ವಿಷಯದ ವಿವರಗಳಿಗೆ ದಾಟಿರಿ

ಜೂನ್ 4, 2016

4

ಕಾಗೆ ಮೇಲೆ ಎಸ್ಮಾಸ್ತ್ರ!

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

FB_IMG_1464857174666ಮೊನ್ನೆ ಮಟ ಮಟ ಮಧ್ಯಾಹ್ನ ಮುಖ್ಯಮಂತ್ರಿಗಳ ಕಾರಿನ ಮೇಲೆ ಕಾಗೆ ಕುಳಿತಿದ್ದು ಬ್ರೇಕಿಂಗ್ ನ್ಯೂಸ್ ಆಗಿ ಚಾನೆಲ್ಲುಗಳು ಕಾಕಾ ಪಂಡಿತರು,ತಜ್ಞರನ್ನೆಲ್ಲ ಕರೆಸಿ ಪಾನೆಲ್ ಡಿಸ್ಕಶನ್ನುಗಳನ್ನು ಮಾಡಿದರು.ಈ ಬಗ್ಗೆ ನಮ್ಮ ಸುಳ್ಸುದ್ದಿ ತಂಡ ಗಣ್ಯರ ಅಭಿಪ್ರಾಯ ಕೇಳಿದಾಗ ಸಿಕ್ಕಿದ್ದಿಷ್ಟು…

ಸುಳ್ಸುದ್ದಿ ತಂಡ ಮೊದಲಿಗೆ ಮುಖ್ಯಮಂತಿಗಳ ಬಳಿಯೇ ಅಭಿಪ್ರಾಯ ಕೇಳಿತು.
ಸುಳ್ಸುದ್ದಿ ಟೀಂ : ಸರ್, ನಿಮ್ಮ ಕಾರಿನ ಮೇಲೆ ಕಾಗೆ ಕುಳಿತಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮುಮಂ : ಆ ಕಾಗೆಗೆ ಮಾನ ಮರ್ಯಾದೆ ಇದೆಯೇನ್ರಿ? ಅದು ಪದ್ಮನಾಭನಗರದ ಹೆಡ್ಡಾಫೀಸಿನಿಂದ ಬಂದಿದ್ದೋ,ಮಲ್ಲೇಶ್ವರದ ಆಫೀಸಿನವರು ಹಾರಿಸಿದ್ದೋ ಎಂಬ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ.

ಸುಳ್ಸುದ್ದಿ ಟೀಂ : ತನಿಖೆ ನಡೆಸುವವರು ಯಾರು ಸರ್? ಅವರೇ ಪ್ರತಿಭಟನೆಗೆ ಇಳಿಯುವವರಿದ್ದರಲ್ಲಾ? ಇನ್ನು ಕಾಗೆ ಕೇಸ್ ಗತಿ ಏನು?
ಮುಮಂ : ಯಾರು ಪ್ರತಿಭಟನೆ ಮಾಡಲ್ಲ ಕಣ್ರಿ.ಅವರ ಮೇಲೆ ಎಸ್ಮಾಸ್ತ್ರ ಪ್ರಯೋಗಿಸಲು ಅಪ್ಪಣೆ ಕೊಡಿಸಿಲ್ವೇನ್ರಿ.ಈಗ ಅದನ್ನು ಕಾಗೆಯ ಮೇಲೂ ಬಳಸುವಂತೆ ಹೇಳುತ್ತೇನೆ.ಇಷ್ಟು ದಿನ ನೀವೆಲ್ಲ ವೈದಿಕರಿಂದ ಕಲಿತ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಅಂತ ಬಳಸ್ತಾ ಇದ್ರಿ.ಇನ್ಮುಂದೆ “ಕಾಗೆ ಮೇಲೆ ಎಸ್ಮಾಸ್ತ್ರ” ಅಂತ ಬಳಸ್ಕೊಳ್ರಿ.

ಸುಳ್ಸುದ್ದಿ : ಸರ್,ಕಾಗೆ ಮೇಲೆ ಎಸ್ಮಾಸ್ತ್ರನಾ!?
ಮುಮಂ : ಜಾಸ್ತಿ ಹಾರಾಡಿದ್ರೆ,ನಿಮ್ ಮೇಲೆ ಲೋಕಾಯುಕ್ತದ ಮೇಲೆ ಪ್ರಯೋಗಿಸಿದ “ಭಸ್ಮಾಸ್ತ್ರ” ಪ್ರಯೋಗಿಸಲಾಗುವುದು.


