– ಅಮಿತಾ ರವಿಕಿರಣ್
”ದೇಶ ಸುತ್ತು ಕೋಶ ಓದು” ಅನ್ನೋ ಗಾದೆ ಮಾತು ನನಗೇ ಬಹಳ ಇಷ್ಟಾ….ಯಾಕಂದ್ರೆ ಅದರಲ್ಲಿ ತಿರುಗಾಟ ಇಷ್ಟಾ ಪಡೋರ್ ಬಗ್ಗೆ ಒಂದು ಒಲುಮೆ ಇದೆಯಲ್ಲ ಅದಕ್ಕೆ….!!ಬಾಲ್ಯದಿಂದಲೂ ನನಗೇ ತಿರುಗಾಟ ಅತಿ ಪ್ರಿಯವಾದ ವಿಷಯ ಶಾಲೆಯ ಟ್ರಿಪ್ಪ್ ಗಳನ್ನೂ ನಾ ಯಾವತ್ತು ಮಿಸ್ ಮಾಡಿಲ್ಲ…ಅದರ ನಂತರ ಸಂಗೀತ ನನ್ನ ವೃತ್ತಿ ಆಯಿತು ಅಲ್ಲಿ ಸ್ಪರ್ಧೆ…ಇಲ್ಲಿ ಕಾರ್ಯಕ್ರಮ ಅಂತ ಬರೀ ತಿರುಗಾಟ ನಡೆಸಿದ್ದೆ… ,ಕೆ ಎಸ್ಸ್ ಆರ್ ಟಿ ಸಿ ಬಸ್ಸು ಅಂದರೆ ನನ್ನ ಎರಡನೇ ತವರು ..ಕಾಲೇಜ್ ಗೆ ಹೋಗಿದ್ದು ಧಾರವಾಡ್ ದಲ್ಲಿ..ಮೊದಲಿಗೆ ಕರ್ನಾಟಕ ಕಾಲೇಜ್ ಸಂಗೀತ ವಿದ್ಯಾಲಯ ,,,,ಆಮೇಲೆ ಕರ್ನಾಟಕ ವಿಶ್ವ ವಿದ್ಯಾಲಯ…ನನ್ನೂರಿಂದ ೭೬ ಕಿ ಮಿ ದೂರದಲ್ಲಿದ್ದರು ನಾ ದಿನ ಓಡಾಡಿಯೇ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ್ದು….
ಮದುವೆ ಆಗೋ ಹೊತ್ತಿಗೆ…ಸ್ವಲ್ಪ ದಿನ ಮನೇಲಿರೋ ಭಾಗ್ಯ ದೊರಕಿದ್ದು…ಮೊದ ಮೊದಲು ಬಹಳ ಪ್ರೀತಿಸಿದೆ ಈ ವಿರಾಮವನ್ನ…ಆದರೆ ಕಾಲಿಗೆ ನಾಯಿಗೆರೆ ಇದ್ದವರನ್ನ ಕಟ್ಟಿ ಹಾಕಿದಂತಾಗಿತ್ತು…ಮದುವೆ ಮುಂಚಿನಿಂದಲೂ ದಿನಪತ್ರಿಕೆಯಲ್ಲಿ ನಿಯತಕಾಲಿಕೆ ಯಲ್ಲಿ ಬರುತ್ತಿದ್ದ ಎಲ್ಲಾ ಪ್ರವಾಸಿ ತಾಣಗಳ ಕುರಿತಾದ ಮಾಹಿತಿಯನ್ನು ಕತ್ತರಿಸಿ ಅಂಟಿಸಿ …ಮಾಡಿದ ಆ ಪುಸ್ತಕದ ಚಿತ್ರಗಳನ್ನು ನೋಡಿ ನೋಡಿ ಖುಷಿ ಪಡ್ತಿದ್ದೆ…ಪತಿದೇವನಿಗೆ ಪದೇ ಪದೇ ಹೇಳ್ತಿದ್ದೆ.”..ಒಮ್ಮೆ ನಿಮ್ಮ ಜೊತೆ ಸಮುದ್ರ ದಂಡೆಯಲ್ಲಿ ಬರಿಗಾಲಲ್ಲಿ ಕಿಲೋಮೀಟರ್ ಗಳಷ್ಟು ಸುಮ್ಮನೆ ಸುತ್ತಾಡಬೇಕು …ರಾಶಿ ಫೋಟೋ ತಗಿಬೇಕು.”