ವಿಷಯದ ವಿವರಗಳಿಗೆ ದಾಟಿರಿ

Archive for

15
ಜನ

7ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ…

nilume-7-yearsನಿಲುಮೆ ವೆಬ್ ತಾಣ ಶುರುವಾಗಿ 6ವರ್ಷಗಳನ್ನು ಪೂರೈಸಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಕ್ರಮಣದ ದಿನವಿದು. 5ನೇ ವರ್ಷದ ಸಂಭ್ರಮದಲ್ಲಿ,ನಿಲುಮೆ ಪ್ರಕಾಶನ ಶುರುವಾಗುವ ಹಂತದಲ್ಲಿದ್ದಾಗ,ನಿಲುಮೆಯ ಮೇಲೆ ಕರ್ನಾಟಕದ ಬೌದ್ಧಿಕ ಫ್ಯಾಸಿಸಂನ ದಾಳಿಯಾಗಿತ್ತು.ಹಾಗೇ ದಾಳಿ ಮಾಡಿದವರ ಪೈಕಿ ಹೇಗಿದೆ 5ನೇ ವರ್ಷದ ಗಿಫ್ಟು ಎಂದು ಕುಹುಕವಾಡಿದ್ದರು.ಅದಾದ ನಂತರದ ವಿಷಯಗಳೆಲ್ಲ ನಿಮಗೇ ತಿಳಿದಿವೆ.ಕನ್ನಡ ಪ್ರಭ ಪತ್ರಿಕೆಯೂ ಆ ಎಪಿಸೋಡಿನ ಬಗ್ಗೆ ವಿಸ್ತೃತ ವರದಿ ಮಾಡಿತು.ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಮುಖಾಮುಖಿ ಚರ್ಚೆಯೂ ನಡೆಯಿತು.

ಆ ಚರ್ಚೆಯ ಅಂತ್ಯದಲ್ಲಿ, ”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ” ಎಂದು ಹೇಳಿ,ನಿಲುಮೆಯು ಸಾಗಿ ಬಂದ ಮತ್ತು ಸಾಗಲಿರುವ ಮಾರ್ಗದ ಬಗ್ಗೆ ಸ್ಪಷ್ಟ ಸಂದೇಶವನ್ನು ಕೊಟ್ಟೆವು. ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಎನ್ನುವುದಕ್ಕೆ ಸಾಕ್ಷಿಯಾಗಿ,5ನೇ ವರ್ಷಾಚರಣೆಯ ಸಂದರ್ಭದಲ್ಲಿ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ.ಕನಿಷ್ಟ ಐದು ಪುಸ್ತಕಗಳನ್ನಾದರೂ ನಾವು ಪ್ರಕಟಿಸುವ ಇರಾದೆಯಿತ್ತು. ಆದರೆ,ನಮ್ಮ ಇತರೆ ಕೆಲಸ-ಕಾರ್ಯಗಳು ಮತ್ತು ಪುಸ್ತಕ ಮುದ್ರಣಕ್ಕೆ ಬೇಕಾಗುವ ಸಂಪನ್ಮೂಲಗಳ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ಪುಸ್ತಕಗಳಷ್ಟೇ ಸಾಧ್ಯವಾಗಿದ್ದು. 2016ರಲ್ಲಿ ನಿಲುಮೆ ಪ್ರಕಾಶನ ಸ್ತಬ್ಧವಾಗಿತ್ತು ಎಂಬುದನ್ನು ನಿಮ್ಮ ಮುಂದೆ ಮಂಡಿಯೂರಿ ಒಪ್ಪಿಕೊಳ್ಳುತ್ತೇವೆ.

ಈ ವರ್ಷ ನಿಲುಮೆಯ ಹೆಜ್ಜೆ ಗುರುತುಗಳು….

