೆ.
ಪ್ರಿಯ ಗಿರೀಶ್, ಲಂಕೇಶರ ವೈಯಕ್ತಿಕ ಜೀವನ ಇಲ್ಲಿ ಅಪ್ರಸ್ತುತ. ಕನಿಷ್ಠ 20 ಸಂವತ್ಸರಗಳ ಹಿಂದೆ ಪ್ರೊ.ಬಿ.ವಿ.ವೀರಭದ್ರಪ್ಪ ಲಂಕೇಶ್ ಪತ್ರಿಕೆಗಾಗಿ, ನಾಡಿನ ಜನತೆಗಾಗಿ ಬರೆದ ಲೇಖನಗಳವು. ಅಲ್ಲದೇ ಪ್ರೊ.ಬಿವಿವಿ ಬಳಸಿದ ಲೇಖನದ ಮೂಲವಸ್ತು ಅಂಬೇಡ್ಕರ್ ಚಿಂತನೆ ಹಾಗು ಹಲವು ವಿದ್ವಾಂಸರ ಲೇಖನ ಮೂಲದಿಂದ ಆಯ್ದುಕೊಂಡವು. ಈ ಕುರಿತಂತೆ ಮೊದಲೇ ಪ್ರೊ.ಬಿವಿವಿ ಕೃತಿಗಳ ಕುರಿತಂತೆ ಪ್ರಾಸ್ತಾಪಿಸಿರುವೆ. ಗಮನಿಸಿ.
In Satapatha Brahmana 3.1.2.21 there is a gross interpolation from western scholars that Yajnavalkya would eat the tender meat of cows. The word dhenu refers to cow products and not the cow herself and the sanskrit word “anaduh” refers to the grains produced by the bull from ploughing the fields. What exactly Yajnavalkya has stated in this verse is that he can eat what is “amshala”. According to sutra 5.2.8 of Panini the word “amshala” only means nourishing and strength bestowing.
Mr. Bolumbu, you guys ask for evidence for everything. Now please show us proof that Brahmins haven’t ever eaten cow meat. Let’s see what you have got.
ನಾಗ ಶೆಟ್ಟಿಗಳೆ, ನಿನ್ನೆ ನೀವು ಎನೋ ತಿಂದಿಲ್ಲ ಅದಕ್ಕೆ ಸಾಕ್ಷಿ ಕೊಡಬಲ್ಲಿರಾ? ಹುಚ್ಚುತನಕ್ಕೆ ಮಿತಿಯಿಲ್ಲವೆ?
I have not asked for evidence. Left leaning intellectuals usually quote Satapatha Brahmana 3.1.2.21 as evidence of brahmins eating beef. I have shown the context in which Yajnavalkya refers to the particular word in the passage. You may rebut this if you wish to do so.
You need to be logical to be an intellectual. Stay away from mugging up something told by somebody, whether he is a rightist, leftist, centrist or right-centrist if you believe your words should have some value of their own.
Mr. Kotturu swamy, what Lankesh and Tejaswi told cannot be taken for granted as the rule.or reality. They have also faced so many oppositions from their own group. Pls don’t forget it. Mr Lankesh quarreled even with all those who helped him. His mentality was like that of a dictator.And one more thing is, Tejaswi realized the literary politics of Bangalore and Mysore and stayed away from these fellows and lived in Mudigere doing agriculture and horticulture.To know what Lankesh was, you may read the books written by his friends and others. Reading only Lankesh’s will not help. To know what we are, we have to rely on the comments of those who don’t like us;not only on the ones who appreciate us.
