ಅಂಕಿತಾರಾಣೆ – ಪಾನಿಪುರಿ ಪುರಾಣ…!
– ಉಮೇಶ ದೇಸಾಯಿ
ನೀವು ಪಾನಿಪೂರಿ ಪ್ರಿಯರೇ? ಹಾಗಿದ್ದರೆ ಇದನ್ನು ತಪ್ಪದೇ ಓದಿ…!
ಹೌದು ಇದೊಂಥರಾ ವಿಚಿತ್ರ ಟೈಟಲ್ಲು.ಹತ್ತು ನಿಮಿಷದ ತನ್ನ ಬೊಗಳೆಯಲ್ಲಿ ರಾಜಪುರೋಹಿತ್ ಎಂಬ ವ್ಯಕ್ತಿ ಸ್ವತಃ ಕೆಡುವುದಲ್ಲದೇ ತನ್ನ ಪಾರ್ಟಿ ಬಿಜೆಪಿಯ ವರ್ಚಸ್ಸನ್ನೂ ಹಾಳುಗೆಡವಿದ.ಅಂಕಿತಾಳ ವ್ಯಕ್ತಿತ್ವ ಮತ್ತು ಚಾರಿತ್ರ್ಯ ವಧೆ ಮಾಡುವ ಮಾತು ಆಡಿದ ರಾಜಪುರೋಹಿತ್ ಈಗ ಅವಳ ಕ್ಷಮೆ ಕೇಳಿದ್ದಾನೆ.
ನಮ್ಮಲ್ಲಿ ಒಂದು ಗಾದೆ ಇದೆ “ಗೋಡೆಯಲ್ಲಿರುವ ಮೊಳೆ ತಗೊಂಡು…ದಲ್ಲಿ ಚುಚ್ಚಿಕೊಂಡ” ಅಂತ.ಈ ಗಾದೆ ರಾಜಪುರೋಹಿತ ಸಾಹೇಬಗೆ ಅಕ್ಷರಶಃ ಅನ್ವಯವಾಗುತ್ತದೆ.
ಅಂಕಿತಾ ಮಾಡಿದ್ದು ಏನು.ತಾ ವಾಸಿಸುತ್ತಿರುವ ಬಿಲ್ಡಿಂಗಿನ ಹೊರಗೆ ಇರುವ ಪಾನಿಪುರಿ ಅಂಗಡಿಯವ ಹಾಡುಹಗಲಲ್ಲಿ ತನ್ನ ಗಾಡಿಯ ಕೆಳಗೆ ಶೆಲ್ಫನಲ್ಲಿಟ್ಟ ಜಗ್ನಲ್ಲಿ ಮೂತ್ರ ಉಯ್ಯುವುದನ್ನು ಅವಳ ಮೊಬೈಲಿನಲ್ಲಿ ಸೆರೆಹಿಡಿದಳು.ಪಾನಿಪುರಿ ಅದನ್ನು ತಿಂದು ಆಗಬಹುದಾದ ಅಪಾಯಗಳನ್ನು ಪುಷ್ಟಿಕರಿಸಲು ತಾ ತೆಗೆದ ವಿಡಿಯೋ ಸಹಾಯ ಆಗಬಹುದು ಇದು ಅವಳ ಹವಣಿಕೆ.ಅದೇ ಹಂಬಲದಲ್ಲಿ ಅವಳು ವಿಡಿಯೋ ನೆಟ್ನಲ್ಲಿ ಹರಿಯಬಿಟ್ಟಳು.
