ವಿಷಯದ ವಿವರಗಳಿಗೆ ದಾಟಿರಿ

Archive for

18
ಮೇ

ನಮ್ ದ್ಯಾವೇಗೌಡ್ರು

ವಿಜಯ್ ಹೆರಗು

ಗೆಳೆಯರೇ,
        ಇಂದು ೧೮ ಮೇ, ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ,  ಧೂಳಿನಿಂದ  ಎದ್ದು  ಬಂದ ಧೀಮಂತ ನಾಯಕ, ಮಣ್ಣಿನ ಮಗ, ೨೪ X ೭ ರಾಜಕಾರಣಿ ಶ್ರೀಮಾನ್ ಎಚ್.ಡಿ.ದೇವೇಗೌಡರ ಜನ್ಮದಿನ. ವಯಸ್ಸು ಎಪ್ಪತ್ತೊಂಭತ್ತಾದರೂ  ಇಪ್ಪತ್ತೈದರ  ಉತ್ಸಾಹ. ಹೌದು, ದೇವೇಗೌಡರು ಈ ದೇಶ ಕಂಡ ಪಕ್ಕಾ ರಾಜಕಾರಣಿ. ಇವರು ಜಾತ್ಯಾತೀತ,ಧರ್ಮಾತೀತ ವ್ಯಕ್ತೀನಾ ಅಂತ ನನಗಂತೂ ಗೊತ್ತಿಲ್ಲ. ಆದರೆ ಗ್ರಾಮ ಪಂಚಾಯ್ತಿ ಎಲೆಕ್ಷನ್ನಿಂದ ಪಾರ್ಲಿಮೆಂಟ್ ಎಲೆಕ್ಷನ್ ವರೆಗೂ ಯಾವುದೇ ಎಲೆಕ್ಷನ್ ನಡೆದರೂ ಭೇದಭಾವ ತೋರಿಸದೆ ಸಕ್ರಿಯವಾಗಿ ಭಾಗವಹಿಸುವ ಏಕೈಕ ನಾಯಕ ದೇವೇಗೌಡರು. ಅದಕ್ಕೇ ಇವರನ್ನು “ಚುನಾವಣಾತೀತ ರಾಜಕಾರಣಿ” ಎಂದು ಕರೆಯಬಹುದು.
       ಈಟ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್,  ಡ್ರಿಂಕ್ ಕ್ರಿಕೆಟ್ ಅನ್ನುವ ಜಾಹೀರಾತು ನಿಮಗೆಲ್ಲ ನೆನಪಿರಬೇಕು. ಆದರೆ ಇವರ ವಿಷಯದಲ್ಲಿ ಸ್ವಲ್ಪ ಅದಲು ಬದಲಾಗುತ್ತೆ, ಇವರದು ಈಟ್ ಪಾಲಿಟಿಕ್ಸ್, ಸ್ಲೀಪ್ ಪಾಲಿಟಿಕ್ಸ್, ಡ್ರಿಂಕ್ ಪಾಲಿಟಿಕ್ಸ್. ಯಾರ ಬಗ್ಗೆ ಮಾತಾಡ್ತಾ ಇದ್ದೀನಿ ಗೊತ್ತಾಯ್ತಾ ನಮ್ ದೇವೇಗೌಡರ ಬಗ್ಗೆ. . ಯಾವುದೇ ಸಭೆ- ಸಮಾರಂಭ ಎಲ್ಲೇ ಆಗಲಿ ಸದಾ ಕಾಲ “ದೇಶ”ದ ಕುರಿತು ಚಿಂತನೆ (ಮೀಡಿಯಾದವರು ಅದನ್ನು ನಿದ್ದೆ ಅಂತ ಕರೀತಾರೆ) ನಡೆಸೋ ಮಹಾನ್ ವ್ಯಕ್ತಿ ಇವರು. ಕರ್ನಾಟಕದಲ್ಲಿ ಎಂಥೆಂಥ ಮಹಾನ್ ರಾಜಕಾರಣಿಗಳು ಜನ್ಮ ತಳೆದಿದ್ದರು ಕೂಡಾ ಅವರ್ಯಾರಿಗೂ ಪ್ರಧಾನಿ ಹುದ್ದೆಯ ಹತ್ತಿರಕ್ಕೂ ಸುಳಿಯೋದು ಸಾಧ್ಯ ಆಗಲಿಲ್ಲ. ಆದರೆ ನಮ್ಮ ದೇವೇಗೌಡರಿಗೆ ಮಾತ್ರ ಇದು ಬಯಸದೇ ಬಂದ ಭಾಗ್ಯ. ಅಷ್ಟೆಲ್ಲ ಹಿರಿಯ,ಮುತ್ಸದ್ದಿ ರಾಜಕಾರಣಿಗಳು ಇದ್ದರೂ ದೇವೇಗೌಡರು ಪ್ರಧಾನಿ ಆಗಿದ್ದು ಹೇಗೆ? ನಿಜವಾಗಲೂ ಅವರಿಗೆ ಅಷ್ಟು ಕೆಪಾಸಿಟಿ ಇತ್ತಾ? ಅಥವಾ ಅಲ್ಲೇನಾದ್ರೂ ಭಾರೀ ಹಣದ ಗೋಲ್ಮಾಲ್ ನಡೆದಿತ್ತಾ!!!!????
ನೋಡಿ (ಓದಿ) ಬ್ರೇಕ್ ನಂತರ ಅಲ್ಲಲ್ಲಾ….ಮುಂದಿನ ಪ್ಯಾರಾದಲ್ಲಿ… 🙂 Read more »
18
ಮೇ

