ಕಾಗೆ ಮೇಲೆ ಎಸ್ಮಾಸ್ತ್ರ!
– ರಾಕೇಶ್ ಶೆಟ್ಟಿ
ಮೊನ್ನೆ ಮಟ ಮಟ ಮಧ್ಯಾಹ್ನ ಮುಖ್ಯಮಂತ್ರಿಗಳ ಕಾರಿನ ಮೇಲೆ ಕಾಗೆ ಕುಳಿತಿದ್ದು ಬ್ರೇಕಿಂಗ್ ನ್ಯೂಸ್ ಆಗಿ ಚಾನೆಲ್ಲುಗಳು ಕಾಕಾ ಪಂಡಿತರು,ತಜ್ಞರನ್ನೆಲ್ಲ ಕರೆಸಿ ಪಾನೆಲ್ ಡಿಸ್ಕಶನ್ನುಗಳನ್ನು ಮಾಡಿದರು.ಈ ಬಗ್ಗೆ ನಮ್ಮ ಸುಳ್ಸುದ್ದಿ ತಂಡ ಗಣ್ಯರ ಅಭಿಪ್ರಾಯ ಕೇಳಿದಾಗ ಸಿಕ್ಕಿದ್ದಿಷ್ಟು…
ಸುಳ್ಸುದ್ದಿ ತಂಡ ಮೊದಲಿಗೆ ಮುಖ್ಯಮಂತಿಗಳ ಬಳಿಯೇ ಅಭಿಪ್ರಾಯ ಕೇಳಿತು.
ಸುಳ್ಸುದ್ದಿ ಟೀಂ : ಸರ್, ನಿಮ್ಮ ಕಾರಿನ ಮೇಲೆ ಕಾಗೆ ಕುಳಿತಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮುಮಂ : ಆ ಕಾಗೆಗೆ ಮಾನ ಮರ್ಯಾದೆ ಇದೆಯೇನ್ರಿ? ಅದು ಪದ್ಮನಾಭನಗರದ ಹೆಡ್ಡಾಫೀಸಿನಿಂದ ಬಂದಿದ್ದೋ,ಮಲ್ಲೇಶ್ವರದ ಆಫೀಸಿನವರು ಹಾರಿಸಿದ್ದೋ ಎಂಬ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ.
ಸುಳ್ಸುದ್ದಿ ಟೀಂ : ತನಿಖೆ ನಡೆಸುವವರು ಯಾರು ಸರ್? ಅವರೇ ಪ್ರತಿಭಟನೆಗೆ ಇಳಿಯುವವರಿದ್ದರಲ್ಲಾ? ಇನ್ನು ಕಾಗೆ ಕೇಸ್ ಗತಿ ಏನು?
ಮುಮಂ : ಯಾರು ಪ್ರತಿಭಟನೆ ಮಾಡಲ್ಲ ಕಣ್ರಿ.ಅವರ ಮೇಲೆ ಎಸ್ಮಾಸ್ತ್ರ ಪ್ರಯೋಗಿಸಲು ಅಪ್ಪಣೆ ಕೊಡಿಸಿಲ್ವೇನ್ರಿ.ಈಗ ಅದನ್ನು ಕಾಗೆಯ ಮೇಲೂ ಬಳಸುವಂತೆ ಹೇಳುತ್ತೇನೆ.ಇಷ್ಟು ದಿನ ನೀವೆಲ್ಲ ವೈದಿಕರಿಂದ ಕಲಿತ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಅಂತ ಬಳಸ್ತಾ ಇದ್ರಿ.ಇನ್ಮುಂದೆ “ಕಾಗೆ ಮೇಲೆ ಎಸ್ಮಾಸ್ತ್ರ” ಅಂತ ಬಳಸ್ಕೊಳ್ರಿ.
ಸುಳ್ಸುದ್ದಿ : ಸರ್,ಕಾಗೆ ಮೇಲೆ ಎಸ್ಮಾಸ್ತ್ರನಾ!?
