’ಪಟ್ಟು’ ಬಿಡದೆ ಗೆದ್ದವನು
– ಶೈಲೇಶ್ ಕುಲ್ಕರ್ಣಿ
ದೇಶೀಯ ಕ್ರಿಕೆಟ್ನಲ್ಲಿ ಭರವಸೆಯ ಆಟಗಾರನಾಗಿ ಅದಾಗಲೇ ಆತ ಒಳ್ಳೆ ಹೆಸರು ಸಂಪಾದಿಸಿದ್ದ.ಅಂತರ್-ರಾಷ್ಟ್ರೀಯ ಸ್ತರದಲ್ಲಿ ತನ್ನ ಹೆಸರಿನ ಭೇರಿಭಾರಿಸುವ ಭರಪೂರ ಉತ್ಸಾಹದಿಂದ ರಾಷ್ಟ್ರೀಯತಂಡಕ್ಕೆ ಪದಾರ್ಪಣೆ ಮಾಡಿದ.
ತನ್ನ ಟೆಸ್ಟ್ ಜೀವನದ ಮೊಟ್ಟಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ಆಡಲಿಳಿದಾಗ ಅವಗಳಿಸಿದ್ದು ಬರೋಬ್ಬರಿ “0”.
ಹೊಸಹುರುಪಿಂದ ಎರಡನೇ ಇನ್ನಿಂಗಿನಲ್ಲಿ ಕಣಕ್ಕೆ ಬಂದಾಗ ಮತ್ತೆಬಾರಿಸಿದ್ದು “0”.
ಸ್ವಾಭಾವಿಕವಾಗಿ ಆತನನ್ನ ತಂಡದಿಂದ ಕೈಬಿಟ್ರು .
೨೨ ತಿಂಗಳ ಕಠಿಣ ಪರಿಶ್ರಮ ನಡೆಸಿದ ನಂತರ ತಂಡಕ್ಕೆ ಮರು ಆಯ್ಕೆ ಆದ .
ತನ್ನ ದ್ವಿತೀಯ ಟೆಸ್ಟಿನ ಪ್ರಥಮ ಇನ್ನಿಂಗ್ಸ್ನಲ್ಲಿ ಆತನ ಶೂನ್ಯಪ್ರೇಮ ಮರುಕಳಿಸಿತ್ತು. ಸ್ಕೋರ್ಬೋರ್ಡ್ ನಲ್ಲಿ ಆತನ ಹೆಸರಿನೆದುರಿಗೆ ನೇತಿದ್ದು ಮತ್ತದೇ “0”.
ಎರಡನೇ ಇನ್ನಿಂಗ್ಸ್ ನಲ್ಲಿ ತನ್ನಪಾಲಿಗೆ ಬೇತಾಳನಂತೆ ಬೆನ್ನಟ್ಟಿದ್ದ ಶೂನ್ಯ ಸಂಪಾದನೆಯ ಈ ಭಾರವನ್ನ ಹೇಗೋ ಕಳೆದುಕೊಂಡು ಬಿಡಬೇಕು ಅಂದುಕೊಂಡಿದ್ದವ ಗಳಿಸಿದ್ದು “೧” ರನ್ ಮಾತ್ರ.
ಪರಿಣಾಮ …ಪುನಃ ತಂಡದಿಂದ ಅರ್ಧಚಂದ್ರ ಪ್ರಯೋಗ.
ಆತ ಮೈದಾನಕ್ಕೆ ಮರಳಿ ಮತ್ತೆ ಅಭ್ಯಾಸಕ್ಕಿಳಿದ ಮತ್ತು ಈ ಬಾರಿ ತಂಡದಿಂದ ಪುನರಾಯ್ಕೆಯ ಕರೆಬಂದಾಗ ಆತನ ಕ್ರೀಡಾಜೀವನದ ೧೭ ತಿಂಗಳು ಉರುಳಿಹೋಗಿತ್ತು .
ಆತನ ಟೆಸ್ಟ್ ಕರಿಯರ್ನ ತೃತೀಯ ಟೆಸ್ಟ್.. ಭರವಸೆಯ ಆಣೆಕಟ್ಟು ಹೊತ್ತು ಬಂದವನಿಂದ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲಿ ಅಮೋಘ “ಶೂನ್ಯ” ಸಂಪಾದನೆ .
ನಿಸ್ಸಂಕೋಚವಾಗಿ ಆತನನ್ನು ತಂಡದಿಂದ ಹೊರದಬ್ಬಿದ್ರು.
ಮತ್ತಷ್ಟು ಓದು