ವಿಷಯದ ವಿವರಗಳಿಗೆ ದಾಟಿರಿ

Archive for

11
ಮೇ

ಬ್ಯಾಂಕಿನ ಹೆಸರಲ್ಲಿ ಬರೋ ಸಂದೇಶಗಳ ಬಗ್ಗೆ ಎಚ್ಚರ..!!

– ಸತ್ಯ ಚರಣ

ಸಂದೇಶ ನನಗೆ ಬಂದು ಬಿದ್ದಿದ್ದ ಜಾಗವೇ.. ಸ್ಪ್ಯಾಮ್..! ಇದರ ಒಟ್ಟು ಕತೆ ಏನು ಗೊತ್ತಿದ್ದರೂ.. ಒಮ್ಮೆ ನೋಡಿ ಬಿಡೋಣ ಅಂತ ಅನ್ನಿಸಿತ್ತು.. ಹೆಚ್ಚಿನ ವಿಚಾರ, ಇದರ ಬಗ್ಗೆ ತಿಳಿಯುವುದು ಒಳ್ಳೆಯದೇ ಅನ್ನೋ ಉದ್ದೇಶದಿಂದ.. ಈ ಸಂದೇಶವನ್ನ ತೆರೆದು ನೋಡಿದೆ.. ಇದು ಒಂದು ಬ್ಯಾಂಕಿನ ಹೆಸರಿನಲ್ಲಿ ಬಂದ ಸ್ಪ್ಯಾಮ್..!

ಯಾವುದೇ ಸಂದೇಶ, “Netbanking Status”, “Need to update your netbanking account/password” ಅಥವಾ ಇದಕ್ಕೆ ಸಮೀಪದ/ಹೋಲಿಕೆಯ ವಿಷಯಗಳೊಂದಿಗೆ ಬಂದಾಗ, ಅದು ಖಂಡಿತ ಒಂದು “FAKE MAIL” “ಮೋಸದ ಸಂದೇಶ” ಅನ್ನೋದು ಖಚಿತ.. ಇದರ ಬಗ್ಗೆ ನನ್ನಲ್ಲಿದ್ದ ವಿಚಾರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಅನ್ನೋ ಯೊಚನೆ ಈ ಬರಹಕ್ಕೆ ಕಾರಣ..

HDFC ಹೆಸರಲ್ಲಿ ಬಂದಿದ್ದ ಮೇಲ್ ಗೂಗಲ್‌ನ ಕೃಪೆಯಿಂದ ಬಂದು ಬಿದ್ದದ್ದು “ಸ್ಪ್ಯಾಮ್ ತೊಟ್ಟಿ”ಯಲ್ಲಿ ಅಂದಾಗಲೇ, ಇದು ಎಡವಟ್ಟಿನ ಸಂದೇಶ ಅಂತ ತಿಳಿದರೂ.. ತೆರೆದು ನೋಡಿದಾಗ ಅದರ ವಿವರ ಇಂತಿತ್ತು..

ಅಬ್ಬಾ..! ಎಷ್ಟು ಹುಷಾರಾಗಿದಾರಪ್ಪ ಈ ಜನ, ಈಗ..! ಅಂತನ್ನಿಸಿತು.. ಯಾಕೆಂದರೆ, ಹಿಂದೊಮ್ಮೆ ಇದೇ ರೀತಿಯಲ್ಲಿ ಸಂದೇಶವೊಂದು ಬಂದಾಗ, ನಾನು ಮೊದಲು ಮಾಡಿದ ಕೆಲಸ.. “Show Details” ಅನ್ನೋ ಆಯ್ಕೆಯನ್ನ ಒತ್ತಿದ್ದು.. ಅಲ್ಲೇ ನನಗೆ ತಿಳಿದಿತ್ತು ಇದು, ಬ್ಯಾಂಕಿನವರ ಸಂದೇಶವಲ್ಲ ಅಂತ..! ಆದರೆ, ಇಲ್ಲಿ ತಿಳಿಯಲು ಸಾಧ್ಯವೇ ಇಲ್ಲ.. ಎಲ್ಲಾ ರೀತಿಯಲ್ಲೂ ಅವರು ಬ್ಯಾಂಕನ್ನ ಹೋಲುವ ರೀತಿಯಲ್ಲಿ ತಯಾರಿ ನಡೆಸಿದ್ದಾರೆ.. (ಕೆಂಪು ರೇಖೆಯೊಂದಿಗಿನ ವೃತ್ತವನ್ನ ಗಮನಿಸಿ)

