ಅನ೦ತಮೂರ್ತಿ ,ಮೋದಿ ಮತ್ತು ಅಭಿವ್ಯಕ್ತಿ ಸ್ವಾತ೦ತ್ರ್ಯ
– ಗುರುರಾಜ ಕೊಡ್ಕಣಿ,ಯಲ್ಲಾಪುರ
ಅನುಚಿತ ಕಾರಣಗಳಿಗೆ ಯು.ಆರ್. ಅನ೦ತಮೂರ್ತಿ ಸುದ್ದಿಯಾಗುವುದು ಹೊಸದೇನಲ್ಲ.ಈಗ ಮತ್ತೆ ಅ೦ಥಹದ್ದೇ ಕಾರಣದಿ೦ದ ಅನ೦ತಮೂರ್ತಿ ಸುದ್ದಿಯಲ್ಲಿರುವುದು ಆಗಲೇ ಹಳೆಯ ವಿಷಯವೆನಿಸತೊಡಗಿದೆ.’ಮೋದಿ ಪ್ರಧಾನಿಯಾದರೇ ನಾನು ಈ ದೇಶದಲ್ಲಿರುವುದಿಲ್ಲ’ ಎ೦ಬ೦ತ ಹೇಳಿಕೆ ಕೊಟ್ಟು ಮೂರ್ತಿ ,ಸಾಮಾನ್ಯ ಜನರ ,ಅ೦ತರ್ಜಾಲ ಬರಹಗಾರರ ಕೆ೦ಗಣ್ಣಿಗೆ ಗುರಿಯಾಗಿದ್ದಾರೆ.ಅವರ ಪರ ವಿರೋಧದ ಮಾತುಗಳು ಧಾರಾಕಾರವಾಗಿ ಸಾಮಾಜಿಕ ತಾಣಗಳಲ್ಲಿ ,ವೃತ್ತಪತ್ರಿಕೆಗಳಲ್ಲಿ ಹರಿಯತೊಡಗಿವೆ.ಅವರು ದೇಶವನ್ನ ಬಿಟ್ಟು ಪಾಕಿಸ್ತಾನಕ್ಕೋ,ಅಫಘಾನಿಸ್ತಾನಕ್ಕೋ ಹೋಗಲಿ ಎ೦ದು ಕೆಲವರೆ೦ದರೇ, ಹಾಗೆಲ್ಲ ಅವರ ಬಗ್ಗೆ ಮಾತನಾಡಬಾರದು ,ಅವರು ಹಿ೦ದೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಮರೆತು ಮಾತನಾಡುವುದು ತಪ್ಪು ಎ೦ದು ವಾದಿಸುತ್ತಾರೆ ಕೆಲವರು.ಬಿಡಿ ಅದು ಅವರವರ ಭಾವಕ್ಕೆ,ಅವರವರ ಭಕುತಿಗೆ.
ಆದರೆ ಇಲ್ಲೊ೦ದು ವಿಷಯವನ್ನು ಗಮನಿಸಲೇಬೇಕು. ಅನ೦ತಮೂರ್ತಿ ಜಾತ್ಯಾತೀತವಾದಿಗಳೆ೦ದು ಹಾಗಾಗಿ ಅವರು ಏನೇ ಹೇಳಿದರೂ ಹಿ೦ದೂಗಳು ಅವರನ್ನು ಹೀಗೆಳೆಯುತ್ತಾರೆ೦ದೂ ಕೆಲವರು ವಾದಿಸುತ್ತಾರೆ.ಅಲ್ಲದೇ ಎಸ್.ಎಲ್ ಭೈರಪ್ಪ ಹಿ೦ದುತ್ವವಾದಿಯಾಗಿರುವುದರಿ೦ದ ಅವರು ಏನೇ ಬರೆದರೂ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ೦ಬುದೂ ಇವರ ವಾದ.ಇದು ಶುದ್ಧ ಮೂರ್ಖತನವೆನ್ನದೇ ಬೇರೆ ವಿಧಿಯಿಲ್ಲ.’