ಸಹಿಷ್ಣುತೆ-ಅಸಹಿಷ್ಣುತೆಗಳ ಸುತ್ತಾ…..
– ಸಂಗೀತಾ ದೀಪಕ್
ಕಳೆದ ವರ್ಷವೆಲ್ಲಾ ಸುದ್ದಿ ಮಾಡಿದ, ದೇಶ ವಿದೇಶಗಳಲ್ಲಿ ತೀರ್ವ ಸಂಚಲನವನ್ನು ಉಂಟು ಮಾಡಿದ ಪದ ಅಸಹಿಷ್ಣುತೆ. ಇದಕ್ಕೆ ಅದೆಷ್ಟೋ ಪ್ರಶಸ್ತಿ, ಪುರಸ್ಕಾರಗಳ ಮರ್ಯಾದೆ ಬಲಿಯಾದವು, ಅದೆಷ್ಟೋ ತಾರಾಮಣಿಯರ, ವಿದ್ವಜ್ಜನರ ಪರ-ವಿರೋಧ ಹೇಳಿಕೆಗಳು ವಿವಾದಕ್ಕೀಡಾದವು. ಒಂದು ರಾಜ್ಯದ ರಾಜಕೀಯ ಭವಿಷ್ಯವನ್ನು ತಕ್ಕ ಮಟ್ಟಿಗೆ ಬದಲಾಯಿಸಿದ ಪದ ಅದು. ಅಸಹಿಷ್ಣುತೆ ಬಗ್ಗೆ ಬರೆಯುತ್ತಿರುವ ಲೇಖನವೆಂದರೆ, ಯಾವುದೋ ರಾಜಕೀಯ ಪಕ್ಷದ ಪರ ಅಥವ ವಿರುದ್ಧವಾಗಿಯೇ ಈ ಲೇಖನವೆಂದು ಎಲ್ಲಾ ಭಾವಿಸುವುದು ಸಹಜ, ಆದರೆ ಅಸಹಿಷ್ಣುತೆ ಮತ್ತು ಮಾನವನ ನಡುವಿನ ಸಂಬಂಧವನ್ನು ತಿಳಿಸುವುದಷ್ಟೇ ಈ ಲೇಖನದ ಉದ್ದೇಶ. ಇಲ್ಲಿ ಅಸಹಿಷ್ಣುತೆ, ಅದೂ ಭಾರತೀಯರಲ್ಲಿ ಎಂಬ ವಿಷಯವಂತೂ ರಾಜ್ಯ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಿ ದಿನಗಟ್ಟಲೇ ಪತ್ರಿಕೆಗಳಿಗೆ ಹಾಗೂ ದೃಶ್ಯ ಮಾಧ್ಯಮಗಳಿಗೆ ಆಹಾರವನ್ನು ಒದಗಿಸಿದ್ದವು. ಈ ವಿಷಯದಲ್ಲಿ ಸಾಮಾಜಿಕ ತಾಣಗಳು ಕೂಡ ಹಿಂದೆ ಬಿದ್ದಿರಲಿಲ್ಲ, ತಾವೇನೂ ಕಡಿಮೆಯಿಲ್ಲವನ್ನುವಂತೆ ಜನರೂ ಮನಸೋ ಇಚ್ಛೆ ತಮ್ಮ ಅಭಿಪ್ರಾಯಗಳನ್ನು ಹರಿಯಬಿಟ್ಟಿದ್ದರು. ಮತ್ತಷ್ಟು ಓದು