ವಿಷಯದ ವಿವರಗಳಿಗೆ ದಾಟಿರಿ

Archive for

6
ಮೇ

ಹೊಳೆಯಲ್ಲಿ ಇಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?!!

– ರಾಘವೇಂದ್ರ ನಾವಡ ಕೆ ಎಸ್

  ಊಹೆ ನಿಜವಾಗುವ ಎಲ್ಲಾ ಲಕ್ಷಣಗಳೂ ಕ೦ಡುಬರುತ್ತಿವೆ! ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನ ಠುಸ್ಸಾಗುವ ಎಲ್ಲಾ ಸಾಧ್ಯತೆಗಳೂ ಇವೆ! ಇಲ್ಲಿ ನಾನೀಗ ಹೇಳ ಹೊರಟಿರುವುದು ಅಣ್ಣಾ ಹಜಾರೆಯವರ ಶಕ್ತಿ ಕು೦ದಿತೆ೦ದಲ್ಲ… ಅಥವಾ ಉತ್ತರ ಕುಮಾರನ ಪೌರುಷವನ್ನು ಅಣ್ಣಾ ಹಜಾರೆ ತೋರಿಸಿದರೆ೦ದಲ್ಲ! ಬದಲಾಗಿ ಹೇಗೆ ನಾವೇ ಆರಿಸಿ ಕಳುಹಿಸಿದ ನಮ್ಮ ಕಲ್ಯಾಣದ ಬಗ್ಗೆ ಯೋಚಿಸಬೇಕಾದ ನಾಯಕರು ತಮ್ಮನ್ನು ಹಾಗೂ ತಮ್ಮ ಗಳಿಕೆಯನ್ನು ರಕ್ಷಿಸಿಕೊಳ್ಳಲು ಮು೦ದಾಗಿರುವ ಬಗ್ಗೆ.. ಅದಕ್ಕಾಗಿ ತುಳಿದಿರುವ ಹಾದಿಗಳ ಬಗ್ಗೆ..!

ಮೊದಲನೆಯದಾಗಿ ಭಾರತದ ಯಾವ ರಾಜಕೀಯ ನಾಯಕನಿಗೂ ಲೋಕಪಾಲ ಮಸೂದೆಯ ಮ೦ಡನೆಯಾಗುವುದು ಬೇಕಿಲ್ಲ! ಆ ಮೂಲಕ ತಾವು ಬಟಾ ಬಯಲಿಗೆ ಬೀಳುವುದು ಇಷ್ಟವಿಲ್ಲ.. ತನ್ನ ಮಕ್ಕಳು ಮರಿ ಮೊಕ್ಕಳು ಅವರ… ಹೀಗೆ ಹತ್ತಾರು ತಲೆಮಾರುಗಳು ಆರಾಮಾಗಿ ಕುಳಿತು ತಿನ್ನಲೆ೦ದು ಮಾಡಿಕೊ೦ಡ ಆಸ್ತಿಯನ್ನು ಯಾರು ತಾನೇ ತನ್ನ ಜಮಾನಾದಲ್ಲೇ ಅದನ್ನು ಕಳೆದುಕೊಳ್ಳಲು ಇಷ್ಟ ಪಡುತ್ತಾನೆ? ಮು೦ದೆ ನಮ್ಮ ಅಪ್ಪ ನಮಗಾಗಿ ಏನನ್ನೂ ಮಾಡಿಟ್ಟಿಲ್ಲ! ಎ೦ಬ ಮಾತನ್ನು ಕೇಳಲು ಅವರು ಸಿಧ್ಧರಿಲ್ಲ! ನಾಯಕರ ಈ ಹಪಾಹಪಿಯೇ ಆದಷ್ಟೂ ಹಜಾರೆ ಹಾಗೂ ಅವರ ಟೀಮ್ ನ ದಿಕ್ಕು ತಪ್ಪಿಸುವತ್ತ ತನ್ನೆಲ್ಲಾ ಪಟ್ಟುಗಳನ್ನೂ ಬಳಸಿಕೊ೦ಡು ಆಖಾಡಕ್ಕೆ ಇಳಿದಿದೆ! ಮು೦ದೇನು? ಕಾದು ನೋಡಬೇಕು!!