ನೈತಿಕತೆಯ ದ್ರಷ್ಟಾರರ ನೈತಿಕತೆಯ ಸಿಧ್ಧಾ೦ತ!!

– ರಾಘವೇಂದ್ರ ನಾವಡ

ಮೂರು ವರ್ಷಗಳ ಹಿ೦ದೆ ಕನ್ನಡಿಗರು ಭಾ.ಜ.ಪಾವನ್ನು ಕಾ೦ಗ್ರೆಸ್ ಹಾಗೂ ಜೆ.ಡಿ,.ಎಸ್. ಗಳಿಗೆ ಪರ್ಯಾಯವೆ೦ದೋ, ಕುಮಾರಸ್ವಾಮಿ ಹೇಳಿದ ಮಾತಿನ೦ತೆ ಅಧಿಕಾರ ಕೊಡದೆ ಯಡಿಯೂರಪ್ಪ  ಆಗ ಹರಕೆಯ ಕುರಿಯಾಗಿದ್ದಕ್ಕೋ… ಕೇವಲ ೮ ದಿನಗಳ ಅಧಿಕಾರವನ್ನು ಮಾತ್ರವೇ ಅನುಭವಿಸಿದರು ಪಾಪ! ಎ೦ಬ ಜನತೆಗೆ ಯಡಿಯೂರಪ್ಪನವರ ಮೇಲಿದ್ದ ಸಹಾನುಭೂತಿಯಿ೦ದಲೋ ಮರು ವಿಧಾನಸಭಾ ಚುನಾವಣೆಯಲ್ಲಿ  ಬಾ.ಜ.ಪಾ. ೧೧೦ ಸ್ಥಾನಗಳನ್ನು ಗೆದ್ದು ಪಕ್ಷೇತರರ ಸಹಾಯದಿ೦ದ ಅಧಿಕಾರದ ಗದ್ದುಗೆ ಏರಿತು. ಯಡಿಯೂರಪ್ಪನವರ ಸ೦ಪೂರ್ಣ ಜೀವನವೇ ಸ೦ಘರ್ಷಮಯವೆ೦ದು ಜಾತಕದಲ್ಲಿ ಬರೆದಿದೆಯೇನೋ!! ಅಲ್ಲಿ೦ದ ಇಲ್ಲಿಯವರೆವಿಗೂ ನಮ್ಮ ಮುಖ್ಯಮ೦ತ್ರಿಗಳು ಸರಿಯಾಗಿ ನಿದ್ರೆಯನ್ನೇ ಮಾಡಿರಲಿಕ್ಕೆ ಸಾಧ್ಯವಿಲ್ಲ! ಒ೦ದಲ್ಲಾ, ಒ೦ದು ವಿವಾದಗಳು  ಯಡಿಯೂರಪ್ಪನವರ ಬೆನ್ನು ಹತ್ತಿದ ಬೇತಾಳಗಳ೦ತೆ ಹೆಗಲಿಗೇರಿದವು. ಆದರೂ ಅದೃಷ್ಟ ಗಟ್ಟಿಯಿದ್ದುದ್ದಕ್ಕೋ ಏನೋ.. ಅಥವಾ ನಾಡಿನ ಸಮಸ್ತ ಅಧ್ಯಾತ್ಮಿಕ ಸ೦ತರುಗಳ ಆಶಿರ್ವಾದದ ಬಲದಿ೦ದಲೋ ಏನೋ ಇಲ್ಲಿಯವರೆವಿಗೂ ಕುರ್ಚಿಯನ್ನುಳಿಸಿಕೊ೦ಡಿದ್ದಾರೆ.. ಇನ್ನು ಮು೦ದೆ ಅದ್ಯಾವ ದಿವ್ಯ ಹಸ್ತವೂ ಯಡಿಯೂರಪ್ಪನವರ ನೆತ್ತಿಯನ್ನು ನೇವರಿಸಲಾರದು ಎ೦ಬ ಸತ್ಯ ಅರಿವಾಗಿದೆ!

