IT/ED RAID ಗಳು ಹೇಗೆ ನಡೆಯುತ್ತವೆ?
ಗುಜರಾತಿನ ಶಾಸಕರನ್ನು ಬೆಂಗಳೂರಿನ ರೆಸಾರ್ಟಿನಲ್ಲಿ ತಂದಿಟ್ಟ ೩-೪ ದಿನಗಳ ಒಳಗೆಯೇ,ರಾಜ್ಯ ಸರ್ಕಾರದ ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಯನ್ನು,ರಾಜ್ಯ ಸರ್ಕಾರ,ಕಾಂಗ್ರೆಸ್ ,ಕಾಂಗ್ರೆಸ್ ಬೆಂಬಲಿಸುವ ಪತ್ರಕರ್ತ ಮುಖವಾಡಗಳು ಮತ್ತು ಬೆಂಬಲಿಗರೂ ಅದೇ ರಾಗವನ್ನು ಹಾಡಿದರು.ರೇಡ್ ಎಂದರೇನು,ಅದಕ್ಕೆ ಬೇಕಾದ ಪೂರ್ವ ತಯಾರಿಗಳೇನು? ಹೇಗೆ ನಡೆಯುತ್ತದೆ ಎಂಬೆಲ್ಲ ಅಂಶಗಳು ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ.ಅಂತಹ ಮಾಹಿತಿಯನ್ನು ಒಳಗೊಂಡ ಲೇಖನವಿದು.
– ಜೆಬಿಆರ್ ರಂಗಸ್ವಾಮಿ
IT/ED RAID ಆಗುತ್ತೆ ಅಂದರೆ ಬಲವತ್ತರವಾದ ಸಾಕ್ಷ್ಯಾಧಾರ ಗಳು ಇರಲೇಬೇಕು.ನೂರಿಪ್ಪತ್ತು ನೂರಮೂವತ್ತು ಅಧಿಕಾರಿಗಳು 150 ಕಾರುಗಳಲ್ಲಿ ಸಿಬ್ಬಂದಿಯನ್ನು ತುಂಬಿಕೊಂಡು, ಏಕಕಾಲದಲ್ಲಿ 39 – ರಿಂದ – 64 ಕಡೆ ರೇಡ್ ಮಾಡಲು ಹೊರಟರೆಂದರೆ ತಿಂಗಳೇನು? ವರ್ಷಗಟ್ಟಲೇ ಪೂರ್ವಸಿದ್ಧತೆ ನಡೆದಿರುತ್ತೆ.ಗುಜರಾತಿನ ಗುಜರಿ ಶಾಸಕರ ಸಲುವಾಗಿ ರೇಡ್ ಆಗಿದೆ ; ಪ್ರಜಾತಂತ್ರದ ಕಗ್ಗೊಲೆ ಯಾಗಿದೆ ಎಂಬಂತಹ ಪ್ರಲಾಪಗಳೆಲ್ಲವೂ ಅಜ್ಞಾನಿ ಹೇಳಿಕೆಗಳು ಮಾತ್ರ.ಎಮ್ಮೆ ಗಂಜಲ ಹುಯ್ದರೆ ಇರುವೆ ಕಣ್ಣಿಗೆ ಅದೇ ದೊಡ್ಡ ಜಲಪಾತದಂತೆ ಕಾಣುತ್ತೆ.ಈ ಪುಢಾರಿಗಳು ಪುಟಗೋಸಿ ರೆಸಾರ್ಟ್ ರಾಜಕೀಯವನ್ನೇ ಅಂತರಾಷ್ಟ್ರೀಯ ಮಟ್ಟದಷ್ಟು ದೊಡ್ಡದು ಅಂದುಕೊಂಡಿವೆ.
