ವಿಷಯದ ವಿವರಗಳಿಗೆ ದಾಟಿರಿ

Archive for

25
ಮೇ

ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!

– ಪಾಲಚಂದ್ರ

ನೀವು ತೆಗೆದ ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅಂತರ್ಜಾಲಕ್ಕೆ ಸೇರಿಸ ಹೊರಟಿದ್ದೀರ? ಸ್ವಲ್ಪ ನಿಧಾನಿಸಿ, ಯಾಕೆಂದರೆ “ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!”.  ದಿನೇ ದಿನೇ ಹೆಚ್ಚುತ್ತಿರುವ ವೃತ್ತ ಪತ್ರಿಕೆಗಳೇ ಈ ಕಳ್ಳತನ ಮಾಡುತ್ತಿರುವುದು ವಿಷಾದದ ವಿಚಾರ.

ಕಳ್ಳತನ ಏಕೆ, ಹೇಗೆ?
ಇದು instant ಕಾಲ. ಆಹಾರದಿಂದ ಹಿಡಿದು ಸುದ್ದಿಯವರೆಗೂ ನಮಗಿರುವುದು ಅವಸರವೇ. ಮಾಹಿತಿಯ ಪರಿಶೀಲನೆಗೇ ಸಮಯವಿಲ್ಲದಿರುವಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಜೊತೆಗೆ ಮುದ್ರಿತವಾಗುವ ಚಿತ್ರಗಳನ್ನು ಪಡೆಯಲು ಬಿಡುವೆಲ್ಲಿದೆ. ಗೂಗಲ್, ಯಾಹೂ ಮೊದಲಾದ ಹುಡುಕು ತಾಣಗಳಲ್ಲಿ ನಿಮ್ಮ ಲೇಖನಕ್ಕೆ ಬೇಕಾದ ಕೀ-ವರ್ಡ್ ಹೊಡೆದರೆ ಲಕ್ಷಾಂತರ ಚಿತ್ರಗಳು ಕ್ಷಣಾರ್ಧದಲ್ಲಿ ಲಭಿಸುತ್ತದೆ. ಅದರಲ್ಲಿ ಕೆಲವನ್ನು ಆಯ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರಾಯ್ತು. ಪುಕ್ಕಟೆಯಾಗಿ ಸಿಗುವ ಸರಕು ಬೇರೆ, ಛಾಯಾಗ್ರಾಹಕನಿಗೆ ಹಣ ಕೊಡುವ ಅಗತ್ಯವೂ ಇಲ್ಲ.

ಏಕೆ ಕದಿಯಬಾರದು
ಅಂತರ್ಜಾಲದ ಹುಡುಕು ತಾಣಗಳು ನಿಮಗೆ ಬೇಕಾದ ಚಿತ್ರವನ್ನು ಹುಡುಕಿ ಕೊಡುತ್ತದಾದರೂ ಆ ಚಿತ್ರದ ಸಂಪೂರ್ಣ ಹಕ್ಕು  ಚಿತ್ರ ತೆಗೆದವರ ಅಥವಾ ಅದನ್ನು ಅಂತರ್ಜಾಲಕ್ಕೆ ಸೇರಿಸಿದವರದ್ದಾಗಿರುತ್ತದೆ. ಅವರ ಅನುಮತಿಯಿಲ್ಲದೆಯೇ ಯಾವುದೇ ರೀತಿಯಲ್ಲಿ ಅದನ್ನು ಉಪಯೋಗಿಸುವುದು ಅನೀತಿ ಮಾತ್ರವಲ್ಲ ಅಪರಾಧ ಕೂಡ.ಚಿತ್ರ ತೆಗೆದವನ, ತೆಗೆಯಿಸಿಕೊಂಡವನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆಯುಂಟುಮಾಡುತ್ತದೆ. ಆದರೆ ಕಳ್ಳತನ ಮಾಡುವವರು ಇದರ ಹಿಂದೆ ಇನ್ನೊಬ್ಬರ ಪರಿಶ್ರಮ ಅಡಗಿದೆ ಎಂಬುದನ್ನು ಸುಲಭದಲ್ಲಿ ಮರೆಯುತ್ತಾರೆ.

