ಜಯ ಚಂದಲ್ ಮತ್ತು ಗೋಹಾ ನ ಸಮರ
– ರಂಜನ್ ಕೇಶವ
ಹದಿನಾರನೆಯ ಶತಮಾನದ ಆದಿಯಲ್ಲಿ ರಾಜಸ್ತಾನದಲ್ಲಿ ಮೇವಾಡ್ ಮತ್ತು ಮಾರ್ವಾರ್ ಮನೆತನಗಳು ಪ್ರಭುತ್ವಕ್ಕೆ ಬಂದಿದ್ದವು. ಆ ಕಾಲವೂ ನಿರಂತರ ವಿದೇಶೀ ಆಕ್ರಮಣಗಳನ್ನು ನೇರಾನೇರಾ ಎದುರಿಸುತ್ತಿದ್ದ ಘೋರ ಕಾಲಘಟ್ಟವೇ ಆಗಿತ್ತು. ಆದರೂ ಈ ಎರಡು ರಾಜಪೂತರು ಒಂದಾಗಿರದೆ ಪರಸ್ಪರ ವೈರತ್ವವನ್ನಿಟ್ಟುಕೊಂಡಿದ್ದರು .
1532 ರಲ್ಲಿ ರಾವ್ ಮಾಲ್ ದೇವ್ ಮಾರ್ವಾರಿನ ಸಿಂಹಾಸನವನ್ನೇರಿದ್ದ. ತನ್ನ ಸಾಮ್ರಾಜ್ಯವನ್ನು ದೆಹಲಿಯಿಂದ ಕೇವಲ 50 ಮೈಲಿ ದೂರದಲ್ಲಿದ್ದ ಹಿಸ್ಸರ್ ಮತ್ತು ಜಝ್ಹರ್ ತನಕ ವಿಸ್ತರಿಸಿದ್ದ. ಇದರಿಂದ ದೆಹಲಿಯನ್ನಾಳುತ್ತಿದ್ದ ಷೇರ್ ಷಾಹ್ ಸೂರಿಗೆ ಗುಜರಾತ್ ಮತ್ತು ಪಶ್ಚಿಮ ಏಷ್ಯಾದೊಂದಿಗಿನ ವ್ಯಾಪಾರ ಸಂಪರ್ಕ ಕಡಿತಗೊಂಡಿತ್ತು. ಆದರೆ ಷೇರ್ ಷಾಹನ ಸಾಮಂತರು ತಾರೀಖ್ ಇ ದೌದ್ರಿಯ ಪ್ರಕಾರ ದಕ್ಷಿಣದ ಶಿಯಾ ಸುಲ್ತಾನರನ್ನು ಮಣಿಸಲೆಂದು ದಂಡಯಾತ್ರೆ ಹೊರಡಬೇಕೆಂದು ಒತ್ತಾಯಿಸುತ್ತಾರೆ. ಅದಕ್ಕೆ ಷೇರ್ ಷಾಹ್ ಸಮ್ಮತಿಸಿದನಾದರೋ ಅದಕ್ಕೆ ಮೊದಲು ಉತ್ತರ ಭಾರತವನ್ನು ಇಸ್ಲಾಮೀಕರಣಗೊಳಿಸದೇ ದಕ್ಷಿಣಕ್ಕೆ ಮುನ್ನಡೆಯುವುದಿಲ್ಲವೆಂದು ಹಾಗು ಮೊದಲು ಆ ಖಾಫಿರ್ ರಾವ್ ಮಾಲದೇವನನ್ನು ಮುಗಿಸಿ ಆ ಮಾರ್ವಾರನ್ನು ವಶಪಡಿಸಿಕೊಳ್ಳಬೇಕೆಂದು ನಿಶ್ಚಯಿಸಿದ್ದ . ಮತ್ತಷ್ಟು ಓದು