ಇರಲಿ.ಇಂತಹ ರೇಡ್ ಗಳ ಹಿನ್ನೆಲೆ ಹೇಗಿರುತ್ತೆ? ಹೇಗೆ,ಯಾಕೆ,ಯಾವ ಸಂದರ್ಭಗಳಲ್ಲಿ ರೇಡ್ ಮಾಡುತ್ತಾರೆ? ಎಂಬುದರ ವಾಸ್ತವಾಂಶಗಳನ್ನು ನೋಡಿ :
1 ) ರೇಡ್ ಆಗುವವನ ಅನೇಕ ವ್ಯವಹಾರ,ಅವ್ಯವಹಾರ ಕುರಿತಂತೆ ನಾನಾ ಮೂಲಗಳಿಂದ ನಾನಾ ದೂರುಗಳು ಮೊದಲೇ ಬಂದಿರುತ್ತವೆ.ಅವುಗಳ ಸತ್ಯಾಸತ್ಯತೆಗಳ ಬಗ್ಗೆ ಕೂಲಂಕುಷ ಗೋಪ್ಯ ವಿಚಾರಣೆ ತಿಂಗಳುಗಟ್ಟಲೇ ನಡೆದಿರುತ್ತೆ. ಅವುಗಳಲ್ಲಿ ಸತ್ಯಾಂಶ ಇರುವ ಸಂಗತಿಗಳು ಪಟ್ಟಿಯಾಗುತ್ತವೆ.ಇದೊಂದು ದೊಡ್ಡ ಕಸರತ್ತು.ಸಂಗ್ರಹಿಸಿರುವ ಮಾಹಿತಿ ನಿಜವೋ ಅಲ್ಲವೋ ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳುತ್ತಾರೆ. (sec 132 IT Act).
2 ) ಎಲ್ಲೆಲ್ಲಿ ರೇಡ್ ಮಾಡಬೇಕೋ ಆಯಾ ಮನೆ,ಜಾಗಗಳ ಪಕ್ಕಾ #ಚಕ್ಕುಬಂದಿ ಪಟ್ಟಿ ತಯಾರಾಗುತ್ತದೆ.ಆ ಮನೆಗೆ ರೇಡ್ ಮಾಡಲು ಎಷ್ಟು ಜನ ಅಧಿಕಾರಿ ಸಿಬ್ಬಂದಿ ನಿಯೋಜಿಸಬೇಕು ಎಂಬುದರ ಯೋಜನೆಯೂ ಸಿದ್ದವಾಗುತ್ತದೆ.
ನೆನಪಿರಲಿ : ಯಾವ ಅಧಿಕಾರಿಯ ನೇತೃತ್ವದಲ್ಲಿ ರೇಡ್ ಆಗುತ್ತದೆಯೋ,ಸ್ವತಃ ಆ ಅಧಿಕಾರಿ ಸಿಬ್ಬಂದಿಗಳಿಗೇ ತಾವು ಎಲ್ಲಿಗೆ,ಯಾರ ಮನೆಗೆ ದಾಳಿ ಇಡುತ್ತೇವೆ ಎಂಬ ವಿಷಯ ಕೊನೆಯತನಕ ತಿಳಿದಿರುವುದಿಲ್ಲ ! ( ನನ್ನದೇ ಅನುಭವ ! )
ಅದು ಅಷ್ಟು ಗೋಪ್ಯ. SECRET! And the Meaning of the secret is SECRET ONLY !
3 )ಎಲ್ಲೆಲ್ಲಿ ರೇಡ್ ಆಗಬೇಕೋ ಆಯಾ ಜಿಲ್ಲೆಯ ಸೆಷನ್ಸ್ ನ್ಯಾಯಾಧೀಶರ ಮನೆಗೆ ಹೋಗಿ,ರೇಡ್ ನ ಗುರುತರತೆಯನ್ನು ಅವರಿಗೆ ವಿವರಿಸಿ,ದಾಖಲೆಗಳೊಂದಿಗೆ ಮನವರಿಕೆ ಮಾಡಿಸಿ ನಂತರ ಸರ್ಚ್ ವಾರಂಟನ್ನು ಪಡೆದುಕೊಳ್ಳುತ್ತಾರೆ.(ಅದೂ ನಿರ್ದಿಷ್ಟ ಅಧಿಕಾರಿಯ ಹೆಸರಿಗೆ.ಅದು ಅಲ್ಲೇ ಆಗಲೇ ತೀರ್ಮಾನವಾಗುತ್ತದೆ!)
