ವಿಷಯದ ವಿವರಗಳಿಗೆ ದಾಟಿರಿ

Archive for

28
ಫೆಬ್ರ

ನಿಜವಾಗಿ ಭಾಷೆ ಅಂದರೆ ಇಷ್ಟೇಯಾ..?

– ಮಲ್ಲಿ ಶರ್ಮ

eu-languagesಭಾಷೆ. ಭಾಷೆ ಅಂದ್ರೆ ಸಾಕಷ್ಟು ಜನ ಹೇಳೋದೊಂದೇ, “ನಮ್ಮ ಹಿರಿಯರಿಂದಲೇ ಬಂತು, ನಾವು ಅದನ್ನೇ‌ ಬಳಸ್ತಾ ಇದ್ದೇವೆ” ಅಂತಷ್ಟೇ ಹೇಳ್ತಾರೆ.. ಆದರೆ ಅದರ ಮೂಲ, ಅದೆಷ್ಟು ಬದಲಾವಣೆ ಪಡೆದಿದೆ, ಈಗ ಯಾವ ಸ್ಥಿತಿಯಲ್ಲಿದೆ? ಅಂತೆಲ್ಲ ತಿಳಿದೂ ಇರಲ್ಲ, ಅದರ ಕುರಿತು ತಲೆ ಕೆಡಿಸಿಕೊಂಡಂತು ಖಂಡಿತಾ ಇರಲ್ಲ. ಅದರ ಅಗತ್ಯವೂ ಅವರ್ಯಾರಿಗೂ ಇಲ್ಲ. ಭಾಷೆ ಅನ್ನೋದು “ಸಂವಹನ ನಡೆಸಲು ಉಪಯೋಗಿಸುವ ಒಂದಷ್ಟು ಪದಗಳ ಪುಂಜ” ಅಷ್ಟೇ ಎಂದು ಎಲ್ಲರೂ ಡಿಸ್ಕ್ರೈಬ್ ಮಾಡಿ ಡೆಫಿನಿಷನ್ ಕೊಟ್ಟುಬಿಟ್ಟಾರು. ನಿಜವಾಗಿ ಭಾಷೆ ಅಂದರೆ ಅಷ್ಟೇಯಾ!!? ಮತ್ತಷ್ಟು ಓದು »

27
ಫೆಬ್ರ

ಛಡಿ ಏಟಿನಿಂದ ಕ್ರಾಂತಿಯ ಕಿಡಿಯವರೆಗೆ…!

– ಶಿವಾನಂದ ಶಿ ಸೈದಾಪೂರ
(ಎಂ. ಎ. ವಿದ್ಯಾರ್ಥಿ )
ABVP ರಾಜ್ಯ ಕಾರ್ಯಕಾರಿಣಿ ಸದಸ್ಯ .

