ವಿಷಯದ ವಿವರಗಳಿಗೆ ದಾಟಿರಿ

Archive for

19
ಮೇ

ಸಾವಿಗೊಂದು ಸಲಾಮು

– ವಿಜಯ್ ಹೆರಗು

ಸಾವಿಲ್ಲದ ಮನೆಯ ಸಾಸಿವೆಯ ತಾ ಎಂದ ಬುದ್ಧ
ಮನೆಗಳು ಸಿಕ್ಕವು, ಸಾಸಿವೆಯೂ ಸಿಕ್ಕಿತು
ಸಿಗಲೇ ಇಲ್ಲ ಸಾವಿಲ್ಲದ ಮನೆ

Read more »

19
ಮೇ

ಕಲೆಯ ಉಳಿವಿಗೆ ಕಲಾವಿದನೂ ಜವಾಬ್ದಾರ!

-ಅರೆಹೊಳೆ ಸದಾಶಿವರಾವ್

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಶ್ರೀಕುಂಬ್ಳೆ ಸುಂದರ ರಾವ್ ಅವರು ಮಾತಾಡುತ್ತಾ ಯಕ್ಷಗಾನದ ಉಳಿವಿಗೆ ನಾವೆಲ್ಲರೂ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಹೇಳುತ್ತಿದ್ದರು. ಮುಖ್ಯವಾಗಿ ಇಂದು ಮಂದಾರ್ತಿ, ಕಟೀಲುಗಳಂತಹ ಹರಕೆಯ ಆಟಗಳ ಅತಿಯಾದ ಬೇಡಿಕೆ ಇರುವ ಮೇಳಗಳು, ತಮ್ಮ ‘ವೀಳ್ಯ’ದಲ್ಲಿ ಕೇವಲ ಐದು ನೂರು ರೂಪಾಯಿಗಳನ್ನು ಹೆಚ್ಚುವರಿಯಾಗಿ ಸೇವೆ ಮಾಡಿಸುವವರಿಂದ ಪಡೆದು, ಅದನ್ನು ಮಕ್ಕಳಿಗೆ ಯಕ್ಷಶಿಕ್ಷಣಕ್ಕೆ ಬಳಸಬಹುದು ಎಂಬ ಸಲಹೆಯನ್ನು ಅವರಿತ್ತರು. ಇದು ನಿಜಕ್ಕೂ ಸ್ವಾಗತಾರ್ಹ ಸಲಹೆ ಮತ್ತು ಸಂಬಂಧಿಸಿದವರು ಈ ಬಗ್ಗೆ ಹೆಜ್ಜೆ ಇಡಬಹುದು ಎಂದು ಆಶಿಸೋಣ.

ಇಂದು ಯಕ್ಷಗಾನವನ್ನು ನೋಡುವವರ ಸಂಖ್ಯೆ ಮತ್ತು ಆ ಕಲೆಗೆ ಸಿಗುತ್ತಿರುವ ಗೌರವ ಕಡಿಮೆಯಾಗಿದೆ ಎಂಬ ಮಾತೂ ಕೇಳಿಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕನಷ್ಟೇ ಕಲಾವಿದನೂ ಜವಾಬ್ದಾರಿಯನ್ನು ಅರಿತು ನಡೆಯುವ ಅನಿವಾರ್ಯತೆ ಇದೆ. ಎಲ್ಲೆಡೆಯಲ್ಲಿಯೂ ಪ್ರೇಕ್ಷಕ ಬದಲಾಗಬೇಕು ಎಂಬ ಮಾತುಗಳೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಹಾಗಾದರೆ ಕಲಾವಿದ ಎಷ್ಟರ ಮಟ್ಟಿಗೂ ಜವಾಬ್ದಾರನೇ ಅಲ್ಲವೇ ಎಂಬ ಪ್ರಶ್ನೆ ಏಳುವುದೂ ಸಹಜ. ನನ್ನ ಒಂದೆರಡು ಅನುಭವಗಳನ್ನು ಇಲ್ಲಿ ವಿವರಿಸಬೇಕೆನ್ನುತ್ತದೆ.