.ಅಂತೆಲ್ಲಾ …”.sure sure”.. ಅಂದು ಪ್ರಾಮಿಸ್ ಮಾಡಿದ್ದೇನೋ ನಿಜ….ಸಮುದ್ರ ದಂಡೆ ಮನೇ ಯಿಂದ ೨ ಕಿಲೋಮೀಟರ್ ಅಂತರದಲ್ಲಿದ್ದರು ಏನೋ ಒಂದು ಕಾರಣಕ್ಕೆ ಪ್ರತಿಬಾರಿ ತಪ್ಪಿ ಹೋಗುತ್ತಿತ್ತು…
ನಂತರ ಇವರು ಅಚಾನಕ್ ಆಗಿ ಆಂಗ್ಲರ ನಾಡಿಗೆ ಹೊರಡಬೇಕಾಗಿ ಬಂತು…ಆ ಪ್ರಾಮಿಸ್ ಮಾತ್ರ ಫ್ರೀಜರ್ ನಲ್ಲಿ ಇಟ್ಟು ನಾನು ತಣ್ಣಗಾದೆ ….ನಾನು ನಾರ್ದನ್ ಐರ್ಲಾನ್ದ ಗೆ ಬಂದ ಮೇಲೆ…ಛಳಿ ,,ಸ್ನೋ… ಬಿಟ್ಟು ಬೇರೇನೂ ನೋಡಲಿಲ್ಲ…ಕಣ್ಣು ಬಿಟ್ಟರೆ ಬಣ್ಣ ಬಣ್ಣ ಉಟ್ಟ ಪ್ರಕೃತಿ ಮಾತೆ..ಕಾಣುವ ನಮ್ಮ ನಡಿನೆದುರು ಇದು ಬರೀ ಕಪ್ಪು ಬಿಳುಪು ಚಿತ್ರ ಎನಿಸಿತ್ತು…(ಕಪ್ಪು ಬಿಳುಪಲ್ಲು ಒಂಥರಾ ಮಜ ಇದೆ ಅನಿಸಿದ್ದು ಆಮೇಲೆ)ಈಗಷ್ಟೇ ಇಲ್ಲಿ ಸ್ಪ್ರಿಂಗ್ ಕಾಲ ಮುಗಿದು ಬೇಸಿಗೆ ಕಾಲಿಟ್ಟಿದೆ…..ಈಗ ಪ್ರವಾಸದ ಸಮಯ …ನನಗಿ ವಿಷಯ ಪ್ರಸ್ತಾಪ ಮಾಡದಿದ್ದರೂ..ಅವರು ಅಲ್ಲಿ ಹೋದರು..ಇವರು ಇಲ್ಲಿ ಹೋದರು..ಅನ್ನೋ ಮನೇ ಮನೇ ರಿಪೋರ್ಟ್..ಕೊಡತೊಡಗಿದ್ಡೆ….ಅದೂ ಪೀಠಿಕೆ ಅನ್ನೋದು ಅವರಿಗೂ ಅರ್ಥವಾಯಿತೇನೋ…
ಸರಿ…ಈ ಶುಕ್ರವಾರ ನಾವು ಎಲ್ಲಾದರು ಹೋಗೋಣ ಅಂದ್ರು….ಮನಸಿನಲ್ಲೇ ಬಹಳ ಖುಷಿ ಆದರೂ ತೋರಿಸಿಕೊಳ್ಳಲಿಲ್ಲ”ಯಾಕೆ ಬಿಡಿ ಬೇಡ” ಎಂಬ ವೃಥ ಮಾತು ಆಡಿದ್ದೆ…ಎಲ್ಲಿಗೆ ಹೋಗ್ತಿದ್ದಿವಿ..ಅನ್ನೋದು ಮಾತ್ರ ಹೇಳಲಿಲ್ಲ…ಇವರು…ನಾನು ಕೇಳಿ ಕೇಳಿ..ಬೇಸತ್ತು ಹೋದೆ…ಆದರೂ ಇಂಥ ಅಚ್ಹರಿಗಳು ಆಶ್ಚರ್ಯಗಳು..ಇಲ್ಲದಿದ್ದರೆ ಬದುಕು ಸಪ್ಪೆ ಅನಿಸದೆ????