48345_chandra-shekhar-azad-profileಆವತ್ತು ಒಂದು ದಿನ ಕಾಶಿಯಲ್ಲಿ ದೇಶ ಭಕ್ತರೆಲ್ಲರು ಸೇರಿ ವಂದೇಮಾತರಂ ಘೋಷಣೆ ಕೂಗುತ್ತಾ ಶಾಂತಿಯುತವಾಗಿ ಮೆರವಣಿಗೆ ಹೋಗುತ್ತಿದ್ದ ಸಂದರ್ಭ. ಇದ್ದಕಿದ್ದಂತೆ ದುರಳ ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ದೇಶ ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಶಾಂತಿಯುತವಾಗಿ ಮೆರವಣಿಗೆಯಲ್ಲಿದ್ದವರಿಗೆ ಮನ ಬಂದಂತೆ ತಳಿಸತೊಡಗಿದ್ದರು. ಇದನ್ನು ಗಮನಿಸಿದ ಕಾಶಿವಿದ್ಯಾಪೀಠದಲ್ಲಿ ಅಧ್ಯಯನ ಮಾಡುತಿದ್ದ ಪುಟ್ಟ ಬಾಲಕನೊಬ್ಬ ಬ್ರಿಟಿಷ್ ಪೊಲೀಸರಿಗೆ ಅಟ್ಟಾಡಿಸಿ ಕಲ್ಲು ಹೊಡೆದು ಪರಾರಿಯಾದ. ಆತನ ಬೆನ್ನಟ್ಟಿದ ಪೊಲೀಸರೆ ಓಡಿ ಓಡಿ ಸುಸ್ತಾದರೆ ಹೊರತು ಆತನೇನು ಆವತ್ತು ಸಿಗಲಿಲ್ಲ. ಮರುದಿನ ಯಾರದೋ ಮೊಸದ ಜಾಲದಿಂದ ಆ ಬಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಯ್ದರು. ಆತನ ಪ್ರತಿಯೊಂದು ಮಾತುಗಳನ್ನು ಕೇಳಿ ಜಡ್ಜನೇ ಹೌಹಾರಿದ. ಆ ಪುಟ್ಟ ಬಾಲಕನ ಬಾಯಿಂದ ಅಂತಹುದೆ ಮಾತುಗಳು ಬರುತ್ತಿದ್ದವು. ನಿನ್ನ ಹೆಸರು ಏನೆಂದು ಜಡ್ಜ ಕೇಳಿದರೆ ”ಅಜಾದ್” ಎಂದು ಅಬ್ಬರಿಸಿದ. ಎಲ್ಲಿ ನಿನ್ನ ಮನೆ ಎಂದರೆ ”ಜೈಲು..! ನನ್ನ ಮನೆ” ಎಂದು ಪ್ರತ್ಯುತ್ತರ ನೀಡಿದ ಆ ಬಾಲಕ. ಆ ಪುಟ್ಟ ಬಾಲಕನ ನಿಷ್ಟುರತೆಯನ್ನು ಕಂಡ ಕೋಪಿಷ್ಟ ಜಡ್ಜ ಸಾಹೇಬ್ ೧೫ ಛಡಿ ಏಟಿನ ಶಿಕ್ಷೆ ನೀಡಿದ. ಪ್ರತಿಯೊಂದು ಏಟು ಬಿದ್ದಾಗ ”ವಂದೇಮಾತರಂ”, ”ಭಾರತ್ ಮಾತಾ ಕೀ ಜೈ”, ”ಗಾಂಧೀಜಿ ಕೀ ಜೈ” ಎಂಬುವ ಘೋಷಣೆಗಳು ಆತನ ಬಾಯಿಂದ ಹೊರಡುತಿದ್ದವು. ಆ ಪುಟ್ಟ ಬಾಲಕನೆ ಚಂದ್ರಶೇಖರ್ ಅಜಾದ್. ಅಜಾದರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಜೀವನದ ಮೊದಲ ಮತ್ತು ಕೊನೆಯ ಬಾರಿ ಬ್ರಿಟಿಷ್ ಜೈಲಿನ ಶಿಕ್ಷೆ ಅನುಭವಿಸಿದರು. ಆತನ ಸಾಹಸ ಗಾತೆಯನ್ನು ಕಂಡ ಜನತೆ ಒಂದು ಸಾರ್ವಜನಿಕ ಸಮಾರಂಭ ಏರ್ಪಡಿಸಿದ್ದರು. ಜನರನ್ನು ಉದ್ದೇಶಿಸಿ ಮಾತನಾಡುತ್ತ. ಅಜಾದ್ ”ದುಷ್ಮನೋಂಕಿ ಗೊಲಿಯೋಂ ಸೇ ಮೈ ಸಾಮ್ನಾ ಕರೂಂಗಾ. ಅಜಾದ್ ಹೂಂ ಮೇ ಅಜಾದ್ ಹೀ ರಹೂಂಗಾ” ಎಂದು ಅಬ್ಬರಿಸಿದರು. ಅಕ್ಷರಶ ಅದನ್ನೇ ಕೊನೆಯತನಕ ಪಾಲಿಸಿದ್ದರು. ಮತ್ತಷ್ಟು ಓದು »

