ಉಗ್ರರ ಉಪದ್ರವಕ್ಕೆ ಪರಿಹಾರವಿಲ್ಲವೇ?
– ಮುರಳೀಧರ ದೇವ್
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಏನಾಗಿದೆ? ಒಂದಾದ ಮೇಲೆ ಒಂದರಂತೆ ಹಗರಣಗಳು, ಅವಾಂತರಗಳು, ಒಟ್ಟಿನಲ್ಲಿ ಇಡೀ ಭಾರತ ದೇಶ ವಿಶ್ವಡೆದುರು ತಲೆ ತಗ್ಗಿಸುವ ಹಾಗೆ ಆಗಿದೆ. ಕಾಮನ್ ವೆಲ್ತ್ ಕ್ರೀಡೆಯ ಹಗರಣದಿಂದ ಸರ್ಕಾರದ ಮಹತ್ವದ ಹುದ್ದೆಗಳಲ್ಲಿರುವವರೆಲ್ಲರೂ ಭಾಗಿಗಳು ಅಂತ ಕಾಣ್ಸುತ್ತೆ. ಈಗ ಕೇಂದ್ರದ ಮತ್ತೊಂದು ಅವಾಂತರ, ಇತ್ತೀಚೆಗೆ ಕೇಂದ್ರೀಯ ತನಿಖಾ ದಳ ಪಾಕಿಸ್ತಾನಕ್ಕೆ ರವಾನಿಸಿದ ಪಟ್ಟಿಯಲ್ಲಿ ಕೆಲವರು ಭಾರತದ ಜೈಲಿನಲ್ಲಿ ಇದ್ದಾರೆ. ಅಲ್ಲದೇ ಆ ಪಟ್ಟಿಯಲ್ಲಿರುವವರನ್ನು ತನಿಖಾದಳವೆ ವಿಚಾರಣೆ ನಡೆಸಿದೆ ಹಾಗಿದ್ದೂ ಇಂತಹ ಲೋಪ ಆಗೋಕೆ ಹೇಗೆ ಸಾಧ್ಯ? ಕಡೆ ಪಕ್ಷ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡುವಾಗಲಾದ್ರೂ ಪಟ್ಟಿಯನ್ನು ಸರಿಯಾಗಿ ಪರಿಶೀಲನೆ ಮಾಡೋಕೆ ಆಗೋಲ್ವಾ? ತನಿಖಾ ಸಂಸ್ಥೆಗಳ ನಡುವೆ ಅಷ್ಟೂ ಸಮನ್ವಯ ಸಾಧಿಸೋಕೆ ಆಗೋಲ್ವಾ? ಇತ್ತೀಚಿನ ಬೆಳವಣಿಗೆಗಳಿಂದ ಭಾರತ ವಿಶ್ವ ಸಮುದಾಯದೆದುರು ಅಪರಾಧಿ ಸ್ಥಾನದಲ್ಲಿ ನಿಲ್ಲುವ ಹಾಗೆ ಆಗಿದೆ.
ಈಗ ಪಾಕಿಸ್ತಾನ ಇದೆ ಅಂಶಗಳನ್ನು ಮುಂದಿಟ್ಟುಕೊಂಡು ತನ್ನಲ್ಲಿ ಯಾವುದೇ ಭಯೋತ್ಪಾದಕರಿಲ್ಲ ಅವರೆಲ್ಲ ಭಾರತದಲ್ಲೇ ಇದ್ದಾರೆ ಅಂತ ಹೊಸ ವಾದ ಮುಂದಿಟ್ಟರು ಆಶ್ಚರ್ಯವಿಲ್ಲ. ಅಲ್ಲದೇ ಈಗ ಹಿಡಿದಿರುವ ಉಗ್ರರಿಂದ ಸರ್ಕಾರ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ, ಮುಂಬೈ ನಗರವನ್ನು ನಡುಗಿಸಿದ ಉಗ್ರಗಾಮಿಗಳಿಗೆ ನಮ್ಮ ಜೈಲುಗಳಲ್ಲಿ ಭಾರಿ ಅತಿಥಿ ಸತ್ಕಾರಗಳು ನಡೀತಾ ಇವೆ. ಇದನ್ನೆಲ್ಲ ನೋಡಿ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳು ತಾವೇ ಶರಣಾಗಿ ಬಂದರು ಪಾಕಿಸ್ತಾನಕ್ಕಿಂತ ಹೆಚ್ಚಿನ ಅನುಕೂಲಗಳು ಇಲ್ಲೇ ಸಿಗುತ್ತವೆ. ಅಲ್ಲ ಆಡಳಿತ ನಡೆಸುವ ಪಕ್ಷಕ್ಕೆ ಉಗ್ರಗಾಮಿಗಳಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡೋಕೆ ನಾಚಿಕೆ ಆಗೋಲ್ವಾ? ಹೀಗೆ ಭಾರತದ ಮೇಲೆ ದಾಳಿ ಮಾಡುವ ಉಗ್ರರನ್ನು ಎಷ್ಟು ದಿನ ಅಂತ ತೆರಿಗೆದಾರರ ಹಣದಿಂದ ಸಾಕಬೇಕು.
