ವಿಷಯದ ವಿವರಗಳಿಗೆ ದಾಟಿರಿ

Archive for

13
ಮೇ

ಶಾಪ ವಿಮೋಚನೆಯಾಗದ ಅಹಲ್ಯೆಯರು…

– ರೂಪ ರಾವ್,ಬೆಂಗಳೂರು

ರಾಮಾಯಣದ ಸೀತಾ ಸ್ವಯಂವರದ ನಾಟಕದ ತಾಲೀಮು ನಡೆಯುತ್ತಿತ್ತು.
ಅದರಲ್ಲಿ ಬರುವ ಅಹಲ್ಯಾ ಶಾಪ ವಿಮೋಚನೆಯ ಪ್ರಸಂಗವನ್ನೂ  ವೇದಿಕೆಯಮೇಲೆ ತರೋಣ

“ಗೀತಾ ಅಹಲ್ಯಾ ಪಾತ್ರ ನೀನೇ ಮಾಡಬೇಕು .” ಮೇಡಂ ನನ್ನನ್ನು ಈ ಪಾತ್ರಕ್ಕೆ ಕರೆದಾಗ ನಾನು ಕಕ್ಕಾಬಿಕ್ಕಿ, ಜೊತೆಗೆ ಒಮ್ಮೆಗೆ,ಮಾಡಬಾರದೆನಿಸಿತು.
“ಮೇಡಂ ನಾ………….ನು …………ಈ ಪಾರ್ಟ್ ಮಾಡಲ್ಲ. ………” ಹಿಂಜರಿಕೆಯಿಂದಲೇ ನುಡಿದೆ.

“ಯಾಕೆ ಗೀತಾ “? ನನ್ನತ್ತಲೇ ತೀಕ್ಷ್ಣವಾಗಿ ನೋಡುತ್ತಾ

“ಮೇಡಂ iam not happy with Ahalya’s charactor. ತುಂಬಾ ಸಲ ಅನ್ಕೂಂಡಿದ್ದೀನಿ ಯಾಕೆ ಈ ಪಂಚ ಮಹಾ ಕನ್ನಿಕೆಯರ ಹೆಸರಲ್ಲಿ  ಅಹಲ್ಯಾ ಹೆಸರು ಸೇರಿದೆ ಅಂತ?”
“ಯಾಕಮ್ಮಾ”? ಮತ್ತೆ ಪ್ರಶ್ನೆ ಎಸೆದರು.
” ಹಾಗಲ್ಲ ಮೇಡಂ ಗಂಡ ಇರದಿದ್ದಾಗ  ಮತ್ತೊಬ್ಬನ ಜೊತೆ ಸಂಬಂಧ ಹೊಂದಿದವಳು. ಅಸಲಿಗೆ ಆ ಕಥೆಯೇ ಬೇಕಿರಲಿಲ್ಲ .ರಾಮನ ಔನ್ನತೆಯನ್ನ ಎತ್ತಿ ತೋರೋದಿಕ್ಕೆ ಈ ಕತೆ ಸೇರಿಸಿದ್ದಾರೆ ಅಷ್ಟೇ.

“ಸರಿ.ಆಯ್ತು,ನಿನಗೆ ಯಾವ ಪಾತ್ರ ಬೇಕೋ ಅದನ್ನೇ ಚೂಸ್ ಮಾಡು.ಆದರೂ ಪಾತ್ರಕ್ಕಿಂತ ಪಾತ್ರಧಾರಿಯ ಆ ಪಾತ್ರದಲ್ಲಿ ಹೇಗೆ ಇನ್‌ವಾಲ್ವ್ ಆಗ್ತಾನೆ ಅನ್ನೋದು ಮುಖ್ಯ. ಮತ್ತೆ ಪುರಾಣದಲ್ಲಿ ಕೇಳಿದ ಕಥೆಯನ್ನ ಆ ನೆಲೆಯಲ್ಲಿಯೇ ನೋಡುವುದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ನೋಡಿದರೆ ಪಾತ್ರ ಇಂಟರೆಸ್ಟಿಂಗ್ ಆಗಿರುತ್ತೆ. ಅಹಲ್ಯಾ ಜೀವನದಲ್ಲಿ ನಿಜಕ್ಕೂ ಏನು ನಡೆದಿರಬಹುದು ಅನ್ನೋದನ್ನ ಯೋಚಿಸಿದರೆ ಆ ಪಾತ್ರ ನಿಜಕ್ಕೂ ತುಂಬಾ ಕಾಂಪ್ಲಿಕೇಟೆಡ್ ಅನ್ಸುತ್ತೆ. “ಮೇಡ್ಂ ಒಂದೇ ಸಲಕ್ಕೆ ಒಪ್ಪಿ, ಜೊತೆಗೇ ನನ್ನ ಮನಸಲ್ಲಿ ಅಲೆಯನ್ನು ಎಬ್ಬಿಸಿದರು.
Read more »

13
ಮೇ

ಅಟ್ಲಾಂಟಿಕ್ ಸಾಗರ ಸಮ್ಮುಖದಲ್ಲಿ….

