‘ಕಾಪ’ ಪಂಚಾಯಿತಿ!
– ಪ್ರಶಾಂತ್ ಯಾಳವಾರಮಠ
ಸುನೀತಾ(21) ಮತ್ತು ‘ಜಸ್ಸಾ’ ಉರ್ಫ್ ಜಸ್ಬೀರ್ ಸಿಂಗ(22) ಒಬ್ಬರನ್ನೊಬ್ಬರು ಪ್ರೀತಿಸಿ.. ’ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಅಂದು ಕೊಂಡು ಮನೆಯವರ ಮತ್ತು ಊರಿನವರ ವಿರೋಧದ ನಡುವೆ ಮದುವೆಯಾಗಿದ್ದರು! ತಮ್ಮ ಪುಟ್ಟ ಸಂಸಾರ, ಪುಟ್ಟ ಮನೆ ಮತ್ತೆ ತಮಗೆ ಒಂದು ಪುಟ್ಟ ಮಗುವಿನ ಬರುವಿಗೆ ಕಾಯ್ತಾ ಹಾಯಾಗಿದ್ದರು ಅಂದರೆ ಸುನೀತಾ ೫ ತಿಂಗಳ ಗರ್ಭಿಣಿ!.
ಹೀಗೆ ಎಲ್ಲವೂ ಚೆನ್ನಾಗಿರುವಾಗ ಒಂದು ದಿನ ಮುಂಜಾನೆ ಸುನಿತಾಳ ತಂದೆಯ ಮನೆ ಮುಂದೆ ಅತೀ ಕ್ರೂರತನಕ್ಕೆ ಸಾಕ್ಷಿಯಾಗಿ ಎರಡು ದೇಹಗಳು ಬಿದ್ದಿದ್ದವು! ಅಬ್ಬಾ ಎಂತಹ ರಾಕ್ಷಸರು ಅಂತೀರಾ ಗರ್ಭಿಣಿಯ ಹೊಟ್ಟೆಗೆ ಒದ್ದಿದ್ದರು, ಮುಖಕ್ಕೆ ಗುದ್ದಿದ್ದರು ಮತ್ತು ಎರಡು ದೇಹಗಳಿಗೆ ಇರಿದಿದ್ದರು!
ಗಂಡಿನ ದೇಹದ ಹೆಣ್ಣಿನ ಅಂತರಂಗ
ನಾನ್ಯಾರು? ಇಂದಿಗೂ ನನಗೆ ಇದೊಂದು ಬಗೆಹರಿಯದ ಸಂಗತಿ. ಸೇಲಮ್ ಬಳಿಯ ನಮಕಲ್ಲ್ ತಾಲೂಕಿನ ಪುಟ್ಟದೊಂದು ಹಳ್ಳಿಯಲ್ಲಿ ಹುಟ್ಟಿದ ನನಗೆ ಅಪ್ಪ ಅಮ್ಮ ಇಟ್ಟ ಹೆಸರು ದೊರೈಸ್ವಾಮಿ. ಆದರೆ ನನಗೆಂದಿಗೂ ಈ ನನ್ನ ಹೆಸರು ಆಪ್ತವೆನಿಸಲೇ ಇಲ್ಲ! ನನಗೆ ಇಬ್ಬರು ಅಣ್ಣಂದಿರು, ಒಬ್ಬಳು ಅಕ್ಕ. ನಾನೇ ಎಲ್ಲರಿಗಿಂತ ಕೊನೆಯವನಾದ ಕಾರಣ ಎಲ್ಲರ ಪ್ರೀತಿ, ಆದರ ನನಗೊಂದಿಷ್ಟು ಹೆಚ್ಚೇ ಸಿಗುತ್ತಿತ್ತು. ನಮ್ಮದೊಂದು ಹಳೆಯ ಎರಡಂತಸ್ತಿನ ಮನೆಯಲ್ಲಿ ನಮ್ಮ ವಾಸ. ನಮ್ಮಪ್ಪನ ಬಳಿ ಎರಡು ಲಾರಿಗಳು ಹಾಗೂ ೫ ಎಕರೆ ಒಣಭೂಮಿ ಇತ್ತು. ಅಪ್ಪ ಲಾರಿ ಡ್ರೈವರ್, ದೊಡ್ಡಣ್ಣ ಅವರ ಬಳಿ ಕ್ಲೀನರ್ ಆಗಿ ಸಂಸಾರ ನಡೆಸಲು ಸಹಾಯ ಮಾಡುತ್ತಿದ್ದ. ಅಪ್ಪ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹಾಲನ್ನು ಸಂಗ್ರಹಿಸಿ, ಹತ್ತಿರದ ಹಾಲಿನ ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದ. ಇದಕ್ಕಾಗಿ ಈತ ಮುಂಜಾನೆ ಐದಕ್ಕೆ ಹೊರಟರೆ ಮನೆಗೆ ರಾತ್ರಿ ಹತ್ತು ಗಂಟೆಯ ತನಕವೂ ಎಡೆಬಿಡದಂತೆ ದುಡಿಯುತ್ತಿದ್ದ. ಅಣ್ಣಂದಿರು ಕೂಡ ಈತನಿಗೆ ಸಹಾಯ ಮಾಡುತ್ತಿದ್ದರು. ಅವರು ಬರುವ ಹೊತ್ತಿಗೆ ನಾನು ಹಾಗೂ ನನ್ನಕ್ಕ ಇಬ್ಬರೂ ಆಗಲೇ ನಿದ್ರಾವಸ್ಥೆಯಲ್ಲಿರುತ್ತಿದ್ದೆವು. ಅಪ್ಪ ಬಂದೊಡನೆಯೇ ಊಟ ಮುಗಿಸಿ, ನನಗೊಂದಿಷ್ಟು ಮೊಸರನ್ನ ಕಲಿಸಿ, ನನ್ನನ್ನು ಅಕ್ಕರೆಯಿಂದ ಎಬ್ಬಿಸಿ ಉಣಿಸುತ್ತಿದ್ದ.ಮತ್ತಷ್ಟು ಓದು





