ವಿಷಯದ ವಿವರಗಳಿಗೆ ದಾಟಿರಿ

Archive for

30
ಡಿಸೆ

ಆನಂದ ಕರುಣಿಸಿದ ತಾಂಡವ

– ರಾಜೇಶ್ ರಾವ್

1c7323037307b58c095d012383afce0eಭಾರತವು ಬ್ರಿಟಿಷರ ದಾಸ್ಯದಲ್ಲಿದ್ದ ಕಾಲ. ಬರಿಯ ರಾಜಕೀಯ ದಾಸ್ಯವಲ್ಲ. ನಮ್ಮ ಇತಿಹಾಸವನ್ನು ತಿರುಚಿ ನಮ್ಮ ಮೂಲವನ್ನೇ ಪ್ರಶ್ನಿಸಿದ್ದ ಕಾಲ. ಅಂತಹ ತಿರುಚಿದ ವಿಚಾರವನ್ನೇ ಶಿಕ್ಷಣದಲ್ಲಿ ಅಳವಡಿಸಿ ಉರು ಹೊಡೆಸಿ ಪೀಳಿಗೆಗಳನ್ನೇ ದಾಸ್ಯಕ್ಕೊಳಪಡಿಸಲು ತಯಾರಾಗಿರಿಸಿದ್ದ ಕಾಲ. ಆರ್ಯ ಆಕ್ರಮಣವಾದವನ್ನೇ ತಲೆಯಲ್ಲಿ ತುಂಬಿಕೊಂಡು ನಮ್ಮ ಅಸ್ಮಿತೆಗೆ, ಉತ್ಕರ್ಷಕ್ಕೆ, ಜಗದ್ಗುರು ಪಟ್ಟಕ್ಕೆ ಕಾರಣವಾದ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿಗಳನ್ನು ತುಚ್ಛವಾಗಿ ಕಾಣುವ ಪೀಳಿಗೆಯೇ ಸೃಷ್ಟಿಯಾಗಿದ್ದ ಕಾಲ. ಆದರೂ ಒಂದು ಕಡೆ ರಾಜಕೀಯ ದಾಸ್ಯವನ್ನು ಹೊಡೆದೋಡಿಸಲು ಹೋರಾಟ ನಡೆದಿತ್ತು. ಅದರ ನಡುವಲ್ಲೇ ನಮ್ಮ ಇತಿಹಾಸವನ್ನು ಶುದ್ಧೀಕರಿಸುವ ಪ್ರಕ್ರಿಯೆಯೂ ನಡೆದಿತ್ತು. ಭಾರತೀಯ ಕಲೆಯನ್ನು ಪೌರ್ವಾತ್ಯ, ಪಾಶ್ಚಿಮಾತ್ಯರಿಬ್ಬರೂ ತುಚ್ಛವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಪಾಶ್ಚಿಮಾತ್ಯರದ್ದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಮಹಾನುಭಾವ ಪಶ್ಚಿಮ ಮೂಲದ-ಪೂರ್ವದ ಮೇಲಿನ ಆದರ ಭಾವದ ಆನಂದ ಕುಮಾರ ಸ್ವಾಮಿ. ಮತ್ತಷ್ಟು ಓದು »

29
ಡಿಸೆ

ಲಘು ಹರಟೆ: ಡಿಮಾನಿಟೈಸಷನ್ನೂ, ಅಜೈಲ್ ಪ್ರೊಜೆಕ್ಟೂ..

– ನಾಗೇಶ ಮೈಸೂರು

1929_106ಪೆಚ್ಚು ಮೋರೆ ಹಾಕಿಕೊಂಡು ಸುಟ್ಟ ಬದನೆಯ ಮುಖ ಹಾಕಿಕೊಂಡು ಬರುತ್ತಾ, ಎದುರು ಸಿಕ್ಕಿದ ಗುಬ್ಬಣ್ಣನನ್ನು ಕಂಡು ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿ ‘ ಹಲೋ ಗುಬ್ಬಣ್ಣ..!’ ಎಂದೆ ತುಸು ಉದ್ವೇಗದ ದನಿಯಲ್ಲಿ.

