ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!
– ರೋಹಿತ್ ಚಕ್ರತೀರ್ಥ
ಉಪೇಂದ್ರರ “ಉಪ್ಪಿ 2” ಚಿತ್ರ ಬಿಡುಗಡೆಯಾದ ಮರುದಿನ ಕನ್ನಡ ಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಅದರಲ್ಲಿ ಮೊದಲಿಂದ ಕೊನೆವರೆಗೆ ಇದ್ದದ್ದು ಉಪ್ಪಿಟ್ಟಿನ ವಿವರಣೆ! ಉಪ್ಪಿಟ್ಟನ್ನು ಜನ ಹೇಗೆ ಮಾಡುತ್ತಾರೆ; ಹೇಗೆ ತಿನ್ನುತ್ತಾರೆ; ಮನೆಗಳಲ್ಲಿ ಉಪ್ಪಿಟ್ಟು ಮಾಡುವಾಗ ಯಾರ್ಯಾರ ಭಾವನೆ ಹೇಗಿರುತ್ತದೆ ಎಂದು ಇಡೀ ಲೇಖನದ ತುಂಬ ಉಪ್ಪಿಟ್ಟಿನ ಮಹಿಮೆಯನ್ನೇ ವರ್ಣಿಸಲಾಗಿತ್ತು. ಕೊನೆಗೆ ಮಾತ್ರ “ಇಲ್ಲಿ ಉಪ್ಪಿಟ್ಟು ಎಂದಿರುವಲ್ಲೆಲ್ಲ ಉಪ್ಪಿ – 2 ಎಂದು ಓದಿಕೊಳ್ಳಿ” ಎಂಬ ಸೂಚನೆ ಕೊಟ್ಟಿದ್ದರು! ಬಹುಶಃ ಸಿನೆಮದ ಬಗ್ಗೆ ಒಂದು ಸಾಲನ್ನೂ ಆಡದೆ ಬರೆದ ಮೊದಲ ಸಿನೆಮ ವಿಮರ್ಶೆ ಅದೇ ಇರಬೇಕು! ವಾಸ್ತವದಲ್ಲಿ, ವಿಮರ್ಶಕರು ತಾನು ಉಪ್ಪಿಟ್ಟಿನ ಬಗ್ಗೆ ಏನೇನು ಹೇಳುತ್ತ ಹೋಗುತ್ತಿದ್ದೇನೋ ಅವೆಲ್ಲವೂ ಆ ಹೆಸರಲ್ಲಿ ಬಂದ ಸಿನೆಮಕ್ಕೂ ಅನ್ವಯವಾಗುತ್ತವೆ ಎನ್ನುವುದನ್ನು ಲೇಖನದ ಉದ್ದಕ್ಕೂ ಪರೋಕ್ಷವಾಗಿ ಹೇಳಿಬಿಟ್ಟಿದ್ದರು. “ಈ ಚಿತ್ರ ಕೂಡ ಉಪ್ಪಿಟ್ಟಿನಂತೆ; ಅವರವರ ಭಾವಕ್ಕೆ, ಅವರವರ ಭಕುತಿಗೆ” ಎನ್ನುವುದು ಅವರ ಲೇಖನದ ಆಶಯವಾಗಿತ್ತು. ಹೀಗೆ, ಉಪ್ಪಿಯ ಚಿತ್ರವಿಮರ್ಶೆಯಲ್ಲಿ ಉಪಮಾ, ಉಪಮಾನವಾಗಿ ಬಂದುಹೋಯಿತು! ಮತ್ತಷ್ಟು ಓದು