ವಿಷಯದ ವಿವರಗಳಿಗೆ ದಾಟಿರಿ

Archive for

30
ಮೇ

ಬಸವನ ಗುಡಿಯಲ್ಲಿ ‘ಕರಪ್ಷನ್ ಸಾಕು’ ಆ೦ದೋಲನ. ನಾ ಕ೦ಡ೦ತೆ

– ಹರೀಶ್ ಆತ್ರೇಯ

ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ. ಇನ್ನೂ ಕೆಲವರ ಶೋ, ವಾಲ೦ಟೀರ್ ಟೀ ಶರ್ಟ್ ಮೇಲೆ ಎಲ್ಲರ ಕಣ್ಣು, ಮಾಸ್ಟರ್ ಹಿರಣ್ಣಯ್ಯರನವರ ಅನುಭವದ ಮಾತು, ಅಣ್ಣಾ ಹಜಾರೆಯವರ ಮುಗ್ಧ ನುಡಿಗಳು, ರಾಜಕಾರಣಿಗಳ/ ಸರ್ಕಾರಿ ಅಧಿಕಾರಿಗಳ ಮೋಸದಿ೦ದ ಬೇಸತ್ತ ಜನರ ಹತಾಶ ನುಡಿಗಳು, ಜೈಕಾರ, ಗಲೀ ಗಲೀಮೆ ಶೋರ್ ಹೈ ಸಾರೆ ನೇತ ಚೋರ್ ಹೈ ಎನ್ನುವ ಘೋಷಣೆಗಳು, ಇನ್ನೂ ಕೆಲವರಿಗೆ ಇಲ್ಲೇನ್ ನಡೀತಿದೆ ಅ೦ತ್ಲೇ ಗೊತ್ತಿಲ್ದೆ ಇರೋ ಅಮಾಯಕತೆ (?) ಇದೆಲ್ಲರ ನಡುವೆ ನಮ್ ಯಡ್ಯೂರಪ್ಪನವರ ಪರ ಅದ್ಯಾರೋ ನರಸಿ೦ಹ (ಮು. ಮುಖ್ಯಮ೦ತ್ರಿ) ಎ೦ಬುವವನ ಪ್ರಚಾರ, ಸ್ವರಾತ್ಮ ತ೦ಡದ ಪಾಪ್ ರೀತಿಯ ಸ೦ಗೀತ ಅದಕ್ಕೆ ಜನರು ತಲೆದೂಗಿದ್ದು, ಇವು ನಿನ್ನೆಯ ಆ೦ದೋಲನದ ಹೈಲೈಟ್.

ಹನ್ನೊ೦ದು ಗ೦ಟೆಯಿ೦ದ ೨:೫೦ರ ತನಕ ಕಾರ್ಯಕರ್ತರ ಜನಗಳ ಮತ್ತು ಅಲ್ಲಿ ಆಡುತ್ತಿದ್ದ ಯುವಕರ ಮುಖಗಳನ್ನು ಗಮನಿಸುತ್ತಾ ಬ೦ದೆ. ಅಣ್ಣಾ ಹಜಾರೆಯವ್ರು ಬ೦ದದ್ದು ೨:೫೦ ಕ್ಕೆ. ಅಲ್ಲಿಯವರೆಗೂ ಒ೦ದೆರಡು ಬಾರಿ ಸ್ಟೇಜಿನ ಹತ್ರ ಸುತ್ತ ಮುತ್ತ ಓಡಾಡ್ತಾ ಎಲ್ಲರ ಅಭಿಪ್ರಾಯಗಳನ್ನ ಸ೦ಗ್ರಹಿಸುತ್ತಾ ನಿ೦ತೆ. ಕಾರ್ಯಕರ್ತನೊಬ್ಬ “ನೀವು ವಾಲ೦ಟೀರಾ”? ಅ೦ತ ಕೇಳಿದ “ಅಲ್ಲಪ್ಪ” ಅ೦ದೆ “ಹೀಗೆಲ್ಲಾ ಓಡಾಡ್ಬೇಡಿ ಸರ್ ಬಾ೦ಬ್ ಥ್ರೆಟ್ ಇದೆ “ಅ೦ದ ಆಯ್ತಣ್ಣ ಅ೦ತ ಒ೦ಕಡೆ ಕೂತು ಅವರ ಕೆಲ್ಸಾನ ಗಮನಿಸುತ್ತಾ ಬ೦ದೆ. ಮನೇಲಿ ಇರಕ್ಕೆ ಬೋರ್ ಆಗಿ ನಾವೂ ಟಿ ವೀಲಿ ಕಾಣ್ತೀವಲ್ಲ ಅ೦ತ ಯೋಚಿಸ್ಕೊ೦ಡ್ ಬ೦ದು ಟೈಟ್ಸ್, ಅರೆ ತೋಳಿನ ಟಾಪ್ (ಇನ್ನೂ ಕೆಲವರು ಬನೀನ್ ಥರದ್ದು, ಬೇಡ ಬಿಡಿ) ಹಾಕ್ಕೊ೦ಡ್ “ಹೇ ಇಟ್ಸ್ ವೆರಿ ಫನ್ನಿ ಯೋ ನೋ, ಐ ಅಯಾಮ್ ಆಲ್ಸೋ ಎ ವಾಲ೦ಟೀರ್ ಹಿಯರ್, ಇಲ್ಲಿ ಸಕ್ಕತ್ತಾಗಿದೆ, ಐ ವಾನ ವೇರ್ ದಿಸ್ ಟಿ ಶರ್ಟ್, ಹ್ಮ್ ಲೆಟ್ಸ್ ಗೋ ಇನ್ ಸೈಡ್ ದಿ ವಾನ್ ” ಅ೦ತ ಹೋದವರು ಅರ್ಧ ಗ೦ಟೆಯನ೦ತರ ಸರ್ವಾ೦ಗ ಸು೦ದರಿಯರಾಗಿ ಬ೦ದರು.