ಈ ಯಡಿಯೂರಪ್ಪನವರು ಹುಟ್ಟಾ “ಮು೦ಗೋಪಿ“ ಎ೦ಬುದು ಸರ್ವವೇದ್ಯ! ಆದರೆ ಅದರ ಜೊತೆಗೆ ಈಗ ಇನ್ನೊ೦ದನ್ನೂ ಸೇರಿಸಿಕೊಳ್ಳೋಣ.. ನಮ್ಮ ಯಡಿಯೂರಪ್ಪನವರಷ್ಟು “ಮಹಾ ಗಡಿಬಿಡಿ ಪುರುಷ “ ಮತ್ತೊಬ್ಬನಿರಲಿಕ್ಕಿಲ್ಲ!! ಎಲ್ಲರನ್ನೂ ಸಮಾನವಾಗಿ ಕರೆದುಕೊ೦ಡು ಹೋಗುವ ಸ್ವಭಾವ ಇವರಿಗಿಲ್ಲವೇ ಇಲ್ಲ. ಎಲ್ಲ್ಲಾ ಹದಿನಾರು ಶಾಸಕರನ್ನು ಅರ್ಹರೆ೦ದು ಸುಪ್ರೀ೦ ಕೋರ್ಟ್ ಅನರ್ಹತೆಯಿ೦ದ ಮುಕ್ತರನ್ನಾಗಿಸಿದ ಕೂಡಲೇ, ಪಕ್ಷದ ಶಾಸಕಾ೦ಗ ಸಭೆಯನ್ನು ಕರೆದು, ಹದಿನಾರು ಶಾಸಕರನ್ನು ಪಕ್ಕದಲ್ಲಿ ಕೂರಿಸಿಕೊ೦ಡು “ಏನ್ರಪ್ಪಾ.. ಏನು ನಿಮ್ಮ ನಿರ್ಧಾರ?“ ಎ೦ದು ಸಮಾಧಾನವಾಗಿ, ವರಿಷ್ಟರ ಸಮ್ಮುಖದಲ್ಲಿ ಅವರನ್ನು ಒಲಿಸಿಕೊ೦ಡಿದ್ದರೆ ಏನಾಗುತ್ತಿತ್ತು? ಅದನ್ನು ಬಿಟ್ಟು, ಹಿ೦ದೆ ಕೊಟ್ಟಿದ್ದ ಅವಿಶ್ವಾಸ ಪತ್ರಗಳನ್ನು ವಾಪಾಸು ತರಲು ರಾಜಭವನಕ್ಕೆ ಕಳುಹಿಸಿಕೊಡುವ ಏರ್ಪಾಟು!ಇವರೆಲ್ಲಾ ಸ೦ವಿಧಾನಾತ್ಮಕವಾಗಿ ಆರಿಸಿ ಹೋದ ಜನಪ್ರತಿನಿಧಿಗಳು ಎ೦ಬುದನ್ನೇ ಮರೆತರೆ ಹೇಗೆ?
Read more »

18
ಮೇ

ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ

ಡಾ|| ಬಿ.ಆರ್. ಸತ್ಯನಾರಾಯಣ 

ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ’ ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ ‘ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ’ ಎಂಬ ಲೇಖನದ ಪೂರ್ಣಪಾಠ ಇಲ್ಲಿದೆ. 14.4.11ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಪ್ರಬಂಧದ ಬಗ್ಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರ ಚಿತ್ರವನ್ನು ಇಲ್ಲಿ ಕಾಣಿಸಿರುತ್ತೇನೆ.