ಮುಮಂ : ಜಾಸ್ತಿ ಹಾರಾಡಿದ್ರೆ,ನಿಮ್ ಮೇಲೆ ಲೋಕಾಯುಕ್ತದ ಮೇಲೆ ಪ್ರಯೋಗಿಸಿದ “ಭಸ್ಮಾಸ್ತ್ರ” ಪ್ರಯೋಗಿಸಲಾಗುವುದು.
“ಚಪ್ಪಟೆ ಪಾದದ ಕನ್ನಡಿಗರು”
-ದೀಕ್ಷಿತ್ ಪೊಯ್ಯೆಕಂಡ
“100 ಮೀಟರ್ ಓಟವನ್ನು 15 ಸೆಕೆಂಡುಗಳಲ್ಲಿ ಮುಗಿಸಬಹುದು ಬಿಡು ಮತ್ತೆ ಹಗ್ಗ ಹತ್ತೋದು ಕಂಬ ಹತ್ತೋದು ಕಷ್ಟ ಬಿಡು” ಎಂದು ಮಂಜು ವೈದ್ಯಕೀಯ ಪರೀಕ್ಷೆಯ ಬಳಿಕ ಕೊಚ್ಚಿಕೊಳ್ಳತೊಡಗಿದ. ನನ್ನದೇನೂ ಹೊರತಾಗಿರಲಿಲ್ಲ, “ಅಯ್ಯೋ ಮೆಡಿಕಲ್ ಹೆಂಗೂ ಆಯ್ತು ಇನ್ನು ಫಿಸಿಕಲ್ ಟೆಸ್ಟ್ ಹೇಗೆ ಪಾಸ್ ಮಾಡೊದಪ್ಪಾ” ಅನ್ನುತ್ತಾ ಜೊತೆಗಿದ್ದವರೊಂದಿಗೆ ಮಾತಿಗಿಳಿದೆ. ಮತ್ತೊಬ್ಬನದೂ ಅದೇ ರಾಗ. ನಮಗಿದ್ದ ಸಂತೋಷದ ವಿಷಯವೆಂದರೆ ಆ ದಿನ 8 ಮಂದಿ ಕನ್ನಡಿಗರು ಅಲ್ಲಿದ್ದೆವು. ಸರಿಸುಮಾರು ಮೂರು ಗಂಟೆ ಕಾದ ಬಳಿಕ ಮೆಡಿಕಲ್ ರಿಸಲ್ಟ್ ಬಂತು. ಅದನ್ನು ಹಿಡಿದುಕೊಂಡು ಬಂದ ಏರ್ಪೋರ್ಟ್ ಮುಖ್ಯಸ್ಥ “ನಾನು ರಿಜೆಕ್ಟ್ ಆದ ಅಭ್ಯರ್ಥಿಗಳ ಹೆಸರು ಮಾತ್ರ ಕರೆಯುತ್ತಿದ್ದೇನೆ’ ಎಂದು ಮಲಯಾಳಿ ಮಿಶ್ರಿತ ಆಂಗ್ಲ ಭಾಷೆಯಲ್ಲಿ ಓದತೊಡಗಿದ. ರಮೇಶ್.. ಸುರೇಶ್.. ಹೀಗೆ ಹೆಸರು ಕೇಳಿದಾಗ, ನನಗೇನೋ ಫೈವ್ ಸ್ಟಾರ್ ಜಾಹೀರಾತು ಕೇಳಿದಂತಾಗುತಿತ್ತು. ಉಫ್ ಅದೇನೋ ಎದೆಯಲಿ ಡವ ಡವ! ವರುಷಗಳ ಕನಸು. ಲಿಖಿತ ಪರೀಕ್ಷೆಯ ಬಳಿಕದ ತಯಾರಿ, ಬಯಲಲ್ಲಿ ಪಟ್ಟ ಕಷ್ಟ ಎಲ್ಲವೂ ನೆನಪಾಗುತಿದ್ದವು. ಒಂದೊಂದೇ ಹೆಸರನ್ನು ಕೇಳಿಸಿಕೊಳ್ಳುತ್ತಾ ಹೋದಂತೆ ಸಿಡಿಲು ಬಡಿದಂತೆ ದೀಕ್ಷಿತ್ ಕುಮಾರ್ ಅಂತ ಹೆಸರನ್ನೂ ಕೇಳಿಬಿಟ್ಟೆ. ಆಯ್ತು ನನ್ನ ಕನ್ನಂಬಾಡಿ ಕಟ್ಟೆ ಒಡೆದೋಯ್ತು. ಕಣ್ಣು ಮಂಜಾಗತೊಡಗಿತು. ನನ್ನ ಹೆಸರನ್ನೂ ಹೇಳಿಯೇಬಿಟ್ಟರು. ಈ ಕೆಲಸಕ್ಕಾಗಿ ಇನ್ನಿಲ್ಲದಂತೆ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿ ಹೋಯಿತು. ಮತ್ತೆ ಮಂಜು, ತ್ರಿಭುವನ್ ಹೀಗೇ ಮುಂದುವರಿದಿತ್ತು. ಅಷ್ಟೂ ಕನ್ನಡಿಗರ ಯಾತ್ರೆ ಮುಗಿದಿತ್ತು. ಕಾರಣ ಕೇಳಿದ್ರೆ, ನಮ್ಮದು ಚಪ್ಪಟೆ ಪಾದ ಅಂತೆ ! ಮತ್ತಷ್ಟು ಓದು 
ನೋವ ಬಿತ್ತಿ ನಲಿವ ಬೆಳೆವ ವ್ಯವಸಾಯ !
– ನಾಗೇಶ ಮೈಸೂರು
ಅಲ್ಲಾ ಈ ನೋವು ಎನ್ನುವುದು ಎಂತಹ ವಿಚಿತ್ರ ಸರಕು ಅಂತೀನಿ ? ಬಡವ, ಬಲ್ಲಿದ ಅನ್ನದೇ ಎಲ್ಲರನ್ನು ಕಾಡೋ ಇದರ ಅಂತರ್ದರ್ಶನದ ಪರಿಚಯ ಎಲ್ಲರಿಗೂ ಇದ್ದರು ಯಾಕೋ ಇದರ ಪ್ರತ್ಯಕ್ಷ್ಯ ಸ್ವರೂಪ ದರ್ಶನ ಭಾಗ್ಯ ಯಾರಿಗೂ ಇದ್ದಂತಿಲ್ಲ. ಏನಾದರು ಏಟು ಬಿದ್ದು ಎಡವಟ್ಟಾದಾಗ ಕಣ್ಣಿಗೆ ಕಾಣಿಸಿಕೊಳ್ಳೊದು ಗಾಯ, ರಕ್ತ; ಕಾಣಿಸಿಕೊಳ್ಳದೆ ಅನುಭವಕ್ಕೆ ಮಾತ್ರ ನಿಲುಕೋದು ನೋವು. ಯಾರಾದರು ಮನಸಿಗೆ ಘಾಸಿ ಮಾಡಿದಾಗಲು ಅಷ್ಟೆ, ಮಾಡಿದವರು ಹಾಗು ಮಾಡಿದ ಘಟನೆಯನ್ನು ಕಾಣಬಹುದೇ ಹೊರತು ಅದುಂಟು ಮಾಡುವ ನೋವನ್ನಲ್ಲ. ಅದನ್ನು ಬರಿ ಅನುಭವಿಸಿಯೇ ತೀರಬೇಕು. ಹೋಗಲಿ ಬೇರೆಯವರಿಗೆ ಬೇಡಾ, ಅದನ್ನು ಅನುಭವಿಸುತ್ತಿರುವವರ ಕಣ್ಣಿಗಾದರೂ ಈ ನೋವು ಕಾಣಿಸಿಕೊಳ್ಳುತ್ತದೆಯೆ ? ಎಂದರೆ ಅದೂ ಇಲ್ಲ. ಬರಿ ಅನುಭವಗಮ್ಯ ಅಮೂರ್ತ ರೂಪಿ ಅಸ್ತಿತ್ವ ಈ ನೋವಿನದು. ಮತ್ತಷ್ಟು ಓದು 
ಇಂದಿನವರೆಗೂ ಬುದ್ದಿಜೀವಿಗಳ ಬುದ್ಧಿ ನೆಟ್ಟಗಾಗಿಲ್ಲ. ಮುಂದಾದರೂ ಆದೀತಾ?