ಶ್ರೀರಂಗರವರೆ, ನಿಮ್ಮ ಅಭಿಪ್ರಾಯ ಕೇವಲ ನಿಮ್ಮದ್ದಾಗಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮ್ಮತಿಸುವೆ. ಆದರೆ ಲಂಕೇಶ್ ಇಲ್ಲವೇ ತೇಜಸ್ವಿ ಕುರಿತಂತೆ ಅವರುಗಳ ಸಾಹಿತ್ಯವಲ್ಲದೇ ಇತರರ ಸಾಹಿತ್ಯ ಆಕರಗಳನ್ನು ಸಹ ಓದಿರುವೆ. ವೈಯಕ್ತಿಕವಾಗೂ ಅವರಿಬ್ಬರನ್ನೂ ಬಲ್ಲೆ. ಕೇವಲ ಲಂಕೇಶ್ ಓದಿ ಮನುವಾದಿಗಳ ವಿರೋಧ ಕಟ್ಟಿಕೊಂಡಿಲ್ಲ. ನಿಮ್ಮ ಟೀಕೆಯನ್ನು ಸಹ ಸ್ವಾಗತಿಸುವೆ.
[ಇನ್ನು ಏನೆಲ್ಲಾ ಸಾಕ್ಷಿಗಳು ಬೇಕಂತೆ ಈ ಪುರೋಹಿತಶಾಹಿ ಗುಂಪಿಗೆ? ಈಗಿರಬೇಕಿತ್ತು ಲಂಕೇಶ್ ಮೇಷ್ಟ್ರು ಇಲ್ಲವೇ ತೇಜಸ್ವಿ. ಸರಿಯಾದ ಉತ್ತರವೇ ದೊರೆಯುತ್ತಿತ್ತು. ಅಂದು ಲಂಕೇಶ್ ಪತ್ರಿಕೆಯಲ್ಲಿ ಈ ಲೇಖನಗಳು ಪ್ರಕಟಗೊಂಡಾಗ ತಮ್ಮಲ್ಲೇ ಬಾಯಿಗಳನ್ನು ಮುಚ್ಚಿಕೊಂಡು ಹೇತ್ಲಾಂಡಿಗಳಂತೆ ಮನೆಯಲ್ಲಿ ಅಡಗಿಕುಳಿತಿದ್ದರೇ? ಎಂಬ ಪ್ರಶ್ನೆ ಕಾಡುತ್ತಿದೆ.]
ಕೊಟ್ಟೂರ ಸ್ವಾಮಿಗಳೆ..ನಿಮ್ಮ ಲಂಕೇಶಪ್ಪ ಈಗಿರಬೇಕಿತ್ತು..ಇದ್ದಿದ್ದರೆ ರೆಕ್ಕೆ, ಪುಕ್ಕಗಳನ್ನು ಆಗಾಗ ಉದುರಿಸಿಕೊಳ್ಳತ್ತಿದ್ದರು!. ಈಗ ಒಂದು ಪತ್ರಿಕೆ ಇಟ್ಟುಕೊಂಡು, ತಲೆಗೆ ಬಂದಿದ್ದು ಬರೆದರೆ ಪಿತ್ಥ ಇಳಿಯುವವರೆಗೆ ಉಗಿಸಿಕೊಳ್ಳಬೇಕಾಗುತ್ತೆ. ಓದುಗರ್ಯಾರೂ ವಾಚಕರವಾಣಿಗೆ ಪತ್ರ ಬರೆದು ಪ್ರಕಟಿಸಬಹುದೇನೊ ಎಂದುಕೊಳ್ಳುತ್ತ ನಿಮ್ಮ ಪೇಪರಿನವರ ಮರ್ಜಿ ಕಾಯುತ್ತ ಇರಬೇಕಾಗಿಲ್ಲ. ಈಗಿನ ದಿನಗಳಲ್ಲಿ, ತನ್ನಷ್ಟು ತಿಳಿದವರಿಲ್ಲ ಎಂದುಕೊಂಡು ಅತಿ ಬುದ್ಧಿವಂತಿಕೆಯ ಮಾತು ಉದುರಿಸಿದ ಅರ್ಧ ಗಂಟೆಯಲ್ಲಿಯೇ ಉಗಿತ ಗ್ಯಾರಂಟಿ. ಲಂಕೇಶರಿಗೆ ಬರವಣಿಗೆಯಲ್ಲಿ ಅಗಾಧ ಪ್ರತಿಭೆ ಇತ್ತು ಅಷ್ಟೆ..