ಪ್ಯಾಸೆಂಜರ್ ರೈಲು ….
– ಫಣೀಶ್ ದುದ್ದ
ಅದೆಷ್ಟೋ ಬಾರಿ ನಾವು ರೈಲ್ವೆ ಸ್ಟೇಷನ್ನಲ್ಲೋ, ಬಸ್ ಸ್ಟಾಂಡಿನಲ್ಲೋ, ” ಸಾರ್, ನನ್ನ ಪರ್ಸ್ ಕಳೆದು ಹೋಗಿದೆ.. ನಾನು ಆ ಊರಿಗೆ ಹೋಗಬೇಕು.. ಈ ಊರಿಗೆ ಹೋಗಬೇಕು.. ನನ್ನ ಹತ್ತಿರ ಹತ್ತೇ ರೂಪಾಯಿ ಇರುವುದು.. ನಮ್ಮೂರಿಗೆ ಇಪ್ಪತ್ತು ರೂಪಾಯಿ ಚಾರ್ಜು… ಹತ್ತು ರೂಪಾಯಿ ಇದ್ರೆ ಕೊಡ್ತೀರಾ.?” ಎಂದು ಕೇಳುವವರು ದಿನ ಬೆಳಗಾದರೆ ಸಿಗುತ್ತಾರೆ. ಕೆಲವರು,” ಹತ್ತು ರೂಪಾಯಿ ತಾನೆ, “ಟೀ”ಗೋ, ಸಿಗರೇಟಿಗೋ ಕಳೆಯುವ ಬದಲು ಇವರಿಗೆ ಕೊಟ್ಟರೆ ಉಪಯೋಗವಗುತ್ತದಲ್ಲ ಎಂದು ಹತ್ತೋ, ಇಪ್ಪತ್ತೋ ಕೈಗಿಟ್ಟು ಹೋಗುವವರಿದ್ದಾರೆ. ಇನ್ನು ಕೆಲವರು, “ನಿಮ್ಮಂತವರನ್ನು ಬೇಕಾದಷ್ಟು ಜನರನ್ನು ನೋಡಿದ್ದೀನಿ, ಮೈ ಬಗ್ಗಿಸಿ ದುಡಿಯುವುದು ಬಿಟ್ಟು ಬರಿ ಸುಳ್ಳು ಹೇಳ್ತೀರಾ… ಸುಮ್ನೆ ಹೋಗಿ” ಎಂದು ಬಾಯಿಗೆ ಬಂದಂತೆ ಬೈದು ಹೋಗಿ ಬಿಡುತ್ತಾರೆ. ಆದರೆ ನಾವ್ಯಾರು ಅದರ ಹಿಂದಿರುವ ಸತ್ಯಾಸತ್ಯತೆಗಳನ್ನು ತಿಳಿಯುವ ಗೋಜಿಗೇ ಹೋಗಿರುವುದಿಲ್ಲ… ಮನಬಂದಂತೆ ಬೈದು ಹೋದ ಮೇಲೂ ಕೆಲವರು ಮನದಲ್ಲೇ ಬೇಸರ ಮಾಡಿಕೊಳ್ಳುವುದೂ ಉಂಟು,” ಅಯ್ಯೋ, ನಿಜವಾಗಿ ಅವನಿಗೆ ಹಣ ಬೇಕಾಗಿತ್ತೋ ಏನೋ..ಛೇ..ಹತ್ತು ರೂಪಾಯಿ ಕೊಟ್ಟಿದ್ದರೆ ನನ್ನ ಗಂಟೇನೂ ಹೋಗುತ್ತಿರಲಿಲ್ಲ”ಎಂದು. ಮತ್ತಷ್ಟು ಓದು