25
ಫೆಬ್ರ

ಸತ್ಯಂ ಶಿವಂ ಸುಂದರಂ

– ರೋಹಿತ್ ಚಕ್ರತೀರ್ಥ

shiv-mahapuran“ನೀವು ವಿಜ್ಞಾನ ಬರಹಗಾರರಾಗಿ ದೇವರನ್ನು ನಂಬ್ತೀರಾ?!” ಎಂಬ ಪ್ರಶ್ನೆ ಸಾಧಾರಣವಾಗಿ ಆಗಾಗ ನನ್ನೆದುರು ಬರುತ್ತದೆ. ಹೆಚ್ಚಾಗಿ ಅಂಥ ಸಂದರ್ಭಗಳಲ್ಲೆಲ್ಲ ಪ್ರಶ್ನೆ ಕೇಳಿದವರು ಯಾರು ಎಂಬುದನ್ನು ನೋಡಿಕೊಂಡು ಉತ್ತರ ಕೊಡುತ್ತೇನೆ. ನಿಜವಾಗಿಯೂ ಧಾರ್ಮಿಕರಾಗಿದ್ದು ನನ್ನ ವಿಜ್ಞಾನ ಲೇಖನಗಳನ್ನೂ ಓದಿಕೊಂಡವರು ಕೇಳಿದ್ದರೆ ಸಂಕ್ಷಿಪ್ತವಾಗಿ “ಹೌದು” ಎಂದುಬಿಡುತ್ತೇನೆ. ಆಗ ಅವರಿಗೆ ಖುಷಿಯಾಗುತ್ತದೆ. ಪರವಾಗಿಲ್ಲ, ವಿಜ್ಞಾನ ಗಿಜ್ಞಾನ ಅಂತ ಹೇಳ್ತಿದ್ದರೂ ಹುಡುಗನಿಗೆ ದೈವಭಕ್ತಿ ಇದೆ ಎಂದು ಸಂಭ್ರಮಪಡುತ್ತ ಹೋಗುತ್ತಾರೆ. ಸ್ವಲ್ಪ ವಿಚಾರವಾದಿಗಳ ಹಾಗೆ ಕಂಡರೆ “ನಾನು ಆಸ್ತಿಕ ಎಂದು ಹೇಳಿದ್ದ ಸ್ಟೇಟ್‍ಮೆಂಟ್ ಇದ್ದರೆ ಕೊಡಿ” ಎಂದು ಕೇಳುತ್ತೇನೆ. ಈ ಮನುಷ್ಯ ಅದ್ಯಾಕೋ ಯುದ್ಧಕ್ಕೆ ಅಣಿಯಾಗುತ್ತಿದ್ದಾನೆ ಎಂದು ಭಾವಿಸಿದ ಅವರು ದೇವರನ್ನು ನಂಬುವ ವಿಚಾರವನ್ನು ಅಲ್ಲಿಗೇ ಬಿಟ್ಟು “ಈ ವಾರ ಈರುಳ್ಳಿ ಬೆಲೆ ಏರಿದೆ ನೋಡಿ” ಎಂದು ವಿಷಯಾಂತರ ಮಾಡುತ್ತಾರೆ. ಒಂದೆರಡು ವರ್ಷಗಳ ಹಿಂದೆ ಓರ್ವ ಹಿರಿಯ ವಿಜ್ಞಾನ ಲೇಖಕರೇ ನನಗೆ “ವಿಜ್ಞಾನ ಬರೆಯುವವನಾಗಿ ದೇವರನ್ನು ಹೇಗೆ ನಂಬ್ತೀಯೋ?” ಎಂದು ಕೇಳಿ ಗೊಂದಲಪಡಿಸಿದ್ದರು. “ನನಗೆ ದೇವರ ಬಗ್ಗೆ ಭಕ್ತಿ ಎಂಬುದು ಯಾಕೋ ಅಷ್ಟು ಸುಲಭದಲ್ಲಿ ಬರುವುದಿಲ್ಲ. ದೇವರ ಬಗ್ಗೆ ಕುತೂಹಲ ಇದೆ, ಪ್ರೀತಿ ಇದೆ, ಗೆಳೆತನ ಇದೆ” ಎಂದಿದ್ದೆ. “ಓಹೋ ಹಾಗೋ? ಅಂದರೆ ನೀನು ನಾಸ್ತಿಕನೆಂದಾಯಿತು. ನಾಸ್ತಿಕನಾಗಿದ್ದು ಆಸ್ತಿಕನಂತೆ ಬರೆಯಬೇಡ. ಆಸ್ತಿಕನಾಗಿದ್ದು ನಾಸ್ತಿಕನಂತೆ ಬರೆ” ಎಂದು ಅವರು ಉಪದೇಶ ಮಾಡಿದ್ದರು! ಅಸಲಿಗೆ ನನಗೆ ನಾನು ಆಸ್ತಿಕನೋ ನಾಸ್ತಿಕನೋ ಎಂಬ ಪ್ರಶ್ನೆಯೇ ಪ್ರಮುಖ ಅನ್ನಿಸಿಲ್ಲ. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಯೂ ಈ ಎರಡು ಕೆಟಗರಿಗಳಲ್ಲಿ ಒಂದನ್ನು ಆರಿಸಿಕೊಳ್ಳಲೇಬೇಕು ಎಂದು ಯಾರಾದರೂ ಸರ್ವಾಧಿಕಾರಿ ರೂಲ್ಸು ಮಾಡುವ ತನಕ ನನಗೆ ನಿಶ್ಚಿಂತೆ. ಮತ್ತಷ್ಟು ಓದು »

