ಅನಾಣ್ಯೀಕರಣ, ಎಡಪಂಥೀಯ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು
ಜಿ. ಪದ್ಮನಾಭನ್
ಸಹಾಯಕ ಪ್ರಾಧ್ಯಾಪಕ
ತಮಿಳು ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ
ದ್ರಾವಿಡ ವಿಶ್ವವಿದ್ಯಾಲಯ,
ಕುಪ್ಪಂಆಂಧ್ರ ಪ್ರದೇಶ.
[ತಮಿಳಿನ ಖ್ಯಾತ ಸಾಹಿತಿ, ಚಿಂತಕ ಬಿ.ಜಯಮೋಹನ್‍ರವರು, ಈ ಹಿಂದೆ ತಮ್ಮ ವೆಬ್‍ಸೈಟ್‍ನಲ್ಲಿ ಅನಾಣ್ಯೀಕರಣ ಮತ್ತು ಬುದ್ಧಿಜೀವಿಗಳ ದ್ವಿಮುಖ ನೀತಿಯ ಬಗೆಗಿನ ಲೇಖನವೊಂದನ್ನು ಪ್ರಕಟಿಸಿದ್ದರು. ಅದನ್ನು ದ್ರಾವಿಡ ವಿಶ್ವವಿದ್ಯಾಲಯದ, ತಮಿಳು ಬಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ, ಸಹಾಯಕ ಪ್ರಾಧ್ಯಾಪಕ ಶ್ರೀ ಜಿ.ಪದ್ಮನಾಭನ್ ಅವರು ಕನ್ನಡಕ್ಕೆ ತಂದಿದ್ದಾರೆ. ಅನಾಣ್ಯೀಕರಣಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಈ ಲೇಖನ ಮತ್ತೆ ಚರ್ಚೆಯಾಗುತ್ತಿದೆ.] ಮತ್ತಷ್ಟು ಓದು
ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1
ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ
ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ
ಈ ಚರ್ಚೆಯಲ್ಲಿ ನಾನು ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ರಾಜ್ಯಶಾಸ್ತ್ರವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಶ್ರೀಮತಿ ಮೀನಾಕ್ಷಿ ಜೈನ್‌ರೊಂದಿಗೆ ಅವರ ಕೃತಿಗಳ ಬಗ್ಗೆ ವಿಚಾರಮಾಡಲಿದ್ದೇನೆ. ನಾನು ಶ್ರೀಮತಿ. ಮೀನಾಕ್ಷಿ ಜೈನ್‌ರನ್ನು ಸುಮಾರು ಎರಡು ದಶಕಗಳಿಂದ ಬಲ್ಲೆ. ಹಾಗೂ ಅವರನ್ನು ಇಂದಿನ ಭಾರತದಲ್ಲಿ ಒಬ್ಬ ಇತಿಹಾಸ ಮತ್ತು ರಾಜಕೀಯ ವಿಷಯಗಳ ಉತ್ತಮ ವಿದ್ವಾಂಸರೆಂದು ಗೌರವಿಸುತ್ತೇನೆ. ಅವರು ದೆಹಲಿಯಲ್ಲಿ ಶಲ್ಡನ್ ಪೊಲ್ಲಾಕ್‌ನ್ನು ಕುರಿತು ನಡೆದ ೨ನೇ ಸ್ವದೇಶೀ ಇಂಡಾಲಜಿ ಸಮ್ಮೇಳನದಲ್ಲಿ ಭಾಗವಹಿಸಿ, ಒಂದು ಅದ್ಭುತ ಲೇಖನವನ್ನು ಪ್ರಸ್ತುತಪಡಿಸಿದ್ದರು. ಅವರು ಮತ್ತು ನನ್ನಲ್ಲಿ ಇರುವ ಒಂದು ಸಾಮಾನ್ಯ ಅಂಶವೆಂದರೆ ಇಬ್ಬರೂ ನಮ್ಮೊಡನೆ ವಾದ ಮಾಡುವ, ನಮ್ಮನ್ನು ಉಪೇಕ್ಷೆ ಮಾಡುವ ಅಥವಾ ನಮ್ಮ ಹೆಸರೆತ್ತಿ ದೂಷಿಸುವ ಭಾರತೀಯ ಎಡಪಂಥದವರನ್ನು ಟೀಕಿಸಿದ್ದೇವೆ. ಕಳೆದ ಅನೇಕ ವರ್ಷಗಳ ಕಾಲ ಅವರ ಸಂಪರ್ಕವಿರಲಿಲ್ಲ, ಹಾಗಾಗಿ ಈ ಅವಕಾಶವು ನಮಗೆ ಬಹಳ ದಿನಗಳ ವಿಚಾರ ವಿನಿಮಯಕ್ಕೆ ಒದಗಿಬಂದಿದೆ ಎಂದು ತಿಳಿದಿದ್ದೇನೆ. ನಾವು ಭಾರತದ ಶೈಕ್ಷಣಿಕ ವಲಯದಲ್ಲಿ ಎಡಪಂಥೀಯರ ಪ್ರಾಬಲ್ಯ, ಅಯೋಧ್ಯೆ-ಬಾಬರಿ ಮಸೀದಿಯ ವಿವಾದ, ’ಸತಿ’ ಪದ್ಧತಿಯ ಬಗ್ಗೆ ಇರುವ ತಪ್ಪು ತಿಳುವಳಿಕೆಗಳು, ಮೂರ್ತಿಭಂಜನೆ ಮತ್ತು ಸ್ವದೇಶೀ ಇಂಡಾಲಜಿಯ ಸಂಶೋಧನಾ ವಲಯ ಇತ್ಯಾದಿ ಹಲವಾರು ವಿಚಾರಗಳನ್ನು ಚರ್ಚಿಸಿದೆವು.
