ವಿಷಯದ ವಿವರಗಳಿಗೆ ದಾಟಿರಿ

Archive for

3
ಜನ

ಕತೆಗಾರನ ಗುಪ್ತಭಯ ಕತೆಯಲ್ಲಿಯೇ ಬಯಲಾಯಿತು…!!

– ಗುರುರಾಜ ಕೊಡ್ಕಣಿ. ಯಲ್ಲಾಪುರ

49659371ನಡುರಾತ್ರಿಯ ನಿಶ್ಯಬ್ದದ ನಡುವೆ ಕಿಟಕಿಯ ಗಾಜು ಚೂರುಚೂರಾಗಿದ್ದು ನನಗೆ ಗೊತ್ತಾಗಿತ್ತು. ಏರ್ ಕಂಡಿಶನರ್ ಕಾರ್ಯ ನಿರ್ವಹಿಸುತ್ತಿಲ್ಲವೆನ್ನುವ ಕಾರಣಕ್ಕೆ ಮಫ್ಲರಿನಿಂದ ಕಿವಿ ಮುಚ್ಚಿಕೊಳ್ಳದಿದ್ದ ನನಗೆ ಕಿಟಕಿಯ ಗಾಜು ನೆಲಕ್ಕಪ್ಪಳಿಸಿದ್ದ ಶಬ್ದ ಸ್ಪಷ್ಟವಾಗಿಯೇ ಕೇಳಿಸಿತ್ತು. ಮಲಗಿದ್ದವನು ಚಕ್ಕನೇ ಎದ್ದು ಕುಳಿತೆ. ಮಧ್ಯವಯಸ್ಕನಾಗಿರುವ ನನಗೆ ನನ್ನ ವಯಸ್ಸಿನ ಬಗ್ಗೆಯೇ ಕೊಂಚ ಅಸಹನೆ. ನನ್ನ ವಯಸ್ಸು ನನ್ನ ಮಗನಷ್ಟಾಗಲಿ ಅಥವಾ ನನ್ನ ತಂದೆಯಷ್ಟಾಗಲಿ ಇದ್ದಿದ್ದರೆ ಸೂಕ್ತವಾಗಿರುತ್ತಿತ್ತು ಎನ್ನುವ ಭಾವ ನನಗೆ. ‘ಭಯಪಡಬೇಡ, ಏನೂ ಆಗಿಲ್ಲ. ಎಲ್ಲಿದ್ದಿಯೋ ಅಲ್ಲೇ ಇರು’ ಎಂದು ನನ್ನ ಹೆಂಡತಿಗೆ ಅಪನಂಬಿಕೆಯಲ್ಲಿಯೇ ನುಡಿದೆನಾದರೂ ನನ್ನ ಮಾತುಗಳನ್ನು ಆಕೆಯೂ ನಂಬುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಕೆಳಮಹಡಿಯಲ್ಲಿ ಏರುದನಿಯಲ್ಲಿ ಕೂಗಾಡುತ್ತಿದ್ದ ಆಗಂತುಕರ ದನಿ
ನಮ್ಮಿಬ್ಬರಿಗೂ ಕೇಳಿಸುತ್ತಿತ್ತು. ‘ನೀನು ಬಟ್ಟೆ ಧರಿಸಿಕೊ’ ಎಂದು ಪತ್ನಿಗೆ ಹೇಳುತ್ತ ಕೋಣೆಯ ದೀಪದ ಗುಂಡಿಯನ್ನು ಒತ್ತಿದಾಗಲೇ ಮನೆಯಲ್ಲಿ ವಿದ್ಯುತ್ ಸರಬರಾಜು
ನಿಂತುಹೋಗಿದೆಯೆನ್ನುವುದು ನೆನಪಾಗಿದ್ದು. ತಕ್ಷಣಕ್ಕೆ ಕೈಗೆ ಸಿಕ್ಕ ಮೊಬೈಲಿನ ಬೆಳಕನ್ನೇ ಕತ್ತಲಿನ ನಿವಾರಣೆಗಾಗಿ ಬಳಸಿಕೊಂಡೆ. ನುಗ್ಗಿರುವ ಆಗಂತುಕರು ಮೆಟ್ಟಲೇರಿ ಬರುತ್ತಿರುವ ಶಬ್ದ ನಮ್ಮ ಕಿವಿಯ ಮೇಲೆ ಬೀಳುತ್ತಿತ್ತು. ಶಯನಗೃಹದ ಬಾಗಿಲು ಭದ್ರಪಡಿಸಿ ಪಡಸಾಲೆಗೆ ಬಂದೆ. ಹಜಾರದ ಕತ್ತಲಿನುದ್ದಕ್ಕೂ ಕುಣಿದಾಡುತ್ತಿದ್ದುದು ನುಸುಳುಕೋರರ ಕೈಯಲ್ಲಿದ್ದ ಹಿಡಿದೀಪದ ಬೆಳಕು. ಎರಡು ಕೈಗಳನ್ನು ಮೇಲೆತ್ತಿ ಹಿಡಿದು, ‘ನಾನು ಇಲ್ಲಿಯೇ ನಿಂತಿದ್ದೇನೆ’ಎಂದು ಕಿರುಚಿದೆ. ಕಿರುಚಿದೆ ಎಂದು ನಾನಂದುಕೊಂಡೆ. ಆದರೆ ನನ್ನ ಮಾತುಗಳು ಚಿಕ್ಕ ಮಗುವೊಂದರ ಪಿಸುಗುಡುವಿಕೆಯಂತೇ ನನ್ನ ಗಂಟಲಿನಿಂದ ಹೊರಬಿದ್ದಿದ್ದವು. ಮತ್ತಷ್ಟು ಓದು »