1.ಹೈದರಾಬಾದಿನ ಯುನಿವರ್ಸಿಟಿಯಲ್ಲಿ ರೋಹಿತ್ ವೇಮುಲಾ ಎಂಬ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವನ್ನಿಡಿದುಕೊಂಡು ದೇಶಾದಾದ್ಯಂತ ಗಂಜಿಗಿರಾಕಿಗಳು ಬೊಬ್ಬೆಯಿಟ್ಟಾಗ,ನಿಲುಮೆ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶವನ್ನು ಓದೌಗರ ಮುಂದೆ ಇಡುವ ಕೆಲಸವನ್ನು ಮಾಡಿದೆ.
2.ಉಗ್ರ ಅಫ್ಜಲ್ ಗುರುವನ್ನು ಬೆಂಬಲಿಸಿ,ಕಾಶ್ಮೀರದ ಆಜಾದಿ ಘೋಷಣೆಗಳನ್ನು ಕೂಗಿದ್ದ ಜೆ.ಎನ್.ಯು ವಿವಿಯ ಕನ್ನಯ್ಯ ಕುಮಾರನ ಪಟಾಲಂನ ವಿರುದ್ಧ ನಡೆದ ಆನ್ಲೈನ್ ಹೋರಾಟದಲ್ಲು ನಿಲುಮೆ ಬಳಗ ಸಕ್ರೀಯವಾಗಿತ್ತು.
3.೨೦೧೬ರ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯ JNUವಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿ ಬಂದಾಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.ಅದಾದ ಕೆಲವೇ ದಿನಗಳಲ್ಲಿ ಬಂಗಾಳದಲ್ಲೂ ಇದೇ ಬಗೆಯ ಘೋಷಣೆಗಳ ಸುದ್ದಿಯಾಗಿತ್ತು. ಜುಲೈ ೯ನೇ ತಾರೀಖು ಜಮ್ಮುಕಾಶ್ಮೀರ ರಾಜ್ಯದಲ್ಲಿ ಉಗ್ರ ಬರ್ಹನ್ ವಾನಿಯ ಹತ್ಯೆಯಾದ ನಂತರ,ಆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ, ಕೆಲವು ಅರ್ಬನ್ ನಕ್ಸಲರು ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ತಯಾರಾಗಿದ್ದ ಹೊರಟಿದ್ದರು. ಇವರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು.

Read more »

15
ಜನ

ಶಿಲೆಯೊಂದು ಶಿಲ್ಪವಾಗಿ, ಪರಕಾಯ ಪ್ರವೇಶವಾಗಿ, ಸಮರಭೂಮಿಗೆ ಸಿದ್ಧವಾಗುವ ರಾಷ್ಟ್ರಶಕ್ತಿ

– ಸಂತೋಷ್ ತಮ್ಮಯ್ಯ

military_static-image೧೯೪೯ರ ಜನವರಿ ೧೫ ರಂದು ಫಿಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ದಿನವನ್ನು ‘ಭಾರತೀಯ ಸೈನ್ಯ ದಿನಾಚರಣೆ ಎಂದು ಆಚರಿಸಲಾಗುತ್ತವೆ. ‘ಭಾರತದ ಗೌರವವನ್ನು ರಕ್ಷಿಸಿದ, ವಿದೇಶಗಳಿಂದಲೂ ಹೊಗಳಿಸಿಕೊಂಡ, ಬೃಹತ್ ಪಡೆಗಳನ್ನ್ನು ಹೊಂದಿರುವ ‘ಭಾರತೀಯ ಸೇನೆ ವಿಶ್ವದ ಹಲವು ದೇಶಗಳ ಮಿಲಿಟರಿಗೆ ಮಾರ್ಗದರ್ಶನ ನೀಡಿದ ಹಿರಿಮೆಯಿದೆ. ವಿಶ್ವದ ಹಲವು ಸವಾಲುಗಳನ್ನು ‘ಭಾರತೀಯ ಸೇನೆ ಎದುರಿಸಿದೆ. ವಿಶ್ವ ಶಾಂತಿಗೆ ಭಾರತೀಯ ಸೇನೆಯ ಕೊಡುಗೆಯನ್ನು ವಿಶ್ವಸಂಸ್ಥೆ ಇಂದಿಗೂ ಕೊಂಡಾಡುತ್ತಿದೆ. ಅವೆಲ್ಲಕ್ಕೂ ಕಾರಣ ಸೈನ್ಯದ ಅಸಲಿ ಶಕ್ತಿಯಾದ ‘ಭಾರತೀಯ ಯೋಧ‘ರು. ಅವರಿಗೆ ನಮ್ಮ ನಮನ. Read more »

15
ಜನ

ವೇಮುಲ ಸಾವಿನ ಬಗ್ಗೆ ಮಾತಾಡಿದವರು ಈಗೆಲ್ಲಿಹರು..?

