ಜುಜುಬಿ ವೇತನಕ್ಕೆ ಸಂಜೆವರೆಗೆ ದುಡಿತ
– ಪವನ್ ಎಮ್. ಟಿ
ನೀವು ಸರಕಾರಿ ನೌಕರರಾಗಿದ್ದರೆ ನಮ್ಮ ಈಗಿನ ಸರಕಾರದ ಬಳಿ ವೇತನ ಹೆಚ್ಚಳ ಮಾಡಿ, ಪಿಂಚಣಿ ನೀಡಿ, ನಿವೃತಿ ವೇತನ ನೀಡಿ ಎಂದು ಭೇಡಿಕೆಯಿಟ್ಟು ಹೋರಾಟ ಮಾಡಬೇಡಿ. ನಮ್ಮ ಸರಕಾರ ನಿಮ್ಮಮೇಲೆ ಪ್ರತಿಕಾರ ತೀರಿಸಿಕೊಂಡು ಬಿಡುತ್ತದೆ ಹುಷಾರ್.
ಕೆಲವು ದಿನಗಳ ಹಿಂದೆ ಅತಿಥಿ ಉಪನ್ಯಾಸಕರು ಸಂಬಳ ಹೆಚ್ಚು ಮಾಡಬೇಕೆಂದು ಹೋರಾಟಕ್ಕೆ ಮುಂದಾದಾಗ ಸರಕಾರ ಅವರನ್ನು ಕೆಲಸದಿಂದಲೇ ತೆಗೆದು ಹಾಕುವ ನಿರ್ಧಾರಕ್ಕೆ ಬಂದು ಅವರನ್ನು ಮುಂದೆ ಯಾವುದೇ ಭೇಡಿಕೆಯನ್ನು ಸಲ್ಲಿಸದಂತೆ ಕೈ ಬಾಯಿ ಕಟ್ಟಿ ಹಾಕಿತು. ನೋಡಿ ಇದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರಕಾರ ಮಾಡೋ ಕೆಲಸ.
ಈಗ ಸರಕಾರ ಪ್ರತಿಕಾರ ತೀರಿಸಿ ಕೊಳ್ಳುತ್ತಿರುವುದು ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಮತ್ತು ಪುಟ್ಟ ಮಕ್ಕಳ ವಿರುದ್ಧ. ಪಾಪ ಕಾರ್ಯ ಕರ್ತೆಯರು ಸರಕಾರ ಕೊಡೋ ಜುಜುಬಿ ಗೌರವ ವೇತನ ಹೆಚ್ಚಳ, ನಿವೃತಿ ವೇತನ, ಪಿಂಚಣಿಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಾರ್ಯಕರ್ತೆಯರ ಅನೇಕ ವರ್ಷಗಳ ಹೋರಾಟದ ಶ್ರಮದಿಂದ ಸರಕಾರ ದೊಡ್ದ ಮನಸ್ಸುಮಾಡಿ ಅಲ್ಪ ಸ್ವಲ್ಪ ಗೌರವ ವೇತನವನ್ನು ಹೆಚ್ಚಿಸಿದೆ. ನಿವೃತಿ ವೇತನವನ್ನು ಕಾರ್ಯಕರ್ತೆಯರಿಗೆ ೬೦ ೦೦೦ ಸಹಾಯಕರಿಗೆ ೩೦ ೦೦೦ ನೀಡಲು ಮುಂದಾಗಿದೆ. ಇದರಲ್ಲಿ ಎಷ್ಟುದಿನ ಬದುಕು ನಡೆಸಬಹುದೆಂದು ನಿಮಗೇ ಗೊತ್ತು.
ಸರಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ವೇತನದ ಭೇಡಿಕೆ ಸಲ್ಲಿಸಿರುವುದು ಒಬ್ಬರಿಗೆ ೫ಲಕ್ಷ ನೀಡಿ ಎಂದು. ಇದರಲ್ಲಿ ಸರಕಾರ ಒಂದು ಲಕ್ಷದಷ್ಟು ಹಣವನ್ನಾದರೂ ನೀಡಿದ್ದರೆ ಸರಕಾರ ಕೊಡುಗೆಯನ್ನು ಸ್ಮರಿಸಬಹುದಿತ್ತು. ಸರಕಾರ ಎಲ್ಲಿಯಾದರೂ ಇಷ್ಟು ಹಣವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದರೆ ಕ್ರಿಕೇಟ್ ಆಟಗಾರರಿಗೆ ಮತ್ತು ಮಠಗಳಿಗೆ ಹಣ ಬಿಡುಗಡೆ ಮಾಡಲು ಕಷ್ಟವಾಗುದಿಲ್ಲವೇ ಪಾಪ ಅವರೆಲ್ಲರು ಕಡು ಬಡವರಲ್ಲವೇ. ಅದಕ್ಕೆ ಬಿಡುಗಡೆ ಮಾಡಲಿಲ್ಲವೇನೋ.
ನಮ್ಮ ಸರಕಾರ ಮಾಡಿರೋ ಮಹತ್ವದ ಕೆಲಸವಾದರೂ ಏನು ಗೊತ್ತಾ?
ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಠ ಬಿಡದೆ ಹೋರಾಟವನ್ನು ಮಾಡಿ ಸರಕಾರಾರದಿಂದ ಅಲ್ಪ ಸ್ವಲ್ಪ ಅನುದಾನವನ್ನು ಪಡೆದನಂತರ, ಸರಕಾದವರು ಇದಕ್ಕೆ ಏನಾದರೂ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಏನೋ ಸಂಜೆಯವರೆಗೆ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಸಮಯವನ್ನು ವಿಸ್ತರಿಸಿದೆ. ೮ ಗಂಟೆ ಕೆಲಸಮಾಡಿಸುವ ಮೂಲಕ ಕಾರ್ಮಿಕ ಕನಿಷ್ಟ ವೇತನ ಕಾನೂನಿನಡಿ ಅಂಗನವಾಡಿ ಕಾರ್ಯಕರ್ತೆಯರನ್ನು ತರುವ ಪ್ರಯತ್ನ ಇದಾಗಿರ ಬಹುದು ಆದರೆ ಸರಕಾರ ಈ ಎಲ್ಲಾ ನಿಯಮಗಳಿಂದ ಮಕ್ಕಳ ಮೇಲೆ ಆಗುವ ಪರಿಣಾಮವೇನು ಎಂಬುದನ್ನು ಸ್ವಲ್ಪವೂ ಯೋಚನೆ ಮಾಡದೆ ಈ ರೀತಿಂii ಕ್ರಮ ಜಾರಿಗೆ ತಂದಿರುವುದು ವಿಪರ್ಯಾಸ.
ಸರಕಾರ ಕೊಡುವ ಜುಜುಬಿ ಗೌರವ ವೇತನಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಜನಗಣತಿ, ಆರೋಗ್ಯ ಪಾಲನೆ,
ಮಕ್ಕಳನ್ನು ನೋಡಿಕೊಳ್ಳುವುದು, ಮಕ್ಕಳಿಗೆ ಕಲಿಸುವುದು ಸೇರಿದಂತೆ ಅನೇಕ ಕೆಲಸವನ್ನು ಮಾಡುತಿದ್ದಾರೆ. ಆದರೆ ಈಗ ಇದರೊಂದಿಗೆ ಸಂಜೆಯವರೆಗೆ ಕಾರ್ಯ ನಿರ್ವಹಿಸಬೇಕೆಂಬ ಹೊಸ ರೂಲ್ಸ ಬೇರೆ. ಈ ರೂಲ್ಸನ್ನು ನೋಡಿದರೆ ಕಾರ್ಯಕರ್ರ್‍ಎಯರ ವಿರುದ್ಧ ಸರಕಾರ ಸೇಡು ತೀರಿಸಿಕೊಳ್ಳಲು