‘ನಮಸ್ಕಾರ ಸಾರ್..’ ಅಷ್ಟೇ ನೀರಸ ದನಿಯಲ್ಲಿ ಗುಬ್ಬಣ್ಣನ ಮಾರುತ್ತರ.. ಸಂವೇರ್ ಸಂಥಿಂಗ್ ಈಸ್ ರಾಂಗ್.. ಹಾಳು ಸಿಂಗಪುರದ ಬಿಸಿಲು ಕಾಡಿ ನಲುಗಿಸಿಬಿಟ್ಟಿರಬೇಕು..

‘ತುಂಬಾ ಬಿಸಿಲು ಅಲ್ವಾ.. ಬಾ ಹೋಗಿ ಒಂದೊಂದು ಎಳನೀರು ಆದರು ಕುಡಿಯೋಣ.. ಮುಖವೆಲ್ಲ ಬಾಡಿ ಹೋಗಿದೆಯಲ್ಲೋ..?’ ಅಂದೆ.

‘ಅಯ್ಯೋ ಅದು ಬಿಸಿಲಿಗೆ ಬಾಡಿದ್ದಲ್ಲ ಸಾರ್.. ಹಾಳು ಅಪ್ಕಮಿಂಗ್ ಇಂಡಿಯಾ ಟ್ರಿಪ್ ಪ್ರಭಾವ… ಸುತ್ತಿ ಸುತ್ತಿ ಸಾಕಾಗೋಯ್ತು.. ಆದರೂ ನೋ ಸಕ್ಸಸ್..’ ಮತ್ತಷ್ಟು ಓದು »

28
ಡಿಸೆ

ಉಳಿಯುವಂಥ ವಿಜ್ಞಾನ ಸಾಹಿತ್ಯ ಕೊಟ್ಟ ಅಡ್ಯನಡ್ಕರು

– ರೋಹಿತ್ ಚಕ್ರತೀರ್ಥ

adyanadka-krishna-bhat1ಶಾಲೆಯಲ್ಲಿದ್ದಾಗ ನಾವು ಕಿತ್ತಾಡಿಕೊಂಡು ಓದುತ್ತಿದ್ದ ಪತ್ರಿಕೆ ಎಂದರೆ ಬಾಲವಿಜ್ಞಾನ. ಅದರಲ್ಲಿ ಬರುತ್ತಿದ್ದ “ನೀನೇ ಮಾಡಿ ನೋಡು” ಎಂಬ ಸರಳ ಪ್ರಯೋಗಗಳನ್ನು ಮನೆಯಲ್ಲಿ ಮಾಡಿ ನೋಡುತ್ತಿದ್ದೆವು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅಲ್ಲಿ ತಜ್ಞರು ಕೊಟ್ಟ ಉತ್ತರಗಳನ್ನು ಓದಿ ಖುಷಿ ಪಡುತ್ತಿದ್ದೆವು. ವ್ಯಕ್ತಿಚಿತ್ರಗಳನ್ನು ಎರಡೆರಡು ಬಾರಿ ಓದಿ ಮನನ ಮಾಡಿಕೊಳ್ಳುತ್ತಿದ್ದೆವು. ವಿಜ್ಞಾನ ಪದಬಂಧವನ್ನು ಪೂರ್ತಿಗೊಳಿಸಲು ಹೆಣಗುತ್ತಿದ್ದೆವು. ಪಂಡಿತವರ್ಗಕ್ಕೆ ಸೇರಿದ ವಿಶೇಷ ತಳಿಗಳೆಂಬ ನಮ್ಮ ಜಂಬವನ್ನು ಬಾಲವಿಜ್ಞಾನ ಹೀಗೆ ತೃಪ್ತಿಗೊಳಿಸುತ್ತಿತ್ತು. ಆ ಪತ್ರಿಕೆಯಲ್ಲಿ ತಪ್ಪದೆ ಕಾಣಿಸಿಕೊಳ್ಳುತ್ತ, ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಹೋಗಿದ್ದ ಒಂದು ಹೆಸರು ಅಡ್ಯನಡ್ಕ ಕೃಷ್ಣ ಭಟ್. ಮತ್ತಷ್ಟು ಓದು »

27
ಡಿಸೆ

ಮೋದಿಯಂತವರು ರಾಜಕೀಯಕ್ಕೆ ಬರಬೇಕು..