– ಶಾರದ ಡೈಮಂಡ್

15966189_1689221931091685_622901462958428392_nನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಮುಗ್ದ ಜೀವಿಯೊಂದು ಕಾಣದ ಕೈಗಳ ಕೈವಾಡಕ್ಕೆ ಬಲಿಯಾಗಿದೆ. ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಮತ್ತೊಂದು ಜೀವ ಮಣ್ಣಾಗಿಹೋಯಿತು. ಓದುವುದರಲ್ಲಿ ಬುದ್ಧಿವಂತನಾಗಿದ್ದ, ಸೌಮ್ಯ ಸ್ವಭಾವದವನಾದ ಅಭಿಷೇಕ್ ಮೂರು ಕುಟುಂಬಗಳಿಗೆ ಸ್ವಂತ ಮಗನಂತೆಯೇ ಇದ್ದ. ಸರ್ಕಾರಿ ಕೆಲಸವೊಂದಕ್ಕೆ ಸೇರಿ ತನ್ನನ್ನು ಕಷ್ಟಪಟ್ಟು ಸಾಕುತ್ತಿರುವ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ಅವನ ಕನಸಾಗಿತ್ತು. ಶೃಂಗೇರಿಯ ಜೆಸಿಬಿಎಮ್ ಕಾಲೇಜಿನ ಬಿ.ಕಾಂ ಕೊನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ ಎಂ.ಕೆ ಎಂಬ ಹುಡುಗ ಪ್ರಸಕ್ತ ವರ್ಷದ ಕಾಲೇಜಿನ ವಾಣಿಜ್ಯ ಸಂಘದ ಅಧ್ಯಕ್ಷ! ಚೆನ್ನಾಗಿ ಓದುತ್ತಿರುವ ಆಲ್ ರೌಂಡರ್ ವಿದ್ಯಾರ್ಥಿಗಳನ್ನು ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸಂಘಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರನ್ನಾಗಿ ಕಾಲೇಜಿನವರೇ ನೇಮಿಸುತ್ತಾರೆ. ನೇಮಿಸುವಾಗ ಅವನು ಯಾವ ಸಂಘಟನೆಯವನೆಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ಉತ್ತಮ ವಿದ್ಯಾರ್ಥಿಯಾದ ಅಭಿಷೇಕ್ ವಾಣಿಜ್ಯ ಸಂಘವನ್ನು ಹೊರತುಪಡಿಸಿ ತನ್ನನ್ನು ತಾನು ಎಬಿವಿಪಿ ಯಲ್ಲಿ ಗುರುತಿಸಿಕೊಂಡಿದ್ದೇ ಜೀವಕ್ಕೆ ಮುಳ್ಳಾಗುವ ಹಾಗಾಯಿತು. ಜನವರಿ ಏಳರಂದು ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಜಂಟಿಯಾಗಿ ಸೈನಿಕರಿಗೆ ಗೌರವ ಸಲ್ಲಿಸುವ “ಯೋಧನಮನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. Read more »

12
ಜನ

ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಹುಡುಕಿದರಾ ?

– ಪ್ರವೀಣ್ ಕುಮಾರ್, ಮಾವಿನಕಾಡು

baraguruಇತ್ತೀಚಿಗೆ ಒಂದು ದಿನ ಬೆಳಿಗ್ಗೆ ರೈಲಿನಲ್ಲಿ ಪ್ರಯಾಣ ಹೊರಟಿದ್ದೆ. ಎಂದಿನಂತೆ 2-3 ದಿನಪತ್ರಿಕೆಗಳನ್ನು ಕೊಂಡು ರೈಲು ಹತ್ತಿ ಕುಳಿತೆ. ರೈಲು ಹೊರಟ ನಂತರ ಒಂದು ದಿನಪತ್ರಿಕೆಯನ್ನು ತೆಗೆದು ಓದಲು ಶುರು ಮಾಡಿದೆ. ಪಕ್ಕದಲ್ಲಿ ಕುಳಿತಿದ್ದ ಹಿರಿಯರೊಬ್ಬರು ನಾನು ಓದುತ್ತಿದ್ದ ಪತ್ರಿಕೆಯ ಕಡೆ ಇಣುಕಿ ಇಣುಕಿ ನೋಡತೊಡಗಿದರು. ಸಣ್ಣದೊಂದು ಮುಗುಳ್ನಗೆಯೊಂದಿಗೆ ನನ್ನಲ್ಲಿದ್ದ ಇನ್ನೊಂದು ದಿನಪತ್ರಿಕೆಯನ್ನು ಅವರಿಗೆ ನೀಡಿ ಓದು ಮುಂದುವರಿಸಿದೆ. ಕೆಲವು ನಿಮಿಷಗಳ ನಂತರ ಆ ಹಿರಿಯರು “ಛೆ, ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಮಾಡ್ಕೋಳೋಕೆ ಹೋದ್ರು” ಅಂತ ಒಂದು ಉದ್ಘಾರ ತೆಗೆದರು. Read more »