ಶುಕ್ರವಾರ ಹೊರಟಿದ್ದು ಬೆಳಿಗ್ಗೆ ೭ ಕ್ಕೆ..ಊರಿನಲ್ಲಿ ಮಾಡಿದಂತೆ ಚಾಪತಿ ಅನ್ನ..ಬೇಕಾದ ಎಲ್ಲಾ ಸರಂಜಾಮು ಚೀಲ ಸೇರಿತ್ತು…
ಹೀಗ್ ಶುರು ಆಗಿತ್ತು…ಈ ನಾಡಿನ ಮೊದಲ ಪ್ರವಾಸ …
portrush and portsteavert.
ಈ ಎರಡು ಸ್ಥಳಗಳು ಯುನೈಟೆಡ್ ಕಿಂಗ್ದಮ್ ನ ಸುಪ್ರಸಿದ್ಧ ಸಮುದ್ರ ತೀರಗಳು..ಈ ಸಮಯದಲ್ಲಿ ನೀರು ಬಿಸಿ!!!(-೧ ರಿಂದ ೫ ಡಿಗ್ರಿ ತಾಪಮಾನ )ಆಗೋದ್ರಿಂದ ದೇಶ ವಿದೇಶದ ಜನರೆಲ್ಲಾ ಇಲ್ಲಿಗೆ ಬಂದು ಸೇರುತ್ತಾರೆ…ಒಂಥರಾ ಊರ ಜಾತ್ರೆ ಹಾಗೆ..ಎಷ್ಟೋ ಜನ ತಮ್ಮ ಕ್ಯಾರೋವ್ಯಾನ್ ನಲ್ಲಿ ಇಲ್ಲೇ ವಾರಗಟ್ಟಲೆ..ವಾಸ್ತವ್ಯ ಹೂಡುತ್ತಾರೆ…ಹತ್ತಿರದಲ್ಲೇ ಜಗತ್ಪ್ರಸಿದ್ಧ ಗೋಲ್ಫ್ ಕೋರ್ಟ್ ಕೂಡ ಇದೆ…ಕಣ್ಣು ತಲುಪುವಷ್ಟು ದೂರಕ್ಕೂ ಅಟ್ಲಾಂಟಿಕ್ ಸಾಗರ …
ಎದುರಿಗೆ ನಿಂತಾಗ ಧನ್ಯತಾ ಭಾವ…ಪತಿದೇವ…ಹೇಳುತ್ತಿದ್ದರು”ನೀ ಅನ್ಕೊಂಡಿದ್ಯ???ನಿನ್ನನ್ನ ಸಮುದ್ರ ತೀರಕ್ಕೆ ಕರ್ಕೊಂಡು ಹೋಗ್ತೀನಿ ಅಂತ????ಅದೂ ಅಟ್ಲಾಂಟಿಕ್ ಸಾಗರ ತೀರಕ್ಕೆ…”ಅವರ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೆ ನ ಹೋಗಲೇ ಇಲ್ಲ..ನಾ ಕಳೆದೇ ಹೋಗಿದ್ದೆ,,,…ಸಾಗರ ರಾಯನ ಎದುರು…
ನಾ ಸ್ವಲ್ಪ ನೀರ ಹತ್ರ ಹೋಗಿ ಬರ್ತೀನಿ…ಅಂದು ಹೊರಟವಳಿಗೆ ಇವರು ಬೇಡ..ನಿನಗೆ ಸಹಿಸೋಕೆ ಆಗಲ್ಲ ..ಅಷ್ಟು ತಂಪು ನೀರು ಅಂದಿದ್ದು ಕೇಳಿಸಲಿಲ್ಲ…ಮಗನ ಅಂಗಿ ತೆಗೆಯೋ ತರಾತುರಿಯಲ್ಲಿದ್ದೆ …ಆತ ಹಠ ಮಾಡತೊಡಗಿದ್ದ ಅಮ್ಮ ಛಳಿ ಛಳಿ ….