ಸಹಿಷ್ಣುತೆ-ಅಸಹಿಷ್ಣುತೆಗಳ ಸುತ್ತಾ…..
– ಸಂಗೀತಾ ದೀಪಕ್
ಕಳೆದ ವರ್ಷವೆಲ್ಲಾ ಸುದ್ದಿ ಮಾಡಿದ, ದೇಶ ವಿದೇಶಗಳಲ್ಲಿ ತೀರ್ವ ಸಂಚಲನವನ್ನು ಉಂಟು ಮಾಡಿದ ಪದ ಅಸಹಿಷ್ಣುತೆ. ಇದಕ್ಕೆ ಅದೆಷ್ಟೋ ಪ್ರಶಸ್ತಿ, ಪುರಸ್ಕಾರಗಳ ಮರ್ಯಾದೆ ಬಲಿಯಾದವು, ಅದೆಷ್ಟೋ ತಾರಾಮಣಿಯರ, ವಿದ್ವಜ್ಜನರ ಪರ-ವಿರೋಧ ಹೇಳಿಕೆಗಳು ವಿವಾದಕ್ಕೀಡಾದವು. ಒಂದು ರಾಜ್ಯದ ರಾಜಕೀಯ ಭವಿಷ್ಯವನ್ನು ತಕ್ಕ ಮಟ್ಟಿಗೆ ಬದಲಾಯಿಸಿದ ಪದ ಅದು. ಅಸಹಿಷ್ಣುತೆ ಬಗ್ಗೆ ಬರೆಯುತ್ತಿರುವ ಲೇಖನವೆಂದರೆ, ಯಾವುದೋ ರಾಜಕೀಯ ಪಕ್ಷದ ಪರ ಅಥವ ವಿರುದ್ಧವಾಗಿಯೇ ಈ ಲೇಖನವೆಂದು ಎಲ್ಲಾ ಭಾವಿಸುವುದು ಸಹಜ, ಆದರೆ ಅಸಹಿಷ್ಣುತೆ ಮತ್ತು ಮಾನವನ ನಡುವಿನ ಸಂಬಂಧವನ್ನು ತಿಳಿಸುವುದಷ್ಟೇ ಈ ಲೇಖನದ ಉದ್ದೇಶ. ಇಲ್ಲಿ ಅಸಹಿಷ್ಣುತೆ, ಅದೂ ಭಾರತೀಯರಲ್ಲಿ ಎಂಬ ವಿಷಯವಂತೂ ರಾಜ್ಯ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಿ ದಿನಗಟ್ಟಲೇ ಪತ್ರಿಕೆಗಳಿಗೆ ಹಾಗೂ ದೃಶ್ಯ ಮಾಧ್ಯಮಗಳಿಗೆ ಆಹಾರವನ್ನು ಒದಗಿಸಿದ್ದವು. ಈ ವಿಷಯದಲ್ಲಿ ಸಾಮಾಜಿಕ ತಾಣಗಳು ಕೂಡ ಹಿಂದೆ ಬಿದ್ದಿರಲಿಲ್ಲ, ತಾವೇನೂ ಕಡಿಮೆಯಿಲ್ಲವನ್ನುವಂತೆ ಜನರೂ ಮನಸೋ ಇಚ್ಛೆ ತಮ್ಮ ಅಭಿಪ್ರಾಯಗಳನ್ನು ಹರಿಯಬಿಟ್ಟಿದ್ದರು. ಮತ್ತಷ್ಟು ಓದು 
ಕಾಡು ಮತ್ತು ಕ್ರೌರ್ಯ ( ಪುಸ್ತಕ ಪರಿಚಯ)
– ನಾಗೇಶ ಮೈಸೂರು