10
ಜನ

ಸರ್ಕಾರಿ ಶಾಲೆಯಲ್ಲಿ ಓದುವ ಬಡವರ ಮಕ್ಕಳು ಯಾವ ಪಾಪ ಮಾಡಿದ್ದರು ಸಿದ್ದಣ್ಣನವರೇ …… 

– ಅರುಣ್ ಬಿನ್ನದಿ

unnamedನೀಟ್ ಎಕ್ಸಾಂ ನಲ್ಲಿ ಕನ್ನಡಕ್ಕೆ ಅವಕಾಶ ಸಿಗದಂತೆ ಆಗಿರುವುದು ರಾಜ್ಯದ ತಪ್ಪಿನಿಂದಲೇ ಎಂದು ಸಾಬೀತಾಗುತ್ತಿದ್ದಂತೆ ರಾಜ್ಯಸರ್ಕಾರ ಎಚ್ಛೆತ್ತು ತಪ್ಪು ತಿದ್ದಲು ಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿತ್ತು, ಆದರೆ ಅದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಪರಿಜ್ಞಾನವಿದ್ದಂತಿಲ್ಲ. ಪಿಯುಸಿ ಮಕ್ಕಳು ಸಿ.ಬಿ.ಎಸ್.ಸಿ ಪಠ್ಯಕ್ರಮದ ಕನ್ನಡ ಅವತರಿಣಿಕೆಯನ್ನು ಓದುತ್ತಿರುವ ಸಮಯದಲ್ಲಿ ಒಮ್ಮೆಲೇ ಹತ್ತರವರೆಗೆ ರಾಜ್ಯದ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ಪಿಯುಸಿಯಲ್ಲಿ ಕಷ್ಟವಾಗಿ ಮುಂದಿನ ಶೈಕ್ಷಣಿಕ ಜೀವನದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾದ ನಿರೀಕ್ಷೆ ಇದ್ದಾಗ್ಯೂ ಸಹ ಅದಕ್ಕೆ ಸಂಬಂಧಿಸಿದ ಯಾವುದೇ ಚಿಂತನೆಗಳು ನಡೆದಿಲ್ಲ. ಆದರೆ ರಾಜ್ಯದಲ್ಲಿ ರಹಸ್ಯ ಕೋಣೆಯಲ್ಲಿ, ನಿಗೂಢವಾಗಿ, ಕೆಲವೇ ಕೆಲವು ಬುದ್ದಿಜೀವಿಗಳು ಮಾಡಿದ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಪಠ್ಯ ಪರಿಷ್ಕರಣೆಯಲ್ಲಿ, ಕಮ್ಯುನಿಸಂ ಐಡಿಯಾಲಜಿಯನ್ನು ಹೇರಿ, ರಾಜ್ಯದ ಮಕ್ಕಳನ್ನು ಮಾರ್ಕ್ಸ್ ಸಿದ್ದಾಂತದ ಪೊಲಿಟಿಕಲ್ ಪಕ್ಷದ ಕಾರ್ಯಕರ್ತರನ್ನು ಸೃಷ್ಟಿಸುವ ಕಾರ್ಯಕ್ಕೆ ಸಿದ್ದರಾಮಯ್ಯನವರು, ಬರಗೂರು ರಾಮಚಂದ್ರರ ಕೈಯಲ್ಲಿ ಅಡಿಗಲ್ಲನ್ನು ಹಾಕಿಸಲು ಎಲ್ಲ ಸಿದ್ದತೆಯನ್ನು ಮಾಡಿಸಿದ್ದಾರೆ. ೨೧ ನೇ ಶತಮಾನದಲ್ಲಿ ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿನ ಸ್ಪರ್ಧಾತ್ಮಕ ಬದುಕಿಗೆ ಎದೆ ಕೊಟ್ಟು ನಿಲ್ಲುವ ಆತ್ಮ ಸ್ಥೈರ್ಯವನ್ನು ಉಂಟು ಮಾಡುವ ಶಿಕ್ಷಣವನ್ನು ಕೊಡುವ ಬದಲು ತಮ್ಮ ರಾಜಕೀಯ ಪಕ್ಷದ ಐಡಿಯಾಲಜಿ ಪ್ರೇರಕ ಶಿಕ್ಷಣದ ಜೊತೆಗೆ ಭಾರತವನ್ನು ದ್ವೇಷಿಸುವ, ತನ್ನ ರಾಷ್ಟ್ರದ ಬಗ್ಗೆ ಕಿಂಚಿತ್ತೂ ಗೌರವ ಹುಟ್ಟಿಸದ ವಿಚಾರಗಳನ್ನು ಪಠ್ಯದಲ್ಲಿ ತುರುಕಿ, ತರಾತುರಿಯಲ್ಲಿ ಯಾರಿಗೂ ತಿಳಿಯದಂತೆ ಪಠ್ಯ ಮುದ್ರಣಕ್ಕೆ ಸಂಪೂರ್ಣ ತಯಾರಿ ನಡೆಸಿರುವುದು ಈ ರಾಜ್ಯದ ಬಡ ಮಕ್ಕಳ ಮೇಲೆ ಮಾಡುತ್ತಿರುವ ಘೋರ ಅನ್ಯಾಯ ಎನ್ನದೆ ವಿಧಿಯಿಲ್ಲ.

