ವಿಷಯದ ವಿವರಗಳಿಗೆ ದಾಟಿರಿ

Archive for

7
ನವೆಂ

ಅರಮನೆ ಕಡತಗಳಲ್ಲೇ ಇದೆ ಟಿಪ್ಪು ದೌರ್ಜನ್ಯಕ್ಕೆ ಸಾಕ್ಷಿ

– ಸಂತೋಷ್ ತಮ್ಮಯ್ಯ

ಸರಕಾರ ಹೊರಡಿಸುವ ಕೆಲವು ಗಜೆಟಿಯರುಗಳ ಪುಟ ತೆರೆದರೆ ಇವೆಷ್ಟು ಕೆಜಿ ತೂಗಬಹುದು ಎಂಬ ಭಾವನೆ ಬೇಡಬೇಡವೆಂದರೂ ಬಂದುಬಿಡುತ್ತದೆ. ಏಕೆಂದರೆ ಪ್ರಯೋಜನಕ್ಕಿಲ್ಲದ ಅವೇ ಹಳಹಳಿಕೆಗಳು, ಅಧಿಕೃತತೆಯಿಲ್ಲದ ಮಾಹಿತಿಗಳು, ವಿಕೃತಿಗೊಂಡ ಇತಿಹಾಸಗಳು ಆರಂಭವಾಗುವುದೇ ಈ ಗಜೆಟಿಯರುಗಳಿಂದ. ಸ್ವಾತಂತ್ರ್ಯಾ ನಂತರ ಪ್ರಕಟಗೊಂಡ ಯಾವುದೇ ಜಿಲ್ಲೆಯ ಗಜೆಟಿಯರುಗಳನ್ನು ಗಮನಿಸಿದರೂ ಸೆಕ್ಯುಲರ್ ವಾಸನೆ ಅವುಗಳ ಪುಟಗಳ ಒಳಗಳೊಳಗಿಂದ ರಪ್ಪನೆ ಬಡಿಯುತ್ತದೆ. ಕೊಡಗು ಗಜೆಟಿಯರುಗಳಲ್ಲಿ ಹಾಲೇರಿ ರಾಜರ ಉಲ್ಲೇಖಗಳಿರುತ್ತವೆ. ಆದರೆ ಟಿಪ್ಪುದಾಳಿಯ ಉಲ್ಲೇಖಗಳಿರುವುದಿಲ್ಲ. ಮೈಸೂರು ಗಜೆಟಿಯರುಗಳಲ್ಲಿ ಟಿಪ್ಪು ಗುಣಗಾನವಿರುತ್ತವೆಯೇ ಹೊರತು ಲಕ್ಷ್ಮಮ್ಮಣ್ಣಿಯ ಪ್ರಸ್ಥಾಪವಿರುವುದಿಲ್ಲ. ಮಂಡ್ಯ ಜಿಲ್ಲಾ ಗಜೆಟಿಯರುಗಳು ಇನ್ನೂ ಭಯಾನಕ. ಇತಿಹಾಸದ ಘಟನೆಗಳನ್ನು ವಿವರಿಸುತ್ತಾ ಅಲ್ಲಿ ಇಸವಿಗಳೇ ಮಾಯವಾಗುವ ಚಮತ್ಕಾರಗಳಿವೆ. ಅಂದರೆ ೧೭೫೦ರಿಂದ ೧೮೦೦ರವರೆಗಿನ ಯಾವ ಘಟನೆಗಳೂ ಮಂಡ್ಯ ಜಿಲ್ಲಾ ಗಜೆಟಿಯರುಗಳಲ್ಲಿಲ್ಲ. ಅಂದರೆ ೪ನೇ ಮೈಸೂರು ಯುದ್ಧದ ಪ್ರಮುಖ ಘಟನಾವಳಿಯಾಗಿ ದಾಖಲಾಗುವ ಮಳವಳ್ಳಿ ಯುದ್ಧದ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಒಕ್ಕಲಿಗ ಪರಾಕ್ರಮದ ದಾಖಲೆಯನ್ನು ಅಳಿಸಿಹಾಕಲು ಗಜೆಟ್ ಪಂಡಿತರು ಒಂದು ಕಾಲಘಟ್ಟವನ್ನೇ ಎಗರಿಸಿಬಿಟ್ಟಿದ್ದಾರೆ! ಹಾಗಾಗಿ ಮಳವಳ್ಳಿ ಯುದ್ಧದ ಕುರುಹುಗಳಿದ್ದರೂ, ಇತಿಹಾಸ ಮೈಚೆಲ್ಲಿ ಬಿದ್ದಿದ್ದರೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಹೋರಾಟಗಳ ಉಲ್ಲೇಖಗಳು ಸಿಗುತ್ತಿಲ್ಲ. ಮಳವಳ್ಳಿ ಯುದ್ಧವನ್ನೇ ಹೇಳದ ಇಂಥ ಗಜೆಟಿಯರುಗಳನ್ನಿಟ್ಟುಕೊಂಡು ಮಂಡ್ಯ ಜಿಲ್ಲೆಗೇನು ಪ್ರಯೋಜನ? ಹಾಗಾಗಿ ಹಿಂದೆ ಮುಂದೆ ನೋಡದೆ ಸ್ವಾತಂತ್ರ್ಯಾ ನಂತರದ ಮಂಡ್ಯ ಜಿಲ್ಲಾ ಗಜೆಟಿಯರುಗಳನ್ನು ತೂಕಕ್ಕೆ ಹಾಕಬಹುದು. ಅಷ್ಟೇ ಅಲ್ಲ ಟಿಪ್ಪುಸುಲ್ತಾನ್ ಸಮರ್ಥಕರಿಗೆ ದೊಡ್ಡ ಬಲವನ್ನು ಈ ಗಜೆಟಿಯರುಗಳು ಒದಗಿಸುತ್ತಿವೆ. ಟಿಪ್ಪು ಕ್ರೂರತೆಯನ್ನು ಹುಡುಕುವವರಿಗೆ ಇವು ತೊಡಕಾಗುತ್ತಿವೆ. ಮತ್ತಷ್ಟು ಓದು »