23
ಫೆಬ್ರ

ಬಿಗ್ ಬಾಸ್ ನಲ್ಲೂ ಮೀಸಲಾತಿಗೆ ಒತ್ತಾಯ (ಸುಳ್ಸುದ್ದಿ)

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiಬಿಗ್ ಬಾಸ್ ನಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು: ಖಾಸಗಿ ಚ್ಯಾನಲ್ ಗಳು ನಡೆಸುವ ಬಿಗ್ ಬಾಸ್ ಸ್ಪರ್ಧೆಗಳಲ್ಲೂ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರಗತಿಪರ ಹೋರಾಟಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದರು. ಚಿನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರ.ಹೋ.ಸಂ. ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಘೋಷಣೆಗಳನ್ನು ಕೂಗಿದರು. ಮತ್ತಷ್ಟು ಓದು »

22
ಫೆಬ್ರ

ದೇವರ ನಾಡಿನಲ್ಲಿ ಮರಣ ಮೃದಂಗ

– ಮಲ್ಲಿ ಶರ್ಮ

dna_illusಬೋಟ್ ಹೌಸ್, ಸರೋವರಗಳು, ಅರಬೀ ಸಮುದ್ರ, ತೆಂಗು ಅಡಿಕೆ ಕೃಷಿ, ಆಹಾ ಈ “GOD’S OWN COUNTRY” ಇದೆಯಲ್ಲಾ, ಅಲ್ಲಿಯ ಟೂರಿಸಂ ಕುರಿತ HD ವಿಡಿಯೋ ಯೂಟ್ಯೂಬಲ್ಲಿ ನೋಡೋವಾಗ ಆಹಾ!!! ಇದಪ್ಪಾ ಸ್ವರ್ಗ ಅಂದ್ರೆ, ಅಂತ ಉದ್ಘಾರ ತೆಗೆದುಬಿಡ್ತಾರೆ ಪ್ರತಿಯೊಬ್ಬರೂ. ಆದರೆ ದೇವರ ಸ್ವಂತ ನಾಡಾದ ಕೇರಳದಲ್ಲಿ ಭಯಾನಕ ರಾಕ್ಷಸರು ಬೀಡು ಬಿಟ್ಟಿರೋ ಸಂಗತಿ ನಿಮಗೆಷ್ಟು ಗೊತ್ತು? ಮತ್ತಷ್ಟು ಓದು »

22
ಫೆಬ್ರ

ಐದು ಮೂಲೆ ಮನೆ

– ಗುರುರಾಜ ಕೊಡ್ಕಣಿ. ಯಲ್ಲಾಪುರ

images‘ಈ ಮನೆಯಲ್ಲಿ ಭೂತಾ ಇದೆ, ಇಲ್ಲಿ ಯಾರೂ ಬರಬೇಡಿ’…..