4 ) , ಜಡ್ಜರಿಗೆ ರೇಡ್ ನ ಗುರುತರತೆ ಮನವರಿಕೆಯಾದರೆ ಮಾತ್ರ ಸರ್ಚ್ ವಾರಂಟ್ ಕೊಡುತ್ತಾರೆ. ಇಲ್ಲವಾದರೆ ಮುಲಾಜಿಲ್ಲದೆ ನಿರಾಕರಿಸಿಬಿಡುತ್ತಾರೆ.
*** :
ರೆಸಾರ್ಟ್ ರಾಜಕೀಯದ ನಡುವೆಯೇ ಈ ರೇಡ್ ಆಗಬೇಕಿತ್ತೇ ?. ಎಂಟನೇ ತಾರೀಕಿನ ನಂತರ ಮಾಡಬಹುದಿತ್ತಲ್ಲಾ ? – ಅನೇಕರ ಪ್ರಶ್ನೆ.
ಇದೇ ಕರೆಕ್ಟಾದ ಸಂದರ್ಭವಾಗಿತ್ತು.ಒಬ್ಬೊಬ್ಬ ಶಾಸಕ ಹತ್ತಾರು ಕೋಟಿಗೆ ಬಿಕರಿಯಾಗುತ್ತಿದ್ದಾನೆ ಎಂಬ ಸುದ್ದಿ ಕಾಂಗ್ರೆಸ್‌ನವರಿಂದಲೇ ಮೊದಲೇ ಪ್ರಚಾರವಾಗಿತ್ತು. ಕೋಟಿಕೋಟಿಗೆ ಹರಾಜಾಗುವ ಶಾಸಕನನ್ನು ರೆಸಾರ್ಟ್ ನಲ್ಲಿಟ್ಟರೆ ಸುಮ್ಮನಿರುತ್ತಾನೆಯೇ? ಆಚೆ ಬಂದೊಡನೆ ಡಬ್ಬಲ್ ರೇಟಿಗೆ ಬಿಕರಿಯಾಗಲು ತುದಿಗಾಲಲ್ಲಿ ನಿಂತಿರುತ್ತಾನೋ ಇಲ್ಲವೋ? ಅವನ ಆತ್ಮಕ್ಕೂ ಶಾಂತಿಮಾಡಿ ತಮ್ಮ ಜೊತೆಯಲ್ಲಿಯೇ ಇಟ್ಳುಕೊಳ್ಳಬೇಕು ತಾನೇ? ಆಗಲಂತೂ ಕೋಟಿಗಟ್ಟಲೇ ಹಣ ಹರಿದಾಡಿಯೇ ತೀರುತ್ತದೆ ತಾನೇ? ಈ ಬಗೆಯ ಪರಿಸ್ಥಿತಿಗಳನ್ನು ವಿವರಿಸಿ ಸರ್ಚ್ ವಾರಂಟ್ ಪಡೆದಿರುತ್ತಾರೆ.ಹೇಗಿದ್ದರೂ ಡಿಕೇಶಿ ಚಟುವಟಿಕೆಗಳ ಪೂರ್ಣ ಮಾಹಿತಿ ಇತ್ತು. ಅವರೇ ನೇತೃತ್ವ ವಹಿಸಿದ್ದರು. ರೇಡ್ ಗೆ ಒಂದು ಸಂದರ್ಭ ಬೇಕಿತ್ತು. ಕೋಟಿಗಟ್ಟಲೇ ಹಣದ ಹೊಳೆಯೇ ಹರಿಯುವ ಒಂದು ಖಚಿತವಾದ ಮಾಹಿತಿಬೇಕಿತ್ತು.ಯಾರೋ ಆದೇಶ ಕೊಟ್ಟರು ಎಂದು ದಿಢೀರನೆ ಹಿಡಿಯುವ ಕೆಲಸ ಇದಲ್ಲ…
