ವಿಷಯದ ವಿವರಗಳಿಗೆ ದಾಟಿರಿ

Archive for

20
ಮೇ

ನಂಬಿಕೆ ಎಂಬ ಹುತ್ತದೊಳಗೆ “ಕೂರಿಯರ‍್” ಸಂಸ್ಥೆಗಳೆಂಬ ಹಾವುಗಳು.

-ರವಿ ಮೂರ್ನಾಡು

          ವ್ಯವಸ್ಥೆ ಹೇಗಿರುತ್ತೆ ಅಂದರೆ,ಸತ್ತವನನ್ನು ಹುಡುಕಿಕೊಂಡು ಪತ್ರ ಬರುತ್ತೆ.ಮುಂದೆ ಪ್ರೇತಾತ್ಮಗಳೂ ಪತ್ರ ಓದುವ ಕಾಲ ಬಂದಾಗ ಕೂರಿಯರ‍್ ಮತ್ತು ಅಂಚೆ ಇಲಾಖೆಗಳಲ್ಲಿ ಪತ್ರ ಕಳುಹಿಸಲು” ಮುಂಗಡ ಬುಕ್ಕಿಂಗ್‍” ವ್ಯವಸ್ಥೆ ಬರಬಹುದೇನೋ. 2000 ನೇ ಇಸವಿಗೆ ಕಳುಹಿಸಿದ ಪತ್ರ ಹತ್ತು ವರ್ಷಗಳ ನಂತರ 2010 ರಲ್ಲಿ ಮನೆ ಬಾಗಿಲಿನಲ್ಲಿ ಬಂದು ನಗುತ್ತಿರುತ್ತದೆ. ಹಾಗಿದೆ ನಮ್ಮ ಪತ್ರ ವಿಲೇವಾರಿಯ ಸಿನೇಮಾ ಕಾರ್ಯಕ್ರಮ…! ನಗು ಬರಬಹುದು..ಜೊತೆಗೆ ಮಡುಗಟ್ತುತ್ತವೆ ವಿಷಾಧದ ಮೋಡ..!

ಇದಕ್ಕೆ ಭಾರತೀಯ ಅಂಚೆ ಇಲಾಖೆಯಲ್ಲಿ ಬೇಕಾದಷ್ಟು ಪಟ್ಟಿಗಳು ಸಿಗುತ್ತವೆ.ಹಿಂದಿನ ಕಾಲದಲ್ಲಿ ಹೀಗೆ ಇಂತಹ ಸರಕಾರಿ ಸಾಮ್ಯದ ಇಲಾಖೆಗಳು ಪತ್ರಗಳ ಬಟಾವಾಡೆ ಮಾಡುವಾಗ ಬೆಳಕೇ ಇಲ್ಲದ ಗ್ರಾಮಗಳಲ್ಲಿ ಅಂಚೆ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಒಂದು ” ಲಿಂಕ್‍” ಕೊಟ್ಟಿತ್ತು. ಅಂಚೆ ಇಲಾಖೆಯಲ್ಲಿ ಕೆಲವು ದೌರ್ಬಲ್ಯಗಳಿವೆ. ಅದನ್ನು ಸದುಪಯೋಗಿಸಿಕೊಂಡವರು ” ಕೂರಿಯರ‍್” ಎಂಬ ಜಗತ್ತನ್ನು ತೆರೆದ ಈ ಹೊಟ್ಟೆಬಾಕ  ಖಾಸಗಿ ಸಂಸ್ಥೆಗಳು.

ಕೂರಿಯರ‍್ ಸಂಸ್ಥೆಗಳ ಕಣ್ಣು ಕೆಂಪಾಗಬಹುದು.ಯಾಕೆ ಹೀಗೆ ಬರೀತಾ ಇದ್ದಾರೆ ಅಂತ, ಅದು ಒಂದು ಮಗುವಿನ ಹುಟ್ಟುಹಬ್ಬದ “ಕೂರಿಯರ‍್ ಕತೆ “.ಆ ಹಬ್ಬದ ಸುಸಂದರ್ಭವನ್ನು ಕತ್ತಲೆಯಲ್ಲಿ ಮುಳುಗಿಸಿದ್ದು ಈ ಕೂರಿಯರ‍್  ಎಂಬ ಬಹು ಸಂಖ್ಯಾತ ಸಂಸ್ಥೆಗಳು.ಇಂದಿನ ವ್ಯವಹಾರಿಕ ಪ್ರಪಂಚದಲ್ಲಿ ಎಷ್ಟೆಲ್ಲಾ ಕೂರಿಯರ‍್ ಸಂಸ್ಥೆಗಳಿವೆಯೂ ಅಲ್ಲೆಲ್ಲಾ ಇಂತಹ ಸಿನೇಮಾ ಮಾದರಿಯ ಉದಾಹರಣೆಗಳು ಸಿಗುತ್ತವೆ.ಸಿಗಬೇಕಾಗಿದ್ದು ಯಾರಿಗೂ, ಸಿಗೋದು ಯಾರಿಗೂ .. ಹುಚ್ಚರ ಕೂರಿಯರ‍್ ಸಂತೆಯಲಿ ಅಚಾನಕ್‍ ಅದೃಷ್ಟದ ಪಾರ್ಸೆಲ್‍ ಸಿಕ್ಕಿದವನಿಗೆ ಹಬ್ಬ…! Read more »