ಸಾಧಾರಣವಾಗಿ ತೇಜಸ್ವಿಯರ ಯಾವುದೇ ಪುಸ್ತಕವನ್ನು ಪರಿಚಯ ಮಾಡಿಸುವ ಅಗತ್ಯ ಇರುವುದಿಲ್ಲ. ಅವೊಂದು ರೀತಿ ‘ಸ್ವಯಂಭು’ ಪ್ರವೃತ್ತಿಯ ‘ಸ್ವಯಂದರ್ಶಿ’ ಜಾತಿಗೆ ಸೇರಿದವು. ಆದರೂ ಈ ಪುಸ್ತಕ ನೋಡಿದಾಗ ಒಂದು ಪರಿಚಯ ಮಾಡಿಸುವ ಅಗತ್ಯವಿದೆ ಎನಿಸಿತು. ಅದಕ್ಕೆ ಮೊದಲ ಕಾರಣ – ಇದು ೧೯೬೨ರಲ್ಲಿ ತಮ್ಮ ಎಂ.ಎ. ಮುಗಿಸಿದ ನಂತರದ ದಿನಗಳಲ್ಲಿ ತೇಜಸ್ವಿ ಬರೆದ ಮೊಟ್ಟಮೊದಲ ಕಾದಂಬರಿ. ನಾನಾ ಕಾರಣಗಳಿಂದ ಪ್ರಕಟವಾಗದೆ ತೀರಾ ಈಚೆಗೆ ಬೆಳಕು ಕಂಡ ಕೃತಿ. ಪ್ರಕಾಶಕರ ಮಾತಿನಲ್ಲೇ ಹೇಳಿದಂತೆ ಸ್ವರೂಪ ಮತ್ತು ನಿಗೂಢ ಮನುಷ್ಯರು ಬರೆದಾದ ಮೇಲೆ ಸ್ವತಃ ತೇಜಸ್ವಿಯವರೇ, ಈ ಪುಸ್ತಕ ಪ್ರಕಟಿಸುವ ಮಾತೆತ್ತಿದಾಗ ‘ಹೂಂ’ ಅಥವಾ ‘ಉಹೂಂ’ ಎರಡೂ ಅಲ್ಲದ ತಮ್ಮ ಕಥೆಗಳಷ್ಟೇ ನಿಗೂಢವಾದ ಮುಗುಳ್ನಗೆಯೊಂದನ್ನು ಬಿತ್ತರಿಸಿ ಸುಮ್ಮನಾಗಿಬಿಡುತ್ತಿದ್ದರಂತೆ. ಅಂತಹ ಪುಸ್ತಕವೊಂದು ಕೊನೆಗೂ ೨೦೧೩ ರಲ್ಲಿ, ಬರೆದ ಸುಮಾರು ಐವತ್ತು ವರ್ಷಗಳ ನಂತರ ಪ್ರಥಮ ಮುದ್ರಣ ಭಾಗ್ಯ ಕಂಡಿತೆಂದ ಮೇಲೆ ಅದರ ಕುರಿತಾದ ಪರಿಚಯ ಸಾಕಷ್ಟು ಕುತೂಹಲಕಾರಿಯಾದ ವಿಷಯವೇ ಅಲ್ಲವೇ ? ಬಹುತೇಕ ತೇಜಸ್ವಿ ‘ಪರಮಾಭಿಮಾನಿ’ಗಳಿಗು ಈ ಪುಸ್ತಕ ಪರಿಚಿತವಿರಲಾರದೆಂಬ ಅನಿಸಿಕೆಯಲ್ಲಿ ಹೀಗೊಂದು ಪರಿಚಯದ ಯತ್ನ. ಮತ್ತಷ್ಟು ಓದು 
ಆಡಿಕೊಳ್ಳುವವರ ಮುಂದೆ, ಬಡಿದಾಡಿಯಾದರೂ ಗೆಲ್ಲಬೇಕು.
