ಸರ್ಕಾರಿ ಶಾಲೆಯಲ್ಲಿ ಓದುವ ಬಡವರ ಮಕ್ಕಳು ಯಾವ ಪಾಪ ಮಾಡಿದ್ದರು ಸಿದ್ದಣ್ಣನವರೇ ……
– ಅರುಣ್ ಬಿನ್ನದಿ
ನೀಟ್ ಎಕ್ಸಾಂ ನಲ್ಲಿ ಕನ್ನಡಕ್ಕೆ ಅವಕಾಶ ಸಿಗದಂತೆ ಆಗಿರುವುದು ರಾಜ್ಯದ ತಪ್ಪಿನಿಂದಲೇ ಎಂದು ಸಾಬೀತಾಗುತ್ತಿದ್ದಂತೆ ರಾಜ್ಯಸರ್ಕಾರ ಎಚ್ಛೆತ್ತು ತಪ್ಪು ತಿದ್ದಲು ಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿತ್ತು, ಆದರೆ ಅದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಪರಿಜ್ಞಾನವಿದ್ದಂತಿಲ್ಲ. ಪಿಯುಸಿ ಮಕ್ಕಳು ಸಿ.ಬಿ.ಎಸ್.ಸಿ ಪಠ್ಯಕ್ರಮದ ಕನ್ನಡ ಅವತರಿಣಿಕೆಯನ್ನು ಓದುತ್ತಿರುವ ಸಮಯದಲ್ಲಿ ಒಮ್ಮೆಲೇ ಹತ್ತರವರೆಗೆ ರಾಜ್ಯದ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ಪಿಯುಸಿಯಲ್ಲಿ ಕಷ್ಟವಾಗಿ ಮುಂದಿನ ಶೈಕ್ಷಣಿಕ ಜೀವನದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾದ ನಿರೀಕ್ಷೆ ಇದ್ದಾಗ್ಯೂ ಸಹ ಅದಕ್ಕೆ ಸಂಬಂಧಿಸಿದ ಯಾವುದೇ ಚಿಂತನೆಗಳು ನಡೆದಿಲ್ಲ. ಆದರೆ ರಾಜ್ಯದಲ್ಲಿ ರಹಸ್ಯ ಕೋಣೆಯಲ್ಲಿ, ನಿಗೂಢವಾಗಿ, ಕೆಲವೇ ಕೆಲವು ಬುದ್ದಿಜೀವಿಗಳು ಮಾಡಿದ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಪಠ್ಯ ಪರಿಷ್ಕರಣೆಯಲ್ಲಿ, ಕಮ್ಯುನಿಸಂ ಐಡಿಯಾಲಜಿಯನ್ನು ಹೇರಿ, ರಾಜ್ಯದ ಮಕ್ಕಳನ್ನು ಮಾರ್ಕ್ಸ್ ಸಿದ್ದಾಂತದ ಪೊಲಿಟಿಕಲ್ ಪಕ್ಷದ ಕಾರ್ಯಕರ್ತರನ್ನು ಸೃಷ್ಟಿಸುವ ಕಾರ್ಯಕ್ಕೆ ಸಿದ್ದರಾಮಯ್ಯನವರು, ಬರಗೂರು ರಾಮಚಂದ್ರರ ಕೈಯಲ್ಲಿ ಅಡಿಗಲ್ಲನ್ನು ಹಾಕಿಸಲು ಎಲ್ಲ ಸಿದ್ದತೆಯನ್ನು ಮಾಡಿಸಿದ್ದಾರೆ. ೨೧ ನೇ ಶತಮಾನದಲ್ಲಿ ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿನ ಸ್ಪರ್ಧಾತ್ಮಕ ಬದುಕಿಗೆ ಎದೆ ಕೊಟ್ಟು ನಿಲ್ಲುವ ಆತ್ಮ ಸ್ಥೈರ್ಯವನ್ನು ಉಂಟು ಮಾಡುವ ಶಿಕ್ಷಣವನ್ನು ಕೊಡುವ ಬದಲು ತಮ್ಮ ರಾಜಕೀಯ ಪಕ್ಷದ ಐಡಿಯಾಲಜಿ ಪ್ರೇರಕ ಶಿಕ್ಷಣದ ಜೊತೆಗೆ ಭಾರತವನ್ನು ದ್ವೇಷಿಸುವ, ತನ್ನ ರಾಷ್ಟ್ರದ ಬಗ್ಗೆ ಕಿಂಚಿತ್ತೂ ಗೌರವ ಹುಟ್ಟಿಸದ ವಿಚಾರಗಳನ್ನು ಪಠ್ಯದಲ್ಲಿ ತುರುಕಿ, ತರಾತುರಿಯಲ್ಲಿ ಯಾರಿಗೂ ತಿಳಿಯದಂತೆ ಪಠ್ಯ ಮುದ್ರಣಕ್ಕೆ ಸಂಪೂರ್ಣ ತಯಾರಿ ನಡೆಸಿರುವುದು ಈ ರಾಜ್ಯದ ಬಡ ಮಕ್ಕಳ ಮೇಲೆ ಮಾಡುತ್ತಿರುವ ಘೋರ ಅನ್ಯಾಯ ಎನ್ನದೆ ವಿಧಿಯಿಲ್ಲ.
ಪುಷ್ಪಕ ವಿಮಾನ..
– ಶಾರದ ಡೈಮಂಡ್
ಅಪ್ಪ ಮಗಳ ನಡುವಿನ ಮುಗ್ಧ ಪ್ರಪಂಚದ ಸುತ್ತ ಹೆಣೆದಿರುವ ಕಥೆ ಈ ಪುಷ್ಪಕ ವಿಮಾನ. ಅವರದ್ದೇ ಭಾವ ಪ್ರಪಂಚದಲ್ಲಿ ಖುಷಿಯಾಗಿ ಮಧುರ ಕ್ಷಣಗಳನ್ನು ಸಂಭ್ರಮಿಸುತ್ತಿದ್ದ ಮನಸ್ಸುಗಳು ಅನ್ಯಾಯವಾಗಿ ಯಾರದೋ ಕ್ರೂರ ಮನಸ್ಸಿನ ಹಠ ಮತ್ತು ಸೇಡಿಗಾಗಿ ಒಡೆದು ದೂರವಾಗೋದೇ ಚಿತ್ರದ ಕಥೆ. ಇದು ರಮೇಶ್ ಅರವಿಂದ್ ರವರ ನೂರನೇ ಚಿತ್ರ . ಅವರ ಜೀವನದ ಮೈಲಿಗಲ್ಲು. ರಮೇಶ್ ಅವರ ಮುಗ್ದಾವತಾರದ ಆ ಅದ್ಭುತ ಅಭಿನಯವನ್ನು ಪದಗಳಲ್ಲಿ ವಿವರಿಸೋದು ಕಷ್ಟ ಸಾಧ್ಯ. ರಮೇಶ್ ಅರವಿಂದರ ಅಭಿಮಾನಿ ಅಂತ ಹೇಳಿಕೊಳ್ಳುವುದೇ ನನಗೆ ಖುಷಿ ವಿಚಾರ. ಅದರಲ್ಲೂ ಈ ಚಿತ್ರದಲ್ಲಿ ಅವರ ಅಭಿನಯವನ್ನು ನೋಡಿದ ಮೇಲೆ ನಿಜವಾಗಲೂ ಅವರ ಅಭಿಮಾನಿ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನಿಸ್ತಾ ಇದೆ. ಮತ್ತಷ್ಟು ಓದು