ಅದನ್ನು ಬಿಟ್ಟರೆ ಅವರೆಷ್ಡು ತಿಕ್ಕಲರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತು. ತೇಜಸ್ವಿ ಮತ್ತು ಲಂಕೇಶರನ್ನು ಒಂದು ತಕ್ಕಡಿಯಲ್ಲಿ ತೂಗುವುದು ಎಷ್ಟು ಸರಿ ಎಂದು ನೀವೇ ವಿಚಾರ ಮಾಡಿ. ಈ ಲಂಕೇಶಪ್ಪನ ಪಳೆಯುಳಿಕೆಗಳ ‘ಈಗ ಇದ್ದಿದ್ದಿದ್ದರೆ’ ಎಂಬ ಹಳಹಳಿಕೆಗಳನ್ನು ನಾವೆಲ್ಲ ಆಗಾಗ ಕೇಳುತ್ತಲೇ ಇರುತ್ತೇವೆ..ಸತ್ತ ಎಮ್ಮೆ ಹದಿನಾರು ಸೇರು ಹಾಲು ಕೊಡುತ್ತಿತ್ತು ಎಂಬಂತೆ!, ಹೊಗಳು ಭಟ್ಟರನ್ನು ನಂಬಿ, ಜನಪ್ರಿಯತೆಯ ಭ್ರಮೆಗೆ ಬಿದ್ದು ಪ್ರಗತಿರಂಗ ಕಟ್ಟಿ ಲಂಕೇಶಪ್ಪ ಲಾಗ ಹೊಡೆದಿದ್ದನ್ನು ನಾವು ನೆನಪಿಸಿಕೊಳ್ಳೋಣವೆ?..
ಎರಡು ಬಾರಿ ಸರಕಾರಗಳ ಪತನಕ್ಕೂ ಕಾರಣರಾಗಿದ್ದ ಲಂಕೇಶ್ ಮೇಷ್ಟ್ರ ಬಗ್ಗೆ ಈ ರೀತಿ ನಿಂದನೆ ಈಗ ಅಪ್ರಸ್ತುತ. ಸಂಜಯ್ ಗಾಂಧಿ ಜೀವಂತವಿದ್ದಾಗ ಅತಿಯಾಗಿಯೇ ಟೀಕಿಸಿದ್ದ ಮೇಷ್ಟ್ರು, ಅದೇ ಸಂಜಯ್ ಗಾಂಧಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದಾಗ ಬರೆದೊಂದು ಲೇಖನವೇ ಸಾಕು ಲಂಕೇಶ್ ಮನಸ್ಥಿತಿಗೆ. ನಾಡಿನ ಎಲ್ಲ ಪತ್ರಿಕೆಗಳಿಗೂ ಸವಾಲೆನಿಸುವಂತೆ ಬರೆದು ಗಿಟ್ಟಿಸಿಕೊಂಡ ವ್ಯಕ್ತಿ ಲಂಕೇಶ್ ಮೇಷ್ಟ್ರ. ಅಲ್ಲದೇ ಹಲವು ತುಳಿತಕ್ಕೆ ಒಳಗಾದ ಸಮಾಜದ ವ್ಯಕ್ತಿಗಳನ್ನು ಬೆಳಕಿಗೆ ತಂದ ಕೀತಿ ಲಂಕೇಶರಿಗೆ ಸೇರಬೇಕು. ಸಾರ ಅಬೂಬ್ಕರ್, ಚಂದ್ರೇಗೌಡ, , ನಟರಾಜ್ ಪುಂಡಲೀಕ್ ಶೇಟ್, ಶೂದ್ರ ಶ್ರೀನಿವಾಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ನಿಮ್ಮ ಮಾತಿನಲ್ಲಿನ ಕಟುವ್ಯಂಗ್ಯ ವೈದಿಕ ಪರಂಪರೆಯ ಪಳೆಯುಳಿಕೆ ಎನಿಸುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ಕನಿಷ್ಠ ಸಾವನ್ನಪ್ಪಿದ ವ್ಯಕ್ತಿ ಬಗ್ಗೆ ಏಕವಚನದಲ್ಲಿ ಮಾತನ್ನಾಡುವುದು ಸಭ್ಯತೆಯಲ್ಲ.ಹುಳಿಯಾರ್…