– ರಾಕೇಶ್ ಶೆಟ್ಟಿ

2ದೇಶದ ಪಾಲಿಗೆ ಮಹತ್ವದ ದಿನಗಳಾಗಿ ಇತಿಹಾಸದ ದಿಕ್ಕು ದೆಸೆಯನ್ನೇ ಬದಲಿಸಿದ ಆಗಸ್ಟ್ ೧೫, ಜನವರಿ ೨೬, ಅಕ್ಟೋಬರ್ ೨, ಜನವರಿ ೨೩ರ ಸಾಲಿಗೆ ನಿಶ್ಚಿತವಾಗಿ ನವೆಂಬರ್ ೮ರ ದಿನವನ್ನು ಸೇರಿಸಬಹುದೆನಿಸುತ್ತದೆ. ನವೆಂಬರ್ ೮ರ ಮಧ್ಯರಾತ್ರಿಯಿಂದ ೫೦೦, ೧೦೦೦ ರೂಪಾಯಿಗಳ ಹಳೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಮಗ್ಗಲು ಬದಲಿಸಲು ಹೊರಟ ದಿನ. ಮತ್ತಷ್ಟು ಓದು »

26
ಡಿಸೆ

ಜಲಿಯನ್​ವಾಲಾ ಬಾಗ್ ಸೇಡಿಗಾಗಿ 21 ವರ್ಷ ಕಾದಿದ್ದ ಕ್ರಾಂತಿಕಾರಿ

ಮಯೂರಲಕ್ಷ್ಮೀ
(ಲೇಖಕರು ಉಪನ್ಯಾಸಕರು)

sardar-udham-singhಮಾರ್ಚ್ 13, 1940. ಲಂಡನ್ನ ಕಾಕ್ಸ್ಟನ್ ಹಾಲ್. ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ರಾಯಲ್ ಸೆಂಟ್ರಲ್ ಏಷಿಯಾ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸಭೆ ನಡೆದಿತ್ತು. ಬ್ರಿಗೇಡಿಯರ್ ಜನರಲ್ ಸರ್ ಪಿ. ಸ್ಕೈಸ್ ಪ್ರಸ್ತುತ ಜಗತ್ತಿನ ವಿದ್ಯಮಾನಗಳ ಕುರಿತು ಮಾತನಾಡುತ್ತಿದ್ದರು. ಅನೇಕ ಗಣ್ಯರು ಅಲ್ಲಿದ್ದರು. ಅಂದು ಓರ್ವ ಪ್ರಮುಖನ ಭಾಷಣ ಮತ್ತು ಸನ್ಮಾನವಿತ್ತು. ಆತ ಭಾರತದಲ್ಲಿನ ತನ್ನ ಸೇವೆಯ ಅವಧಿಯ ಸಾಧನೆಗಳನ್ನು ಕುರಿತು ಮಾತನಾಡಿದ. ಕಾರ್ಯಕ್ರಮದ ನಂತರ ಜನರು ಹೊರನಡೆಯತೊಡಗಿದರು. ಆ ಪ್ರಮುಖನೂ ಹೊರಟ. ಇದ್ದಕ್ಕಿದ್ದಂತೆಯೇ ಅವನಿಂದ ಸುಮಾರು ಮೂರು ಗಜಗಳಷ್ಟು ಅಂತರದಲ್ಲಿದ್ದ ಯುವಕನೋರ್ವ ಮಿಂಚಿನವೇಗದಲ್ಲಿ ಅವನೆದುರಾಗಿ ನಿಂತು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ. ಮತ್ತಷ್ಟು ಓದು »

24
ಡಿಸೆ

ದೇವನೂರು ಮಹಾದೇವ ಅವರಿಗೊಂದು ಪ್ರೀತಿಪೂರ್ವಕ ಪತ್ರ

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಎಂದೇ ಕರೆಯಲ್ಪಡುವ ಪ್ರೀತಿಯ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು.

ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ತಾವು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರೂ ಹೌದು. ಆದರೆ ನಿಮ್ಮಲ್ಲಿ ಎಳ್ಳಷ್ಟೂ ಜಂಭವಿಲ್ಲ, ಅಹಂಕಾರವಿಲ್ಲ ಮತ್ತು ದೊಡ್ಡ ದೊಡ್ಡ ಸಾಹಿತಿಗಳು ತೋರುವ ಶೋಕಿಯಿಲ್ಲ. ಸರಳತೆಯೇ ನಿಮ್ಮ ಗುರುತು ಪತ್ರ ಎಂದರೂ ತಪ್ಪಾಗದು. ಮತ್ತಷ್ಟು ಓದು »