– ಶ್ರೀಕಾಂತ ಆಚಾರ್ಯ
Don’t try to sell yourotions’ because nobody gonna buy it. ಸತ್ಯದ ಮಾತುಗಳವು. ಇರೋ ‘ಪ್ರಾಬ್ಲಂ’ಗಳಿಗೆ ಪರಿಹಾರ ಕೊಡಿಸೋ ಅಂತ ಗೋಗರೆದರೆ, ಕೇಳಿಸಿಕೊಂಡವ ನಕ್ಕು ಬಿಡುತ್ತಾನೆ. Infact ಅವನಿಗೆ ಇಂತದ್ದೊಂದು ಸಮಸ್ಯೆಗೆ ‘ಸೊಲ್ಯೂಷನ್’ ಕೊಡಬೇಕು ಅಂತನಿಸಲ್ಲ. ಬದಲಾಗಿ ‘He is glad that you have problems. ಅಂತವರ ಎದುರಲ್ಲಿ ಗೋಳಿಟ್ಟುಕೊಂಡು ಪರಿಹಾರಕ್ಕೆ ಅಂಗಲಾಚುವುದು ಮೂರ್ಖತನ. ನಮ್ಮ ಸಮಸ್ಯೆ ಇರೋದು ಇಲ್ಲೆ. ನಮ್ಮ ನೋವುಗಳಿಗೆ ಗ್ರಾಹಕರಾರು? ಯಾರು ಅದಕ್ಕೆ ಅರ್ಹರು? ಹುಡುಕೋದು ಕಷ್ಟ. ಆದರೆ, ಪ್ರತಿಯೊಬ್ಬರ ಜೀವನದಲ್ಲೂ ಒಂದಷ್ಟು ಜನ ‘ಸ್ನೇಹಿತರು’ ಅಂತಿರುತ್ತಾರೆ. ಅದರಲ್ಲಿ ಕೆಲವರು ಮಾತ್ರ ‘Genuine’. ಉಳಿದವರು ಸುಮ್ಮನೆ ಲೆಕ್ಕ ಭರ್ತಿಗಾಗಿ ಇರುವಂತವರು. ಮತ್ತಷ್ಟು ಓದು 
ಮರವನ್ನು ಮರೆತರೆ ಬರ ಬಾರದ್ದು ಬಂದೀತು!
– ರೋಹಿತ್ ಚಕ್ರತೀರ್ಥ
ಅವೊತ್ತು ಶುಕ್ರವಾರ. ಆಫೀಸಿನಿಂದ ಹೊರಟು ನಗರದ ಮುಖ್ಯರಸ್ತೆಯೊಂದಕ್ಕೆ ಬಂದು ಸೇರಿದಾಗ, ಆ ಸಾಗರದಲ್ಲಾಗಲೇ ಸಾವಿರಾರು ದೋಣಿಗಳು ಹುಟ್ಟುಹಾಕಲಿಕ್ಕೂ ಜಾಗ ಸಿಗದಂತೆ ತುಂಬಿಕೊಂಡಿದ್ದವು. ಯಾಕೆ ಇಷ್ಟೊಂದು ಟ್ರಾಫಿಕ್‍ಜಾಮ್ ಆಗಿದೆ ಎಂದು ಬಾತುಕೋಳಿಗಳಂತೆ ಕತ್ತು ಎತ್ತರಿಸಿ ನಿರುಕಿಸುತ್ತಿದ್ದವರಿಗೆ ದೂರದಲ್ಲಿ ಮಳೆಯ ರಭಸಕ್ಕೆ ಮರವೊಂದು ಮಾರ್ಗಶಾಯಿಯಾಗಿರುವುದು ಕಾಣಿಸಿತು. ಹತ್ತಾರು ಅಡಿಗಳ ರೆಂಬೆಕೊಂಬೆಗಳನ್ನು ದಶದಿಕ್ಕುಗಳಿಗೂ ಚಾಚಿ ಇಷ್ಟುದಿನ ರಸ್ತೆಯ ಬದಿಯಲ್ಲಿ ಗತ್ತಿನಿಂದ ನಿಂತು ನಮಗೆಲ್ಲ ಹಾಯ್ ಹೇಳುತ್ತ ಕೈಬೀಸುತ್ತಿದ್ದ ಈ ಮರ, ಇವೊತ್ತು ಹೃದಯಾಘಾತವಾದಂತೆ ಮಳೆಯ ಹೊಡೆತಕ್ಕೆ ನೆಲಕ್ಕೆ ಬಿದ್ದಿದೆಯಲ್ಲ ಅಂದುಕೊಂಡೆ. ಮರದ ಶವ ಬಿದ್ದಲ್ಲಿ ಹತ್ತಾರು ಅಧಿಕಾರಿಗಳು ನಿಂತು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದರು. ಅದರ ಕೈಕಾಲುಗಳನ್ನು ಆದಷ್ಟು ಬೇಗ ಕತ್ತರಿಸಿ ಎಲ್ಲಿಗಾದರೂ ಸಾಗಿಸಿಬಿಟ್ಟರೆ ಸಾಕು ಎಂಬ ಧಾವಂತ ಅವರ ಮುಖಗಳಲ್ಲಿ ಕುಣಿದಾಡುತ್ತಿತ್ತು. ಗ್ಯಾಂಗ್ರಿನ್ ಆದ ಕಾಲು ಕತ್ತರಿಸುವ ನಿರ್ಭಾವುಕ ವೈದ್ಯನಂತೆ, ನಾಲ್ಕು ಜನ ಕೆಲಸಗಾರರು ಶಕ್ತಿಮೀರಿ ಬಲಪ್ರಯೋಗಿಸಿ ಅದರ ದೇಹವಿಚ್ಛೇದನದಲ್ಲಿ ನಿರತರಾಗಿದ್ದರು. ಶೋಕೇಸಿನ ಹಲವಾರು ಶೋಪೀಸುಗಳ ನಡುವೆ ಕೈಮೇಲೆತ್ತಿ ನಗುವ ಪುಟ್ಟ ಬುದ್ಧನ ಮೂರ್ತಿಯಂತೆ; ಈ ನಗರದ ಸಾಫ್ಟ್‍ವೇರ್ ತಜ್ಞರು ಬರೆಯುವ ಧೀರ್ಘ ಪ್ರೋಗ್ರಾಮಿನ ಒಂದೇ ಒಂದು ಪುಟ್ಟ ಸಾಲಿನಂತೆ, ಅಥವಾ ಬೀದಿಬದಿಯಲ್ಲಿ ಹುಡುಗ ಮಾರುವ ನೂರಾರು ಪೋಸ್ಟರುಗಳ ನಡುವೆ ತಣ್ಣಗೆ ನಗುತ್ತ ಕೂತ ಹೃತಿಕ್ ರೋಷನ್ನಿನಂತೆ ಇಷ್ಟುದಿನ ಧ್ಯಾನಾಸಕ್ತನಾಗಿ ನಿಂತಿದ್ದ ವೃಕ್ಷ ಇನ್ನು ಅಲ್ಲಿ ಇರುವುದಿಲ್ಲವಲ್ಲ ಅಂತ ಸಂಕಟವಾಯಿತು. ಅದನ್ನು ತುಂಡುತುಂಡಾಗಿ ಕತ್ತರಿಸಿ ತೆಗೆದು ಸ್ಥಳಾವಕಾಶ ಮಾಡಿಕೊಡುತ್ತಲೇ ಅಸಹನೆಯಿಂದ ಕುದಿಯುತ್ತಿದ್ದ ಸವಾರರು ನಿರಾಳತೆಯಿಂದ ನಿಟ್ಟುಸಿರು ಬಿಟ್ಟರು. ಅಣೆಕಟ್ಟಿನ ಬಾಗಿಲು ತೆರೆದಾಗ ಹೊರಹಾರುವ ನೀರಿನ ಧಾರೆಯಂತೆ ಬೈಕು-ಕಾರುಗಳು ಧಿಮ್ಮನೆ ಚಿಮ್ಮಿದವು. ಮತ್ತಷ್ಟು ಓದು 