ಕೊಟ್ಟೂರಸ್ವಾಮಿಯವರೆ, ಗೋಹತ್ಯೆ ನಿಷೇಧದ ಕುರಿತ ಹಿಂದುತ್ವವಾದಿಗಳ ನಿಲುವಿಗೆ ನನ್ನ ತಕರಾರಿದೆ. ಅದರ ಹೊರತಾಗಿಯೂ ನಿಮ್ಮ ವಾದದಲ್ಲಿ ( ನೀವು ಉಲ್ಲೇಖಿಸಿರುವ ಮೂಲ ಚಿಂತಕರ ತಥಾಕತಿತ ವಾದದಲ್ಲೂ) ಸಮಸ್ಯೆ ಇದೆ. ನಿಮ್ಮ ವಾದದಲ್ಲಿನ ಎರಡು ವಿಚಾರಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತೇನೆ.
ಮೊದಲನೆಯದು, “ವೇದಗಳ/ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ಮಾಡುತ್ತಿದ್ದರು” ಎನ್ನುವ ಕುರಿತ ನಿಮ್ಮ ಸಾಕ್ಷಿಗಳಿಗೆ ಸಂಬಂದಿಸಿದ್ದು. ನೀವು ಉಲ್ಲೇಖಿಸಿರುವ ಚಿಂತಕರು (ಮೊನ್ನೆಯ ಸುದ್ದಿವಾಹಿನಿಯ ಚರ್ಚೆಯೊಂದರಲ್ಲಿ ನಮ್ಮ ಮಾನ್ಯ ಚಂ.ಪಾ. ಕೂಡ) ಯಾವುದನ್ನು ಆದರಿಸಿ ಈ ವಾದಗಳನ್ನು ಮಂಡಿಸಿದ್ದಾರೆ ಎನ್ನುವುದನ್ನು ಮೇಲೆ ಬೋಳುಂಬು ರವರು ಹೇಳಿದ್ದಾರೆ. ಸತ್ಪತ ಭ್ರಾಹ್ಮಣದಲ್ಲಿ ಬರುವ ಆ ಭಾಗಕ್ಕೆ ಬೋಳುಂಬು ಅವರ ಸಾಂಧರ್ಭಿಕ ವಿವರಣೆಯನ್ನು ಬದಿಗಿಟ್ಟು (ವಾದಕ್ಕಾಗಿ) ನಿಮ್ಮ (ನಿಮ್ಮ ಚಿಂತಕರ) ನಿಲುವನ್ನೇ ಒಪ್ಪೋಣ. ಅಂದರೆ ಅದರಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರು ಎಂದಿದೆ ಎಂದೇ ತಿಳಿಯುವ. ಇದರಿಂದ ಯಾವ ತೀರ್ಮಾನ ಮಾಡ್ತೀರಿ. ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರೆಲ್ಲರೂ ಗೋಮಾಂಸ ಭಕ್ಷಿಸುತ್ತಿದ್ದರು ಎಂದೇ? ಸ್ವಲ್ಪ ತಾಳಿ, ಹಾಗೆ ತೀರ್ಮಾನಿಸಲು ಬಹುಮುಖ್ಯ ಸಮಸ್ಯೆ ಇದೆ!!! ಅದು ಈ ಉಲ್ಲೇಖವನ್ನು ಹೊಂದಿರುವ ಆ ಗ್ರಂಥವನ್ನು ಏನೆಂದು ಗ್ರಹಿಸುತ್ತಿದ್ದೀರಿ? ಆ ಕಾಲದ ಸಾಮಾಜಿಕ ಸ್ಥಿತಿಯ ಕುರಿತ ಸಂಶೋಧನಾ ವಿವರಣೆಳಿರುವ ಸಮಾಜ ವೈಜ್ಞಾನಿಕ ಗ್ರಂಥವೆಂದೇ? ಅಂದರೆ ಇದು ಅಂದು ಬ್ರಾಹ್ಮಣರೆಲ್ಲರ ಅಧ್ಯಯನಕ್ಕೊಳಪಡಿಸಿ ಅವರೆಲ್ಲರೂ ಯಜ್ಞ ಮಾಡುವಾಗ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು ಎನ್ನುವ ವಾಸ್ತವವನ್ನು ದಾಖಲಿಸಿದೆ ಎಂದಾಗುತ್ತದೆಯೇ?