20
ಮೇ

ನವರಸಪುರ ಉತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ.!

ಮಹೇಶ.ಎಮ್.ಆರ್

ಕಳೆದ ಕೆಲವು ವರುಶಗಳಿಂದ ಸ್ಥಗಿತಗೊಂಡಿದ್ದ  ನವರಸಪುರ ಉತ್ಸವ ಮತ್ತೆ ಈ ವರುಶ ಹಮ್ಮಿಕೊಳ್ಳಲಾಗಿದ್ದು ಸಂತೋಶದ ವಿಶಯ ಮತ್ತು ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಜಾಪುರದ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ, ಪರಂಪರೆಯನ್ನು ಹೊರಜಗತ್ತಿಗೆ ತೋರಿಸುವಲ್ಲಿ, ಆ ಮೂಲಕ ನಾಡಿನ ಜನರಲ್ಲಿ ತಮ್ಮೂರಿನ ಬಗ್ಗೆ ಹೆಮ್ಮೆ ಮೂಡಿ, ನಾಡು-ನುಡಿಯ ಚೌಕಟ್ಟಿನಲ್ಲಿ ಅವರನ್ನು ಒಗ್ಗೂಡಿಸಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ. ಈ ಬಾಗದ ಸ್ಥಳೀಯ ಕಲಾವಿದರಿಗೂ ತಮ್ಮ ಪ್ರತಿಬೆಯನ್ನು ಪರಿಚಯಿಸಲು ಇದೊಂದು ಒಳ್ಳೆಯ ವೇದಿಕೆ.

ಈ ಉತ್ಸವವನ್ನು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆಸಲಾಗುತ್ತಿರುವುದರಿಂದ ಉತ್ಸವದಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತಿ, ಇತಿಹಾಸ, ಪರಂಪರೆಗೆ ಸಂಬಂದಿಸಿದ ಕಾರ್ಯಕ್ರಮಗಳಿಗೆ ಮಾತ್ರ ಸ್ಥಾನ ಇರಬೇಕಾಗಿರುವುದು ಸ್ವಾಬಾವಿಕ. ಉತ್ಸವದಲ್ಲಿ ವೈಬವೀಕರಣಕ್ಕಿಂತ ಹೆಚ್ಚಾಗಿ ನಮ್ಮತನ ಕಾಣಿಸಬೇಕು ಮತ್ತು ಹೊರಜಗತ್ತಿಗೆ ಪರಿಚಯಿಸಬೇಕು. ಈಗ ಸಿದ್ದಪಡಿಸಲಾಗಿರುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅವಿಬಜಿತ ವಿಜಾಪುರ ಜಿಲ್ಲೆಯ ಮತ್ತು ಸುತ್ತ ಮುತ್ತಲಿನ ಬೆಳಗಾವಿ, ದಾರವಾಡ, ರಾಯಚೂರು ಜಿಲ್ಲೆಯ ಅನೇಕ ಕಲಾವಿದರಿಗೆ ಇಲ್ಲಿ ವೇದಿಕೆ ಕಲ್ಪಿಸಿದ್ದು ಸಂತೋಶದ ವಿಶಯ. ಇದರ ಮದ್ಯೆ ಕೊಂಚ ಅಸಮಾದಾನ ಆಗಿದ್ದು, ನವರಸಪುರ ಉತ್ಸವಕ್ಕೆ ಅಥವಾ ವಿಜಾಪುರಕ್ಕೆ ಅಥವಾ ಕರ್ನಾಟಕಕ್ಕೆ ಸಂಬಂದವಿರದ ಅನೇಕ ಕಾರ್ಯಕ್ರಮಗಳಿಗೆ ಇಲ್ಲಿ ಜಾಗ ಕಲ್ಪಿಸಿದ್ದು. Read more »