ಪಾಕಿಸ್ತಾನದಲ್ಲಿರುವ ಉಗ್ರರು ಅಲ್ಲೇ ಇರಲಿ ಅದರಿಂದ ಕನಿಷ್ಟ ತೆರಿಗೆದಾರರ ಹಣ ಪೊಲಾಗೊದು ತಪ್ಪುಟ್ತೆ. ಈಗಾಗಲೇ ಕಸಬ್ ನನ್ನು ಸಾಕಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗಿದೆ, ಇನ್ನೂ ಪಾಕಿಸ್ತಾನ ಪಟ್ಟಿಯಲ್ಲಿರುವ ಉಗ್ರರನ್ನು ನಮಗೊಪ್ಪಿಸಿದರೆ ಅವರನ್ನು ಸಾಕಲು ಇನ್ನೂ ಕೋಟಿ ಕೋಟಿ ತೆರಿಗೆದಾರರ ಹಣ ವ್ಯಯಿಸಬೇಕು. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಉಗ್ರಗಾಮಿಗಳನ್ನು ಸಾಕೋಕೆ ಅಂತಾನೆ ಹೊಸ ಬಜೆಟ್ ಮಂಡನೆ ಮಾಡಬೇಕಾಗಿ ಬರುತ್ತೆ. ಅಲ್ಲದೇ ಭಾರತದ ಉಚ್ಚ ನ್ಯಾಯಾಲಯ ಶಿಕ್ಷೆ ಕೊಟ್ಟಿರೋ ಅಫ್ಜಲ್ ಅಂತಹ ಉಗ್ರನಿಗೆ ನೇಣುಗಂಬ ಹತ್ತಿಸೋಕೆ ಮೀನ ಮೇಷ ನೋಡ್ತಾ ಇರೋ ಸರಕಾರ, ಪಾಕಿಸ್ತಾನ ಒಪ್ಪಿಸೋ ಉಗ್ರಗಾಮಿಗಳನ್ನು ಇಟ್ಟುಕೊಂಡು ಏನು ಮಾಡುತ್ತೆ? ಇದು ಬರೀ ಸರಕಾರದ ಕಣ್ಣೊರಿಸುವ ತಂತ್ರ ಅಂತ ಅನ್ನಿಸೋದೇ ಇರೋಲ್ವ?
ಮೊನ್ನೆ ಅಮೇರೀಕಾ ಪಡೆಗಳು ಓಸಮಾನನ್ನು ಪಾಕಿಸ್ತಾನ ನೆಲದಲ್ಲೇ ಕೊಂದಾಗ ಕೇಂದ್ರ ಸರ್ಕಾರ ನಡೆಸುತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಆಡಿದ ಮಾತುಗಳು ಅವರಿಗೆ ಪ್ರೀತಿ. ಉಗ್ರ ಸತ್ತ ಅಂತ ಇಡೀ ವಿಶ್ವವೇ ಖುಷಿ ಪಡ್ತಾ ಇದ್ರೆ, ಓಸಮಾನನ್ನು ಇಸ್ಲಾಮಿಕ್ ವಿಧಿಗನುಗುಣವಾಗಿ ಅಂತ್ಯಕ್ರಿಯೆ ಮಾಡಿಲ್ಲ ಅನ್ನೋದು ಅವರ ಗೊಣಗು, ಅಲ್ಲ ಸ್ವಾಮಿ ನೀವೇ ಅಲ್ವೇ ಇಸ್ಲಾಮಿಕ್ ಭಯೋತ್ಪಾದನಗೆ ಧರ್ಮ ಇಲ್ಲ ಅನ್ನೋರು, ಆದರೆ ಅದೇ ಉಗ್ರ ಸತ್ರೆ ಧಾರ್ಮಿಕ ವಿಧಿವಿಧಾನ ನೆನಪಾಗುತ್ತಾ? ಇನ್ನೂ ಇದೆ ಮಹಾಶಯರು ಆ ಪಕ್ಷದ ಯುವರಾಜನಿಗೆ ಗುರು ಅಂತೆ, ಯುವರಾಜ ಏನಾದ್ರೂ ದೇಶದ ಪ್ರಧಾನಿ ಆದ್ರೆ ಉಗ್ರಗಾಮಿಗಳ ಓಟು ಎಲ್ಲಿ ತಪ್ಪುತ್ತೆ ಅಂತ ಹೊಸ ಕಾನೂನು ಮಾಡಿ ಅವರಿಗೆ ಮತ ಹಾಕೋ ಭಾಗ್ಯ ಕಲ್ಪಿಸಿದ್ರು ಅಶ್ಚರ್ಯ ಪಡಬೇಕಾಗಿಲ್ಲ. ಎಷ್ಟು ದಿನ ಅಂತ ಭಾರತದ ಮುಗ್ಧ ಜನ ಈ ರೀತಿ ಭಯೋತ್ಪಾದನೆಗೆ ಗುರಿ ಆಗ್ತಾ ಇರ್ಬೇಕು? ಇನ್ನಾದ್ರು ಕೇಂದ್ರ ಸರಕಾರ ನಿದ್ದೆ ಇಂದ ಎದ್ದು ವಾಸ್ತವನ್ನು ನೋಡಿ ಉಗ್ರರ ವಿರುದ್ದ ಕಠಿಣ ಕ್ರಮ ತೆಗೆದುಗೊಳ್ಳುವ ಧೈರ್ಯ ಮಾಡಲಿ. ಇಲ್ಲ ಅಂದ್ರೆ ಮತ್ತೆ ಪ್ರತಿ ಸಲ ದಾಳಿಯಾದಾಗ ಬರಿ ಪಾಕಿಸ್ತಾನದ ಕಡೆ ಬೊಟ್ಟು ಮಾಡ್ತಾ ಕೂಡೋದು ಬಿಟ್ರೆ ಬೇರೆ ಏನು ಮಾಡೋಕೆ ಆಗದ ಪರಿಸ್ಥೀತಿ ಬರುತ್ತೆ.
Final words: No one is safe in Pakistan not even Osama, Every one in India is safe even Kasab
*************





“No one is safe in Pakistan not even Osama, Every one in India is safe even Kasab”
very very true……
No one is safe in Pakistan not even Osama, Every one in India is safe even Kasab. Exactly