ಕೃತಿ ಕಾರ ನಿದ್ದ ಕಡೆ ಯಾರೋ ಓರ್ವ ಅಥವಾ ಕೆಲವು ಬ್ರಾಹ್ಮಣರು ಯಜ್ಞ ಮಾಡಿ ಗೋಮಾಂಸ ಭಕ್ಷಿಸಿರುವ ಸಾಧ್ಯತೆ ಇರಬಹುದು (ಇಂದಿಗೂ ಜ್ಯೋತಿಷಿಗಳ/ಮಾಂತ್ರಿಕರ ಸಲಹೆ ಮೇರೆಗೆ ಸಸ್ಯಹಾರಿಗಳೂ ಬಲಿಕೊಡುವ ಇಲ್ಲವೇ ಭಕ್ಷಿಸುವ ನಮ್ಮ ಅನುಭವದಲ್ಲೇ ನಡೆಯುತ್ತಿದೆ. ಅದರ ಹೊರತಾಗಿಯೂ ಇಂದಿಗೂ ಅಲ್ಲಿ ಇಲ್ಲಿ ಹಲಕೆಲ ಬ್ರಾಹ್ಮಣ/ಹುಟ್ಟಾ ಸಸ್ಯಾಹಾರಿ ಜಾತಿಗಳೆನಿಸಿಕೊಂಡವರು ಮಾಂಸ ಭಕ್ಷಿಸುತ್ತಿರುವುದರ ಬಗ್ಗೆ ಲೇವಡಿಗಳನ್ನು ನೀವು ಕೇಳಿಯೇ ಇರುತ್ತೀರಿ. ಇದನ್ನು ನೋಡಿದ ಯಾವುದೋ ನಿಮ್ಮಂತಹ /ಲಂಕೇಶರ ರಂತಹ ಸಾಹಿತಿಗಳೂ ಬ್ರಾಹ್ಮಣ ಜಾತಿಯವರು ಮಾಂಸ ಭಕ್ಷಿಸುತ್ತಾರೆ ಎಂದು ತಮ್ಮ ಪತ್ರಿಕೆಯಲ್ಲಿ/ಬ್ಲಾಗುಗಳಲ್ಲಿ ಬರೆಯಲೂಬಹುದು. ಇದನ್ನು ಉಲ್ಲೇಖಿಸಿ ಒಂದೆರಡು ಶತಮಾನಗಳ ನಂತರ 21 ನೇ ಶತಮಾನದ ಆರಂಭದಲ್ಲಿ ಬ್ರಾಹ್ಮಣರು ಮಾಂಸಹಾರಿಗಳಾಗಿದ್ದರು ಎಂದು ಹೇಳಿದರೆ ಅದು ಆ ಸಮುದಾಯದ ಕುರಿತ ಸಮಾಜವೈಜ್ಞಾನಿಕ ಸತ್ಯವಾಗುತ್ತದೆಯೇ? ಪ್ರತಿಯೊಂದು ಸಮುದಾಯದಲ್ಲೂ ಈ ರೀತಿಯ exception (ಅಂದರೆ ಆ ಸಮುದಾಯದ ಆಚರಣೆಗಳಿಗೆ ವಿರುದ್ದವಾಗಿರುವ/ಹೊರತಾಗಿರುವ) ಗಳಿದ್ದೇ ಇರುತ್ತಾರೆ, ಅಲ್ಲವೇ? ಈ ತರ್ಕದ ನೆಲೆಯಲ್ಲಿ ನೋಡುವುದಾದರೆ ಈ ಮಹಾನ್ ಚಿಂತಕರ ವಾದ ವಾಸ್ತವವಾಗ ಬೇಕಾದರೆ ಅವರು ಆಧರಿಸಿರುವ ಉಲ್ಲೇಖದ ಸ್ವರೂಪ ಮುಖ್ಯವಾಗುತ್ತದೆ. ನಾನು ಬ್ರಾಹ್ಮಣರು ಗೋಮಾಂಸ ಭಕ್ಷಕರಾಗಿರಲಿಲ್ಲ ಎಂದು ವಾದಿಸುತ್ತಿಲ್ಲ. ಇದ್ದಿರಲೂಬಹುದು. ಆದರೆ ಅದನ್ನು ಖಡಾಖಂಡಿತವಾಗಿ ತೋರಿಸಲು ಈಗ ನೀಡಿರುವ ಗ್ರಂಥಗಳ ಉಲ್ಲೇಖದಿಂದ ಸಾಧ್ಯವಿಲ್ಲ. ಸಮಾಜ ವನ್ನು ವೈಜ್ಞಾನಿಕ ವಾಗಿ ಅಧ್ಯಯನ ಮಾಡುತ್ತೇವೆಂದು ಸಮಾಜ ವಿಜ್ಞಾನದ ಅನೇಕ ಶಾಖೆಗಳು ಮೈದಳೆದು ನೂರಾರು ವಿಶ್ವವಿದ್ಯಾನಿಲಯಗಳಲ್ಲಿ ಲಕ್ಷಾಂತರ ಅಧ್ಯಯನಕಾರರು ಏನೇನೋ ಮೆಥಡಾಲಜಿಗಳನ್ನು ಅನ್ವಯಿಸಿಕೊಂಡು ದುರ್ಬೀನು ಹಾಕಿಕೊಂಡು ಹುಡುಕಾಡಿ ವಾದಗಳನ್ನು ಮಂಡಿಸುತ್ತಿದ್ದರೂ ಸಹ 20-21 ನೇ ಶತಮಾನದ ಇಂದಿನ ಸಮುದಾಯಗಳ ಜೀವನವನ್ನು ಸಾಮಾಜಿಕ ಸ್ಥಿತಿಗಳನ್ನೇ ವೈಜ್ಞಾನಿಕವಾಗಿ ವಾಸ್ತವವನ್ನು ಇದೇ ಸತ್ಯವೆಂದು ಯಾರಿಂದಲೂ ನಿರೂಪಿಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ ವಿಭಿನ್ನ ಐಡಿಯಾಲಜಿಗಳವರು ತಮ್ಮದೇ ವಾಸ್ತವ ನಿರೂಪಣೆಗಳೆಂದು ಕಚ್ಚಾಡುತ್ತಿದ್ದಾರೆ, ಸರಿಯಾಗಿ ಗ್ರಹಿಸಲು ಇನ್ನೂ ಸಾಕಷ್ಟು ಸಂಶೋಧನೆಗಳನ್ನು ಮಾಡಬೇಕೆನ್ನುತ್ತಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಸತ್ಪತ ಬ್ರಾಹ್ಮಣದ ಯಾವುದೋ ಶ್ಲೋಕವೊಂದನ್ನು ಉದ್ದರಿಸಿ ಅಂದಿನ ಕಾಲದಲ್ಲಿ ಭಾರತದಾದ್ಯಂತ ಇದ್ದ ಇಡೀ ಬ್ರಾಹ್ಮಣ ಸಮುದಾಯದ ಆಹಾರಭ್ಯಾಸದ ಬಗ್ಗೆ ತಲೆ ಮೇಲೆ ಹೊಡೆದಂತೆ ಹೇಳಲು ಹೇಗೆ ಸಾಧ್ಯ? ಅದೇನಾದರೂ ಆ ಕಾಲದ ಸಮಾಜದ ಕುರಿತ ವೈಜ್ಞಾನಿಕ ಸಂಶೋಧನಾ ಗ್ರಂಥವಾಗಿತ್ತೇ???