Read more »

6
ಮೇ

ಅಮೇರಿಕಾ ಕಲಿಸಿದ ಪಾಠ…?

 ಅರೆಹೊಳೆ ಸದಾಶಿವ ರಾವ್

ಅಂತ:ಶಕ್ತಿ ಮತ್ತು ಅಂತರಿಕ ದೌರ್ಬಲ್ಯದ ಬಗ್ಗೆ ಒಂದು ಮಾತಿದೆ. ಅಂತ:ಶಕ್ತಿ ಲಾಭದಾಯಕವಾದರೆ, ಅಂತರಿಕ ದೌರ್ಬಲ್ಯ ಅಪಾಯಕಾರಿ. ವಿಶ್ವದ ಉಗ್ರರ ಪಟ್ಟಿಯಲ್ಲಿ ನಂ.೧ ನೆಯ ಸ್ಥಾನದಲ್ಲಿದ್ದವನು ಒಸಾಮಾ ಬಿನ್ ಲ್ಯಾಡೆನ್. ಅಮೇರಿಕಾ ಅವನನ್ನು ಹತ್ತುವರ್ಷಗಳ ಭೇಟೆಯ ನಂತರ ಕೊಂದು ಮುಗಿಸಿದೆ. ಗುಣಕ್ಕೆ ಮತ್ಸರವಿಲ್ಲದಂತೆ ಭಾವಿಸಿದರೆ, ಅಮೆರಿಕಾಕ್ಕೆ ಈ ವಿಷಯದಲ್ಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು.
ಹಾಗೇ ಸುಮ್ಮನೇ ಒಮ್ಮೆ ನಮ್ಮ ಪರಿಸ್ಥಿತಿಗೆ ಈ ಘಟನೆಯನ್ನು ಸಮೀಕರಿಸಿಕೊಳ್ಳೋಣ. ಭಾರತದ ಪವಿತ್ರ ಸಂಸತ್ತಿನ ಮೇಲೆ ಉಗ್ರ ಅಫ್ಜಲ್ ದಾಳಿ ಮಾಡಿದ ಮತ್ತು ಸಿಕ್ಕಿ ಬಿದ್ದ. ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿಯಲ್ಲಿ ಕಸಬ್ ಸಿಕ್ಕಿ ಬಿದ್ದ. ನಾವು, ಇಬ್ಬರನ್ನೂ ಕಟ Pಟೆಯಲ್ಲಿ ನಿಲ್ಲಿಸಿದೆವು. ಇಬ್ಬರಿಗೂ ಅವರ ಪರವಾಗಿ ವಾದ ಮಾಡಲೆಂದು, ಒಲ್ಲೆ ಒಲ್ಲೆನೆಂದರೂ ವಕೀಲರನ್ನು ಸರಕಾರಿ ಖರ್ಚಿನಲ್ಲಿ ಒದಗಿಸಿಕೊಟ್ಟೆವು. ವಾದ ವಿವಾದಗಳು ನಡೆದುವು. ಎಲ್ಲರೂ ನಿರೀಕ್ಷಿಸಿದ್ದಂತೆ, ನ್ಯಾಯಾಲಯ ನ್ಯಾಯ ನೀಡಿತು. ಜೊತೆಗಿದ್ದ ಕೆಲವರು ಆರೋಪ ಮುಕ್ತರಾದರೆ, ಈ ದಾಳಿಗಳ ರೂವಾರಿಗಳಾದ ಅಫ್ಜಲ್, ಕಸಬ್‌ರಿಗೆ ಮರಣದಂಡನೆಯನ್ನು ನ್ಯಾಯಾಲಯ ಘೋಷಿಸಿತು. ಈಗ ಕಸಬ್ ಕಾನೂನು ಸಮರ ಮುಂದುವರಿಸಿದ್ದರೆ, ಅಫ್ಜಲ್ ದಯಾ ಭಿಕ್ಷೆಯನ್ನುಕೇಳಿಕೊಂಡು, ಕೆಲವು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಅಫ್ಜಲ್‌ನ ಕಥೆ ಏನು ಎಂಬುದಕ್ಕೆ ಯಾವ ಸರಕಾರವೂ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ‘ರಾಜಕೀಯ’ ಲೆಕ್ಕಾಚಾರದಲ್ಲಿ ಸಿಗಬಹುದಾದ ಲಾಭಕ್ಕಾಗಿ ಕಾದು ಕುಳಿತಿದ್ದಾರೆ.
ಹಲವು ಸಾವಿಗೆ ಕಾರಣರಾದ ಉಗ್ರರಾದ ಅಫ್ಜಲ್ ಮತ್ತು ಕಸಬ್‌ರ ‘ರಕ್ಷಣೆ’ಗಾಗಿ ನಮ್ಮ ಸರಕಾರಗಳು ಕೋಟಿ ಕೋಟಿ ವ್ಯಯಿಸುತ್ತಿವೆ. ಮತ್ತೊಂದರ್ಥದಲ್ಲಿ ನಮ್ಮ ಮೇಲೆ, ನಮ್ಮ ಸ್ವಾಭಿಮಾನದ ಮೇಲೆ ಮತ್ತು ತೀರಾ ನಮ್ಮ ಮಾತ್ರಭೂಮಿಯ ಮೇಲೆ, ದಾಳಿಯ ಮೂಲಕ ಅಕ್ಷಮ್ಯ ಅಪರಾಧವನ್ನು ಮಾಡಿದ ಈ ಉಗ್ರರನ್ನು ನಾವು ‘ರಕ್ಷಿ’ಸುತ್ತಿದ್ದೇವೆ. Read more »