Read more »

10
ಜನ

ಪುಷ್ಪಕ ವಿಮಾನ..

– ಶಾರದ ಡೈಮಂಡ್

14484588_2162752720617409_3032744761678173016_nಅಪ್ಪ ಮಗಳ ನಡುವಿನ ಮುಗ್ಧ ಪ್ರಪಂಚದ ಸುತ್ತ ಹೆಣೆದಿರುವ ಕಥೆ ಈ ಪುಷ್ಪಕ ವಿಮಾನ. ಅವರದ್ದೇ ಭಾವ ಪ್ರಪಂಚದಲ್ಲಿ ಖುಷಿಯಾಗಿ ಮಧುರ ಕ್ಷಣಗಳನ್ನು ಸಂಭ್ರಮಿಸುತ್ತಿದ್ದ ಮನಸ್ಸುಗಳು ಅನ್ಯಾಯವಾಗಿ ಯಾರದೋ ಕ್ರೂರ ಮನಸ್ಸಿನ ಹಠ ಮತ್ತು ಸೇಡಿಗಾಗಿ ಒಡೆದು ದೂರವಾಗೋದೇ ಚಿತ್ರದ ಕಥೆ. ಇದು ರಮೇಶ್ ಅರವಿಂದ್ ರವರ ನೂರನೇ ಚಿತ್ರ . ಅವರ ಜೀವನದ ಮೈಲಿಗಲ್ಲು. ರಮೇಶ್ ಅವರ ಮುಗ್ದಾವತಾರದ ಆ ಅದ್ಭುತ ಅಭಿನಯವನ್ನು ಪದಗಳಲ್ಲಿ ವಿವರಿಸೋದು ಕಷ್ಟ ಸಾಧ್ಯ. ರಮೇಶ್ ಅರವಿಂದರ ಅಭಿಮಾನಿ ಅಂತ ಹೇಳಿಕೊಳ್ಳುವುದೇ ನನಗೆ ಖುಷಿ ವಿಚಾರ. ಅದರಲ್ಲೂ ಈ ಚಿತ್ರದಲ್ಲಿ ಅವರ ಅಭಿನಯವನ್ನು ನೋಡಿದ ಮೇಲೆ ನಿಜವಾಗಲೂ ಅವರ ಅಭಿಮಾನಿ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನಿಸ್ತಾ ಇದೆ. Read more »