ಇತ್ತೀಚೆಗೆ ನಾನು ನನ್ನ ಊರಿನಲ್ಲಿ ಒಂದು ವಿಶಿಷ್ಠ ಮತ್ತು ಕಲಾತ್ಮಕ ಯಕ್ಷಗಾನ ಪ್ರದರ್ಶನವೊಂದನ್ನು ಏರ್ಪಡಿಸುವ ಯೋಜನೆ ಹಾಕಿಕೊಂಡೆ. ಅದರಂತೆ ಕೆಲವು ಖ್ಯಾತ ಕಲಾವಿದರನ್ನು ಸಂಪರ್ಕಿಸಿ, ಯಕ್ಷಗಾನದ ವ್ಯವಸ್ಥೆ ಮಾಡುವಂತೆ ಒಬ್ಬ ಸಂಘಟಕನಲ್ಲಿ ಕೇಳಿಕೊಂಡೆ. ಅದರಂತೆ ಅವರು ಕೆಲವರನ್ನು ಸಂಪರ್ಕಿಸಿ ದಿನಾಂಕ, ಸ್ಥಳ ಎಲ್ಲಾ ತಿಳಿಸಿ, ನಿಗದಿ ಪಡಿಸಿಕೊಂಡು, ಕೊನೆಗೂ ಭಾಗವಹಿಸುವ ಕಲಾವಿದರ ಪಟ್ಟಿ ನೀಡಿದರು. ನಾವದನ್ನು ಹಾಗೆಯೇ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದೆವು, ಪ್ರಚಾರವನ್ನೂ ನೀಡಿದೆವು. ಕೊನೆಗೆ ಪ್ರದರ್ಶನಕ್ಕೆ ಇನ್ನೆರಡು ದಿನ ಇದೆ ಎನ್ನುವಾಗ, ಒಬ್ಬೊಬ್ಬರೇ ಕಲಾವಿದರು ತಮಗೆ ಬgಲಾಗುವುದಿಲ್ಲ ಎಂದರು. ಒಬ್ಬ ಕಲಾವಿದನಂತೂ, ಪ್ರದರ್ಶನದ ದಿನ ಮಧ್ಯಾಹ್ನ ಕೇವಲ ಒಂದು ಎಸ್‌ಎಂಎಸ್ ಕಳಿಸಿ ತನಗೆ ಬರಲಾಗದು ಎಂದು, ಮರಳಿ ಕರೆ ಮಾಡಿದರೆ ಕರೆಯನ್ನೇ ಸ್ವೀಕರಿಸಲಿಲ್ಲ. ಮತ್ತೊಬ್ಬರು ರಾತ್ರಿ ಹನ್ನೆರಡರ ನಂತರ ತಮಗಿರುವ ವೇಷಕ್ಕೆ ಸರಿಯಾಗಿ ಹತ್ತು ಘಂಟೆಗೆ ಬರುತ್ತೇನೆ ಎಂದವರೂ, ಹತ್ತರ ನಂತರ ಫೋನಿಗೇ ಸಿಗಲಿಲ್ಲ!. ಕೊನೆಗೂ ಸಂಘಟಿಸಿದವರೂ ಖುದ್ದು ಕಲಾವಿದರಾಗಿದ್ದರಿಂದ ಎರಡೆರಡು ವೇಷಗಳನ್ನು ಅವರೇ ಮಾಡಿ ಪ್ರದರ್ಶನ ಪೂರೈಸಿದರು!. ಆಮಂತ್ರಣ ಪತ್ರಿಕೆ ನೋಡಿ ಬಂದವರೆಲ್ಲರೂ ಜನರನ್ನು ಸೇರಿಸಲು ಇದು ಸಂಘಟಕರು (ನಾನು) ಮಾಡಿದ ಮೋಸ ಎಂಬಂತೆ ಬೈದು ಮರಳಿದರು. ಸದ್ಯಕ್ಕೆ ಇದು ಬಯಲಾಟವಾಗಿದ್ದರಿಂದ ನಾನು ಉಳಿದುಕೊಂಡೆ. Read more »

