ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಯು.ಜಿ.ಸಿ ಅನುದಾನದಲ್ಲಿ ಸುಬ್ರಹ್ಮಣ್ಯದಲ್ಲಿ ಏರ್ಪಡಿಸಿದ ಎರಡು ದಿನಗಳ ವಿಚಾರಸಂಕಿರಣದಲ್ಲಿ ದಿನಾಂಕ 4-3-2017ರಂದು ಮಂಡಿಸಿದ ಲೇಖನ.
ಸತ್ಯಮೇವ ಜಯತೆ ನ ಅನೃತಂ ಎಂಬ ಪರಮ ಪವಿತ್ರ ಸುಳ್ಳಿನ ಕೃಪಾಛತ್ರದಡಿಯಲ್ಲಿ ಮಾತನಾಡುವುದು, ಬದುಕುವುದು ಅದೆಷ್ಟು ಸುಖದಾಯಕ ಎಂಬುದು ಕೇಂದ್ರ ಸಚಿವ ಕಿರಣ್ ರಿಜುಜು ಅವರಿಗೆ ಅರ್ಥವಾಗಿರಬಹುದು; ನ್ಯಾಯಮೂರ್ತಿ ಕರ್ಣನ್ ಅವರಿಗೆ ಬಲು ಚೆನ್ನಾಗಿಯೇ ಅರ್ಥವಾಗಿರಬೇಕು.*1 ಹಾಗೆಯೇ, Whatsapp, Facebookಗಳ ಕೆಮರಾ ಮುಂದೆ ಕರಕಲಾದ, ಹಳಸಲು ವಾಸನೆ ಬೀರುತ್ತಿರುವ ರೊಟ್ಟಿಯನ್ನು ಹಿಡಿದು `ದಂಗೆಯೆದ್ದ’ ಸೈನಿಕರಿಗೆ ಮೈಕೈ ನೋಯುವಂತೆ ಅರ್ಥವಾಗಿರಬಹುದು. ಇವತ್ತು ಅಂತಹ ಒಂದು ಹಳಸಲು ರೊಟ್ಟಿಯನ್ನು ನಿಮಗೆಲ್ಲ ಬಡಿಸಲು ನಿಂತಿದ್ದೇನೆ. ಅದು ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರು ಹಿಡಿದ ರೊಟ್ಟಿ. ಬಲು ಸ್ವಾದಿಷ್ಟ ರೊಟ್ಟಿಯೆಂದು ಬಾಯಲ್ಲಿ ಹೇಳುತ್ತಾ ಹಲವಾರು ಮಂದಿ ಕನ್ನಡದ ಸಾಹಿತಿಗಳು, ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ವಿಮರ್ಶಕರು ಮೂಗುಮುಚ್ಚಿಕೊಂಡೇ ಸವಿಸವಿದು ತಿಂದ ಕೊಳೆತ ರೊಟ್ಟಿ. King is naked ಎಂದು ಘೋಷಿಸಿಬಿಡುವುದು ಜಾಣತನವೂ ಅಲ್ಲ, ಲಾಭದಾಯಕವೂ ಅಲ್ಲ, politically correct, politically lucrative ಕೂಡಾ ಅಲ್ಲ. ಆದರೂ ಹೇಳುವ ಮನಸ್ಸು ಮಾಡಿದ್ದೇನೆ. ಕಳೆದುಕೊಳ್ಳುವುದಕ್ಕೆ ಏನೂ ಉಳಿದಿಲ್ಲ. ಮತ್ತಷ್ಟು ಓದು