ಸುಳ್ಸುದ್ದಿ ಟೀಂ: ಅದೆಲ್ಲಾ ಇರ್ಲಿ ಸರ್, ಕಾಗೆ ಕುಳಿತ ಕಾರನ್ನು ನೀವು ಸೈಲೆಂಟಾಗಿ ಬದಲಾಯಿಸುವ ಯೋಚನೆಯಲ್ಲಿದ್ದೀರಿ ಅಂತ ಗಾಸಿಪ್ ಇದ್ಯಲ್ಲಾ?
ಮುಮಂ : ಗಾಸಿವ್ ಹಬ್ಬಿಸುವವರಿಗೆ ಮಾನ ಮರ್ಯಾದೆ ಇದ್ಯೇನ್ರಿ? ನೋಡ್ರಿ,ನಾವೇನು ಕಾಗೆಗಳನ್ನು ಮೂಢನಂಬಿಕೆ ಕಾಯ್ದೆಯಡಿ ತಂದಿದ್ದೇವೇನ್ರಿ? ಅದೇನೋ ಹಳೆ ಗಾದೆ ಐತಲ್ಲ, “ಹಕ್ಕಿ ಕೂರೋಕೂ- ರಂಬೆ ಮುರಿಯೋಕೂ” ಅಂತ ಹಂಗೆಯಾ “ಕಾಗೆ ಕೂರೋಕೂ – ಕಾರ್ ಮಾರೋಕೂ” ಅಂತ ಸುದ್ದಿ ಆಗಂಗೆ ನೋಡಿಕೊಳ್ಳುವಂತೆ ನಮ್ಮ ಆಸ್ಥಾನ ಪಂಡಿತರು,ಗಂಜಿಗಿರಾಕಿಗಳಿಗೆ ಹೇಳಲಾಗಿದೆ.ಭ್ರಷ್ಟಚಾರದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿಯೇ ಅಧಿಕಾರಕ್ಕೆ ಬಂದಿದ್ದು ಅಂತ ಈಗ ನಿಮ್ನೆಲ್ಲಾ ನಂಬ್ಸಿಲ್ವಾ.

ಮುಮಂಗಳ ನಂತರ ನಾವು ವಿರೋಧ ಪಕ್ಷದ ಕೆ.ಸ್ವಾಮಿ ಗೃಹ ಸಚಿವರು,ಕಾನೂನು ಸಚಿವ,ಗಂಜಿ ಗಿರಾಕಿ,ಕಳ್ಳಯ್ಯಕುಮಾರುಗಳ ಅಭಿಪ್ರಾಯ ಕೇಳಿದೆವು.

ಸುಳ್ಸುದ್ದಿ : ಮುಮಂಗಳ ಕಾರಿನ ಮೇಲೆ ಕೂತ ಕಾಗೆ ಪದ್ಮನಾಭನಗರದ ಹೆಡ್ಡಾಫೀಸಿಂದ ಬಂದಿದ್ದು ಎಂಬ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕೆ.ಸ್ವಾಮಿ : ಆ ಕಾಗೆಯ ಮೂಲದ ಬಗೆ ನನ್ನಲ್ಲಿ ದಾಖಲೆಗಳಿವೆ ಬ್ರದರ್. ನಾಳೆ ಪತ್ರಿಕಾಗೋಷ್ಟಿಯಲ್ಲಿ ಹೇಳ್ತಿನಿ.

ಗೃಸ : ಈ ಸುದ್ದಿಯನ್ನು ಚಾನೆಲ್ಲುಗಳಲ್ಲಿ ನೋಡಿದ್ದೇನೆ.ಮೊದಲೇ ಅವರ ಕುರ್ಚಿಯ ಮೇಲೆ ಬೇರೆಯವರ ಕಣ್ಣಿದೆ ಅಂತ ಅವರು ರಾತ್ರಿ ನಿದ್ದೆ ಮಾಡುವುದನ್ನೇ ಬಿಟ್ಟಿರುವಂತ ಈ ಸಂಧರ್ಭದಲ್ಲಿ,ಕಾಗೆಗಳು ಈ ರೀತಿ ಸರ್ಕಾರದ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಉಂಟು ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಕಾಗೆಗಳನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕಾಸ : ಈ ಕಾಗೆಯನ್ನು ಮೂಢನಂಬಿಕೆ ಕಾಯ್ದೆಯಡಿ ತರುವ ಬಗ್ಗೆ ಚಿಂತಾಜನಕವಾಗಿ ಚಿಂತಿಸುತಿದ್ದೇವೆ.
ಸುಳ್ಸುದ್ದಿ ಟೀಂ : ಕಾಗೆಗಳು ಈ ಕಾಯ್ದೆಯಡಿ ಬರುವುದಿಲ್ಲವಾದ್ದರಿಂದ ನಮ್ಮ ಕಾರನ್ನು ಬದಲಾಯಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರಂತಲ್ಲ.ನೀವಿಗ ಕಾಗೆಗಳನ್ನು ಮೂಢನಂಬಿಕೆ ವ್ಯಾಪ್ತಿಗೆ ತಂದರೆ ಅವರ ಕಾರ್ ಗತಿಯೇನು?
ಕಾಸ: ಈ ವಿಷ್ಯ ನಂಗ್ ಗೊತ್ತೀ ಇರ್ಲಿಲ್ಲ ನೋಡ್ರಿ. ನಮ್ಮ ಮಾವಿನಮಿಡಿ ಸ್ವಾಮೀಜಿ ಜೊತೆ ಮಾತಾಡಿ ಈ ಬಗ್ಗೆ ಜ್ಯೋತಿಷಿಗಳ ಅಭಿಪ್ರಾಯ ಕೇಳಲಾಗುವುದು.

