ರಾಜ್ಯ ಸರ್ಕಾರ ರಾಜ್ಯವನ್ನು ಏನು ಮಾಡಲು ಹೊರಟಿದೆ?
ಎಸ್.ಆರ್. ಅನಿರುದ್ಧ ವಸಿಷ್ಠ, ಭದ್ರಾವತಿ
ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯಲ್ಲಿ ಇನ್ನಿಲ್ಲದ ತಂತ್ರಗಾರಿಕೆ ಮಾಡಿ, ತಮ್ಮ ಪಕ್ಷಕ್ಕೇ ಅಧಿಕಾರ ಬರುವಂತೆ ಮಾಡಿಕೊಂಡಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈಗ್ಗೆ ಕೆಲವು ತಿಂಗಳ ಹಿಂದೆ ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಜಿಪಂ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿದೆ.ಇದರ ಪರಿಣಾಮ ಈಗ ಅಧ್ಯಕ್ಷರಾಗುವವರಿಗೆ ಮಾಸಿಕ ೩೫ ಸಾವಿರ ವೇತನ, ಆತಿಥ್ಯ ಭತ್ಯೆ ೨ ಲಕ್ಷ, ಮನೆ ಬಾಡಿಗೆಗೆ ಮಾಸಿಕ ೮೦ ಸಾವಿರ, ಮನೆ ನಿರ್ವಹಣೆಗೆ ೨೦ ಸಾವಿರ, ತಿಂಗಳಿಗೆ ೧ ಸಾವಿರ ಲೀಟರ್ ಡೀಸೆಲ್, ರೈಲು ಹಾಗೂ ವಿಮಾನ ಪ್ರಯಾಣ ದರ, ದಿನ ಭತ್ಯೆ ೨ ಸಾವಿರ, ವಸತಿ ಗೃಹ ಭತ್ಯೆ ೫ ವರ್ಷಕ್ಕೆ ೧೦ ಲಕ್ಷ ದೊರೆಯುತ್ತಿದೆ. ಇದರೊಂದಿಗೆ ಅಧ್ಯಕ್ಷರಿಗೆ ಗೂಟದ ಕಾರು, ಚಾಲಕ, ಪೊಲೀಸ್ ಭದ್ರತೆ ಸಹ ಲಭ್ಯವಾಗಲಿದೆ. ಇದು ನೇರವಾಗಿ ಅವರಿಗಾಗಿ ವೆಚ್ಚ ಮಾಡುವ ಲೆಕ್ಕವಾದರೆ, ಪರೋಕ್ಷವಾಗಿ ಇನ್ನು ಲಕ್ಷಗಟ್ಟಲೆ ಇವರಿಗಾಗಿ ಸರ್ಕಾರ ವ್ಯಯ ಮಾಡುತ್ತದೆ. ಮತ್ತಷ್ಟು ಓದು