ಮುಂದಾದಂತಿದೆ. ಸರಕಾರ ಕಾನೂನಿನನ್ವಯ ಈ ನಿಯಮ ತಂದಿರ ಬಹುದು ಆದರೆ ಸರಕಾರದವರಿಗೆ ಅವರ ವೇತನವನ್ನು ಸರಿಯಾದ ಪ್ರಮಾಣದಲ್ಲಿ ನೀಡುವುದಕ್ಕೆ ಮನಸ್ಸು ಮಾಡಬಹುದಲ್ಲ ಅದನ್ನೇಕೆ ಮಾಡುತ್ತಿಲ್ಲ. ಯಾರೋ ಒಂದೆರಡು ಗಂಟೆ ದುಡಿದು ಹೋಗುವ ಅಧಿಕಾರಿಗಳಿಗೆ ಸಾವಿರಗಟ್ಟಲೇ, ಲಕ್ಷಗಟ್ಟಲೇ ವೇತನ ನೀಡುತ್ತಾರೆ. ಇಲ್ಲಿ ಯಾವುದೇ ಅಪಚಾರ ಮಾಡದೇ ಸರಕಾರದ ಸೇವೆಗೆಂದೇ ಮುಡಿಪಾಗಿರುವ ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಸರಕಾರಕ್ಕೆ ಯಾಕೆ ಈ ಅಸಡ್ಡೆ. ಅಂಗನವಾಡಿಯ ಸಹಾಯಕಿಯರು ಮಧ್ಯಾನದವರೆಗೆ ಅಂಗನವಾಡಿಯಲ್ಲಿ ದುಡಿದು ನಂತರ ಬೇರೆ ಕಡೆಗೆ ಹೋಗಿ ಕೂಲಿಕೆಲಸ ಮಾಡಿ ಹೇಗೋ ಕಷ್ಟಪಟ್ಟು ದುಡಿದು ಬದುಕುತಿದ್ದರು ಇನ್ನು ಮುಂದೆ ಸರಕಾರದ ಅಲ್ಪ ಹಣಕ್ಕೆ ಸಂಜೆಯವರೆಗೆ ಇಲ್ಲಿಯೇ ಕಾದುಕುಳಿತು ಕೊಳ್ಳಬೇಕಿದೆ.
ಮನೆಯಲ್ಲಿರುವ ಒಂದು ಮಗುವನ್ನು ನೋಡಿಕೊಳ್ಳುವುದಕ್ಕೆ ಒಬ್ಬ ತಾಯಿ ಎಷ್ಟು ಕಷ್ಟಪಡುತ್ತಾಳೆ ಎಂದು ನೀವೆಲ್ಲ ನೋಡಿದ್ದೀರಿ. ಇತ್ತೀಚೆಗೆ ಮಗುವಿಗೆ ಮೂರುವರೆ ವರ್ಷವಾಯಿತೆಂದರೆ ಸಾಕು ಶಿಕ್ಷಣದ ನೆಪದಲ್ಲಿ ದೂರದ ಹಾಸ್ಟೆಲ್ ಗಳಲ್ಲಿ ಬಿಟ್ಟು ಬಿಡುತ್ತಾರೆ. ಲಕ್ಷ ಗಟ್ಟಲೇ ಹಣವನ್ನು ಕಟ್ಟಿದರೆ ಸಾಕು ಮಕ್ಕಳನ್ನು ಹಾಸ್ಟೆಲ್ ನವರು ನೋಡಿಕೊಳ್ಳುತ್ತಾರೆ ಇತ್ತಕಡೆ ತಾಯಿಯ ಪ್ರೀತಿಯನ್ನು ಬಯಸುವ ಮಕ್ಕಳ ಪಾಡು ಕೇಳುವವರಿಲ್ಲ. ಅದಿರಲಿ ಇಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನು ರೂಡಿಸಿಕೊಳ್ಳಲೆಂದು ತಂದೆ ತಾಯಿಗಳು ಮಕ್ಕಳನ್ನು ಅಂಗನವಾಡಿಗೆ ಕಳುಯಿಸುತ್ತಾರೆ. ಇಲ್ಲಿ ಮಕ್ಕಳಿಗೆ ಎಲ್ಲತರಹದ ವಿದ್ಯೆಯನ್ನು ಕಲಿಸುತ್ತಾರೆ. ಆದರೆ ಈ ಮಕ್ಕಳಿಗೆ ಸರಕಾರ ತಂದಿರುವ ಈ ಹೊಸ ನಿಯಮ ಮುಳುವಾಗಿದೆ ಸಣ್ಣ ಮಕ್ಕಳು ತಮ್ಮ ತಂದೆ ತಾಯಿಯಂದಿರನ್ನು ಬಿಟ್ಟು ಸಂಜೆಯವರೆಗೆ ಇರಲು ಸಾಧ್ಯವೇ? ಈ ನಿಯಮ ಮಕ್ಕಳ ಮೇಲೆ ಪ್ರಭಾವ ಬೀರಿ ಮಕ್ಕಳನ್ನು ಖಿನ್ನತೆಯ ಕಡೆಗೆ ಕರೆದುಕೊಂಡು ಹೋಗುದಿಲ್ಲವೇ?
