ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಹುಡುಕಿದರಾ ?
– ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚಿಗೆ ಒಂದು ದಿನ ಬೆಳಿಗ್ಗೆ ರೈಲಿನಲ್ಲಿ ಪ್ರಯಾಣ ಹೊರಟಿದ್ದೆ. ಎಂದಿನಂತೆ 2-3 ದಿನಪತ್ರಿಕೆಗಳನ್ನು ಕೊಂಡು ರೈಲು ಹತ್ತಿ ಕುಳಿತೆ. ರೈಲು ಹೊರಟ ನಂತರ ಒಂದು ದಿನಪತ್ರಿಕೆಯನ್ನು ತೆಗೆದು ಓದಲು ಶುರು ಮಾಡಿದೆ. ಪಕ್ಕದಲ್ಲಿ ಕುಳಿತಿದ್ದ ಹಿರಿಯರೊಬ್ಬರು ನಾನು ಓದುತ್ತಿದ್ದ ಪತ್ರಿಕೆಯ ಕಡೆ ಇಣುಕಿ ಇಣುಕಿ ನೋಡತೊಡಗಿದರು. ಸಣ್ಣದೊಂದು ಮುಗುಳ್ನಗೆಯೊಂದಿಗೆ ನನ್ನಲ್ಲಿದ್ದ ಇನ್ನೊಂದು ದಿನಪತ್ರಿಕೆಯನ್ನು ಅವರಿಗೆ ನೀಡಿ ಓದು ಮುಂದುವರಿಸಿದೆ. ಕೆಲವು ನಿಮಿಷಗಳ ನಂತರ ಆ ಹಿರಿಯರು “ಛೆ, ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಮಾಡ್ಕೋಳೋಕೆ ಹೋದ್ರು” ಅಂತ ಒಂದು ಉದ್ಘಾರ ತೆಗೆದರು. Read more