-ಶ್ರೀಕಾಂತ್ ಆಚಾರ್ಯ
ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಈ ದೇಶದ ಅಷ್ಟೂ ಸವಲತ್ತನ್ನ ಚಪ್ಪರಿಸಿಕೊಂಡು ಅನುಭವಿಸಿದವರಿಂದ ಭಾರತದ ‘ಬರ್ಬಾದಿಗೆ’ ಜಂಗ್(?) ಶುರುವಾಯ್ತಲ್ಲ. ಆಶ್ಚರ್ಯ ಅನ್ನಿಸಿತಾ? ಬಹುಶಃ ಇರಲಿಕ್ಕಿಲ್ಲ. ಈ ದೊಂಬರಾಟಗಳನ್ನ ನಾವೆಲ್ಲಾ ಕಂಡವರೇ. ಬದುಕಿನಲ್ಲಿ ತನಗೊಂದು ‘ಐಡೆಂಟಿಟಿ’ಯೇ ಇಲ್ಲದೇ ಪರಿತಪಿಸುವ ಮಂದಿ ಬಹಳಷ್ಟು ಬಾರಿ ಹೀಗೆಲ್ಲ ಮಾಡಿಯೇ ಹೆಸರಿಗೆ ಬರೋದಿದೆ. ಹಾಗಂತ ಇವರನ್ನ ಅಸಡ್ಡೆ ಮಾಡಿ ಬದಿಗಿಡುವಂತಿಲ್ಲ. ಯಾಕೆಂದರೆ ಇವರೆಲ್ಲರ ಹೋರಾಟ ಇರೋದು ಕೆಟ್ಟದರ ಬಗ್ಗೆಯಲ್ಲ, ಈ ದೇಶಕ್ಯಾವುದೋ ಮಾರಕವಾಗಿದ್ದರೆ ಅದರ ಬಗ್ಗೆಯೂ ಅಲ್ಲ. ಇವರ ‘ಜಂಗ್’ ಇರೋದು ಈ ದೇಶದ ಸಮಗ್ರತೆಯ ಬಗ್ಗೆ. ಈ ದೇಶದ ಸನಾತನತೆಯ ಬಗ್ಗೆ. ಒಟ್ನಲ್ಲಿ ಈ ದೇಶದ ಬಗ್ಗೆಯೇ. ಇವೆಲ್ಲಾ ‘ಬುದ್ಧಿಮಾಂದ್ಯ’ ಜೀವಗಳಿಗೆ ಹೆಗಲಾಗಿ ನಿಂತು ಪೋಷಿಸುತ್ತಿರುವುದು ಇಲ್ಲಿನ ಬುದ್ಧಿ ಜೀವಿಗಳೆಂಬ ಅಡಕಸುಬಿಗಳು. ಅದಲ್ಲದೇ ಇನ್ನೇನು? ಮತಿ ತಪ್ಪಿದವ ಮಾಡಿದ ತಪ್ಪನ್ನ, ತಪ್ಪು ಅನ್ನೋದು ಬಿಟ್ಟು ಅವರೊಲ್ಲಬ್ಬರಾಗಿ ನಿಂತು ಗುರಾಣಿ ಹಿಡಿದು ಮತ್ತಷ್ಟು ಇನ್ನಷ್ಟು ಪ್ರಪಾತಕ್ಕೆ ಇಳಿಯೋಕೆ, ಎಳೆಯೋಕೆ ತಯಾರಾದರೆ? ಮತ್ತಷ್ಟು ಓದು 