6
ಜನ

ಬಡವರ ಮಕ್ಕಳ ಭವಿಷ್ಯದ ಜೊತೆಗೆ ಬರಗೂರು ಭಂಡಾಟ

– ರಾಕೇಶ್ ಶೆಟ್ಟಿ

baraguruಕಾಲಕ್ಕೆ ತಕ್ಕಂತೆ ಮನುಷ್ಯ Update ಆಗಲಿಲ್ಲಾಂದ್ರೆ Outdated ಆಗಿಬಿಡ್ತಾನೆ ಎನ್ನುವುದಕ್ಕೆ ರಾಜ್ಯದ ಬುದ್ಧಿಜೀವಿಗಳೇ ಸಾಕ್ಷಿ. ಉದಾಹರಣೆಗೆ, ಪಠ್ಯಪುಸ್ತಕ ಪುನರ್ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಬರಗೂರು ರಾಮಚಂದ್ರಪ್ಪ ಅವರನ್ನೇ ತೆಗೆದುಕೊಳ್ಳಬಹುದು. ಬರಗೂರು ಅವರೇ ಯಾಕೆಂದರೆ, ಸಿದ್ಧರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ,ಬಿಜೆಪಿಯ ಕಾಲದಲ್ಲಿ ಪಠ್ಯಪುಸ್ತಕಗಳ ಕೇಸರಿಕರಣವಾಗಿದೆ ಎಂಬ ಬುದ್ಧಿಜೀವಿಗಳ ಹುಯಿಲನ್ನು ಬೆಂಬಲಿಸಿ, ತಮ್ಮ ಆಸ್ಥಾನ ಸಾಹಿತಿಗಳಲ್ಲೊಬ್ಬರಾದ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ೨೦೧೪ರಲ್ಲಿ ರಚಿಸಿದ್ದರು.ಈ ಸಮಿತಿಯ ಕೆಲಸ ಮುಗಿಯಬೇಕಾದ ಸಮಯಕ್ಕೆ ಮುಗಿದ್ದರಿಂದ ಅವಧಿಯ ವಿಸ್ತರಣೆಯನ್ನೂ ಮಾಡಲಾಯಿತು. ಸಮಿತಿಯೊಂದರ ಅವಧಿಯ ವಿಸ್ತರಣೆಯಾಗುವಾಗ ಅಲ್ಲಿಯವರೆಗೂ ಆಗಿರುವ ಕಾರ್ಯಗಳ ವರದಿ ನೀಡುವುದು ವಾಡಿಕೆ.ಆದರೆ,ಮುಖ್ಯಮಂತ್ರಿಗಳ ಆಸ್ಥಾನ ಸಾಹಿತಿಗಳ ನೇತೃತ್ವದ ಈ ಸಮಿತಿಯನ್ನು ಹಾಗೆಲ್ಲ ಪ್ರಶ್ನಿಸಲಾದೀತೆ? ಈ ಸಮಿತಿ ರಚನೆಯಾದ ನಂತರ, ಹಿಂದಿನ ಪಠ್ಯಗಳಲ್ಲಿನ ಯಾವೆಲ್ಲ ಲೋಪದೋಷಗಳನ್ನು ಪತ್ತೆ ಮಾಡಲಾಗಿದೆ,ಏನನ್ನು ಪುನರ್ ರಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡದೆ ಎಲ್ಲವನ್ನೂ ನಿಗೂಢವಾಗಿಡಲಾಗುತ್ತಿದೆ.

ಈ ಪರಿ ನಿಗೂಢತೆಯನ್ನಿಟ್ಟುಕೊಂಡು ಬರಗೂರು ರಾಮಚಂದ್ರಪ್ಪನವರೇನು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಹೊರಟಿದ್ದಾರೆಯೇ? ಎಲ್ಲಾ ಪಠ್ಯ ಪುಸ್ತಕಗಳ ಪರಿಷ್ಕರಣೆಯಾದರೂ ಆಗಿದೆಯೇ ಎಂದರೆ ಅದೂ ಇಲ್ಲ ಜನವರಿ ೧೫ರೊಳಗೆ ನೀಡುತ್ತಾರಂತೆ.ಬಹುಶಃ ಎಲ್ಲಾ ಪ್ರಿಂಟ್ ಆದ ನಂತರವೇ ಬರಗೂರರ ನಿಗೂಢ ಪ್ರಪಂಚದಿಂದ ಈ ಪುಸ್ತಕ ಹೊರಬರುತ್ತದೆನಿಸುತ್ತದೆ. ಇಂತಹ ನಿಗೂಢತೆಯನ್ನಿಟ್ಟುಕೊಂಡೇನೂ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಹೊರಟಿದ್ದರೆಯೇ ಎಂದು ನಿರೀಕ್ಷೆಯಿಟ್ಟುಕೊಂಡರೇ ಆಘಾತವಾಗುತ್ತದೆ.