ವ೦ಶವೃಕ್ಷ’ ದಲ್ಲಿನ ಸಾ೦ಪ್ರದಾಯಿಕ ಬ್ರಾಹ್ಮಣ ಮನೆಯಲ್ಲಿ ’ನಿಯೋಗ’( ಮಕ್ಕಳನ್ನು ಪಡೆಯುವುದಕ್ಕೋಸ್ಕರ ಗ೦ಡನನ್ನು ಹೊರತುಪಡಿಸಿ ಬೇರೊಬ್ಬನೊ೦ದಿಗೆ ಸ೦ಬ೦ಧ ಹೊ೦ದುವುದು) ಪದ್ದತಿಯಿ೦ದ ಜನಿಸುವ ಶ್ರೀನಿವಾಸ ಶ್ರೋತ್ರಿಯ ಪಾತ್ರವನ್ನು ಸೃಷ್ಟಿಸಿದವರು ಭೈರಪ್ಪನವರಲ್ಲವೇ…? ಸ೦ಗೀತದ ಕಥಾವಸ್ತುವಿದ್ದರೂ , ಒಬ್ಬ ಶಾಸ್ತ್ರೀಯ ಸ೦ಗೀತದ ಗುರುವೊಬ್ಬನೊ೦ದಿಗೆ ,ಅವನ ಶಿಷ್ಯೆಗಿರಬಹುದಾದ ಅನೈತಿಕ ಸ೦ಬ೦ಧ,ನಾಟ್ಯ ಪ್ರವೀಣೆಯೊಬ್ಬಳಿಗೆ ಅವಳ ಶಿಷ್ಯನೊ೦ದಿಗಿರಬಹುದಾದ ಸ೦ಬ೦ಧಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಡುವ ’ಮ೦ದ್ರ’ ಯಾರ ಕಾದ೦ಬರಿ..?
‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೨
–ಮು. ಅ. ಶ್ರೀರಂಗ,ಬೆಂಗಳೂರು
“ಹೆಗ್ಗುರುತು”ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹೀರೆಮಠರು ಆ ಕತೆಗಳ ಸಾರಾಂಶ / ತಾತ್ಪರ್ಯ/ ಭಾಷ್ಯ ಹೀಗೆ ಬರೆದಿರುವುದರಿಂದ ಅದರಲ್ಲಿ ಚರ್ಚಿಸುವ ಅಂಶಗಳು ಅಷ್ಟಾಗಿ ಇಲ್ಲ. “ನಿಜಕವಲು”ಜತೆಗೆ ಸ್ತ್ರ್ರೀ ವಾದಿಗಳೂ ಸೇರಿದಂತೆ ಹಲವರ ಕೋಪಕ್ಕೆ ಕಾರಣವಾದ ಭೈರಪ್ಪನವರ “ಕವಲು”ಕಾದಂಬರಿಯನ್ನು ಹೋಲಿಸಿದ್ದಾರೆ. ಈ ತೌಲನಿಕ ಅಧ್ಯಯನ ಹೇಗೆ ಸಾಧ್ಯವೋ ತಿಳಿಯದಾಗಿದೆ. ಕವಲು ಮತ್ತು ನಿಜಕವಲುವಿನ ನೆಲೆಗಳೇ ಬೇರೆ ಬೇರೆ. ಕಾನೂನಿಗೂ ನ್ಯಾಯ-ನೀತಿಗೂ ನಡುವೆ ಇರುವ ಕಂದರ ಕವಲುವಿನ ಮುಖ್ಯ ಸಮಸ್ಯೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ,ಜನ ಹಿತಕ್ಕಾಗಿ ಮಾಡಿದ ಕಾನೂನನ್ನೇ ಅದಕ್ಕೆ ವಿರುದ್ದವಾಗಿಯು ಉಪಯೋಗಿಸಿದಾಗ ಏನಾಗಬಹುದು ಎಂಬುದರಕದೆಗೆ ನಮ್ಮ ಗಮನವನ್ನು ಸೆಳೆಯುವುದು ಆ ಕಾದಂಬರಿಯ ಉದ್ದೇಶ. ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದು ಕೇವಲ ಗಂಡಸಿಗೆ ಮಾತ್ರ ಸೇರಿದ್ದಲ್ಲ;ಹೆಣ್ಣಿಗೂ ಆ ಕರ್ತವ್ಯದಲ್ಲಿ ಪಾಲಿದೆ. ತೀರ ಸಹಿಸಲು ಆಸಾಧ್ಯವಾದಾಗ ಬಿಡುಗಡೆ ಪಡೆಯುವುದರಲ್ಲಿ ತಪ್ಪೇನಿಲ್ಲ. ಇದನ್ನು ಭೈರಪ್ಪನವರು ವಿರೋಧಿಸುತ್ತಾರೆ ಎಂದು ಊಹಿಸುವುದು ತಪ್ಪಾಗುತ್ತದೆ.”ನಿಜ ಕವಲು”ವಿನಲ್ಲಿ ಬರುವ ಮಹಿಳಾ ಕಂಡಕ್ಟರ್ ರೀತಿಯಲ್ಲೇ ಇತರೆ ಉದ್ಯೋಗಸ್ಥ ಮಹಿಳೆಯರೂ ಸಹ ಒಂದಲ್ಲ ಒಂದು ವಿಧದಲ್ಲಿ ಸನ್ನಿವೇಶದಲ್ಲಿ :ವಾರೆ ನೋಟ”ಕ್ಕೆ ತುತ್ತಾಗ ಬಹುದಾದಂತಹವರೆ.”ಚಿಕ್ಕತಾಯಿ”ಕತೆ ಇದಕ್ಕೆ ಉದಾಹರಣೆ. ಕೊನೆಯಲ್ಲಿ ಅದು ಬೇರೆ ತಿರುವು ಪಡೆದರು ಸಹ ಪ್ರಾರಂಭದ ಹಂತಗಳನ್ನು ಮರೆಯಬಾರದಲ್ಲವೆ ಹೀಗಾಗಿ ದುಡಿಯುವ ಆಧುನಿಕ ಮಹಿಳೆಯ ಬಗ್ಗೆ ಭೈರಪ್ಪನವರದ್ದು “ವಾರೆ ನೋಟ”ಎಂಬ ಹಿರೇಮಠರ ಅಭಿಪ್ರಾಯ ಸರಿಯಿಲ್ಲ. ಜತೆಗೆ ಆಧುನಿಕ ಉದ್ಯೋಗಸ್ಥ ಮಹಿಳೆಯಿಂದಾಗಿ ನಮ್ಮ ಸನಾತನ ಸಂಸ್ಕೃತಿ ಕವಲು ದಾರಿ ಹಿಡಿದು ಹಾಳಾಗುತ್ತಿದೆ ಎಂಬ ಆತಂಕ ಭೈರಪ್ಪನವರನ್ನು ಕಾಡುತ್ತಿದೆ ಎಂಬ ಹಿರೇಮಠರ ಆರೋಪದಲ್ಲೂ ಹುರುಳಿಲ್ಲ. ಸನಾತನ ಸಂಸ್ಕೃತಿ ನಂಬಿಕೆಗಳಿಗೆ ಮುಜುಗುರ ತಂದಂತಹ “ಪರ್ವ”(ಮಹಾಭಾರತವನ್ನು”ಆಧರಿಸಿದ್ದು) ಕಾದಂಬರಿಯನ್ನು ಬರೆದ ಭೈರಪ್ಪನವರನ್ನು “ಸನಾತನ ಮಠದ ಸ್ವಾಮಿಗಳ ಪೀಠ”ದಲ್ಲಿ ಕೂರಿಸುವುದು ಕುಚೋದ್ಯವಾಗಬಹುದು. ಅಷ್ಟೆ.
‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೧
-ಮು. ಅ. ಶ್ರೀರಂಗ,ಬೆಂಗಳೂರು
ಕಥಾಸಂಕಲನಗಳು, ಕಾದಂಬರಿಗಳು, ಕವನಸಂಕಲನಗಳು … ಹೀಗೆ ಸಾಹಿತ್ಯದ ಯಾವುದೇ ಪ್ರಕಾರವಿರಲಿ ಅವುಗಳಿಗೆ ಮುನ್ನುಡಿಗಳು ಸಾಮಾನ್ಯವಾಗಿ ಇರುತ್ತವೆ.ಈ ಮುನ್ನುಡಿಗಳು ಕೆಲವೊಮ್ಮೆ ಸ್ನೇಹದ ಕುರುಹಾಗಿರಬಹುದು, ಅಥವಾ ಉದಯೋನ್ಮುಖರನ್ನು ಪ್ರೋತ್ಸಾಹಿಸುವ, ಅವರಲ್ಲಿ ಧೈರ್ಯ ತುಂಬುವ ಆಶೀರ್ವಚನಗಳಾಗಿರಬಹುದು. ಇನ್ನು ಕೆಲವು ಪರಸ್ಪರ ಸಹಕಾರದ (ಅವರದ್ದಕ್ಕೆ ಇವರು ಇವರದ್ದಕ್ಕೆ ಅವರು) ಸ್ವರೂಪದ್ದೂ ಆಗಿರುವುದುಂಟು.
ಕೆ.ಸತ್ಯನಾರಾಯಣರ ಇತ್ತೀಚಿನ ಸಣ್ಣ ಕಥೆಗಳ ಸಂಕಲನ ‘ನಕ್ಸಲ್ ವರಸೆ’ (ಪ್ರಕಾಶಕರು : ಅಕ್ಷರಪ್ರಕಾಶನ ಹೆಗ್ಗೋಡು , ೨೦೧೦)ಗೆ ಮುನ್ನುಡಿ ಬರೆದಿರುವ ಕೆ.ಫಣಿರಾಜ್ ಮತ್ತು ‘ಹೆಗ್ಗುರುತು’ (ಮನೋಹರ ಗ್ರಂಥಮಾಲ , ಧಾರವಾಡ ,೨೦೧೨)ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹಿರೆಮಠರದ್ದು ಮೇಲೆ ಹೇಳಿದ್ದ ಪ್ರಭೇಧಗಳಿಗೆ ಸೇರುವಂಥಹದಲ್ಲ.
ಫಣಿರಾಜರು ತಮ್ಮ ಮುನ್ನುಡಿಯಲ್ಲಿ ಸತ್ಯನಾರಾಯಣರ ಕಥೆಗಳ ಹಿನ್ನಲೆಯಲ್ಲಿ ಸಧ್ಯದ ಕೆಲವೊಂದು ವಾದ-ವಿವಾದಗಳ್ಳನ್ನು ಚರ್ಚಿಸಿರುವುದರಿಂದ ಆಸಕ್ತಿದಾಯಕವಾಗಿದೆ.ಹಿರೇಮಠರದ್ದು ಕಥೆಗಳ ಸಾರಾಂಶ ಅವುಗಳ ಬಗ್ಗೆ ಅವರ ಒಂದೆರೆಡು ಅಭಿಪ್ರಾಯಗಳು/ಅನಿಸಿಕೆಗಳಿಗೆ ಸೀಮಿತವಾಗಿದೆ.ಕಥೆಗಳ ಬಗ್ಗೆ ನೇರವಾಗಿ ಬರೆಯದೆ ಮುನ್ನುಡಿಗಳನ್ನು ಕುರಿತಂತೆ ಚರ್ಚಿಸುವುದಕ್ಕೆ ಒಂದು ಕಾರಣವಿದೆ.ಮುನ್ನುಡಿಗಳೂ ಒಂದು ರೀತಿಯ ವಿಮರ್ಶೆ ಆಗಿರುವುದರಿಂದ ಅದರ ನಿಲುವುಗಳ,ತೀರ್ಮಾನಗಳ ಬಗ್ಗೆ ಮಾತನಾಡುವುದೂ ಸಹ ಪರೋಕ್ಷವಾಗಿ ಆ ಕಥೆಗಳನ್ನು ಕುರಿತಂತೆ ಓದುಗನಾಗಿ ನನ್ನ ಅಭಿಪ್ರಾಯಗಳೂ ಆಗಿರುವ ಸಾಧ್ಯತೆಗಳಿವೆ
ಧಿಡೀರ್ ಖ್ಯಾತಿ(?)