5 ) ಯಾವ ಅಧಿಕಾರಿ ರೇಡ್ ಮಾಡಲು ಹೋಗುತ್ತಾನೋ ಅವನ ಹೆಸರಿಗೆ ವಾರಂಟ್ ನೀಡಿ ಇಂತಿಷ್ಟು ಸಮಯದೊಳಗೆ ರೇಡ್ ಮುಗಿಸಬೇಕು ಎಂಬ ಷರತ್ತನ್ನೂ ವಿಧಿಸಿ ಸಹಿ ಪಡೆಯುತ್ತಾರೆ. ಅಲ್ಲಿಗೆ ರೇಡ್ ನ ಸಂಪೂರ್ಣ ಹೊಣೆಗಾರಿಕೆ ಆತನದೇ.ಹಾಗಿದ್ದಾಗ,ರೇಡ್ ಮನೆಯಲ್ಲಿ ನಡೆಯುವ ಯಾವುದೇ ಅಪದ್ಧಗಳಿಗೆ ಆತನೇ ಹೊಣೆಗಾರನಾಗುತ್ತಾನೆ. ಈವತ್ತಿದ್ದು ನಾಳೆ ನಿಕಾಲಿಯಾಗುವ ಯಾವನೋ ರಾಜಕಾರಿಣಿ ಮಾತಿಗೆ ಅಧಿಕಾರಿಗಳು ಅಡ್ಡಬೀಳುತ್ತಾರಾ ನೀವೇ ಯೋಚಿಸಿ.ಪೊಲೀಸರು ಜೂಜು ಅಡ್ಡೆಯ ಮೇಲೆ, ವೇಶ್ಯಾವಾಟಿಕೆಯ ಮೇಲೆ ಎಲ್ಲೆಂದರಲ್ಲಿ ಧಿಢೀರ್ ದಾಳಿ ನಡೆಸುತ್ತಾರಲ್ಲ ? ಹಾಗಲ್ಲ ಈ ಮನೆಯ ಮೇಲಿನ ರೇಡ್ ಗಳು.
6 )Specific ಆದ ದೂರು ಮತ್ತು ನಿರ್ದಿಷ್ಟವಾಗಿ ಇಂತಹ ಅಕ್ರಮ ಸಂಪತ್ತು ಚಲಾವಣೆ / ಸಾಗಣೆ ಇತ್ಯಾದಿಗಳು ನಡೆಯುವ ಬಗ್ಗೆಯೂ ಮೊದಲೇ ತಿಳಿಸಿರುತ್ತಾರೆ. ಆ ಸಂಗತಿ ಸತ್ಯವೆಂದು ಮನವರಿಕೆಯಾದರೆ ಮಾತ್ರ ಜಡ್ಜ್ ವಾರಂಟ್ ಕೊಡಲು ಸಮ್ಮತಿಸುತ್ತಾರೆ. ತಾವು ಯಾಕೆ ಸರ್ಚ್ ವಾರಂಟ್ ನೀಡಿದೆ ಎಂಬುದರ ಶರಾವನ್ನೂ ಬರೆದುಕೊಳ್ಳುತ್ತಾರೆ.
7 ) ವಸ್ತುಸ್ಥಿತಿ ಹೀಗಿದ್ದಾಗ,ಮಂತ್ರಿ ಅಥವಾ ಷಾ ” ಹೋಗ್ರಿ ರೈಡ್ ಮಾಡಿಕೊಂಡು ಬನ್ರೀ ” ಅಂತ ಆಜ್ಞಾಪಿಸಿಬಿಟ್ಟರೆ ದಾಳಿ ಮಾಡಲಾಗುವುದಿಲ್ಲ.
8 ) ಹನ್ನೊಂದು ಕೋಟಿ ಮತ್ತು ದೆಹಲಿ ಮನೆಯಲ್ಲಿ ಐದು ಕೋಟಿ ಅಕ್ರಮವಾದ ಹಣ ಸಿಕ್ಕಿದೆ ಎಂದರೆ ED ಯವರ ಮಾಹಿತಿ ಸರಿಯಾಗಿದೆ ಎಂದೇ ಹೇಳಬೇಕು. ಮೂವತ್ತು ಲಕ್ಷಕ್ಕೂ ಹೆಚ್ಚಿನ ಅಕ್ರಮ ಹಣ ಸಿಕ್ಕರೆ ಈಡಿ ಯವರು ಮುಂದಿನ ಕ್ರಮ ಜರುಗಿಸುತ್ತಾರೆ.demonetization ಮಾಡಿ ಏನು ಕಡಿದು ದಭಾಕಿದರು? ಎಂಬ ಕುಹಕಕ್ಕೆ ಇದರೊಳಗಿದೆ ಉತ್ತರ !