ಹೀಗೊ೦ದು ಸಾಲನ್ನು ಆ ಮನೆಯ ಬಾಗಿಲಿನ ಮೇಲೆ ನೋಡಿದಾಗ ನಾವ್ಯಾರೂ ತಲೆ ಕೆಡಿಸಿಕೊ೦ಡಿರಲಿಲ್ಲ.ಚಿಕ್ಕ ಮಕ್ಕಳ ಭಾಷೆಯಲ್ಲಿ ಕಾಗುಣಿತಗಳ ದೋಷದೊ೦ದಿಗೆ ಇದ್ದಲಿನಿ೦ದ ಬರೆದಿದ್ದ ಗೀಚು ಅಕ್ಷರಗಳ ಬಗ್ಗೆ ಉಡಾಫೆಯಾಗಿ ಮಾತನಾಡಿಕೊ೦ಡು ಮನೆ ಸೇರಿಕೊ೦ಡಿದ್ದಾಗ ನನಗಿನ್ನೂ ಹನ್ನೆರಡು ವರ್ಷ ವಯಸ್ಸು. ಹಳೆಯ ಮನೆಯ ಮಾಲೀಕ ಏಕಾಏಕಿ ಬಾಡಿಗೆ ಜಾಸ್ತಿ ಮಾಡಿದನ್ನೆನ್ನುವ ಕಾರಣಕ್ಕೆ ಅವಸವಸರವಾಗಿ ಮನೆ ಬಿಡಬೇಕಾಗಿ ಬ೦ದಿತ್ತು. ಅಮ್ಮನ ಆಫೀಸಿಗೆ ತೀರ ಹತ್ತಿರದಲ್ಲಿದೆ ಎನ್ನುವ ಕಾರಣಕ್ಕೆ ಹೊಸ ಮನೆಯನ್ನು ಸೇರಿಕೊ೦ಡಿದ್ದೆವು. ಒ೦ದು ಸಾಧಾರಣ ಮನೆಯದು.ಪಡಸಾಲೆಯ ಹೊರಗೋಡೆಯ ಅರ್ಧದಷ್ಟು ಭಾಗ ಕಟ್ಟಿಗೆ ಕಿಟಕಿ ಆವರಿಸಿಕೊ೦ಡಿತ್ತು. ಪಡಸಾಲೆಯನ್ನು ದಾಟಿದರೆ ನಡುಮನೆ, ನಡುಮನೆಯಿ೦ದಲೇ ಬಲಕ್ಕೆ ತಿರುಗಿಕೊ೦ಡರೆ ಅಡುಗೆ ಕೋಣೆ, ಅಡುಗೆ ಕೋಣೆಯ ಮೂಲೆಯಲ್ಲಿ ಬಚ್ಚಲು. ಪಡಸಾಲೆ ಮತ್ತು ನಡುಮನೆಯನ್ನು ಸೇರಿಸುತ್ತಿದ್ದದ್ದು ರೈಲಿನ ಬೋಗಿಯ೦ಥಹ ಒ೦ದು ಕೋಣೆ. ಮತ್ತಷ್ಟು ಓದು »

21
ಫೆಬ್ರ

ವಿಶ್ವವನ್ನೇ ಅಚ್ಚರಿಯ ತೆಕ್ಕೆಗೆ ಸೆಳೆಯುವ ಭಾರತದ ದೈತ್ಯ

– ಸುರೇಶ್ ಮುಗಬಾಳ್

isroತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ತನ್ನ ಆಸೆ ಈಡೇರದೆ ಸೆರೆಮನೆಯತ್ತ ಮುಖಮಾಡಿದಾಗ, ಇತ್ತ ಇಡೀ ಪ್ರಪಂಚವೇ ನಮ್ಮ ದೇಶದತ್ತ ಮುಖಮಾಡಿತ್ತು. ಶಶಿಕಲಾ ಸೆರೆಮನೆಗೆ ಹೋಗುವುದನ್ನು ನೋಡಲಿಕ್ಕಲ್ಲಾ, ನಮ್ಮ ಹೆಮ್ಮೆಯ ISRO ( Indian Space Research Organisation) PSLV-C37 ಗ್ರಹ ನೌಕೆಯ ಸಹಾಯದಿಂದ 104 ಉಪಗ್ರಹಗಳನ್ನು ಒಂದೇ ಬಾರಿಗೆ ಕಕ್ಷೆಗೆ ಸೇರಿಸುವುದರೊಂದಿಗೆ ಯಾರೂ ಮಾಡದ ಸಾಧನೆಗೆ ಕೈ ಹಾಕಿದೆ ಎಂದು. ಅಚ್ಚರಿ ಪಡಲೇಬೇಕು..! ಏಕೆ ಗೊತ್ತೇ? ಭಾರತೀಯ ಟಿ.ವಿ. ಮಾಧ್ಯಮಗಳು ಇಡೀ ದಿನ ಶಶಿಕಲಾರ ಬಗ್ಗೆ ಪ್ರಸಾರ ಮಾಡುತ್ತಿದ್ದರೆ ಅಲ್ಲೆಲ್ಲೋ ಅಮೇರಿಕಾ, ಸ್ವಿಡ್ಜರ್ಲ್ಯಾಂಡ್, ನೆದರ್ಲ್ಯಾಡ್, ಯು.ಎ.ಇ., ಇಸ್ರೇಲ್, ಖಜಕೀಸ್ತಾನ್ ದೇಶಗಳು ತಮ್ಮ ಮಾಧ್ಯಮಗಳ ತಲೆಪಂಕ್ತಿಯಲ್ಲಿ (Headlines) ನಮ್ಮ ದೇಶದ ಸಾಧನೆಯನ್ನು ಬಿತ್ತರಿಸಿದವು. ತಮ್ಮದೇ ದೇಶದ ವಿಜ್ಞಾನಿಗಳು ಭೂಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದವರಂತೆ ಅಲ್ಲಿನ ಪ್ರಜೆಗಳು ಖುಷಿಪಟ್ಟುಕೊಂಡರು. ನಮ್ಮ ಟಿ.ವಿ.ಮಾಧ್ಯಮಗಳ ಕತೆಯೇ ಬೇರೆ, ಸುದ್ದಿ ಬಿತ್ತರಿಸುವಾಗ ಗಮನಾರ್ಹವಾದ ಸುದ್ದಿಗಳು 2-3 ನಿಮಿಷಗಳಿಗಷ್ಟೇ ಸೀಮಿತವಾಗಿಸಿಬಿಡುತ್ತವೆ. ಅದೇ ಕೊಳಕು ರಾಜಕೀಯವು ಮಾಧ್ಯಮಗಳ ತುಂಬೆಲ್ಲಾ ಹರಡಿರುತ್ತದೆ. ಚೀನಾದ ಪ್ರಮುಖ ಪತ್ರಿಕೆಯೊಂದು ಭಾರತದ ಈ ಸಾಧನೆಯನ್ನು ಕೊಂಡಾಡಿ, ಸಂಪಾದಕೀಯದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿತ್ತು. ಮತ್ತಷ್ಟು ಓದು »

20
ಫೆಬ್ರ

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )

– ವಿನಾಯಕ ವಿಶ್ವನಾಥ ಹಂಪಿಹೊಳಿ

muslim-talakಮುಸ್ಲಿಂ ಪರಂಪರೆಗಳಲ್ಲಿ ಮೂರು ಬಾರಿ ತಲಾಕ್ ಹೇಳಿ ಇದ್ದಕ್ಕಿದ್ದಂತೇ ಹೆಂಡತಿಯನ್ನು ತ್ಯಜಿಸುವ ಕ್ರಿಯೆ ಭಾರತೀಯರಿಗೆ ಅನೈತಿಕವಾಗಿ ಕಾಣಲು ಆ ಕ್ರಿಯೆಯಿಂದ ಒಂದು ಹೆಣ್ಣಿನ ಮನಸ್ಸಿಗೆ ಉಂಟಾಗುವ ನೋವಷ್ಟೇ ಸಾಕಾಗಿರುತ್ತದೆ. ಆದರೆ ನಾವು ಆ ಕ್ರಿಯೆಯನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ವ್ಯಾಖ್ಯಾನಿಸುವರ ಮೂಲಕ ಟೀಕಿಸುತ್ತೇವೆ. ಮೂಲತಃ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಪರಿಕಲ್ಪನೆಯಿಂದ ಬಂದ ಈ ಸಮಾನತೆಯ ಪರಿಕಲ್ಪನೆಯು ಭಾರತೀಯ ಮುಸ್ಲಿಮರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ವಿರೋಧವನ್ನು ಮುಸ್ಲಿಮರು ಇಸ್ಲಾಂ ವೈಯಕ್ತಿಕ ಕಾನೂನಿನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಅನುಷ್ಠಾನವಾಗಿ ನೋಡುತ್ತಾರೆ. ಲಿಬರಲ್ ವಿಚಾರವಂತರು ಮುಸ್ಲಿಮರ ನಿಲುವನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ನೋಡುತ್ತಾರೆ. ನಾವು ನಮ್ಮ ಸಂಪ್ರದಾಯಗಳ ಕುರಿತು ಹಿಂದಿನಿಂದ ಬೆಳೆದು ಬಂದ ಟೀಕೆಗಳ ಪರಂಪರೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಈಗ ಬರುತ್ತಿರುವ ಹೊಸ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಹಾಗೂ ಪ್ರತಿಕ್ರಿಯಿಸಬೇಕು ಎನ್ನುವುದರ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕಿದೆ. ಮತ್ತಷ್ಟು ಓದು »

