ವಿಷಯದ ವಿವರಗಳಿಗೆ ದಾಟಿರಿ

Archive for

26
ಮೇ

ಒಂದು ತುತ್ತು ಅನ್ನ… ಎರಡು ತೊಟ್ಟು ಕಣ್ಣೀರು…!

-ರವಿ ಮೂರ್ನಾಡು

ಮದುವೆಗೆ ಗೆಳತಿಯ ಆಮಂತ್ರಣ  ಬಂದಿತ್ತು.ಆ ಮದುವೆ ಶುಭದಿನ ಹೊಸ ಜಗತ್ತೊಂದನ್ನು ಚಿತ್ತಪಟದಲ್ಲಿ ಮುದ್ರೆಯೊತ್ತುತ್ತದೆ ಅಂತ ತಿಳಿದಿರಲಿಲ್ಲ. ಜೀವವಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಕವಚವೊಂದು ಬದ್ಧತೆಯನ್ನು ನಿರ್ಮಿಸಿ ಕೊಡುತ್ತದೆ ಅಂತ ಗೊತ್ತಿತ್ತು. ಅದನ್ನು ಮೀರಿ ಮನುಷ್ಯನ ಮನಸ್ಸಿಗೇ ಸವಾಲೊಡ್ಡುವ ಶಾರೀರಿಕ ತಲ್ಲಣದ ಸನ್ನಿವೇಶಕ್ಕೆ ಎದೆಯನ್ನೊಮ್ಮೆ ಮುಟ್ಟಿ ನೋಡುತ್ತೇನೆ. ಹಸಿವಿನ ಪ್ರಪಂಚದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತೇನೆ. ಈ ಕಡಲ ಅಲೆಗಳಲ್ಲಿ ದಡ ಸೇರಲು ಹವಣಿಸುವ ಪುಟ್ಟ ದೋಣಿಯೆಂದು ಗೊತ್ತಿರಲಿಲ್ಲ. ಅಲೆಗಳು ಹಾಗೇ ಬಡಿಯುತ್ತಲೆ ಇವೆ…..ತಡಿಯಲ್ಲಿ ಮೂಡಿಸಿದ ಹೆಜ್ಜೆಗಳ ಅಳಿಸುತ್ತಲೇ ಇದೆ….! ಹೆಜ್ಜೆಗಳು ಮೂಡುತ್ತಲೇ ಇವೇ…

ಮದುವೆ ಇದ್ದದ್ದು ಬೆಂಗಳೂರಿನಲ್ಲಿ. 500 ರೂಪಾಯಿಯೊಂದಿಗೆ ನನ್ನ ಪ್ರಯಾಣ.ಎಂದಿಗೂ ಎಲ್ಲಿಗೂ ಹೊರಡುವಾಗ ಒಂದಷ್ಟು ಸಾಹಿತಿಗಳ ಪುಸ್ತಕ, ಪತ್ರಕರ್ತನಾಗಿದ್ದರಿಂದ ಒಂದೆರಡು ಲೇಖನಗಳ ಟಿಪ್ಪಣಿ. ಜೋಳಿಗೆ  ಹೆಗಲಿಗೆ ಭಾರವಾಗುತ್ತಿರಲಿಲ್ಲ. ಬಸ್ಸಿನಲ್ಲಿ ಮಡಿಕೇರಿಯಿಂದ ಬೆಂಗಳೂರುವರೆಗೆ ಆರು ಗಂಟೆಗಳ ಕಾಲ ಕೂರಬೇಕಲ್ಲ. ಸುಮ್ಮನೇ ಕುಳಿತಾಗ ಸಮಯದ ಗೈರು ಹಾಜರಿಯ ಕೊರತೆಯನ್ನು ಈ ಪುಸ್ತಕಗಳು ನೀಗಿಸುತ್ತಿದ್ದವು. ನನ್ನೊಂದಿಗೆ ಮಾತಾಡುತ್ತಿದ್ದವು.

ಹಾಗೇ ದ.ರಾ.ಬೆಂದ್ರೆ, ಎಂ.ಟಿ.ವಾಸುದೇವನ್‍ ನಾಯರ‍್, ಪ್ರೇಮ್‍ಚಂದ್‍., ಜಿ.ಎಸ್‍. ಶಿವರುದ್ರಪ್ಪ.. ಇತ್ಯಾದಿ…! ಅದರಲ್ಲಿ ವಾಸುದೇವನ್‍ ನಾಯರರ  ಒಂದು ಕಥೆ ಹಸಿವಿನ  ಕ್ಷಣಗಳನ್ನು ಕದಕಿದಂತಾಯಿತು. ಕಥೆ ” ಕರ್ಕಟಕ ಮಾಸ”. ಕೇರಳದಲ್ಲಿ ” ಕಕ್ಕಡ ಮಾಸಂ” ಅಂತ ಕರೀತಾರೆ.ಕೃಷಿಕರಿಗೆ ತುಂಬಾ ಕಷ್ಟದ ತಿಂಗಳು ಇದು. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಶುಭ ಅಂತ ಪ್ರತೀತಿ.ಜ಼ಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್‍ ನಾಯರರ ಹುಟ್ಟಿದ ನಕ್ಷತ್ರ ಇದು. ಅದರಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ಅವರ ತಾಯಿ ಹೇಗೆ ಆಚರಿಸಿದರು ಅಂತ ವಿವರಿಸುತ್ತಾರೆ. ಖಾಧ್ಯಾನ್ನಗಳ ವಿಚಾರದಲ್ಲಿ ಕೇರಳ ಸ್ವಾವನಂಭಿಯಲ್ಲ ಎಂದೂ ವ್ಯಂಗ್ಯವಾಡುತ್ತಾರೆ. Read more »

26
ಮೇ

ಉಗ್ರರ ಉಪದ್ರವಕ್ಕೆ ಪರಿಹಾರವಿಲ್ಲವೇ?

– ಮುರಳೀಧರ ದೇವ್

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಏನಾಗಿದೆ? ಒಂದಾದ ಮೇಲೆ ಒಂದರಂತೆ ಹಗರಣಗಳು, ಅವಾಂತರಗಳು, ಒಟ್ಟಿನಲ್ಲಿ ಇಡೀ ಭಾರತ ದೇಶ ವಿಶ್ವಡೆದುರು ತಲೆ ತಗ್ಗಿಸುವ ಹಾಗೆ ಆಗಿದೆ. ಕಾಮನ್ ವೆಲ್ತ್  ಕ್ರೀಡೆಯ ಹಗರಣದಿಂದ ಸರ್ಕಾರದ ಮಹತ್ವದ ಹುದ್ದೆಗಳಲ್ಲಿರುವವರೆಲ್ಲರೂ ಭಾಗಿಗಳು ಅಂತ ಕಾಣ್ಸುತ್ತೆ. ಈಗ ಕೇಂದ್ರದ ಮತ್ತೊಂದು ಅವಾಂತರ, ಇತ್ತೀಚೆಗೆ ಕೇಂದ್ರೀಯ ತನಿಖಾ ದಳ ಪಾಕಿಸ್ತಾನಕ್ಕೆ ರವಾನಿಸಿದ ಪಟ್ಟಿಯಲ್ಲಿ ಕೆಲವರು ಭಾರತದ ಜೈಲಿನಲ್ಲಿ ಇದ್ದಾರೆ.  ಅಲ್ಲದೇ ಆ ಪಟ್ಟಿಯಲ್ಲಿರುವವರನ್ನು ತನಿಖಾದಳವೆ ವಿಚಾರಣೆ ನಡೆಸಿದೆ ಹಾಗಿದ್ದೂ ಇಂತಹ ಲೋಪ ಆಗೋಕೆ ಹೇಗೆ ಸಾಧ್ಯ? ಕಡೆ ಪಕ್ಷ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡುವಾಗಲಾದ್ರೂ ಪಟ್ಟಿಯನ್ನು ಸರಿಯಾಗಿ ಪರಿಶೀಲನೆ ಮಾಡೋಕೆ ಆಗೋಲ್ವಾ? ತನಿಖಾ ಸಂಸ್ಥೆಗಳ ನಡುವೆ ಅಷ್ಟೂ ಸಮನ್ವಯ ಸಾಧಿಸೋಕೆ ಆಗೋಲ್ವಾ? ಇತ್ತೀಚಿನ ಬೆಳವಣಿಗೆಗಳಿಂದ ಭಾರತ ವಿಶ್ವ ಸಮುದಾಯದೆದುರು ಅಪರಾಧಿ ಸ್ಥಾನದಲ್ಲಿ ನಿಲ್ಲುವ ಹಾಗೆ ಆಗಿದೆ.

ಈಗ ಪಾಕಿಸ್ತಾನ ಇದೆ ಅಂಶಗಳನ್ನು ಮುಂದಿಟ್ಟುಕೊಂಡು ತನ್ನಲ್ಲಿ ಯಾವುದೇ ಭಯೋತ್ಪಾದಕರಿಲ್ಲ ಅವರೆಲ್ಲ ಭಾರತದಲ್ಲೇ ಇದ್ದಾರೆ ಅಂತ ಹೊಸ ವಾದ ಮುಂದಿಟ್ಟರು ಆಶ್ಚರ್ಯವಿಲ್ಲ. ಅಲ್ಲದೇ ಈಗ ಹಿಡಿದಿರುವ ಉಗ್ರರಿಂದ ಸರ್ಕಾರ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ, ಮುಂಬೈ ನಗರವನ್ನು ನಡುಗಿಸಿದ ಉಗ್ರಗಾಮಿಗಳಿಗೆ ನಮ್ಮ ಜೈಲುಗಳಲ್ಲಿ ಭಾರಿ ಅತಿಥಿ ಸತ್ಕಾರಗಳು ನಡೀತಾ ಇವೆ. ಇದನ್ನೆಲ್ಲ ನೋಡಿ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳು ತಾವೇ ಶರಣಾಗಿ ಬಂದರು  ಪಾಕಿಸ್ತಾನಕ್ಕಿಂತ ಹೆಚ್ಚಿನ ಅನುಕೂಲಗಳು ಇಲ್ಲೇ ಸಿಗುತ್ತವೆ. ಅಲ್ಲ ಆಡಳಿತ ನಡೆಸುವ ಪಕ್ಷಕ್ಕೆ ಉಗ್ರಗಾಮಿಗಳಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡೋಕೆ ನಾಚಿಕೆ ಆಗೋಲ್ವಾ? ಹೀಗೆ ಭಾರತದ ಮೇಲೆ ದಾಳಿ ಮಾಡುವ ಉಗ್ರರನ್ನು ಎಷ್ಟು ದಿನ ಅಂತ ತೆರಿಗೆದಾರರ ಹಣದಿಂದ ಸಾಕಬೇಕು.

Read more »