ಗಂಜಿಗಿರಾಕಿಗಳು : ಥೋ ಏನ್ರಿ ಇದು,ಕಾಗೆಗಳು ಅಪಶಕುನ ಅಂತೆ. ನಮ್ಗೆ ಕೊಡ್ರಿ ಇಲ್ಲೇ ಕಬಾಬ್ ಮಾಡಿ ತಿಂತೀವಿ. ಕಾಗೆಗಳ ಬಗ್ಗೆ ಬಿತ್ತಲಾಗಿರುವ ಮೌಢ್ಯವನ್ನು ಹೊಡೆದೋಡಿಸಲು ಭಗವಾನರ ನೇತೃತ್ವದಲ್ಲಿ “ಕಾಕಾ ಕಬಾಬ್ ಕ್ರಾಂತಿ” ಮಾಡುವ ಬಗ್ಗೆ ಯೋಚಿಸಿದ್ದೇವೆ.ಜನಪಥದಿಂದ ಗಂಜಿಗೆ ಹಣ ಬಿಡುಗಡೆಯಾದ ತಕ್ಷಣ ಶುರುವಾಗಲಿದೆ.

ಸುಳ್ಸುದ್ದಿ : ಇದ್ಯಾಕ್ ಸರ್,ಹಣ ಬಂದಿಲ್ಲವೇ?
ಗಂಜಿಗಿರಾಕಿಗಳು : ಪಂಚ ರಾಜ್ಯದ ಚುನಾವಣೆಲೀ ಪಂಕ್ಚರ್ ಆದ್ಮೇಲೆ ಇಲ್ಲ ಕಣ್ರಿ.ತುರ್ತು ಬಿದ್ದಾಗ ಕೇರಳದೆಡೆಗೆ ಮುಖ ಮಾಡುತಿದ್ದೇವೆ.ನಮ್ಮ ಶೋಷಣೆಯಾಗುತ್ತಿದೆ ಇದಕ್ಕೆ ಆ ಮೋದಿಯೇ ಕಾರಣ.

ಕಳ್ಳಯ್ಯ ಕುಮಾರು : ಈ ಬಗ್ಗೆ ಏನು ಮಾತನಾಡಬೇಕೆಂದು ನನಗೆ ಹೇಳಿಕೊಟ್ಟಿಲ್ಲ. So I am not authorized to speak on this.ಈ ಕ್ಷಣಕ್ಕೆ ನಮಗೆ ಕಾಗೆಗಳಿಂದ ಆಜಾದಿ ಬೇಕಿದೆ,ಕಾಕಾ ಕಬಾಬ್ನಿಂದಲ್ಲ ಅಂತ ಬರ್ಕಳ್ರಿ.
(ಇದು ವಿಡಂಬನೆಯಾಗಿದ್ದು,ಯಾರನ್ನೇ ನೋಯಿಸುವ ಉದ್ದೇಶ ಹೊಂದಿಲ್ಲ)

4 ಟಿಪ್ಪಣಿಗಳು Post a comment
  1. ದ್ಯಾವನೂರು ಮಂಜುನಾಥ್'s avatar
    ದ್ಯಾವನೂರು ಮಂಜುನಾಥ್
    ಜೂನ್ 4 2016

    ಕಾಕ್ಕನ ಹೋರಟಕ್ಕೆ ಮಮಂ ಹೋಸ ಕಥೆ
    ಚನ್ನಾಗಿದೆ

    ಉತ್ತರ
  2. sudarshanarao's avatar
    ಜೂನ್ 4 2016

    ಯಾರನ್ನು ನೋಯಿಸುವ ಉದ್ದೇಶ ಇಲ್ಲದೇ ಇದ್ದರೂ ಸಹ ಸಲಾಂ ಸಾಬಿಯ ಮುಲಾಂ ಇಲ್ಲದ ಅಂಡು, ನಾಗ ಸೆಟ್ಟಿಯ ಸೆಕ್ಯೂಲರ್ ಬಾಯಿಂದ ಫೂತ್ಕರಿಸಲ್ಪಟ್ಟ ಬೆಂಕಿಯಿಂದ ಉರಿದು ಹೋಯ್ತಂತೆ.
    ತಾನು ಬೀಸಿದ ಜಾಲಕ್ಕೆ ತಾನೇ ಬಿದ್ದು ನಗೆಪಾಟಲಾದ ಮೌಢ್ಯಮಂತ್ರಿ

    ಉತ್ತರ
    • Salam Bava's avatar
      Salam Bava
      ಜೂನ್ 5 2016

      Mongrel, When countered with reason and wisdom you hurriedly bury your moth infested tail inside your decaying mouth. You’ve no guts. Shame on your wretched life you scumbug. Go find some beef crumbs and save yourself.

      ಉತ್ತರ
  3. Salam Bava's avatar
    Salam Bava
    ಜೂನ್ 5 2016

    Looks like Rakesh Shetti wants to compete with Tanmay Bhat. His humour is no doubt cheap and tasteless but at least Tanmay isn’t ideologically prejudiced like Rakesh.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments