7ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ…
ನಿಲುಮೆ ವೆಬ್ ತಾಣ ಶುರುವಾಗಿ 6ವರ್ಷಗಳನ್ನು ಪೂರೈಸಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಕ್ರಮಣದ ದಿನವಿದು. 5ನೇ ವರ್ಷದ ಸಂಭ್ರಮದಲ್ಲಿ,ನಿಲುಮೆ ಪ್ರಕಾಶನ ಶುರುವಾಗುವ ಹಂತದಲ್ಲಿದ್ದಾಗ,ನಿಲುಮೆಯ ಮೇಲೆ ಕರ್ನಾಟಕದ ಬೌದ್ಧಿಕ ಫ್ಯಾಸಿಸಂನ ದಾಳಿಯಾಗಿತ್ತು.ಹಾಗೇ ದಾಳಿ ಮಾಡಿದವರ ಪೈಕಿ ಹೇಗಿದೆ 5ನೇ ವರ್ಷದ ಗಿಫ್ಟು ಎಂದು ಕುಹುಕವಾಡಿದ್ದರು.ಅದಾದ ನಂತರದ ವಿಷಯಗಳೆಲ್ಲ ನಿಮಗೇ ತಿಳಿದಿವೆ.ಕನ್ನಡ ಪ್ರಭ ಪತ್ರಿಕೆಯೂ ಆ ಎಪಿಸೋಡಿನ ಬಗ್ಗೆ ವಿಸ್ತೃತ ವರದಿ ಮಾಡಿತು.ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಮುಖಾಮುಖಿ ಚರ್ಚೆಯೂ ನಡೆಯಿತು.
ಆ ಚರ್ಚೆಯ ಅಂತ್ಯದಲ್ಲಿ, ”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ” ಎಂದು ಹೇಳಿ,ನಿಲುಮೆಯು ಸಾಗಿ ಬಂದ ಮತ್ತು ಸಾಗಲಿರುವ ಮಾರ್ಗದ ಬಗ್ಗೆ ಸ್ಪಷ್ಟ ಸಂದೇಶವನ್ನು ಕೊಟ್ಟೆವು. ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಎನ್ನುವುದಕ್ಕೆ ಸಾಕ್ಷಿಯಾಗಿ,5ನೇ ವರ್ಷಾಚರಣೆಯ ಸಂದರ್ಭದಲ್ಲಿ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ.ಕನಿಷ್ಟ ಐದು ಪುಸ್ತಕಗಳನ್ನಾದರೂ ನಾವು ಪ್ರಕಟಿಸುವ ಇರಾದೆಯಿತ್ತು. ಆದರೆ,ನಮ್ಮ ಇತರೆ ಕೆಲಸ-ಕಾರ್ಯಗಳು ಮತ್ತು ಪುಸ್ತಕ ಮುದ್ರಣಕ್ಕೆ ಬೇಕಾಗುವ ಸಂಪನ್ಮೂಲಗಳ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ಪುಸ್ತಕಗಳಷ್ಟೇ ಸಾಧ್ಯವಾಗಿದ್ದು. 2016ರಲ್ಲಿ ನಿಲುಮೆ ಪ್ರಕಾಶನ ಸ್ತಬ್ಧವಾಗಿತ್ತು ಎಂಬುದನ್ನು ನಿಮ್ಮ ಮುಂದೆ ಮಂಡಿಯೂರಿ ಒಪ್ಪಿಕೊಳ್ಳುತ್ತೇವೆ.
ಈ ವರ್ಷ ನಿಲುಮೆಯ ಹೆಜ್ಜೆ ಗುರುತುಗಳು….
1.ಹೈದರಾಬಾದಿನ ಯುನಿವರ್ಸಿಟಿಯಲ್ಲಿ ರೋಹಿತ್ ವೇಮುಲಾ ಎಂಬ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವನ್ನಿಡಿದುಕೊಂಡು ದೇಶಾದಾದ್ಯಂತ ಗಂಜಿಗಿರಾಕಿಗಳು ಬೊಬ್ಬೆಯಿಟ್ಟಾಗ,ನಿಲುಮೆ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶವನ್ನು ಓದೌಗರ ಮುಂದೆ ಇಡುವ ಕೆಲಸವನ್ನು ಮಾಡಿದೆ.
2.ಉಗ್ರ ಅಫ್ಜಲ್ ಗುರುವನ್ನು ಬೆಂಬಲಿಸಿ,ಕಾಶ್ಮೀರದ ಆಜಾದಿ ಘೋಷಣೆಗಳನ್ನು ಕೂಗಿದ್ದ ಜೆ.ಎನ್.ಯು ವಿವಿಯ ಕನ್ನಯ್ಯ ಕುಮಾರನ ಪಟಾಲಂನ ವಿರುದ್ಧ ನಡೆದ ಆನ್ಲೈನ್ ಹೋರಾಟದಲ್ಲು ನಿಲುಮೆ ಬಳಗ ಸಕ್ರೀಯವಾಗಿತ್ತು.
3.೨೦೧೬ರ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯ JNUವಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿ ಬಂದಾಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.ಅದಾದ ಕೆಲವೇ ದಿನಗಳಲ್ಲಿ ಬಂಗಾಳದಲ್ಲೂ ಇದೇ ಬಗೆಯ ಘೋಷಣೆಗಳ ಸುದ್ದಿಯಾಗಿತ್ತು. ಜುಲೈ ೯ನೇ ತಾರೀಖು ಜಮ್ಮುಕಾಶ್ಮೀರ ರಾಜ್ಯದಲ್ಲಿ ಉಗ್ರ ಬರ್ಹನ್ ವಾನಿಯ ಹತ್ಯೆಯಾದ ನಂತರ,ಆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ, ಕೆಲವು ಅರ್ಬನ್ ನಕ್ಸಲರು ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ತಯಾರಾಗಿದ್ದ ಹೊರಟಿದ್ದರು. ಇವರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು.