ಕದಿಯುವುದನ್ನು ತಡೆಗಟ್ಟುವುದು ಹೇಗೆ?
ಫ್ಲಿಕರ್, ಫೋಟೋ ಬಕೆಟ್ ಮೊದಲಾದ  ಚಿತ್ರ ತಾಣಗಳಲ್ಲಿ ನೀವು ಸೇರಿಸಿದ ಚಿತ್ರಗಳು ಹುಡುಕು ತಾಣಗಳಲ್ಲಿ ಕಾಣಿಸದಿರುವಂತೆ, ಡೌನ್ ಲೋಡ್ ಮಾಡಿಕೊಳ್ಳದಂತೆ ಸೆಟ್ಟಿಂಗ್ ಮಾಡಬಹುದು. ಚಿತ್ರದ ಮೇಲೆ ಕಾಪಿ ರೈಟ್ ವಾಟರ್ ಮಾರ್ಕ್ ಹಾಕುವುದೂ ಕೂಡ ಈ ನಿಟ್ಟಿನಲ್ಲಿ ಒಳ್ಳೆಯದು. Read more »

25
ಮೇ

ಜುಜುಬಿ ವೇತನಕ್ಕೆ ಸಂಜೆವರೆಗೆ ದುಡಿತ

 – ಪವನ್ ಎಮ್. ಟಿ

ನೀವು ಸರಕಾರಿ ನೌಕರರಾಗಿದ್ದರೆ ನಮ್ಮ ಈಗಿನ ಸರಕಾರದ ಬಳಿ ವೇತನ ಹೆಚ್ಚಳ ಮಾಡಿ, ಪಿಂಚಣಿ ನೀಡಿ, ನಿವೃತಿ ವೇತನ ನೀಡಿ ಎಂದು ಭೇಡಿಕೆಯಿಟ್ಟು ಹೋರಾಟ ಮಾಡಬೇಡಿ. ನಮ್ಮ ಸರಕಾರ ನಿಮ್ಮಮೇಲೆ ಪ್ರತಿಕಾರ ತೀರಿಸಿಕೊಂಡು ಬಿಡುತ್ತದೆ ಹುಷಾರ್.

ಕೆಲವು ದಿನಗಳ ಹಿಂದೆ ಅತಿಥಿ ಉಪನ್ಯಾಸಕರು ಸಂಬಳ ಹೆಚ್ಚು ಮಾಡಬೇಕೆಂದು ಹೋರಾಟಕ್ಕೆ ಮುಂದಾದಾಗ ಸರಕಾರ ಅವರನ್ನು ಕೆಲಸದಿಂದಲೇ ತೆಗೆದು ಹಾಕುವ ನಿರ್ಧಾರಕ್ಕೆ ಬಂದು ಅವರನ್ನು ಮುಂದೆ ಯಾವುದೇ ಭೇಡಿಕೆಯನ್ನು ಸಲ್ಲಿಸದಂತೆ ಕೈ ಬಾಯಿ ಕಟ್ಟಿ ಹಾಕಿತು. ನೋಡಿ ಇದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರಕಾರ ಮಾಡೋ ಕೆಲಸ.