9 ) ರಾಜ್ಯ ಪೊಲೀಸರನ್ನು ಬಳಸಿಕೊಳ್ಳದೆ CRPF ಪೊಲೀಸರನ್ನು ಅಕ್ರಮವಾಗಿ ಬಳಸಿಕೊಂಡರು ಎಂಬುದು ಇನ್ನೊಂದು ಆರೋಪ.ಅದು ಅವರಿಗಿರುವ ಪರಮಾಧಿಕಾರ. ಗೋಪ್ಯವಾಗಿ ನಡೆಸುವ ಕಾರ್ಯಾಚರಣೆಯನ್ನು ಊರಿಗೆಲ್ಲಾ ಡಂಗುರ ಹೊಡೆದುಕೊಂಡು ಮಾಡಲಾಗುತ್ತದೆಯೇ? ಅದರಲ್ಲೂ ಪ್ರಭಾವಿ ಮಂತ್ರಿ ಮನೆಗೆ ಲಗ್ಗೆಯಿಡುವಾಗ? ಹಾಗೆಂದು CRPF ಪೊಲೀಸರು ಗೋಲಿಬಾರ್ ಮಾಡಿಲ್ಲವಲ್ಲಾ? ಅವಘಡವಾಗದಂತೆ ರಕ್ಷಣೆಗೆ ನಿಂತಿದ್ದಾರೆ ಅಷ್ಟೇ. ರೇಡ್ ಶುರುವಾದ ಮೇಲೆ ಲೋಕಲ್ ಪೊಲೀಸರು ಬಂದಿದ್ದಾರೆ .
10 ) ದಾಳಿ ಮಾಡಿದಾಗ ಏನೂ ಸಿಕ್ಕದೆ ಇದ್ದರೆ ಆಗ ಅದನ್ನು ಅಧಿಕಾರದ ದುರುಪಯೋಗ ಅನ್ನಬಹುದು. ದ್ವೇಷಸಾಧನೆ ಅನ್ನಬಹುದು. ಮಾಲು ಸಮೇತ ಸಿಕ್ಕಿಬಿದ್ದ ಪ್ರಕರಣ ಇದಲ್ಲವೇ ? [ ಕ್ಯಾಶ್ ಗಿಂತ ಬೇನಾಮಿ ಆಸ್ತಿಯ ದಾಖಲಾತಿಗಳು ಮುಖ್ಯ ]
11) ಇಂತಹ ರೈಡ್ ಗಳನ್ನು ಮಾಡುವಲ್ಲಿ ಅಧಿಕಾರ ದುರುಪಯೋಗ,ಪ್ರತಿಪಕ್ಷಗಳನ್ನು ನಿರ್ನಾಮ ಮಾಡುವ ಹುನ್ನಾರವಿದೆ ಇತ್ಯಾದಿ ಆರೋಪಗಳಿವೆ.ರೈಡ್ ಮಾಡಿದಾಗ ಏನೂ ಸಿಕ್ಕದೇ ಇದ್ದರೆ,ವೃಥಾ ಹಣಿಯಲು ಮಾಡಿದ ಕುತಂತ್ರ,ಅಧಿಕಾರದ ದುರುಪಯೋಗ ಅನ್ನಬಹುದು.ಇಲ್ಲಿ ಲೋಡುಗಟ್ಟಲೆ ಅಕ್ರಮಗಳ ಮೂಟೆ ಮೂಟೆಗಳೇ ಸಿಕ್ಕಿವೆ.ಕೋಟಿಗಟ್ಟಲೆ ನಗದು,ಕೆಜಿಗಟ್ಟಲೆ ಚಿನ್ನಾಭರಣ ಸಿಕ್ಕಿವೆ.ಬೇನಾಮಿ ಆಸ್ತಿಗಳ ದಾಖಲೆ ಪತ್ರಗಳು ದೊರಕಿವೆ ಎಂಬುದನ್ನು ಪ್ರತಿ ಚಾನೆಲ್ ಗಳೂ ತೋರಿಸುತ್ತಿವೆ.