ಬೆಂಗಳೂರಿನ ಸ್ಥಳನಾಮಗಳ ಬಗ್ಗೆ ಈಗಾಗಲೇ ಹಲವಾರು ವಿದ್ವಾಂಸರು ಬೆಳಕು ಚೆಲ್ಲಿದ್ದಾರೆ. ’ಬೆಂಗಳೂರು’ ಎಂಬ ಸ್ಥಳನಾಮದ ಬಗೆಗೆ ನಡೆದ ಅಧ್ಯಯನಗಳು ಅಸಂಖ್ಯಾತ. ಬೆಂಗಳೂರು ಪದದ ಪ್ರಾಚೀನರೂಪಗಳು ಯಾವ ಶಾಸನದಲ್ಲಾಗಲೀ, ಸಾಹಿತ್ಯಕೃತಿಯಲ್ಲಾಗಲೀ ಉಲ್ಲೇಖಗೊಂಡಿಲ್ಲ. ಅತ್ಯಂತ ಪ್ರಾಚೀನ ಉಲ್ಲೇಖವಾಗಿ ದೊರೆತಿರುವ ಬೇಗೂರಿನ ಶಾಸನದಲ್ಲಿಯೂ ’ಬೆಂಗಳೂರು’ ಎಂದು ಸ್ಪಷ್ಟವಾಗಿಯೇ ಇದೆ. ಬೆಂದಕಾಳು ಊರು, ಬೆಂದಕಾಡು ಊರು, ಬೆಂಗಾಡು ಊರು, ಬೆಣಚುಕಲ್ಲು ಊರು… ಇತ್ಯಾದಿ ಹಲವಾರು ನಿಷ್ಪತ್ತಿಗಳಲ್ಲಿ, ಊಹೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಬಿಡಬೇಕು ಎಂಬುದೇ ಬಹುದೊಡ್ಡ ಸಮಸ್ಯೆಂಇಇಗಿದೆ.
ಸಾಮಾನ್ಯವಾದ ಐತಿಹಾಸಿಕ ಆಕರಗಳನ್ನು ಬಿಟ್ಟು ಸ್ವಲ್ಪ ಭಿನ್ನವಾಗಿ ನೋಡಲೆತ್ನಿಸಿದಾಗ ದೊರೆತಿದ್ದು, ಕೆನೆತ್ ಅಂಡರ್‌ಸನ್ ಉಲ್ಲೇಖಿಸಿರುವ ವಿಷಯ. ’ಇಲ್ಲಿಯ ಜನ ಹೆಚ್ಚಾಗಿ ತಿನ್ನುವ, ರುಚಿಕಟ್ಟಾದ ಹಾಗೂ ತರಾವರಿ ಕಾಳುಗಳಿಂದಲೇ ಈ ಹೆಸರು ಬಂದಿದೆಯೆಂದು ಇಲ್ಲಿನ ಜನ ನಂಬಿದ್ದಾರೆ’ ಎಂಬುದನ್ನು ಅಂಡರ್‌ಸನ್ ದಾಖಲಿಸಿದ್ದಾನೆ. ಬೇಯಿಸಿ ತಿನ್ನಬಹುದಾದ ಕಾಳುಗಳ ದೆಸೆಯಿಂದಿಲೇ ಬೆಂಗಳೂರು ಹೆಸರು ರೂಪಗೊಂಡಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಬಹುದು, ಅಷ್ಟೆ.
ಬೃಹದಾಕಾರವಾಗಿ ಹಾಗೂ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸ್ಥಳನಾಮಗಳು ನೆಲೆಗೊಳ್ಳುವುದು, ಬದಲಾಗುವುದು, ಸಂಕ್ಷಿಪ್ತಗೊಳ್ಳುವ ಪ್ರಕ್ರಿಯೆಯೇ ವಿಶೇಷವಾದುದು. ಮೊದಲ ಹಂತದಲ್ಲಿ ಕನ್ನಡ ಅಥವಾ ದ್ರಾವಿಡಮೂಲದಲ್ಲಿದ್ದ ಹೆಸರುಗಳು, ಸಂಸ್ಕೃತೀಕರಣಗುಳ್ಳುತ್ತಿದ್ದವು. ನಂತರದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷಾಮೂಲದಿಂದ ಇಂಗ್ಲಿಷ್ ಭಾಷೆಗೆ, ಇಂಗ್ಲಿಷ್ ಭಾಷೆಯಿಂದ ಇಂಗ್ಲಿಷ್ ಭಾಷೆಯ ಸಂಕ್ಷಿಪ್ತರೂಪದೆಡೆಗೆ ಬದಲಾಗಿರುವುದನ್ನು ಕಾಣಬಹುದು. ಮತ್ತೊಂದು ಬೆಳವಣಿಗೆಯೆಂದರೆ ಇಂಗ್ಲಿಷ್ ಭಾಷೆಯಿಂದ ಮತ್ತೆ ಭಾರತೀಯ ಹೆಸರುಗಳನ್ನು ಪಡೆದಿರುವುದನ್ನು ನೋಡಬಹುದು. ಭಾರತೀಯ ಹೆಸರುಗಳನ್ನು ಸಂಕ್ಷಿಪ್ತಗೊಳಿಸಿರುವುದೂ ಉಂಟು. ಕೆಲವು ಉದಾಹರಣೆಗಳ ಮೂಲಕ ಈ ಬದಲಾಗುವ ಪ್ರವೃತ್ತಿಯನ್ನು ಹೆಚ್ಚು ಮನನ ಮಾಡಿಕೊಳ್ಳಬಹುದು. Read more »