ಸರಕಾರ ನೀಡುವ ಪೌಷ್ಟಿಕ ಆಹಾರವನ್ನು ತಿಂದು ಸಂಜೆಯವರೆಗೆ ಮಕ್ಕಳು ಅಂಗನವಾಡಿಯಲ್ಲಿ ಕಾಲಕಳೆಂii ಬೇಕಾದ ಪರಿಸ್ಥಿತಿಯಿದೆ. ಮಧ್ಯಾನದ ಸಮಯದಲ್ಲಿ ನಿದ್ರಿಸುವ ಮಕ್ಕಳನ್ನು ಒಬ್ಬಳೇ ಕಾರ್ಯಕರ್ತೆ ಯಾವ ರೀತಿ ನಿಯಂತ್ರಿಸಿಯಾಳು, ಅಮ್ಮನ ಪ್ರೀತಿಯನ್ನು ಹೆಚ್ಚಾಗಿ ಭಯಸುವ ಈ ಮಕ್ಕಳಿಗೆ ಕಾರ್ಯ ಕರ್ತೆ ಎಷ್ಟು ಪ್ರೀತಿ ಕೊಡಲು ಸಾಧ್ಯ, ಅಮ್ಮ ಬೇಕೆಂದು ಹಠ ಮಾಡುವ ಮಕ್ಕಳನ್ನು ಯಾವ ರೀತಿ ಕಾರ್ಯಕರ್ತೆ ನಿಯಂತ್ರಿಸಿಯಾಳು ಈ ತಾಯಿ ರೂಪದ ಕಾರ್ಯಕರ್ತೆಯರ ಪರಿಸ್ಥಿತಿಯಾದರೂ ಏನಾಗಬೇಕು ನೀವೇ ಯೋಚಿಸಿ.
ದಿನವಿಡಿ ಅಂಗನವಾಡಿಯಲ್ಲಿ ಮಕ್ಕಳು ಕಾಲ ಕಳೆಯಲು ಅವರಿಗೆ ನಿದ್ರಿಸಲು ಸರಕಾರ ಸರಿಯಾದ ವ್ಯವಸ್ಥೆಯನ್ನು ಮಾಡಿ ಈ ಎಲ್ಲಾ ನಿಯಮಗಳನ್ನು ಜಾರಿಗೆತಂದಿದ್ದರೆ ತೊಂದರೆಯಿರುತ್ತಿರಲಿಲ್ಲ. ನಮ್ಮ ಸರಕಾರಕ್ಕೆ ಸ್ವಲ್ಪವಾದರೂ ಸಮಸ್ಯೆಗಳ ತಿಳುವಳಿಕೆ ಇದ್ದಿದ್ದರೆ ಈ ನಿಯಮವನ್ನು ಜಾರಿಗೆ ತರುತ್ತಿರಲಿಲ್ಲ. ಸರಕಾರಕ್ಕೆ ಯೋಜನೆಯನ್ನು ಜಾರಿಗೆ ತರಲು ತಿಳಿದಿದೆಯೇ ಹೊರತು ಅದನ್ನು ಯವರೀತಿ ಅನುಷ್ಟಾನಗೊಳಿಸಬೇಕೆಂದು ಇನ್ನು ತಿಳಿದಿಲ್ಲ. ಅದು ತಿಳಿದಿದ್ದರೆ ಇಂದು ಈ ಪರಿಸ್ಥಿಯಲ್ಲಿ ನಮ್ಮ ಸರಕಾರವಿರುತ್ತಿರಲಿಲ್ಲ.
*****************