20
ಫೆಬ್ರ

ಪ್ರಬಂಧ ಸ್ಪರ್ಧೆ – ೧ : ನಮ್ಮೂರ ಹಬ್ಬ


ಭಾರತದ ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ವಿಶಿಷ್ಟ ಹಬ್ಬಗಳನ್ನು ರೂಢಿಸಿ ಆಚರಿಸಿಕೊಂಡು ಬಂದಿದೆ. ಈ ಹಬ್ಬಗಳಲ್ಲಿ ಊರಿನ ಎಲ್ಲ ಜನರೂ ಭಾಗವಹಿಸುತ್ತಾರೆ. ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿರುವ ಈ ಹಬ್ಬಗಳು ಆಯಾ ಊರಿನ ಅವಿಭಾಜ್ಯ ಅಂಗಗಳಾಗಿರುತ್ತವೆ. ಒಂದೊಂದು ಹಳ್ಳಿಯ ಹಬ್ಬವೂ ತನ್ನದೇ ವಿಶಿಷ್ಟವಾದ ಆಚರಣೆಗಳಿಂದ ಕೂಡಿರುತ್ತವೆ. ಆದರೆ ಇಂತಹ ಅನೇಕ ಹಬ್ಬಗಳು ಹಾಗೂ ಅವುಗಳಲ್ಲಿ ಆಚರಿಸಲ್ಪಡುವ ನೂರಾರು ಸೂಕ್ಷ್ಮ ಆಚರಣೆಗಳ ವಿವರಗಳು ಇಂದಿಗೂ ಕೂಡ ಕನ್ನಡಿಗರಿಗೆ ಗೊತ್ತಿಲ್ಲ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇವಲ ಕೆಲವೇ ಕೆಲವು ಜಾತ್ರೆಗಳ ಹಾಗೂ ಹಬ್ಬಗಳ ಸುದ್ದಿಗಳು ಬರುತ್ತವೆ. ಇನ್ನು ನಮ್ಮ ಹಬ್ಬಗಳ ಕುರಿತ ಸಮಾಜ ಶಾಸ್ತ್ರೀಯ ವಿವರಣೆಗಳಂತೂ ಬುದ್ಧಿಜೀವಿಗಳಿಗೇ ಪ್ರೀತಿ. ಮತ್ತಷ್ಟು ಓದು »

20
ಫೆಬ್ರ

ಬೆಲೆಯಿಲ್ಲದ ಬದುಕು..!