ನಾ ಬರಲ್ಲ ನೀರಿಗೆ” ಸರಿ ಎಂದು ನೀರಲ್ಲಿ ಕಾಲಿಟ್ಟ ನನಗೆ ಮೈಯ್ಯ ರಕ್ತ ಎಲ್ಲಾ ಒಮ್ಮೆಲೇ ಇಂಗಿ ಹೋದಂತೆ ಆಯ್ತು…ಅಷ್ಟು ತಂಪು…ಆಗ ಮಾತ್ರ ನಮ್ಮ ಅರಬ್ಬೀ ಸಮುದ್ರ ಬೆಸ್ಟ್ ಅನ್ನಿಸಿತು..ಬೇಕಾದಂತೆ ಆಡಬಹುದಲ್ಲ..???ಆದ್ರೂ..ಮರಳಾಟ,,,,,ಆಡಲು ಇಲ್ಲೂ ಅವಕಾಶ ಇದೆ….ನಾನು ನನ್ನ ಮಗ..ಮನಸೋಇಚ್ಚೆ ಆಡಿ…ಮನಸು ತುಂಬಿ ಕೊಂಡೆವು…
ಇಲ್ಲಿ ಎರಡು ಭಾರತೀಯ ರೆಸ್ಟೋರೆಂಟ್ ಇವೆ…ನಮ್ಮ ದೇಶದ ಅಡಿಗೆಗೆ ಇಲ್ಲಿ ಜನ ಮಾರುಹೊಗಿರೋದು..ಅಂಗಡಿ ತುಂಬಾ ತುಂಬಿದ್ದ ಬಿಳಿಯರ ಸಂತೆಯಿಂದಲೇ ತಿಳಿಯುತ್ತಿತ್ತು…ನನಗಾದ ಮತ್ತೊಂದು ಖುಷಿ ಎಂದರೆ ಇಲ್ಲಿನ ರೈಲಿನಲ್ಲಿ ಪ್ರಯಾಣಿಸಿದ್ದು..ಕಣ್ಣು ಬಿಟ್ಟು ಕಣ್ಣು ತೆರೆಯುವಷ್ಟರಲ್ಲಿ ಗಮ್ಯ ತಲುಪುವ…ಸ್ವಚ್ಛ ಸ್ವಚ ರೈಲುಗಳು….
ಮಧ್ಯ ಮಧ್ಯ ಎಂದೂ ಕೇಳರಿಯದ ವಿವಿಧ ಫ್ಲೆವರಿನ ಐಸ್ ಕ್ರೀಮ್ ,ಹಾಟ್ ಚಾಕ್ಲೆಟ್ ಡ್ರಿಂಕ್,ರುಚಿ ರುಚಿ ಚಾಕಲೇಟ್ ಗಳು..ಪ್ರವಾಸದ ಮಜ ವನ್ನು ಇನ್ನು ಹೆಚ್ಹಿಸಿದ್ದವು….ಒಟ್ಟಿನಲ್ಲಿ…ಮದುವೆ ನಂತರ ಬರೋಬ್ಬರಿ ಐದೂವರೆ ವರ್ಷಗಳ ನಂತರ ಪತಿದೇವ ಪ್ರಾಮಿಸ್ ಪೂರೈಸಿದ್ದ..ನಾನು ನನ್ನ ತಿರುಗಾಟದ ಪ್ರವರ ಮತ್ತೆ ಆರಂಭ ಗೊಂಡಿದ್ದಕ್ಕೆ…ಲಹರಿಯಲ್ಲಿದ್ದೆ…ಮತ್ತೆ ಮುಂದಿನ ವಾರ ಮತ್ತೊಂದು ಕಡೆ ಹೋಗೋದಿದೆ…ಆಗ ಮತ್ತಷ್ಟು ಅನುಭವಗಳನ್ನು ಹಂಚಿ ಕೊಳ್ಳುವೆ…
(ಚಿತ್ರ ಕೃಪೆ : awi.de)