– ಡಾ. ಜ್ಞಾನದೇವ್ ಮೊಳಕಾಲ್ಮುರು
ನೀನೊಬ್ಬ ಅನಾಮಧೇಯ ಈ ನಾಡಿನಲ್ಲಿ. ನಿನ್ನ ಹಿ೦ದಿನ ಚರಿತ್ರೆ ನಮಗೆ ಬೇಕಿಲ್ಲ.
ನಿನಗೆ ಧಿಡೀರ್ ಖ್ಯಾತಿ, ಹೆಸರು ಬೇಕಾ? ಬುದ್ದಿಜೀವಿ, ಸೆಕ್ಯುಲಾರ್ ಎ೦ಬ ಮಾಡರ್ನ್ ವಿಶೇಷಣ ಬೇಕಾ?
ಸೋ ಕಾಲ್ಡ್ ಈ ನಾಡಿನ ಬುದ್ಧಿಜೀವಿಗಳ ಜ್ಞಾನಪೀಠಿಗಳ ಸೆಕ್ಯುಲರ್ವಾದಿಗಳ, ಪ್ರಗತಿಪರರ ಸಖ್ಯ, ಸಪೋರ್ಟ್, ಐಡೆ೦ಟಿಟಿ, ಭೇಷ್ ಬೇಕಾ?
ಈ ನಾಡಿನ ಪ್ರಬಲ ಮಾಧ್ಯಮ ಟಿವಿ, ಪತ್ರಿಕೆಯಲ್ಲಿ ಹೆಡ್ ಲೈನ್ಸ್ ಕುದುರಿಸಿಕೊಳ್ಳುವ ಬಯಕೆ ಇದೆಯಾ?
ಟಿವಿ ಪತ್ರಿಕೆಯಲ್ಲಿ ಸ೦ದರ್ಶನ, ಸ೦ವಾದ ಗೋಷ್ಠಿಯಲ್ಲಿ ರಾರಾಜಿಸಬಹುದು ಎ೦ಬ ಅದಮ್ಯ ಕನಸು ಇದೆಯಾ?
ಗುಡ್..
ಇದಕ್ಕೆಲ್ಲಾ ಹೆಚ್ಚು ಶ್ರಮ ಪಡಬೇಕಿಲ್ಲ, ಹೆಚ್ಚು ಹಣದ ಅಗತ್ಯವೂ ಇಲ್ಲ.
ಜಸ್ಟ್ ಇಷ್ಟನ್ನು ಮಾಡು..
ಹಿ೦ದೂ ಧರ್ಮದ, ಹಿ೦ದೂ ಸ೦ಸ್ಕೃತಿಯ, ಹಿ೦ದೂ ಮಹಾಕಾವ್ಯಗಳ, ಪುರಾಣಗಳ, ಹಿ೦ದೂ ದೇವತೆಗಳನ್ನು ಸ್ವಲ್ಪ ಲೇವಡಿ ಮಾಡಿದರೆ ಸಾಕು, ಜಾಸ್ತಿಯಾದರೆ ಇನ್ನೂ ಜಾಸ್ತಿ ಖ್ಯಾತಿ!
ಅದು ಸ೦ಶೋಧನೆ(?)ಯ ಹೆಸರಿನಲ್ಲಿರಬಹುದು ಅಥವಾ ಅಭಿವ್ಯಕ್ತಿ ಸ್ವಾತ೦ತ್ರ್ಯದ ಹೆಸರಲ್ಲಿರಬಹುದು, ಅಥವಾ ಪ್ರಗತಿಪರ ಧೋರಣೆಯ ಸಾಹಿತ್ಯದ ಹೆಸರಲ್ಲಿರಬಹುದು ಅಥವಾ ನೀನು ಸೃಷ್ಟಿಸುವ ಸುಳ್ಳು ಸುಳ್ಳು ಜೊಳ್ಳು ಜೊಳ್ಳಿನ ಸೃಜನಶೀಲತೆಯ ಹೆಸರಲ್ಲಿರಬಹುದು..
Dont Worry..
ಮತ್ತಷ್ಟು ಓದು 
“ಡುಂಢಿ” ಅನ್ನುವ ಕೃತಿ ಮತ್ತು “ಸೆಕ್ಯುಲರಿಸಂ” ಅನ್ನುವ ಅವಕಾಶವಾದ …!