ಎರಡನೆಯದು, ನೀವು ಮತ್ತು ನಿಮ್ಮ ಗುರವರ್ಯರು ಪದೇ ಪದೇ ಉದ್ದರಿಸುವ ಈ “ಮನುವಾದಿಗಳು” ಪರಿಭಾಷೆಯ ಬಗ್ಗೆ. ಏನು ಹಾಗೆಂದರೆ, ಮನುವಿನ ಧರ್ಮಶಾಸ್ತ್ರವನ್ನು ಅದು ನಿರೂಪಿಸಿದ ಮಾಜಿಕ ವ್ಯವಸ್ಥೆ ಎಂದು ಹೇಳಲಾಗುವ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಬಯಸುವವರು ಇಲ್ಲವೇ ಒತ್ತಾಯ ಪೂರ್ವಕವಾಗಿ ಹೇರುತ್ತಿರುವವರೆಂದೇ? ಈ ಕುರಿತು: http://goo.gl/QuP6lT ಈ ಲಿಂಕಿನಲ್ಲಿರುವ ವಾದವನ್ನು ನೋಡಿ. ಮನುಧರ್ಮಶಾಸ್ತ್ರ ಈ ಸಮಾಜವನ್ನು ಶಾಸಿಸುವ, ನಿಯಂತ್ರಿಸುವ ಮತ್ತು ನಿರ್ದೇಶಿಸುವ ಪವಿತ್ರಗ್ರಂಥವಾಗಿತ್ತು ಮತ್ತು ಇಂದೂ ಆಗಿದೆ ಎಂದು ನೀವು ಸಾಭೀತು ಮಾಡದಿದ್ದರೆ ನೀವು ತೆಗಳುತ್ತಿರುವವರು”‘ಮನುವಾದಿ”ಗಳಾಗುವುದಿಲ್ಲ. ಮನುವಿನ ಗುಮ್ಮವನ್ನಿಟ್ಟುಕೊಂಡೇ ಮಹಾನ್ನ ಮಾನವೀಯ ಕಳಕಳಿಯ ಸಂವೇಧಾನಾಶೀಲ ಸಾಕ್ಷಿ ಪ್ರಜ್ಞೆಗಳೆಂಬ ಕಿರೀಟಗಳನ್ನು ಇಟ್ಟು ಕೊಂಡು ಆ ಪಟ್ಟವನ್ನು ಹೇಗಾದರೂ ಕಾಪಾಡಿಕೊಳ್ಳಲೇ ಬೇಕೆಂಬ ಸ್ವಾಹಿತದ ಸಾಹಿತ್ಯ ಮೇರುಗಳಾಗಿ ಮೆರೆಯುತ್ತಿರುವ ಭ್ರಮೆಯಲ್ಲಿರುವ ನೀವು ಮತ್ತು ತಥಾಕತಿತ ಸಾಕ್ಷಿಪ್ರಜ್ಞೆಗಳು ‘ಮನುವಾದಿ’ಗಳಾಗುತ್ತೀರಿ. (ಏಕೆಂದರೆ ಮನುವ್ಯಾದಿಯನ್ನು ಬಿಟ್ಟರೆ ತಮ್ಮೆಲ್ಲಾ ವಾದಗಳು ಬಿದ್ದುಹೋಗುತ್ತದಲ್ಲಾ!!! ಹಾಗಾಗಿ!!!
ಸಾವಾಕಾಶವಾಗಿ ನಿಮ್ಮ ವಾದಗಳನ್ನು ಮುಂದಿಡಿ ಚರ್ಚಿಸುವ.
ಮುಖೇಶ
Govt’s will fall by votes;not by a weekly magazine. There is some miss conception that Lankesh Patrike made political changes in Karnataka. But it is not true.