12 ) ತಮ್ಮ ಎದುರೆದುರಿಗೇ ಹರಿದು ನಾಶಪಡಿಸಿದ್ದ ಪ್ರಮುಖ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಅವುಗಳನ್ನು ಮರು ಜೋಡಿಸಿದಾಗ ಅಕ್ರಮ ಹಣ ಸಂದಾಯವಾಗಿರುವ ವಿವರಗಳು ಸಿಕ್ಕಿವೆ.ಇದು ನೇರಾನೇರವಾಗಿ ಸಾಕ್ಷ್ಯಗಳನ್ನು ನಾಶಪಡಿಸಿದ ಕೃತ್ಯ.ಕಲಂ ೨೦೧ IPC ರೀತ್ಯಾ ಶಿಕ್ಷಾರ್ಹ ಅಪರಾಧ.ಆ ದಾಖಲೆಯಲ್ಲಿದ್ದ ಮಾಹಿತಿ ಅಪರಾಧದ ಒಂದು ಪ್ರಮುಖ ಸಾಕ್ಷ್ಯ ಎಂಬುದು ಆರೋಪಿಗೆ ಸ್ಪಷ್ಟವಾಗಿ ತಿಳಿದಿತ್ತು. ಅದರಿಂದ ತಾನು ದಂಡಿತನಾಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೇ ಸಾಕ್ಷ್ಯ ನಾಶಮಾಡಿದ ಕುಕೃತ್ಯ ಇದು.
ಒಂದು ಮಾತಿದೆ : ಕೊಲೆ ಮಾಡಿದ ಅಪರಾಧದಿಂದ ಬೇಕಾದರೆ ಒಬ್ಬಾತ ಬಚಾವಾಗಬಹುದು. ಆದರೆ ಸಾಕ್ಷ್ಯವನ್ನು ನಾಶಮಾಡಿದ ಕೃತ್ಯಕ್ಕೆ ಮಾತ್ರ ಶಿಕ್ಷೆಯಿಂದ ಪಾರಾಗಲಾರ. ಸಾಕ್ಷ್ಯಗಳನ್ನು ಅಧಿಕಾರಿಗಳ ಕಣ್ಣೆದುರೇ ನಾಶಪಡಿಸಿದ್ದು ಅಕ್ಷಮ್ಯ. ಅದು ಧಿಮಾಕು ಮತ್ತು ದುರಹಂಕಾರದ ವರ್ತನೆ. ಕಾನೂನನ್ನು ಧಿಕ್ಕರಿಸಿದ ದುಂಡಾವರ್ತನೆ.
13 ) ೧೫೦ ಕಾರುಗಳನ್ನು ಬಾಡಿಗೆಗೆ ಪಡೆದು ಕಾರ್ಯಾಚರಣೆ ಮಾಡಲಾಗಿದೆ.ಅಂದರೆ ಒಂದೊಂದು ಕಾರಿನಲ್ಲೂ ನಾಲ್ಕಾರು ಜನ ಅಧಿಕಾರಿ ಸಿಬ್ಬಂದಿ ಕುಳಿತುಕೊಳ್ಳುತ್ತಾರೆ. ಒಬ್ಬೊಬ್ಬರ ಕೈಯ್ಯಲ್ಲೂ ಮೊಬೈಲ್ ಮುಂತಾದವು ಇರುತ್ತವೆ. ಕೊಂಚ ಏಮಾರಿದರೂ ಮಾಹಿತಿ ಸೋರಿಹೋಗುವ ಅಪಾಯವಿತ್ತು.ಲೋಕಲ್ ಪೊಲೀಸರನ್ನು ತೆಗೆದುಕೊಂಡಿದ್ದರೂ ಇದೇ ಅಪಾಯ ಇನ್ನೂ ಹೆಚ್ಚಿತ್ತು.ಅದರಲ್ಲೂ ಕೆಲವರಂತೂ more loyal than the KING ರೀತಿಯ ನಿಷ್ಠಾವಂತರು ! (ಅವರ ನಿಷ್ಠೆ ಅಪರಾಧಿಗೆ.ಇಲಾಖೆಗಲ್ಲ !) ಇವೆಲ್ಲವನ್ನೂ ಯೋಚಿಸಿ ಗೋಪ್ಯವಾಗಿ ಸಂಬಾಳಿಸಿದ ಅಧಿಕಾರಿಗಳ ಚಾಕಚಕ್ಯತೆಯನ್ನು ಮೆಚ್ಚಲೇ ಬೇಕು.