22
ಡಿಸೆ

ದೇವರು – ಪೂಜೆ

– ಗೀತಾ ಹೆಗಡೆ

perform-lakshmi-pooja-on-diwali-step-14ಸಾಮಾನ್ಯವಾಗಿ ಹಳೆಯ ಸಂಪ್ರದಾಯಗಳೆಲ್ಲ ಸ್ವಚ್ಛತೆ ಆಧಾರದ ಮೇಲೆ ನಿಂತಿದೆ. ಹಾಗೆ ಸುಮ್ಮನೆ ಹೇಳಿದರೆ ಯಾರೂ ಅನುಸರಿಸುವುದಿಲ್ಲ. ಅದಕ್ಕೆ ದೇವರು ಹಾಗೆ ಹೀಗೆ ಎಂದು ಕಥೆ ಕಟ್ಟಿದ್ದಾರೆ ಅನಿಸುತ್ತದೆ. ಸ್ವಚ್ಛತೆ ಜನ ಅನುಸರಿಸಲಿ ಎಂದು. ಮಡಿ ಮೈಲಿಗೆ ಆಚಾರ ವಿಚಾರ ಜಾತಿ ಪದ್ಧತಿ ಇವೆಲ್ಲ ಮನುಷ್ಯನೆ ಮಾಡಿದ್ದು ತಾನೆ. ದೇವರಲ್ಲವಲ್ಲ..? ಹಾಗೆಯೇ ಇದು. ಇಲ್ಲಿ ನಂಬಿಕೆಯಿಂದ ಮಾಡಿದ ಕೆಲಸದಲ್ಲಿ ಸ್ವಚ್ಛತೆಯಿದೆ; ಇದರಿಂದ ಶಾಂತಿ ಸಿಗುತ್ತದೆ. ದೇವರು ಒಂದು ಕಲ್ಪನೆ. ಜಾತಿಗೆ ತಕ್ಕಂತೆ ಅವನ ಸ್ವರೂಪದ ವಿಮರ್ಷೆ. ಆದರೆ ದೇವರು ಒಬ್ಬನೇ. ಅದೊಂದು ಶಕ್ತಿ.. ಅದು ಎಲ್ಲೂ ಇಲ್ಲ. ನಮ್ಮ ಮನಸ್ಸಿನ ಒಳ್ಳೆಯ ನಡೆ ನುಡಿ, ನಮ್ಮ ನಿತ್ಯದ ಜೀವನ ಶೈಲಿ, ನಮ್ಮ ಜೀವನದ ಕನ್ನಡಿ. ಮನಸ್ಸು ಬುದ್ಧಿ ಸರಿಯಾಗಿದ್ದರೆ ದೇವರೆನ್ನುವ ಶಕ್ತಿ ನಮ್ಮಲ್ಲೆ ಕಾಣಬಹುದು. ಆದುದರಿಂದ ಅನಾದಿ ಕಾಲದ ಆಚರಣೆ ಅನುಸರಿಸುತ್ತ ನಮ್ಮ ಮನೆ ಸುತ್ತ ಮುತ್ತಲಿನ ವಾತಾವರಣ ಸುಂದರವಾಗಿರಿಸುವುದರಲ್ಲಿ ತಪ್ಪಿಲ್ಲ. ಮತ್ತಷ್ಟು ಓದು »