ಭಾರತದ ಶೈಕ್ಷಣಿಕ ವಲಯದಲ್ಲಿ ಎಡಪಂಥೀಯರ ಪ್ರಾಬಲ್ಯ:
ಭಾರತೀಯ ಶಿಕ್ಷಣವಲಯದಲ್ಲಿ ಬುದ್ಧಿವಂತರಿಗೆ ನೀಡುವ ಪ್ರೋತ್ಸಾಹಧನದ ವಿಚಾರವಾಗಿ ಚರ್ಚಿಸುವಾಗ ಎಡಪಂಥದ ಪ್ರಬಲ ವಿದ್ವಾಂಸರಾದ ಇರ್ಫಾನ್ ಹಬೀಬ್ ಮತ್ತು ರೋಮಿಲಾ ಥಾಪರ್‌ರ ಅಡಿಯಲ್ಲಿ ಶಿಕ್ಷಣವಲಯದಲ್ಲಿ ಉಸಿರುಕಟ್ಟಿಸುವ ವಾತಾವರಣವು ಇತ್ತು ಎಂದು ಅವರು ಅಭಿಪ್ರಾಯಪಟ್ಟರು. ಅವರು ಶಿಕ್ಷಣವಲಯದಲ್ಲಿ ಸಹಾಯಧನವನ್ನು ನೀಡುವ ಎಲ್ಲ ಸಂಸ್ಥೆಗಳ ಮೇಲೆಯೂ ಮತ್ತು ಸಂಶೋಧನೆ ಮಾಡಲು ಬರುವ ಎಲ್ಲ ವಿದ್ಯಾರ್ಥಿಗಳೂ ಇವರ ಅಡಿಯಲ್ಲಿ, ಇವರ ದೃಷ್ಟಿಕೋನದ ಪ್ರಕಾರವೇ ಕೆಲಸ ಮಾಡುವಂತೆ ತಮ್ಮ ಸಂಪೂರ್ಣ ನಿಯಂತ್ರಣವನ್ನು ಚಲಾಯಿಸಿಕೊಂಡಿದ್ದರು. ಹೀಗಾಗಿ ಇವರ ವಿಚಾರಗಳನ್ನು ಬೆಂಬಲಿಸದವರಿಗೆ ಅಥವಾ ಬೇರೆ ಆಲೋಚನೆಯ ಧಾಟಿ ಹೊಂದಿದವರಿಗೆ ಯಾವ ಇತಿಹಾಸಕಾರನಾಗಿ ಅಥವಾ ವಿದ್ವತ್ತಿನಲ್ಲಿಯೂ ತಮ್ಮ ಗುರುತನ್ನು ಉಳಿಸಲು ದುಸ್ತರವಾಗುತ್ತಿತ್ತು. ಯಾರಾದರೂ ವಿಭಿನ್ನವಾದ ಅಥವಾ ವೈರುಧ್ಯದ ದೃಷ್ಟಿಕೋನವನ್ನು ಹೊಂದಿದ್ದರೆ ಅವರು ತಮ್ಮದೇ ಆದ ಮಾರ್ಗವನ್ನು ರೂಪಿಸಿಕೊಳ್ಳ ಬೇಕಾಗಿತ್ತು. ಆ ಮಾರ್ಗವು ಏಕಾಂಗಿಯಾಗಿದ್ದು ಅವರು ತಮ್ಮಷ್ಟಕ್ಕೆ ತಾವೇ ನಡೆಯಬೇಕಾಗಿತ್ತು.