14 ) ಆರೋಪಿತ ಪ್ರಭಾವಶಾಲಿಯಾಗಿದ್ದಾಗ ಕ್ಷಣ ಕ್ಷಣವನ್ನೂ ಯೋಚಿಸಿ ಕ್ರಮ ಕೈಗೊಳ್ಳುತ್ತಾರೆ.ಆರೋಪಿಯನ್ನು ಕೆದಕುವಲ್ಲಿ ಎಡವಟ್ಟಾದರೆ,ಅದು ರೇಡ್ ಅಧಿಕಾರಿಗಳನ್ನೇ ಆಪೋಶನ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆಪಾದನೆ ಮಾಡಲು ಆರೋಪಿಯೂ ತುದಿಗಾಲಲ್ಲಿ ಕಾದು ನಿಂತಿರುತ್ತಾನೆ.ಕಾಳಿಂಗ ಸರ್ಪದ ಹುತ್ತಕ್ಕೆ ಕೈ ಹಾಕಿರುವಾಗ ಯಾರೂ ಅನಗತ್ಯವಾಗಿ ಕೈಯ್ಯಾಡಿಸಲು ಹೋಗುವುದಿಲ್ಲ.ಇಷ್ಟಾದರೂ ತಮ್ಮೊಡನೆ ಅಧಿಕಾರಿಗಳು ಕೆಟ್ಟದಾಗಿ ನಡೆದುಕೊಂಡರು ಎಂಬ ಆರೋಪವನ್ನು ಮಾಡಿಯೇ ಬಿಟ್ಟಿದ್ದಾರೆ !.
15 ) ಹಾಗಿದ್ದರೆ ರೇಡ್ ಮಾಡಿದಾಗ ಆರೋಪಿತರ ಮನೆಯವರ ಮೇಲೆ ಕಟುವಾಗಿ ನಡೆದುಕೊಳ್ಳುತ್ತಾರೆ ; ಅವಮಾನಿಸಿ ಕಿರುಕುಳ ನೀಡುತ್ತಾರೆ ಎನ್ನುತ್ತಾರಲ್ಲ ಅದು ನಿಜವಲ್ಲವೇ ? – ಕೆಲವರ ಪ್ರಶ್ನೆ.
ಆದರೆ ದಾಳಿಯ ವಾಸ್ತವ ಹೀಗೆ :
ಅನೇಕರಿಗೆ ದಾಳಿ ಮಾಡುವುದು ಅಂದರೆ,ಬಾಗಿಲು ಮುರಿದು ಒಳನುಗ್ಗಿ ಚೆಲ್ಲಾಪಿಲ್ಲಿಯಾಗಿಸುವುದು ಎಂಬೆಲ್ಲಾ ಅಭಿಪ್ರಾಯಗಳಿವೆ ! ದಾಳಿ ನಡೆಸುವ ಮುನ್ನ, ಒಳಗಿರುವವರು ಹೊರಬಂದು ಓಡದಂತೆ ದಾಳಿಸಿಬ್ಬಂದಿ ಎಲ್ಲ ಹೊರಬಾಗಿಲುಗಳಿಗೂ ಕಾವಲಾಗಿ ನಿಲ್ಲುತ್ತಾರೆ. ಮನೆಯ ಯಜಮಾನನಿಗೆ ರೇಡ್ ಅಧಿಕಾರಿ ತನ್ನ ಗುರುತುಪತ್ರ ತೋರಿಸಿ , ದಾಳಿಯ ವಿಚಾರವನ್ನು ವಿವರಿಸಿ ತನಿಖೆಗೆ ಸಹಕರಿಸುವಂತೆ ಕೋರುತ್ತಾರೆ. {entry ಯಾಗುವ ವೇಳೆ ಡಿಕೆಶಿಯವರು ಮನೆಯಲ್ಲಿಲ್ಲದ ಕಾರಣ ರೆಸಾರ್ಟ್ ಗೆ ಹೋಗಿ ಕರೆತಂದರು. ಇದೂ ದಬ್ಬಾಳಿಕೆ ಎಂಬಂತೆ ಬಿಂಬಿತವಾಗಿದೆ.}