– ಅಮಿತಾ ರವಿಕಿರಣ್

”ದೇಶ ಸುತ್ತು ಕೋಶ ಓದು”  ಅನ್ನೋ ಗಾದೆ ಮಾತು ನನಗೇ ಬಹಳ ಇಷ್ಟಾ….ಯಾಕಂದ್ರೆ ಅದರಲ್ಲಿ ತಿರುಗಾಟ ಇಷ್ಟಾ ಪಡೋರ್ ಬಗ್ಗೆ ಒಂದು ಒಲುಮೆ ಇದೆಯಲ್ಲ ಅದಕ್ಕೆ….!!ಬಾಲ್ಯದಿಂದಲೂ ನನಗೇ ತಿರುಗಾಟ ಅತಿ ಪ್ರಿಯವಾದ ವಿಷಯ ಶಾಲೆಯ ಟ್ರಿಪ್ಪ್ ಗಳನ್ನೂ ನಾ ಯಾವತ್ತು ಮಿಸ್ ಮಾಡಿಲ್ಲ…ಅದರ ನಂತರ ಸಂಗೀತ ನನ್ನ ವೃತ್ತಿ ಆಯಿತು ಅಲ್ಲಿ ಸ್ಪರ್ಧೆ…ಇಲ್ಲಿ ಕಾರ್ಯಕ್ರಮ ಅಂತ ಬರೀ ತಿರುಗಾಟ ನಡೆಸಿದ್ದೆ… ,ಕೆ ಎಸ್ಸ್ ಆರ್ ಟಿ ಸಿ ಬಸ್ಸು ಅಂದರೆ ನನ್ನ ಎರಡನೇ ತವರು ..ಕಾಲೇಜ್ ಗೆ ಹೋಗಿದ್ದು ಧಾರವಾಡ್ ದಲ್ಲಿ..ಮೊದಲಿಗೆ ಕರ್ನಾಟಕ ಕಾಲೇಜ್ ಸಂಗೀತ ವಿದ್ಯಾಲಯ ,,,,ಆಮೇಲೆ ಕರ್ನಾಟಕ ವಿಶ್ವ ವಿದ್ಯಾಲಯ…ನನ್ನೂರಿಂದ ೭೬ ಕಿ ಮಿ  ದೂರದಲ್ಲಿದ್ದರು ನಾ ದಿನ ಓಡಾಡಿಯೇ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ್ದು….

ಮದುವೆ ಆಗೋ ಹೊತ್ತಿಗೆ…ಸ್ವಲ್ಪ ದಿನ ಮನೇಲಿರೋ ಭಾಗ್ಯ ದೊರಕಿದ್ದು…ಮೊದ ಮೊದಲು ಬಹಳ ಪ್ರೀತಿಸಿದೆ ಈ ವಿರಾಮವನ್ನ…ಆದರೆ ಕಾಲಿಗೆ ನಾಯಿಗೆರೆ ಇದ್ದವರನ್ನ ಕಟ್ಟಿ ಹಾಕಿದಂತಾಗಿತ್ತು…ಮದುವೆ ಮುಂಚಿನಿಂದಲೂ ದಿನಪತ್ರಿಕೆಯಲ್ಲಿ ನಿಯತಕಾಲಿಕೆ ಯಲ್ಲಿ ಬರುತ್ತಿದ್ದ ಎಲ್ಲಾ ಪ್ರವಾಸಿ ತಾಣಗಳ ಕುರಿತಾದ ಮಾಹಿತಿಯನ್ನು ಕತ್ತರಿಸಿ ಅಂಟಿಸಿ …ಮಾಡಿದ ಆ ಪುಸ್ತಕದ ಚಿತ್ರಗಳನ್ನು ನೋಡಿ ನೋಡಿ ಖುಷಿ ಪಡ್ತಿದ್ದೆ…ಪತಿದೇವನಿಗೆ ಪದೇ ಪದೇ ಹೇಳ್ತಿದ್ದೆ.”..ಒಮ್ಮೆ ನಿಮ್ಮ ಜೊತೆ ಸಮುದ್ರ ದಂಡೆಯಲ್ಲಿ ಬರಿಗಾಲಲ್ಲಿ ಕಿಲೋಮೀಟರ್ ಗಳಷ್ಟು ಸುಮ್ಮನೆ ಸುತ್ತಾಡಬೇಕು …ರಾಶಿ ಫೋಟೋ ತಗಿಬೇಕು.”.ಅಂತೆಲ್ಲಾ …”.sure sure”.. ಅಂದು ಪ್ರಾಮಿಸ್ ಮಾಡಿದ್ದೇನೋ ನಿಜ….ಸಮುದ್ರ ದಂಡೆ ಮನೇ ಯಿಂದ ೨ ಕಿಲೋಮೀಟರ್ ಅಂತರದಲ್ಲಿದ್ದರು ಏನೋ ಒಂದು ಕಾರಣಕ್ಕೆ ಪ್ರತಿಬಾರಿ ತಪ್ಪಿ ಹೋಗುತ್ತಿತ್ತು…