– ರಾಕೇಶ್ ಶೆಟ್ಟಿ
“ಡುಂಢಿ”ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು “Immortals of Meluha” ಪುಸ್ತಕವನ್ನು ಉಲ್ಲೇಖಿಸಿ, “ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ,ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ ೧೫೦-೨೦೦ ಪ್ರತಿಯಂತಲ್ಲ” ಅಂದರು. ನಾನಂದೆ “ನಿಮಗೆ, ’ದೇವರ ಪಾಲಿಟಿಕ್ಸ್’ ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, ’ಟಿಬೆಟಿಯನ್’ ಅನ್ನುವ ಬದಲೋ ’ಬ್ರಾಹ್ಮಣ/ಆರ್ಯ’ ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು”.
“ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ. ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ.” ಅನ್ನುವ ಮಾತುಗಳನ್ನಿಟ್ಟುಕೊಂಡ “ಡುಂಢಿ” ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? (“ಶಿವ”ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ…!)
ರೂಪಾಯಿ,ಪೆಟ್ರೋಲ್ ಮತ್ತು ಸ್ವದೇಶಿ
– ಪ್ರಶಸ್ತಿ.ಪಿ ಶಿವಮೊಗ್ಗ
ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? !! ರಫ್ತೆಂದರೆ ಚೀನಾದಂತೆ ಬೇಕಾಬಿಟ್ಟಿ ವ್ಯವಹಾರವಲ್ಲ, ಅಗ್ಗದ ದರದಲ್ಲಿ ಚೀನಾದವ್ರೂ ಎಲ್ಲಾ ಕಡೆ ಕಸದಂತೆ ತಂದು ಎಲ್ಲಾ ದೇಶಗಳಲ್ಲಿ, ಭಾರತಕ್ಕೂ ತಂದು ಸುರಿತಿರುವಾಗ, ಕೂಲಿಯಿಂದ ಹಿಡಿದು ಕಚ್ಚಾವಸ್ತುಗಳವರೆಗೆ ಎಲ್ಲದರ ಬೆಲೆ ಏರಿದ್ರೂ ಗುಣಮಟ್ಟ ಕಾದುಕೊಳ್ಳೋ ಅನಿವಾರ್ಯತೆಯಿರೋ ಭಾರತೀಯ ರಫ್ತು ಉದ್ಯಮಕ್ಕೂ ಹೊಡೆತ ಬೀಳುತ್ತಿದೆ ಅದ್ರ ಮದ್ಯ ಕೊಕ್ಕೆ ತೆಗೆಯೋ ಹೊರದೇಶಗಳ ನೂರಾರು ಕಾನೂನುಗಳು ಬೇರೆ…ಅದೆಲ್ಲಾ ದೊಡ್ಡ ತಲೆ ನೋವು ಅಂದ್ರಾ ? ಸರಿ,ಹೋಗ್ಲಿ ಬಿಡಿ.ಅದಿರ್ಲಿ, ಪೆಟ್ರೋಲ್ ಬೆಲೆ ಏರ್ತಾ ಇದ್ರೂ ರೂಪಾಯಿ ಬೆಲೆ ಇಳಿತಾ ಇದ್ರೂ ಘನ ಸರ್ಕಾರ ಏನು ಮಾಡ್ತಾ ಇದೆ ಅಂತ ಬೊಬ್ಬೆ ಹಾಕೋ ಬದ್ಲು ಆ ಸಮಯದಲ್ಲಿ ನಮ್ಮಿಂದ ಏನಾದ್ರೂ ಮಾಡ್ಬಹುದಾ ಅಂತ್ಯಾಕೆ ಯೋಚ್ನೆ ಮಾಡ್ಬಾರ್ದು ?
ಬಯಲು ಆಲಯದೊಳಗೊ?ಆಲಯವು ಬಯಲೊಳಗೊ?