ಹಾಗಾದರೆ, ಈ ಸಂದೇಶಗಳನ್ನ ಹೇಗಪ್ಪಾ ಪತ್ತೆ ಹಚ್ಚೋದು…?

Read more »

11
ಮೇ

ನಾನು ಫೋಟೋ ಕ್ಲಿಕ್ಕಿಸುವ ಆಸೆ!

-ಶಿವು.ಕೆ

ಫೋಟೊಗ್ರಫಿ ಎಂದರೇನು? ಅದು ಎಲ್ಲಿ ಹುಟ್ಟಿತು? ಮುಂದೆ ಹೇಗೆ ಅದು ಹೊಸ ಅವತಾರಗಳನ್ನು ಪಡೆಯಿತು? ಈಗ ಏನು ನಡೆಯುತ್ತಿದೆ ಎನ್ನುವುದನ್ನು ಮೊದಲು ಬರೆಯಬೇಕೆನಿಸಿದರೂ ಅವೆಲ್ಲಾ ಈಗ ಅಂತರಜಾಲದಲ್ಲಿ ಜಾಲಾಡಿದರೆ ಅನೇಕಭಾಷೆಗಳಲ್ಲಿ ಸಿಕ್ಕಿಬಿಡುವುದರಿಂದ ಅದರ ಬಗ್ಗೆ ಬರೆಯುವ ಅವಶ್ಯಕತೆಯಿಲ್ಲ. ವಿಶ್ವದಾದ್ಯಂತ ಪುಸ್ತಕಗಳಲ್ಲಿ ಮತ್ತು ಅಂತರಜಾಲದಲ್ಲಿ ಸಿಗುವ ಫೋಟೊಗ್ರಫಿಗಿಂತ ನಿಮ್ಮ ಮತ್ತು ನನ್ನ ಫೋಟೊಗ್ರಫಿ ಆಸೆಯ ಬಗ್ಗೆ ಅದರೆಡೆಗೆ ಮೂಡಿದ ಕುತೂಹಲದ ಬಗ್ಗೆ ಇತ್ಯಾದಿ ವಿಚಾರಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ.  ಏಕೆಂದರೆ ಫೋಟೊಗ್ರಫಿ ಎನ್ನುವ ವಿಚಾರ ಎಷ್ಟು ದೊಡ್ಡದಾಗಿದ್ದರೂ ನಮ್ಮ ವೈಯಕ್ತಿಕ ವಿಚಾರಕ್ಕೆ ಬಂದಾಗ ಅದೊಂದು ಹವ್ಯಾಸ. ನಿಮಗೂ ಕೂಡ ಫೋಟೊಗ್ರಫಿ ಕಲಿಯಬೇಕೆನ್ನುವ ಮತ್ತು ಹವ್ಯಾಸವನ್ನಾಗಿ ಮಾಡಿಕೊಳ್ಳುವ ಆಸೆಯಿರುತ್ತದೆಯಲ್ಲವೇ…? ನಿಮ್ಮಲ್ಲಿ ಈಗ ಹುಟ್ಟಿದ ಆಸೆ ನನಗೆ ಯಾವಾಗ ಹುಟ್ಟಿತ್ತು? ಅದರ ಮುಂದಿನ ಹಂತಗಳೇನು ಎನ್ನುವುದನ್ನು ಸ್ವಲ್ಪ ವಿವರಿಸಿಬಿಡುತ್ತೇನೆ.

Read more »