Read more »

5
ಜನ

ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ; ವಲಸಿಗರ ರಾಜ್ಯದ ನಾಯಕರನ್ನು ಪ್ರಶ್ನಿಸಬೇಕಾಗೈತಿ

– ರಾಕೇಶ್ ಶೆಟ್ಟಿ

ffಕರ್ನಾಟಕ ರಾಜ್ಯದ ಖಾಸಗಿ ಕೈಗಾರಿಕೆಗಳಲ್ಲಿ (ಐಟಿ, ಬಿಟಿ ಹೊರತುಪಡಿಸಿ) ಶೇ 70 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕಡ್ಡಾಯವಾಗಿ ಕಲ್ಪಿಸಲು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ತಯಾರಿಯಲ್ಲಿ ರಾಜ್ಯ ಸರ್ಕಾರವಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಶೇ.70 ರಲ್ಲಿ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ 50, ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಶೇ 20 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂಬುದು ಪ್ರಸ್ತಾವನೆ. ಇನ್ನು “ಸ್ಥಳೀಯರು ಯಾರು?” ಎಂಬುದರ ಮಾನದಂಡವಾಗಿ ಕರ್ನಾಟಕದಲ್ಲಿ ಜನಿಸಿದವರು ಮತ್ತು ರಾಜ್ಯದಲ್ಲಿ ೧೫ ವರ್ಷಗಳ ಕಾಲವಿದ್ದು ಕನ್ನಡವನ್ನು ಮಾತನಾಡಲು, ಬರೆಯಲು, ಓದಲು ಕಲಿತವರನ್ನು ಪರಿಗಣಿಸಲಾಗುವುದು. Read more »

4
ಜನ

“ಹುಟ್ಟು”…

– ‘ಶ್ರೀ’ ತಲಗೇರಿ

ನರಗಳಲ್ಲಿ ತುಂಬಿ ಹರಿವ
ರಕ್ತಕ್ಕೆ ಅದೆಂಥ ವಾಸನೆಯೋ..
ಮತ್ತೆ ಮತ್ತೆ ಕೆಂಪಾಗುತ್
ಕಪ್ಪಾಗಿ ಹೆಪ್ಪಾಗುತ್ತದೆ
ಆಸೆಗಳ ತೆಕ್ಕೆಯಲ್ಲಿ.. Read more »

3
ಜನ

ಕತೆಗಾರನ ಗುಪ್ತಭಯ ಕತೆಯಲ್ಲಿಯೇ ಬಯಲಾಯಿತು…!!