-ಮು. ಅ. ಶ್ರೀರಂಗ, ಬೆಂಗಳೂರು
“ಚಿಂತನ ಬಯಲು”ಸಾಹಿತ್ಯಿಕ ತ್ರೈಮಾಸಿಕದ ಎಪ್ರಿಲ್-ಜೂನ್ ೨೦೧೩ರ ಸಂಚಿಕೆಯಲ್ಲಿ ಡ ರಾಜಾರಾಮ ಹೆಗಡೆಯವರ “ಸಾಮಾಜಿಕ ಸಂಶೋಧನೆಗೆ ಮುಳುವಾಗುತ್ತಿರುವ ಜನಪ್ರಿಯ ಧೋರಣೆಗಳು”ಎಂಬ ಲೇಖನ ಓದಿ ಮನಸ್ಸಿಗೆ ತುಂಬಾ ಖೇದವಾಯಿತು. ಪ್ರಗತಿಪರರೆಂದು ಹೇಳಿಕೊಳ್ಳುವ ನಮ್ಮ ಬುದ್ಧಿಜೀವಿಗಳು ಚಿಂತಕರು ಯಾವಾಗ ಯಾವ ರೀತಿ ನಡೆದುಕೊಳ್ಳುತ್ತಾರೆಂದು ಯಾವ ಜ್ಯೋತಿಷಿಯೂ ಹೇಳಲಾರ! ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಇವರಲ್ಲಿ ಕೆಲವರು,ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಇದಕ್ಕೆ ಕಂಟಕ ಬಂದಾಗ ಅದನ್ನು ವಿರೋಧಿಸಿ ಜೈಲಿಗೂ ಹೋಗಿಬಂದು ಹೀರೋಗಳಾಗಿದ್ದವರು. ಆದರೆ ಈಗ ತಾನೇ ಮುಗಿದ ಲೋಕಸಭೆಯ ಉಪ ಚುನಾವಣೆಯಲ್ಲಿ ಈ ಹಿಂದೆ ಯಾವ ಪಕ್ಷದ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿತ್ತೊ ಆ ಪಕ್ಷದ ಪರವಾಗಿ ಪ್ರಚಾರ ಮಾಡಿ ಅದರ ಅಭ್ಯರ್ಥಿಗಳ “ಕೈ”ಯನ್ನು ಬಲಪಡಿಸಿ ಗೆಲ್ಲಿಸಿದರು. ಸಮಾಜದ ಎಲ್ಲಾ ರಂಗಗಳಲ್ಲಿ ಈ ಗುಂಪುಗಳು ಹೇಳಿದ್ದೆ ಕೊನೆಯ ಮಾತು. ಅವರು ವ್ಯಾಖ್ಯಾನಿಸಿದ ಪ್ರಕಾರ ನಡೆದರೆ ಮಾತ್ರ ಅದು ಅಭಿವ್ಯಕ್ತಿ ಸ್ವಾತಂತ್ರ್ಯ,ಪ್ರಗತಿಪರ ಚಿಂತನೆ. ಇತರರದ್ದೆಲ್ಲಾ ಪ್ರಗತಿ ವಿರೋಧಿ,ಜಾತೀಯತೆ,ಸನಾತನವಾದಿ,ಪುರೋಹಿತಶಾಹಿಯ ಪುನರುತ್ಹಾನದ ಹಿಡನ್ ಅಜೆಂಡಾ ಹೊಂದಿರುವಂತಹುದು………. ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇದುವರೆಗೆ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳತ್ತ ಮಾತ್ರ ಗಮನವಿರಿಸಿದ್ದ ಈ ಗುಂಪುಗಳು ಈಗ ಸಾಮಾಜಿಕ ಸಂಶೋಧನಾ ವಲಯದ ಕಡೆಗೂ ಗಮನ ಹರಿಸಿ ಅದನ್ನೂ ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಈ ಗುಂಪಿನಲ್ಲಿ ಹಲವರು “ನಾನಾ ಕಾರಣಗಳಿಂದ”ರಾಜ್ಯದ ಶಕ್ತಿ ಕೇಂದ್ರಕ್ಕೆ ಹತ್ತಿರವಾಗಿರುತ್ತಾರೆ,ಬೇಕಾಗಿದವರಾಗಿರುತ್ತಾರೆ.