21
ಡಿಸೆ

ವಿತ್ತೀಯ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆ

– ಶ್ರೇಯಾಂಕ ಎಸ್ ರಾನಡೆ

maxresdefaultಭಾರತೀಯ ರಿಸರ್ವ್ ಬ್ಯಾಂಕ್‍ನ ಅಕ್ಟೋಬರ್ 2016ರ ದಾಖಲೆಯ ಪ್ರಕಾರ, 125 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ಒಟ್ಟಾರೆ 94.2 ಕೋಟಿ ಡೆಬಿಟ್ ಕಾರ್ಡ್‌ಗಳಿವೆ. ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಡ್‌ಗಳಿಂದ 2.63 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವಾಗಿದೆ. ಆದರೆ ಇದರಲ್ಲಿ ಶೇಕಡ 90%ಗೂ ಅಧಿಕ ಕಾರ್ಡ್‌ಗಳ ಬಳಕೆಯಾಗಿದ್ದು ಅಟೋಮೇಟೆಡ್ ಟೆಲ್ಲರ್ ಯಂತ್ರ(ಎ.ಟಿ.ಎಂ.)ದಿಂದ ಹಣ ಹೊರತೆಗೆಯುವುದಕ್ಕೆ ಮಾತ್ರ. ಅಂದರೆ ಬರೀ 8% ಕಾರ್ಡ್‌ಗಳನ್ನು ನೇರವಾಗಿ ನೋಟುರಹಿತ ವ್ಯಾಪಾರಕ್ಕಾಗಿ(ಆನ್‍ಲೈನ್ ಮತ್ತು ಆಫ್‍ಲೈನ್) ಬಳಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ವೈರುಧ್ಯದಿಂದ ಕೂಡಿದೆಯೆಂದರೆ ದೇಶದಲ್ಲಿ ಕಾರ್ಡ್‌ಗಳಿಂದ ವ್ಯವಹಾರ ನಡೆಸುವ 15.12ಲಕ್ಷ ‘ಪಾಯಿಂಟ್ ಆಫ್ ಸೇಲ್’ ಟರ್ಮಿನಲ್‍ಗಳಿವೆ. ಆದರೆ ದೇಶದಲ್ಲಿರುವ ಒಟ್ಟು ಎ.ಟಿ.ಎಂ.ಗಳ ಸಂಖ್ಯೆ ಕೇವಲ 2.20 ಲಕ್ಷ ಮಾತ್ರ. ಚಲಾವಣೆಯಲ್ಲಿರುವ ಶೇಕಡಾ 50% ಡೆಬಿಟ್ ಕಾರ್ಡ್‍ಗಳು ಸಕ್ರಿಯವಾಗಿ ನೋಟು ವಿನಿಮಯಕ್ಕಾಗಿ ಬಳಕೆಯಾಗುತ್ತಿವೆ. ಭಾರತದ ಪ್ರತೀ 10 ಡೆಬಿಟ್ ಕಾರ್ಡ್‍ಗಳಲ್ಲಿ 9 ಕಾರ್ಡ್‍ಗಳನ್ನು ಕೇವಲ ಎ.ಟಿ.ಎಂ. ಯಂತ್ರಗಳಿಂದ ಹಣ ಪಡೆದುಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಲಾಗುತ್ತಿದೆ. ಅವುಗಳಿಂದ ನೇರವಾಗಿ ನೋಟುರಹಿತ ವ್ಯವಹಾರವಾಗುತ್ತಿಲ್ಲ.

ಮತ್ತಷ್ಟು ಓದು »

16
ಡಿಸೆ

ಮೌಲ್ಯ ರಾಜಕಾರಣ ಮರೆತ ಜಯಲಲಿತಾ!

– ತುರುವೇಕೆರೆ ಪ್ರಸಾದ್
ಪತ್ರಕರ್ತರು

54849200ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನೊಂದಿಗೆ ಅವರ ಆಡಳಿತ ಕೊನೆಗೊಂಡಿದೆ. ಇದನ್ನೇ ಜಯಲಲಿತಾ ಯುಗಾಂತ್ಯ ಎಂದು ಬಣ್ಣಿಸಲಾಗುತ್ತಿದೆ. ತಮಿಳುನಾಡಿನ ಕೋಟಿ ಕೋಟಿ ಜನರು ತಮ್ಮ ಅಮ್ಮನ ನಿಧನದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಅಮ್ಮನ ಸಾವಿನ ಭಾವೋದ್ವೇಗದ ಅಲೆ ಉಕ್ಕಿ ಹರಿಯುತ್ತಿದೆ. ಎಲ್ಲೆಡೆ ಅಮ್ಮನ ಗುಣಗಾನ ನಡೆಯುತ್ತಿದೆ. ಜಯಲಲಿತಾ ತಾವು ಬದುಕಿರುವಷ್ಟು ದಿನವೂ ತಮ್ಮ ನಾಡಿನ ರೈತರಿಗಾಗಿ ಕಾವೇರಿ ನೀರನ್ನು ಶತಾಯಗತಾಯ ಹರಿಸಿಕೊಳ್ಳಲೇಬೇಕು ಎಂದು ಹಠ ಹಿಡಿದವರಂತೆ ವರ್ತಿಸಿದರು. ಈ ವರ್ಷವೂ ಕರ್ನಾಟಕದ ಎಲ್ಲಾ ಜಲಾಶಯಗಳು ನೀರಿಲ್ಲದೆ ಒಣಗಿ ನಿಂತಿದ್ದಾಗಲೂ ಸಹ ಜಯಲಲಿತಾ ತಮ್ಮ ರಾಜ್ಯಕ್ಕೆ ನೀರು ಹರಿಸಲೇಬೇಕೆಂದು ಕರ್ನಾಟಕದ ಮೇಲೆ ಒತ್ತಡ ಹೇರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದಾಗ್ಯೂ ಕರ್ನಾಟಕದ ಜನ ಅವರ ಸಾವಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ, ಒಬ್ಬ ಧೀಮಂತ ಮಹಿಳೆಯ ಸಾವಿಗೆ ನೀಡಬೇಕಾದ ಘನತೆ ಗೌರವಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರದರ್ಶಿಸಿ ಕನ್ನಡಿಗರು ಎಂದಿನಂತೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಮತ್ತಷ್ಟು ಓದು »