Read more »

30
ಮೇ

ಶಿಕ್ಷಣ ಎಂಬ ವ್ಯಾಪಾರದ ಕುರಿತು…..

ಅರೆಹೊಳೆ ಸದಾಶಿವರಾವ್

ಈಗ ಎಲ್ಲಿ ನೋಡಿದರೂ ಶೈಕ್ಷಣಿಕ ವರ್ಷದ ಪುನರಾರಂಭದ ಕಾಲ. ಇತ್ತೀಚೆಗೆ ಶಿಕ್ಷಣದ ಕೆಲವು ಮಹತ್ವದ ಫಲಿತಾಂಶಗಳು ಹೊರಬಿದ್ದುವು. ಯಾಕೋ ಇವುಗಳನ್ನು ಗಮನಿಸಿದಾಗ ಕೆಲವು ಪ್ರಶ್ನೆಗಳು ಏಳುತ್ತವೆ. ಹೀಗೇ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗಮನಿಸುತ್ತಿದ್ದಾಗ, ನನಗೆ ತಿಳಿದ ಕೆಲವು ಶಾಲೆಗಳು ನೂರು ಶೇಕಡಾ ಬಂದದ್ದನ್ನು ಓದಿದೆ. ಆದರೆ ಆ ಶಾಲೆಗಳು ವಾಸ್ತವಿಕವಾಗಿ ಆ ರೀತಿಯ ಗುಣಮಟ್ಟದ ಶಿಕ್ಷಣವನ್ನು ಕೊಟ್ಟ ಬಗ್ಗೆ ಅನುಮಾನಗಳಿದ್ದುವು. ಕೊನೆಗೆ ಈ ನೂರು ಶೇಕಡಾದ ಮರ್ಮವನ್ನು ತಿಳಿಯಹೋದರ ಅಚ್ಚರಿ ಹುಟ್ಟಿದ ಅಂಶವೆಂದರೆ, ಅಲ್ಲಿಂದ ಈ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು ಕೇವಲ ೧೩ಎಂಬುದು!  ಮತ್ತೊಂದು ಶಾಲೆಯ ಪರಿಚಿತ ಮುಖ್ಯೋಪಾದ್ಯಾಯರು ತಮ್ಮ ಶಾಲೆಯ ಫಲಿತಾಂಶವನ್ನು ನೂರು ಶೇಕಡಾ ನಿರೀಕ್ಷಿಸಿದ್ದೆ. ಆದರೆ ಕೇವಲ ೮೭ ಶೇಕಡಾ ಬಂತೆಂದು ಅಳಲು ತೋಡಿಕೊಂಡಾಗ ಅವರ ಶಾಲೆಯಲ್ಲೆಷ್ಟು ವಿದ್ಯಾರ್ಥಿಗಳು ಕುಳಿತಿದ್ದರು ಎಂದು ಪ್ರಶ್ನಿಸಿದರೆ ಆಶ್ಚರ್ಯ ಕಾದಿತ್ತು. ಒಟ್ಟೂ ಕುಳಿತ ನೂರು ಮಕ್ಕಳಲ್ಲಿ ೮೭ ಜನ ಮಕ್ಕಳು ಉನ್ನತ ದರ್ಜೆಯಲ್ಲಿ ಪಾಸಾಗಿದ್ದರು!. ಆದರೆ ಪತ್ರಿಕೆಯಲ್ಲಿ ಹಾಕಿಕೊಳ್ಳಲು ಅವರ ಫಲಿತಾಂಶದ ಶೇಕಡಾವಾರು ೮೭ ಮಾತ್ರ!. Read more »