– ಗೀತಾ ಹೆಗ್ಡೆ

21happy1ಇದು ಕಾಲನ ನಿಯಂತ್ರಣದಲ್ಲಿ ಕಳೆಯುತ್ತಿರುವ ಕಾಲವೊ ಅಥವಾ ಮನುಜ ತಾನಾಗಿ ತಂದುಕೊಂಡ ಅತಿ ಆಸೆಯ ಫಲವೊ ಯಾವುದು ನನ್ನ ನಿರ್ಧಾರಕ್ಕೆ ಸಿಗುತ್ತಿಲ್ಲ. ಯೋಚಿಸುತ್ತ ಕುಳಿತರೆ ಹಗಲಂತೂ ನಿದ್ದೆ ಬರೋಲ್ಲ ಬಿಡಿ ; ರಾತ್ರಿಯ ನಿದ್ರೆಯನ್ನೂ ಕಸಿದು ಕೊಳ್ಳುವಷ್ಟು ಕ್ರೂರಿ.  ನಿರಾತಂಕವಾದ ಬದುಕು ಕಾಣುವ ಹಂಬಲ ಕೊನೆ ಗಾಲದಲ್ಲಿ ಅದೆಷ್ಟು ಮನೆ ಮಾಡಿತ್ತೊ ಹರೆಯದಲ್ಲಿ ; ಅದೆ ರೀತಿ ಹಿಂದೆ ತಿರುಗಿ ನೋಡಿದಾಗ ಹರೆಯದ ಕನಸೂ ಅಂದುಕೊಂಡಂತೆ ಸಾಕಾರವಾಗದ ನೆನಪು ಬಿಚ್ಚಿಕೊಳ್ಳುವುದು ಇಳಿ ವಯಸ್ಸಿನಲ್ಲಿ.. ಆದರೂ ಬದುಕಿನೊಂದಿಗಿನ ಪ್ರೀತಿ ಸಾಯೋದೆ ಇಲ್ಲ.  ಮತ್ತೆ ವಯಸ್ಸಿಗೆ ತಕ್ಕಂತೆ ಅಥವಾ ಕಾಲಕ್ಕೆ ತಕ್ಕಂತೆ ಮನಸ್ಸು ಬದಲಾಯಿಸಿಕೊಳ್ಳುತ್ತ ತೃಪ್ತಿ ಕಾಣಲು ಹವಣಿಸುತ್ತದೆ ಮನ.  ಗಾದೆ ಇದೆಯಲ್ಲ “ಬಿದ್ದರೂ ಮೂಗು ಮೇಲೆ” ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮ ಈ ಮನಸ್ಸು. ಆದರೆ ಜೀವನ ಯಾವಾಗ, ಹೇಗೆ, ಯಾವ ರೀತಿ ತಿರುವು ಪಡೆಯುತ್ತದೆ ಅನ್ನುವುದು ಯಾರಿಗೂ ಗೊತ್ತಾಗುವುದೆ ಇಲ್ಲ.  ನಾವಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ.  ನಮ್ಮೆದುರಿಗೆ ಕಾಣುವುದೆಲ್ಲ ಸತ್ಯ ಅಂತ ನಾವಂದುಕೊಳ್ಳುತ್ತೇವೆ.  ಆದರೆ ಅಲ್ಲಿ ಹಾಗಿರೋದೆ ಇಲ್ಲ.  ಆ ನಿಯಾಮಕ ಇನ್ನೇನೊ ಬರೆದಿರುತ್ತಾನೆ.  ಅದು ಗೊತ್ತಾಗುವುದು ಕಾಲ ಸರಿದಂತೆ ಅದರ ಪ್ರಭಾವ ಅರಿವಾಗುತ್ತ ನಡೆಯುತ್ತದೆ.  ಅದಕ್ಕೆ ಮನುಷ್ಯನಿಗೆ. ಜೀವನದ ಅರಿವಾಗುತ್ತ ನಡೆಯುವುದು ವಯಸ್ಸಾದಂತೆ.  ಹರೆಯದಲ್ಲಿ ಅದೆಷ್ಟು ಬಿಸಿ ರಕ್ತದ ಉಮೇದಿಯಲ್ಲಿ ಉರಿದಿರುತ್ತಾನೊ ವಯಸ್ಸಾದಂತೆ ಅಷ್ಟೆ ಪಾತಾಳದತ್ತ ಅವನ ಮನಸ್ಸು.  ಆಗ ಅವನ ಬಾಯಲ್ಲಿ ವೇದಾಂತ, ಸತ್ಸಂಗ, ಆಶ್ರಮ ಕಾಣುವುದು.  ಮಾತು, ನಡೆ, ನುಡಿ ಎಲ್ಲ ಬದಲಾಗುವುದು. ಮತ್ತಷ್ಟು ಓದು »