ಈಗ ಸರಕಾರ ಪ್ರತಿಕಾರ ತೀರಿಸಿ ಕೊಳ್ಳುತ್ತಿರುವುದು ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಮತ್ತು ಪುಟ್ಟ ಮಕ್ಕಳ ವಿರುದ್ಧ. ಪಾಪ ಕಾರ್ಯ ಕರ್ತೆಯರು ಸರಕಾರ ಕೊಡೋ ಜುಜುಬಿ ಗೌರವ ವೇತನ ಹೆಚ್ಚಳ, ನಿವೃತಿ ವೇತನ, ಪಿಂಚಣಿಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಾರ್ಯಕರ್ತೆಯರ ಅನೇಕ ವರ್ಷಗಳ ಹೋರಾಟದ ಶ್ರಮದಿಂದ ಸರಕಾರ ದೊಡ್ದ ಮನಸ್ಸುಮಾಡಿ ಅಲ್ಪ ಸ್ವಲ್ಪ ಗೌರವ ವೇತನವನ್ನು ಹೆಚ್ಚಿಸಿದೆ. ನಿವೃತಿ ವೇತನವನ್ನು  ಕಾರ್ಯಕರ್ತೆಯರಿಗೆ ೬೦ ೦೦೦ ಸಹಾಯಕರಿಗೆ ೩೦ ೦೦೦ ನೀಡಲು ಮುಂದಾಗಿದೆ. ಇದರಲ್ಲಿ ಎಷ್ಟುದಿನ ಬದುಕು ನಡೆಸಬಹುದೆಂದು ನಿಮಗೇ ಗೊತ್ತು.

ಸರಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ವೇತನದ ಭೇಡಿಕೆ ಸಲ್ಲಿಸಿರುವುದು ಒಬ್ಬರಿಗೆ ೫ಲಕ್ಷ ನೀಡಿ ಎಂದು. ಇದರಲ್ಲಿ ಸರಕಾರ ಒಂದು ಲಕ್ಷದಷ್ಟು ಹಣವನ್ನಾದರೂ ನೀಡಿದ್ದರೆ ಸರಕಾರ ಕೊಡುಗೆಯನ್ನು ಸ್ಮರಿಸಬಹುದಿತ್ತು. ಸರಕಾರ ಎಲ್ಲಿಯಾದರೂ ಇಷ್ಟು ಹಣವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದರೆ ಕ್ರಿಕೇಟ್ ಆಟಗಾರರಿಗೆ ಮತ್ತು ಮಠಗಳಿಗೆ ಹಣ ಬಿಡುಗಡೆ ಮಾಡಲು ಕಷ್ಟವಾಗುದಿಲ್ಲವೇ ಪಾಪ ಅವರೆಲ್ಲರು ಕಡು ಬಡವರಲ್ಲವೇ. ಅದಕ್ಕೆ ಬಿಡುಗಡೆ ಮಾಡಲಿಲ್ಲವೇನೋ.

ನಮ್ಮ ಸರಕಾರ ಮಾಡಿರೋ ಮಹತ್ವದ ಕೆಲಸವಾದರೂ ಏನು ಗೊತ್ತಾ?

ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಠ ಬಿಡದೆ ಹೋರಾಟವನ್ನು ಮಾಡಿ ಸರಕಾರಾರದಿಂದ ಅಲ್ಪ ಸ್ವಲ್ಪ ಅನುದಾನವನ್ನು ಪಡೆದನಂತರ, ಸರಕಾದವರು ಇದಕ್ಕೆ ಏನಾದರೂ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಏನೋ ಸಂಜೆಯವರೆಗೆ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಸಮಯವನ್ನು ವಿಸ್ತರಿಸಿದೆ. ೮ ಗಂಟೆ ಕೆಲಸಮಾಡಿಸುವ ಮೂಲಕ ಕಾರ್ಮಿಕ ಕನಿಷ್ಟ ವೇತನ ಕಾನೂನಿನಡಿ ಅಂಗನವಾಡಿ ಕಾರ್ಯಕರ್ತೆಯರನ್ನು ತರುವ ಪ್ರಯತ್ನ ಇದಾಗಿರ ಬಹುದು ಆದರೆ ಸರಕಾರ ಈ ಎಲ್ಲಾ ನಿಯಮಗಳಿಂದ ಮಕ್ಕಳ ಮೇಲೆ ಆಗುವ ಪರಿಣಾಮವೇನು ಎಂಬುದನ್ನು ಸ್ವಲ್ಪವೂ ಯೋಚನೆ ಮಾಡದೆ ಈ ರೀತಿಂii ಕ್ರಮ ಜಾರಿಗೆ ತಂದಿರುವುದು ವಿಪರ್ಯಾಸ. Read more »