19
ಮೇ

ನಿನ್ನ ಕೈ ಹಿಡಿದು…

-ಹರೀಶ್ ಅತ್ರೇಯ

ಕೈ ಹಿಡಿದವಳೇ,

ಚರಿತ್ರೆಯಲ್ಲಿ ಅನೇಕ ಪ್ರೇಮ ಕಥೆಗಳು ಬ೦ದು ಹೋಗಿವೆ. ಹಾಗೆ ಹೋಗುತ್ತಾ ಪ್ರೇಮವನ್ನು ಗಟ್ಟಿಗೊಳಿಸುತ್ತಾ ಬ೦ದಿದೆ. ಸಣ್ಣದೊ೦ದು ನಗುವಿಗೆ, ತುದಿಗಣ್ಣಿನ ನೋಟಕ್ಕೆ, ಚ೦ದನೆಯ ಮೈ ಮಾಟಕ್ಕೆ ಸೋಲುವ ಮನಸ್ಸಾಗಲೀ ಯೌವ್ವನ ಬಿಸಿ ಪ್ರೇಮವಾಗಲಿ ನಮ್ಮದಾಗಿರಲಿಲ್ಲ. ಅದೊ೦ದು ಪ್ರಬುದ್ಧ ಸಮ್ಮಿಲನ, ಸಮಾನ ಮನಸ್ಸಿನ ಸ೦ಕೀರ್ತನ. ಇಬ್ಬರ ಕಣ್ಣುಗಳು ಒ೦ದೇ ಗುರಿಯನ್ನು ನೋಡುತ್ತಾ, ಕವಲು ದಾರಿಗಳು ಸಿಕ್ಕಾಗ ಒ೦ದೇ ದಾರಿಯನ್ನು ಆಯ್ದುಕೊಳ್ಳುತ್ತಾ ಒಬ್ಬರಿಗೆ ತಿಳಿಯದ೦ತೆ ಮತ್ತೊಬ್ಬರು ಒ೦ದೇ ರೀತಿಯಲ್ಲಿ ಆಲೋಚಿಸುತ್ತಾ ನಡೆಯುವಿಕೆ ಏಕಮನದ, ಭಿನ್ನ ದೇಹದವರಿಗೆ ಮಾತ್ರ ಸಾಧ್ಯ. ಯಾವುದೋ ಒ೦ದು ವಿಷಯದಲ್ಲಿ ಭಿನ್ನ ರಾಗ ಹಾಡಿದರೂ ಕಡೆಗೆ ಅದು ಇಬ್ಬರಿಗೂ ಸಮ್ಮತದ ರೀತಿಯಲ್ಲಿ ಯಾರ ವೈಚಾರಿಕತೆಗೂ ಧಕ್ಕೆ ತರದೆ ಬದುಕುಳಿಯುವುದಿದೆಯಲ್ಲ ಅದೊ೦ದು ಸೋಜಿಗ ಮತ್ತು ಪ್ರೇಮ. ಮೊದಲ ಬಾರಿಗೆ ನೀನು ನನ್ನ ಕೈ ಹಿಡಿದಾಗ ನನಗನಿಸಿದ್ದು ಇಷ್ಟು. ಅದೊ೦ದು ನವಿರಾದ ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇಬ್ಬರೂ ನಮ್ಮ ಮೆಚ್ಚಿನ ವಿಷಯದ ಬಗ್ಗೆ ಗಾಢವಾಗಿ ಯೋಚಿಸುತ್ತಾ ನಡೆಯುತ್ತಿದ್ದಗ ಫಕ್ಕನೆ ಬ೦ದ ಬಸ್ಸೊ೦ದು ನಿನ್ನ ಸಮೀಪದಲ್ಲೇ ಹಾದು ಹೋಯ್ತಲ್ಲ! ಗಾಬರಿಯಿ೦ದ ನೀನು ನನ್ನ ಕೈ ಹಿಡಿದೆ ಸಿನಿಮಾಗಳಲ್ಲಿ ನಡೆದ೦ತೆ ನನ್ನ ಮೈಯಲ್ಲಿ ವಿದ್ಯುತ್ಪ್ರವಾಹವೇನೂ ಆಗದಿದ್ದರೂ ಹಿತವಾದ ಪ್ರೇಮದ, ರಕ್ಷಣಾತ್ಮಕ, ಮಮತೆಯ ಭಾವವನ್ನು ಆ ಹಿಡಿತದಲ್ಲಿ ಕ೦ಡೆ. ಗಾಬರಿಗೊ೦ಡದ್ದು ನೀನು, ಹಿಡಿದದ್ದು ನನ್ನ ಕೈ ಆದರೆ ಹುಶಾರುಎ೦ದು ಹೇಳಿದ್ದು ನನಗೇ! ನಕ್ಕುಬಿಟ್ಟಿದ್ದೆ. ರಸ್ತೆ ಕಡೆಗೆ ನಿನ್ನನ್ನು ಬಿಟ್ಟದ್ದು ನನ್ನ ತಪ್ಪು ಮಾತನಾಡುತ್ತಾ ನೀನು ರಸ್ತೆಯ ಮಧ್ಯಭಾಗಕ್ಕೆ ನಡೆದುಬಿಡುತ್ತೀಯ ಎ೦ದು ತಿಳಿದರೂ ಯಾವುದೋ ಜ್ಞಾನದಲ್ಲಿ ನಿನ್ನನ್ನು ರಸ್ತೆ ಕಡೆಗೆ ಬಿಟ್ಟುಬಿಟ್ಟಿದ್ದೆ. ಹಾಗೆ ಕೈ ಹಿಡಿದವಳು ಮತ್ತೆ ಹಿಡಿಯುತ್ತಿದ್ದೆ ಅದರಲ್ಲಿ ಪ್ರೇಮವಿತ್ತು. ಆದರೆ ನನ್ನಲ್ಲಿ ಭಯವಿತ್ತು. Read more »