ಈ ಶೂಟಿಂಗ್ ಪ್ರಕರಣದ ಎರಡು-ಮೂರು ದಿನ ಮೊದಲು ರಾಜ್ ಠಾಕ್ರೆಯ ಪಾರ್ಟಿಯವರು ಮುಂಬೈಯ ಭೇಲಪುರಿ,ಪಾನಿಪುರಿ ಅಂಗಡಿ ಹಾಗೂ ಅವನ್ನು ನಡೆಸಿಕೊಂಡು ಬರುತ್ತಿರುವ ಅನಿವಾಸಿ ಮುಂಬೈಕರ್ ಮೇಲೆ ದಾಳಿ ನಡೆಸಿದ್ದರು.ವಿಡಿಯೋ ನೋಡಿ ರಾಜಪುರೋಹಿತ ಆಡಿದ ಮಾತು ಅವರನ್ನು ಕೆರಳಿಸಿತು.ಪೋಲಿಸ್ ಠಾಣೆಯಲ್ಲಿ ಅಂಕಿತ ದೂರು ದಾಖಲಿಸುವಾಗ ಅವಳ ಬೆಂಗಾವಲಾಗಿ ಮನಸೇ ಜನ ಇತ್ತು.ಅಂಕಿತಾ ವಿಡಿಯೋಕ್ಕೆ ಈಗ ರಾಜಕೀಯ ಡಿಮಾಂಡು.
ನಮ್ಮ ದೇಶದಲ್ಲಿ ಏನೇ ಘಟನೆಯೂ ರಾಜಕೀಯ ಬಣ್ಣ ಬಳಿದುಕೊಳ್ಳುತ್ತೆ ಅನ್ನುವುದು ಮೇಲಿನ ಸಂಗತಿಯಿಂದ ಮತ್ತೆ ಸಾಬೀತಾಗಿದೆ.
ಅನೇಕ ಪ್ರಶ್ನೆಗಳಿವೆ…
ರಾಜಪುರೋಹಿತ್ ಆಡಿದ್ದು ಸರೀನಾ?ಅವಳು ಆ ರೀತಿ ವಿಡಿಯೋ ತೆಗೆದಳು ಅಂದ ಮಾತ್ರಕ್ಕೆ ಅವಳು ಕೆಟ್ಟ ನಡತೆಯವಳೂ ಅಂತ ಸರ್ಟಿಫ಼ಿಕೇಟು ಕೊಡೋದು ಸರಿನಾ? ಅಂಕಿತ ಯಾಕೆ ರಾಜಕೀಯ ದಾಳ ಆದಳು.ಪ್ರಸಿದ್ಧಿ ಸುಲಭವಾಗಿ ಸಿಕ್ಕಾಗ ಆದರ್ಷ ಮಾಯವಾಗೋದ್ಯಾಕೆ?
ನಾವಿದೆಲ್ಲ ನೋಡಿಯೂ ಸಾಯಂಕಾಲ ಮತ್ತೆ ಪಾನಿಪೂರಿ ತಿನ್ನೋದ್ಯಾಕೆ?
ಉತ್ತರ ಬಲ್ಲವರು ಹೇಳರಿ.
(ಚಿತ್ರ ಕೃಪೆ : telepk.com)





ಫುಡ್ ಇನ್ಸ್ ಪೆಕ್ಟರ್ ಭೇಟಿ ಕೊಡುವಾಗ ಲ೦ಚ ಕೊಟ್ಟು ಸರ್ಟಿಫಿಕೇಟ್ ತಗೆದುಕೊಳ್ಳುವ ಹೋಟಲ್ ರೆಸ್ಟೋರೆ೦ಟ್ ಗಳಿಗೂ ಈ ಬೀದಿ ಬದಿ ಫಾಸ್ಟ್ ಫುಡ್ ಸೆ೦ಟರ್ ಗಳಿಗೂ ಜಾಸ್ತಿ ವ್ಯತ್ಯಾಸವೇನಿಲ್ಲ.
correct prabod bhai yavre………..
ಆ ವಿಡಿಯೋನ ನಾನು ಮುಂಬೈ ಮಿರರ್ ನ ವೆಬ್ಸೈಟಲ್ಲಿ ನೋಡಿದೆ. ಅದರ ನಂತರ ಯಾಕೋ ಪಾನಿ ಪುರಿ ತಿನ್ನಲು ಮನಸ್ಸೇ ಬಾರದು. ಅದರ ಸುತ್ತಣ ಸುದ್ದಿ ಅಷ್ಟೇನೂ ಗೊತ್ತಿಲ್ಲ!