– ಮಹೇಶ್ ಮಾತೃಭೂಮಿ
ದೇಶದಲ್ಲಿ ಎಲ್ಲೇ ಬುದ್ಧಿಜೀವಿಗಳ ಹತ್ಯೆ ನಡೆದರೂ ಮೊದಲು ಆರೋಪ ಹೊರಿಸುವುದು ಬಲಪಂಥೀಯ ವಿಚಾರಧಾರೆ ಹೊಂದಿರುವವರ ಮೇಲೆ, ಸಂಘಪರಿವಾರದವರ ಮೇಲೆ. ಎಲ್ಲಾ ಹತ್ಯೆಯ ಹಿಂದಿನ ಮರ್ಮ ಒಂದೇ, ದೇಶದಲ್ಲಿ ಕಮ್ಮಿ ನಿಷ್ಟರ ಹಾಗೂ ತಮ್ಮ ಎಡಪಂಥೀಯ ಚಿಂತನೆ ಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿರುವಂತವರದ್ದೆ ಕೈ ಇರಬೇಕೆನ್ನುವ ಹಿಡನ್ ಅಜೆಂಡ ಇದ್ದಂತಿದೆ.
ಕಲಬುರ್ಗಿ ಹತ್ಯೆ ನಡೆದಾಗ ಬಿಹಾರ್ ಎಲೆಕ್ಷನ್ ಹತ್ತಿರವಿತ್ತು ಆಗ ಕೆಲ ಗಂಜಿ ಗಿರಾಕಿಗಳು ಲಾಬಿ ಮಾಡಿ ಪಡೆದ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತ ಪ್ರಶಸ್ತಿ ಜೊತೆ ಪಡೆದ ಹಣ ಖರ್ಚಾಗಿದೆ ಅನ್ನುತ್ತಾ ಈ ದೇಶದಲ್ಲಿ ಏನು ಸರಿ ಇಲ್ಲ ಅಂದರು. ಆ ಸಮಯದಲ್ಲಿ ರಾಜ್ಯದಲ್ಲಿ ಇದ್ದ ಸರ್ಕಾರ ಇದೆ ಕಾಂಗ್ರೆಸ್ ಸರ್ಕಾರ.
ಮೊನ್ನೆ ಗೌರಿಯವರ ಕೊಲೆ ನಡೆದಾಗ ಸಾಲು ಸಾಲು ಸರ್ಕಾರದ ಸಚಿವರು ಜೊತೆಯಾಗಿ ಸರ್ಕಾರಿ ಗೌರವ ಸಲ್ಲಿಸುತ್ತ ಗೌರಿ ಅಂತ್ಯ ಸಂಸ್ಕಾರದಲ್ಲಿ ರಾಜಕೀಯ ಲೆಕ್ಕಚಾರ ಹಾಕುತ್ತ ಗೌರಿ ಕೊಲೆಯನ್ನು ಸಂಘಪರಿವಾರದವರೇ ಮಾಡಿಸಿದರೆಂದು ಆರೋಪಿಸಿದರು.
ಕೆಲ ಸರ್ಕಾರದ ಪ್ರತಿನಿಧಿಗಳಂತು ನಕ್ಸಲರು ಸತ್ಯವಂತರು ಅವರು ಕೊಲೆ ಮಾಡಲು ಸಾಧ್ಯವೇ ಇಲ್ಲ ಅಂದರು. ಇವರಿಗೆಲ್ಲ ಬೇಕಿರುವುದು ಒಂದೇ ರಾಜ್ಯದ ಮುಂದಿನ ಚುನಾವಣೆಯಲ್ಲಿ ಕೈಗೆ ಗೆಲುವು ತಂದುಕೊಡುವುದು.
ಈ ಸರ್ಕಾರದವರಿಗೆ ಡಿಕೆ ರವಿಯವರ ಸಾವು ಡಿವೈಸ್ ಪಿ ಗಣಪತಿ ಹಾಗೂ ಬಂಡೆಯವರ ಸಾವಿನ ಕೂಗು ಕೇಳಿಸಲಿಲ್ಲವೆ ? ಐ.ಜಿ ಕಚೇರಿಯಲ್ಲಿ ಡಿ.ವೈ.ಎಸ್.ಪಿ.ಯಾಗಿದ್ದ ಗಣಪತಿ ಮಡಿಕೇರಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ತಮ್ಮ ಸಾವಿಗೆ ಕಾರಣರಾದವರ ಹೆಸರನ್ನು ಹೇಳಿದ್ದು, ಭಾರೀ ಸಂಚಲನ ಮೂಡಿಸಿತ್ತು. ಸರ್ಕಾರದಲ್ಲಿ ಇರುವ ಜಾರ್ಜ್ ರವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಆದರೂ ಸೂಕ್ತ ತನಿಖೆ ನಡೆದಿರಲಿಲ್ಲ. ಸ್ಥಳ ಪರಿಶೀಲನೆ ಹಾಗೂ ಪಂಚನಾಮೆ ಮಾಡಿ ಆತ್ಮಹತ್ಯೆ ಎಂದು ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು. ಎಫ್ ಎಸ್ ಎಲ್ ರಿಪೋರ್ಟ್ ಬರುವ ಮುನ್ನ ರಾಜ್ಯದ ಸಿ ಐ ಡಿ ಪ್ರಕರಣವನ್ನು ಮುಚ್ಚಿಹಾಕಿ ಕ್ಲೋಸಿಂಗ್ ರಿಪೋರ್ಟ್ ಕೊಟ್ಟಿದ್ದರು. ಪೆನ್ಡ್ರೈವ್ , ಹಾಗೂ ಸಾಕಷ್ಟು ದಾಖಲೆಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಎಫ್ ಎಸ್ ಎಲ್ ರಿಪೋರ್ಟ್ ವರದಿ ಮಾಡಿತ್ತು. ಇವೆಲ್ಲ ನಾಟಕಗಳು ಸಾಕು ಸರ್ಕಾರ ಪೊಲೀಸ್ ಹಾಗೂ ಸಿಐಡಿ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜನಸಾಮಾನ್ಯರಿಗೆ ಅರ್ಥವಾಗಲು.
ಗೌರಿಯವರ ವಿಷಯದಲ್ಲಾದರು ನ್ಯಾಯ ಸಮ್ಮತ ತನಿಖೆಯಾಗಲಿ ಅಂತ ಅಂದುಕೊಳ್ಳುವ ಮುಂಚೆ ಕೆಲವು ಗಂಜಿಗಳು ಬೀದಿಯಲ್ಲಿ ಕೂಗಾಡುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅಂತಹ ಬುದ್ದಿ ಜೀವಿಗಳಿಗೆ ಆರೋಪಿ ಗೊತ್ತಿದ್ದರೆ ತನಿಖಾ ಅಧಿಕಾರಿಯ ಮುಂದೆ ಹೇಳಲಿ. ಸುಖಾಸುಮ್ಮನೆ ಕೂಗಾಡುವುದರಿಂದ ಆರೋಪ ಮಾಡುವುದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಕೆಲವೊಂದಷ್ಟು ವೋಟ್ ಗಳಿಸಿ ಕೊಡಬಹುದೆಂಬ ಲೆಕ್ಕಚ್ಚಾರವಷ್ಟೇ ಇವರದು.
ಚಿತ್ರ ಕೃಪೆ :- www.patrika.com/crime-news
Like this:
Like ಲೋಡ್ ಆಗುತ್ತಿದೆ...
Related