ವಿಷಯದ ವಿವರಗಳಿಗೆ ದಾಟಿರಿ

Archive for

10
ನವೆಂ

ಬುದ್ದಿಜೀವಿ ಮತ್ತು ದೇವರು ಎದುರುಬದುರು

– ಶ್ಯಾಮ್ ಭೀಮಗುಳಿ

ಹಿಂದೊಮ್ಮೆ ಬೆಂಗಳೂರು ಎಂಬ ಮಾಯಾ ನಗರಿಯಲ್ಲಿ ಒಬ್ಬ ‘ಬುದ್ದಿಜೀವಿ’ ಎಂದು ಕರೆಸಿಕೊಳ್ಳುವವ ಇದ್ದನಂತೆ. ಈತ ಬುದ್ದಿಜೀವಿಯಾದ ಕಾರಣ ಚಿಂತಕ, ಪ್ರಗತಿವಾದಿ ಇತ್ಯಾದಿ ವಿಶೇಷಣಗಳು ಜೊತೆಗೆ ಅಂಟಿಕೊಂಡುಬಿಟ್ಟಿತ್ತು. ಈತ ಸಹಜವಾಗಿ ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದ. ಬರೆಯುತ್ತಿದ್ದ. ಈ ತಳಸ್ಪರ್ಶಿ ಸಾಹಿತ್ಯದಲ್ಲಿ ಎಷ್ಟು ಸತ್ವ ಇದೆ ಎಂದು ಅವನ ಜೊತೆಯವರು ನೋಡುತ್ತಿರಲಿಲ್ಲ, ಹಾಗೇ ಯಾವ ಸತ್ವ ಇದೆ ಎಂದೂ ವಿರೋಧಿಗಳು ಹುಡುಕುತ್ತ ಇದ್ದರು. ಆದರೂ ಪ್ರಸಿದ್ಧ ಆದ. ಎಲ್ಲರೂ ಅವನನ್ನು ಸಭೆ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಕರೆಸುತ್ತಿದ್ದರು. ಸಿಕ್ಕಿದ್ದೇ ಅವಕಾಶ ಎಂದುಕೊಂಡು ದೇವರು, ಧರ್ಮ ,ಆಚಾರ ವಿಚಾರ, ಪರಿಸರ, ಸಾಹಿತ್ಯ , ರಾಜಕೀಯ ಇತ್ಯಾದಿಗಳ ಬಗ್ಗೆ ಅದ್ಭುತವಾಗಿ ಮಾತಾಡುತ್ತಿದ್ದ. ಅದಕ್ಕೆ ತಲೆ ತೂಗುವವರು ಹಲವರು. ಒಟ್ಟಾರೆ ನ್ಯೂಟನ್ ನಿಂದ ನಕ್ಸಲ್ ವರೆಗೆ ಆತನ ಪಾಂಡಿತ್ಯ ಹರಡಿತ್ತು. ಕೆಲವೊಂದು ಸುದ್ದಿವಾಹಿನಿಗಳಿಗೆ ಆತ ನಿಲಯದ ಕಲಾವಿದ ಎನ್ನುವಂತೆ ಆಪ್ತನಾಗಿದ್ದ. ಮತ್ತಷ್ಟು ಓದು »