6
ಮೇ

ಬ್ಲಾಗು ಕದಿಯುವ ಪತ್ರಿಕೆಗಳಿವೆ ಎಚ್ಚರ…!

– ನಿಲುಮೆ

ಇಂತದ್ದೊಂದು ತಲೆಬರಹ ಕೊಡುವುದೇ ಅಷ್ಟು ಚಂದ ಕಾಣುತ್ತಿಲ್ಲ,ಆದರೇನು ಮಾಡುವುದು ನಡೆದ ವಿಷಯವನ್ನ ಹೇಳ ಹೊರಟಾಗ ಹೀಗೆ ಆಗುತ್ತದೆ. ಕಳೆದ ತಿಂಗಳ ೨೭ರಂದು ಅರೆಹೊಳೆ ಸದಾಶಿವ ರಾವ್ ಅವರ ’‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು’ ಲೇಖನ ಹಾಗೆ ೨೫ರಂದು ರಶ್ಮಿ ಕಾಸರಗೋಡು ಅವರ  ’‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ’ ಅನ್ನುವ  ಲೇಖನವನ್ನ ನಿಲುಮೆಯ ಓದುಗರೆಲ್ಲ ನೋಡಿಯೆ ಇರುತ್ತೀರಿ. ಕಳೆದ ೨೮ರಂದು ’ಕರಾವಳಿ’ಯ ಪತ್ರಿಕೆಯೊಂದು ಏಕಾಏಕಿ ಲೇಖಕ/ನಿಲುಮೆಯ ಅನುಮತಿಯಿಲ್ಲದೆ ಈ ಲೇಖನಗಳನ್ನ ಕದ್ದಿದ್ದು ಅಲ್ಲದೇ ಕಡೆ ಪಕ್ಷ ಕೃಪೆ ಅಂತಲೂ ಹಾಕದೇ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ’ಕರಾವಳಿ’ಯ ಜನರಿಗೆ ಹಂಚಿದೆ.(ಆ ಪತ್ರಿಕೆಯ ಹೆಸರಿಗೆ ನಮ್ಮಿಂದ ಸ್ವಲ್ಪವು ಧಕ್ಕೆ ಬಾರದಿರಲಿ ಅನ್ನುವ ಏಕೈಕ ಉದ್ದೇಶದಿಂದ ಆ ಪತ್ರಿಕೆಯ ಹೆಸರನ್ನ ನೇರವಾಗಿ ಬರೆಯುತ್ತಿಲ್ಲ).

Read more »