– ಗುರುರಾಜ ಕೊಡ್ಕಣಿ. ಯಲ್ಲಾಪುರ

49659371ನಡುರಾತ್ರಿಯ ನಿಶ್ಯಬ್ದದ ನಡುವೆ ಕಿಟಕಿಯ ಗಾಜು ಚೂರುಚೂರಾಗಿದ್ದು ನನಗೆ ಗೊತ್ತಾಗಿತ್ತು. ಏರ್ ಕಂಡಿಶನರ್ ಕಾರ್ಯ ನಿರ್ವಹಿಸುತ್ತಿಲ್ಲವೆನ್ನುವ ಕಾರಣಕ್ಕೆ ಮಫ್ಲರಿನಿಂದ ಕಿವಿ ಮುಚ್ಚಿಕೊಳ್ಳದಿದ್ದ ನನಗೆ ಕಿಟಕಿಯ ಗಾಜು ನೆಲಕ್ಕಪ್ಪಳಿಸಿದ್ದ ಶಬ್ದ ಸ್ಪಷ್ಟವಾಗಿಯೇ ಕೇಳಿಸಿತ್ತು. ಮಲಗಿದ್ದವನು ಚಕ್ಕನೇ ಎದ್ದು ಕುಳಿತೆ. ಮಧ್ಯವಯಸ್ಕನಾಗಿರುವ ನನಗೆ ನನ್ನ ವಯಸ್ಸಿನ ಬಗ್ಗೆಯೇ ಕೊಂಚ ಅಸಹನೆ. ನನ್ನ ವಯಸ್ಸು ನನ್ನ ಮಗನಷ್ಟಾಗಲಿ ಅಥವಾ ನನ್ನ ತಂದೆಯಷ್ಟಾಗಲಿ ಇದ್ದಿದ್ದರೆ ಸೂಕ್ತವಾಗಿರುತ್ತಿತ್ತು ಎನ್ನುವ ಭಾವ ನನಗೆ. ‘ಭಯಪಡಬೇಡ, ಏನೂ ಆಗಿಲ್ಲ. ಎಲ್ಲಿದ್ದಿಯೋ ಅಲ್ಲೇ ಇರು’ ಎಂದು ನನ್ನ ಹೆಂಡತಿಗೆ ಅಪನಂಬಿಕೆಯಲ್ಲಿಯೇ ನುಡಿದೆನಾದರೂ ನನ್ನ ಮಾತುಗಳನ್ನು ಆಕೆಯೂ ನಂಬುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಕೆಳಮಹಡಿಯಲ್ಲಿ ಏರುದನಿಯಲ್ಲಿ ಕೂಗಾಡುತ್ತಿದ್ದ ಆಗಂತುಕರ ದನಿ
ನಮ್ಮಿಬ್ಬರಿಗೂ ಕೇಳಿಸುತ್ತಿತ್ತು. ‘ನೀನು ಬಟ್ಟೆ ಧರಿಸಿಕೊ’ ಎಂದು ಪತ್ನಿಗೆ ಹೇಳುತ್ತ ಕೋಣೆಯ ದೀಪದ ಗುಂಡಿಯನ್ನು ಒತ್ತಿದಾಗಲೇ ಮನೆಯಲ್ಲಿ ವಿದ್ಯುತ್ ಸರಬರಾಜು
ನಿಂತುಹೋಗಿದೆಯೆನ್ನುವುದು ನೆನಪಾಗಿದ್ದು. ತಕ್ಷಣಕ್ಕೆ ಕೈಗೆ ಸಿಕ್ಕ ಮೊಬೈಲಿನ ಬೆಳಕನ್ನೇ ಕತ್ತಲಿನ ನಿವಾರಣೆಗಾಗಿ ಬಳಸಿಕೊಂಡೆ. ನುಗ್ಗಿರುವ ಆಗಂತುಕರು ಮೆಟ್ಟಲೇರಿ ಬರುತ್ತಿರುವ ಶಬ್ದ ನಮ್ಮ ಕಿವಿಯ ಮೇಲೆ ಬೀಳುತ್ತಿತ್ತು. ಶಯನಗೃಹದ ಬಾಗಿಲು ಭದ್ರಪಡಿಸಿ ಪಡಸಾಲೆಗೆ ಬಂದೆ. ಹಜಾರದ ಕತ್ತಲಿನುದ್ದಕ್ಕೂ ಕುಣಿದಾಡುತ್ತಿದ್ದುದು ನುಸುಳುಕೋರರ ಕೈಯಲ್ಲಿದ್ದ ಹಿಡಿದೀಪದ ಬೆಳಕು. ಎರಡು ಕೈಗಳನ್ನು ಮೇಲೆತ್ತಿ ಹಿಡಿದು, ‘ನಾನು ಇಲ್ಲಿಯೇ ನಿಂತಿದ್ದೇನೆ’ಎಂದು ಕಿರುಚಿದೆ. ಕಿರುಚಿದೆ ಎಂದು ನಾನಂದುಕೊಂಡೆ. ಆದರೆ ನನ್ನ ಮಾತುಗಳು ಚಿಕ್ಕ ಮಗುವೊಂದರ ಪಿಸುಗುಡುವಿಕೆಯಂತೇ ನನ್ನ ಗಂಟಲಿನಿಂದ ಹೊರಬಿದ್ದಿದ್ದವು. Read more »