ಶಿಲೆಯೊಂದು ಶಿಲ್ಪವಾಗಿ, ಪರಕಾಯ ಪ್ರವೇಶವಾಗಿ, ಸಮರಭೂಮಿಗೆ ಸಿದ್ಧವಾಗುವ ರಾಷ್ಟ್ರಶಕ್ತಿ
– ಸಂತೋಷ್ ತಮ್ಮಯ್ಯ
೧೯೪೯ರ ಜನವರಿ ೧೫ ರಂದು ಫಿಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ದಿನವನ್ನು ‘ಭಾರತೀಯ ಸೈನ್ಯ ದಿನಾಚರಣೆ ಎಂದು ಆಚರಿಸಲಾಗುತ್ತವೆ. ‘ಭಾರತದ ಗೌರವವನ್ನು ರಕ್ಷಿಸಿದ, ವಿದೇಶಗಳಿಂದಲೂ ಹೊಗಳಿಸಿಕೊಂಡ, ಬೃಹತ್ ಪಡೆಗಳನ್ನ್ನು ಹೊಂದಿರುವ ‘ಭಾರತೀಯ ಸೇನೆ ವಿಶ್ವದ ಹಲವು ದೇಶಗಳ ಮಿಲಿಟರಿಗೆ ಮಾರ್ಗದರ್ಶನ ನೀಡಿದ ಹಿರಿಮೆಯಿದೆ. ವಿಶ್ವದ ಹಲವು ಸವಾಲುಗಳನ್ನು ‘ಭಾರತೀಯ ಸೇನೆ ಎದುರಿಸಿದೆ. ವಿಶ್ವ ಶಾಂತಿಗೆ ಭಾರತೀಯ ಸೇನೆಯ ಕೊಡುಗೆಯನ್ನು ವಿಶ್ವಸಂಸ್ಥೆ ಇಂದಿಗೂ ಕೊಂಡಾಡುತ್ತಿದೆ. ಅವೆಲ್ಲಕ್ಕೂ ಕಾರಣ ಸೈನ್ಯದ ಅಸಲಿ ಶಕ್ತಿಯಾದ ‘ಭಾರತೀಯ ಯೋಧ‘ರು. ಅವರಿಗೆ ನಮ್ಮ ನಮನ. ಮತ್ತಷ್ಟು ಓದು
ವೇಮುಲ ಸಾವಿನ ಬಗ್ಗೆ ಮಾತಾಡಿದವರು ಈಗೆಲ್ಲಿಹರು..?
– ಶಾರದ ಡೈಮಂಡ್
ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಮುಗ್ದ ಜೀವಿಯೊಂದು ಕಾಣದ ಕೈಗಳ ಕೈವಾಡಕ್ಕೆ ಬಲಿಯಾಗಿದೆ. ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಮತ್ತೊಂದು ಜೀವ ಮಣ್ಣಾಗಿಹೋಯಿತು. ಓದುವುದರಲ್ಲಿ ಬುದ್ಧಿವಂತನಾಗಿದ್ದ, ಸೌಮ್ಯ ಸ್ವಭಾವದವನಾದ ಅಭಿಷೇಕ್ ಮೂರು ಕುಟುಂಬಗಳಿಗೆ ಸ್ವಂತ ಮಗನಂತೆಯೇ ಇದ್ದ. ಸರ್ಕಾರಿ ಕೆಲಸವೊಂದಕ್ಕೆ ಸೇರಿ ತನ್ನನ್ನು ಕಷ್ಟಪಟ್ಟು ಸಾಕುತ್ತಿರುವ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ಅವನ ಕನಸಾಗಿತ್ತು. ಶೃಂಗೇರಿಯ ಜೆಸಿಬಿಎಮ್ ಕಾಲೇಜಿನ ಬಿ.ಕಾಂ ಕೊನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ ಎಂ.ಕೆ ಎಂಬ ಹುಡುಗ ಪ್ರಸಕ್ತ ವರ್ಷದ ಕಾಲೇಜಿನ ವಾಣಿಜ್ಯ ಸಂಘದ ಅಧ್ಯಕ್ಷ! ಚೆನ್ನಾಗಿ ಓದುತ್ತಿರುವ ಆಲ್ ರೌಂಡರ್ ವಿದ್ಯಾರ್ಥಿಗಳನ್ನು ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸಂಘಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರನ್ನಾಗಿ ಕಾಲೇಜಿನವರೇ ನೇಮಿಸುತ್ತಾರೆ. ನೇಮಿಸುವಾಗ ಅವನು ಯಾವ ಸಂಘಟನೆಯವನೆಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ಉತ್ತಮ ವಿದ್ಯಾರ್ಥಿಯಾದ ಅಭಿಷೇಕ್ ವಾಣಿಜ್ಯ ಸಂಘವನ್ನು ಹೊರತುಪಡಿಸಿ ತನ್ನನ್ನು ತಾನು ಎಬಿವಿಪಿ ಯಲ್ಲಿ ಗುರುತಿಸಿಕೊಂಡಿದ್ದೇ ಜೀವಕ್ಕೆ ಮುಳ್ಳಾಗುವ ಹಾಗಾಯಿತು. ಜನವರಿ ಏಳರಂದು ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಜಂಟಿಯಾಗಿ ಸೈನಿಕರಿಗೆ ಗೌರವ ಸಲ್ಲಿಸುವ “ಯೋಧನಮನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮತ್ತಷ್ಟು ಓದು