15
ಡಿಸೆ

ಚೀನಿಯರ ಹೊಸ ಅವಿಷ್ಕಾರ.. ಬ್ರಹ್ಮಪುತ್ರ ಎಂಬ ವರುಣಾಸ್ತ್ರ..!

– ಸಂತೋಷಕುಮಾರ ಮೆಹೆಂದಳೆ.

image5(ನಮ್ಮಲ್ಲಿ ಯಾವೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಅಭ್ಯಾಸವೇ ಇದ್ದಂತಿಲ್ಲ. ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಹಿಮಾಚಲ, ಅರುಣಾಚಲ, ಬಾಂಗ್ಲಾದೇಶ ಮತ್ತು ಅಸ್ಸಾಂ ವಲಯದಲ್ಲಿ ನಡೆದ ಆಕಸ್ಮಿಕ ಪ್ರವಾಹದ ಹಿನ್ನೆಲೆಯನ್ನು ಇಲ್ಲಿವರೆಗೂ ಕೆಲವೇ ಕೆಲವು ತಜ್ಞರು ಅದೊಂದು ವ್ಯವಸ್ಥಿತ ಸ್ಯಾಂಪಲ್ ದಾಳಿ ಎಂದು ಕಂಡುಕೊಂಡಿದ್ದಾರೆ. ಚುಕ್ಕೆಗೆ ಚುಕ್ಕೆ ಸರಿಯಾಗಿ ಸೇರಿಸಿದ್ದರೆ ಆಗಲೇ ವೃತ್ತ ಸಿದ್ಧವಾಗುತ್ತಿತ್ತು. ಅದಾಗಲೇ ಇಲ್ಲ. ಇಂತಹದ್ದೊಂದು ಕೃತಕ ಪ್ರಾಕೃತಿಕ ವಿಕೋಪ ಸೃಷ್ಠಿಸಿ ಅದಕ್ಕೆ ಪ್ರತಿಕ್ರಿಯೆ ತಿಳಿಯುವುದಷ್ಟೆ ಆಗ ಚೀನಾದ ಉದ್ದೇಶವಾಗಿತ್ತು. ಈಗ ಅದರ ನಿಜವಾದ `ವಾಟರ್‍ವಾರ್ ಸ್ಟ್ರಾಟಜಿ’ ಮುನ್ನೆಲೆಗೆ ಬರುತ್ತಿದೆ. ಅತಿ ಬುದ್ಧಿವಂತಿಕೆಯ ಈ ಯೋಜನೆ ಭವಿಷ್ಯದಲ್ಲಿ ಅನಾಹುತಕಾರಿಯಾದ ಆಯುಧವಾಗಿ ಬಳಕೆಯಾಗಲಿದೆ. ಅದೇ `ವಾಟರ್ ವಾರ್’ ಅರ್ಥಾತ್ ವರುಣಾಸ್ತ್ರ. ಇದನ್ನು ತಡೆಯಲು ನಮ್ಮ ಪ್ರಧಾನಿ ಮೋದಿ ಉಸಿರುಕಟ್ಟಿ ಕಾದುತ್ತಿದ್ದರೆ, ಇದಾವುದರ ಅರಿವೂ ಇಲ್ಲದ ಎಬುಜೀಗಳು ಸಾಕ್ಷಿಗಾಗಿ ತೂಬು ಕಿತ್ತುಕೊಳ್ಳುತ್ತಿದ್ದಾರೆ.) ಮತ್ತಷ್ಟು ಓದು »