ಮನೆ ಯಜಮಾನನ ಸಮ್ಮುಖದಲ್ಲಿ ದಾಳಿತಂಡದವರನ್ನು ತಪಾಸಣೆಗೆ ಒಳಪಡಿಸಿ [ ಅವರು ಹೊರಗಿನಿಂದ ಯಾವ ವಸ್ತುವನ್ನೂ ತಮ್ಮ ಜೊತೆ ತಂದಿಲ್ಲವೆಂಬುದನ್ನು ಖಚಿತಪಡಿಸಿ ] ಮನೆಯ ಒಳಗಡೆ ಹೋಗುವಂತೆ ತಿಳಿಸುತ್ತಾರೆ. ಮನೆಯಲ್ಲಿರುವ ಹೆಂಗಸರು,ಮಕ್ಕಳಿಗೆ ಪ್ರತ್ಯೇಕವಾಗಿ ಒಂದೆಡೆ ಕ್ಷೇಮವಾಗಿ ಕೂರಿಸಿ,ಮಹಿಳಾ ಪೊಲೀಸರನ್ನು ಕಾವಲಿಗೆ ಹಾಕುತ್ತಾರೆ.ನಂತರ ಇಡೀ ಮನೆಯ ಶೋಧ ಶುರುವಾಗುತ್ತದೆ.ಇಂಚಿಂಚನ್ನೂ ಪರೀಕ್ಷಣೆಗೆ ಒಳಪಡಿಸುತ್ತಾರೆ.ಸ್ವಿಚ್ಚು,ಏಸಿ ಒಳಭಾಗ ಮೊದಲ್ಗೊಂಡು ಪ್ರತಿ ಸಂದೂಕ ಗೂಡುಗಳನ್ನೂ ಜಾಲಾಡುತ್ತಾರೆ.ಅಡಗಿಸಿರುವ ವಸ್ತುಗಳನ್ನು ಹುಡುಕುತ್ತಾರೆ.ಯಾರಿಗೂ ಯಾವ ರೀತಿಯಲ್ಲೂ ಮುಜಗರವಾಗದಂತೆ,ಅವಮಾನವಾಗದಂತೆ ಗೌರವದಿಂದಲೇ ನಡೆದುಕೊಳ್ಳುತ್ತಾರೆ.
[PUNISH THE SIN.NOT THE SINNER! ]. ತನಿಖಾತಂಡ ಒಂದಿನಿತು ತಪ್ಪು ಮಾಡಿದರೂ,ರಾದ್ಧಾಂತ ಎಬ್ಬಿಸಲು ರೇಡ್ ಅಪರಾಧಿ ರಣಹದ್ದಿನಂತೆ ಅಲ್ಲೇ ಕಾದಿರುತ್ತಾನೆ.ಅವನ ಎಂಜಲಹಾಳೆಗಳೂ ಗಬ್ಬೆಬ್ಬಿಸಲು ಹೊಂಚುಹಾಕಿ ಹೊರಗೆ ಕಾಯುತ್ತಿರುತ್ತವೆ. ಇದಕ್ಕೆ ಅವಕಾಶ ಕೊಡದಂತೆ ಕಾರ್ಯಾಚರಣೆ ಮಾಡುವಲ್ಲಿ ತನಿಖಾತಂಡದ ಜಾಣ್ಮೆ ಅಡಗಿರುತ್ತೆ.
By this raid what the Authortirs achieved.Nothing except unnecessary hardship to the popularity to the growing Leader,and to their innocent familymembers. The outcome is big zero.If at all they require some explanation to the arithmetical error for the differences they could have summoned the leader and his CA and could have obtained the details.There was no reason for doing this “rampata” by authorties .The leader is local man he would have not runaway from the state. “Gudda agedru kaddi sigalilla”.