ಎಚ್ಚರ..! ನಿಮ್ಮ ಸುತ್ತಲೂ ಇರುವರಿವರು…
– ಸುಜಿತ್ ಕುಮಾರ್
ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂದಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್ ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು ಹೀರೋಗಿರಿಗೆ ಸೊಂಪು! ಅಚ್ಚುಕಟ್ಟಾಗಿ ಓದಿ ಸ್ವಂತ ಕಾಲಮೇಲೆ ನಿಲ್ಲುವ ಕನಸ್ಸನ್ನು ಕಟ್ಟಿ ಹೆಗಲೇರಿಸಿ ಕಳುಹಿಸುವ ಪೋಷಕರ ವಾರಕ್ಕೋ ತಿಂಗಳಿಗೋ ತಳ್ಳುವ ಒಂದಿಷ್ಟು ಹಣವನ್ನು ‘ಇಂದು ಇಂದಿಗೆ.. ನಾಳೆ ನಾಳೆಗೆ’ ಎಂಬಂತೆ ಭಕ್ಷಿಸಿ, ತಿಂಗಳಾಂತ್ಯದ ವೇಳೆಗೆ ಅತಂತ್ರದ ಸ್ಥಿತಿಯ ಮುಸಿಯನಂತೆ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಾ ಪಕ್ಕದ ಗೂಡಂಗಡಿಯ ಟೀ ಬನ್ನುಗಳನ್ನೇ ಎರಡೊತ್ತಿನ ಆಹಾರವನ್ನಾಗಿ ಮಾಡಿಕೊಂಡು ‘ಏನಾದ್ರು ಬಿಸಿನೆಸ್ ಮಾಡ್ಬೇಕು ಮಗಾ’ ಎನ್ನುತ ಕ್ಷಣಮಾತ್ರದಲ್ಲಿ ಅಂಬಾನಿಗಳಾಗಲು ಹವಣಿಸುತ್ತಾ ದಿನಕಳೆಯುವ ಯುವಕರೇ ಈ ಮಹಾ ಷಡ್ಯಂತ್ರದ ಸುಲಭದ ಬಲಿಪಶುಗಳು! ಮತ್ತಷ್ಟು ಓದು