ವಿಷಯದ ವಿವರಗಳಿಗೆ ದಾಟಿರಿ

ಜುಲೈ 1, 2011

4

ಪ್ರೀತಿ ಕುರುಡಾದರೂ ಪ್ರಿತಿಸುವವರು ಕುರುಡಾಗದಿರಲಿ

‍ನಿಲುಮೆ ಮೂಲಕ

– ಪವನ್ ಪಾರುಪತ್ತೇದಾರ್

ಅಗ್ರಹಾರದ ಶಾಮಣ್ಣನವರಿಗೆ ತಮ್ಮ ಮಗಳನ್ನ ಬ್ಯಾಂಕ್ ಮ್ಯಾನೇಜರ್ ಮಾಡಬೇಕಂಬ ಅಸೆ ಇತ್ತು.ಮಗಳಿಗೆ SSLC ವರೆಗೂ ಹಳ್ಳಿಯಲ್ಲಿನ ಶಾಲೆಯಲ್ಲಿ ಓದಿಸಿದರು, ಪ್ರತಿದಿನ ಮಗಳನ್ನ ಶಾಲೆಗೆ ಕರೆದೊಯ್ಯುವುವುದು ಮತ್ತೆ ಕರೆತರುವುದು ಅವರದೇ ಕೆಲಸ. ಮನೆಗೆ ಕರೆ ತಂದೊಡನೆ ಮುದ್ದಾಗಿ ಮಾತನಾಡಿಸಿ ಶಾಲೆಯ ಬಗ್ಗೆ ವಿಚಾರಿಸುವುದು ಇವೆಲ್ಲ ನಡೆಯುತ್ತಿತ್ತು. ಆದರೆ ಹಳ್ಳಿಯಲ್ಲಿ ಕಾಲೇಜ್ ಇಲ್ಲದಿದ್ದರಿಂದ ಅನಿವಾರ್ಯವಾಗಿ ಪಕ್ಕದ ಪಟ್ಟಣಕ್ಕೆ ಸೇರಿಸಬೇಕಾಯ್ತು, ಪ್ರತಿ ದಿನ ಬಸ್ ಅಲ್ಲಿ ಪ್ರಯಾಣ ಮಗಳು ಮನೆಯಿಂದ ಹೊರ ಮತ್ತೆ ಸಂಜೆ ಬರುವ ವರೆಗೂ ಅವಳದ್ದೇ ಚಿಂತೆ ಶಾಮಣ್ಣ ಮತ್ತು ಅವರ ಹೆಂಡತಿಗೆ. ಆಗಾಗ ಕಾಲೇಜ್ ಬಳಿ ಹೋಗುತಿದ್ದರು, ಒಂದೆರಡು ಸಲಿ ಅವರು ಹೋದಾಗ ಮಗಳು ಕಾಲೇಜ್ ನಲ್ಲಿ ಇರಲಿಲ್ಲ.

ಮಗಳು ಮನೆಗೆ ಬಂದಮೇಲೆ ಕೇಳಿದಾಗ ಸ್ನೇಹಿತೆಯ ಮನೆಗೆ ಓದಲು ಹೋಗಿದ್ದೆ ಎಂದಳು. ಆದರು ಶಾಮಣ್ಣ ನವರಿಗೆ ಏನೋ ಒಂದು ರೀತಿ ಅನುಮಾನ ಮಗಳು ಎಲ್ಲಾದರೂ ತಪ್ಪು ದಾರಿ ತುಳಿಯುತಿರುವಳೋ ಅನ್ನೋ ಭಯ, ಕಾಲೇಜ್ ಹತ್ತಿರದಲ್ಲೇ ಇದ್ದಿದ್ದರೆ ಮೊದಲಿನ ಹಾಗೆ ತಾನೆ ಜೊತೆಯಲಿ ಹೋಗಿ ಬರಬಹುದಾಗಿತ್ತು ಅನ್ನೋ ಯೋಚನೆ ಇನ್ನು ಸ್ವಲ್ಪ ದಿನಗಳಾದ ಮೇಲೆ ಕಾಲೇಜ್ ಗೆ ಹೋದ ಶಾಮಣ್ಣ ನವರ ಮಗಳು ಮತ್ತೆ ಮನೆಗೆ ತಿರುಗಿ ಬಂದಿಲ್ಲ. ಆಮೇಲೆ ತಿಳಿದ ವಿಷಯ ಅಂದ್ರೆ ಅವಳು ಪಟ್ಟಣದಲ್ಲಿನ ಒಬ್ಬ ಆಟೋ ಡ್ರೈವರ್ ಜೊತೆ ಓದಿ ಹೋಗಿದ್ದಳು, ಹತ್ತಾರು ಎಕರೆ ಜಮೀನು ಅಸ್ತಿ ಪಾಸ್ತಿ ಎಲ್ಲ ಇದ್ದ ಶಾಮಣ್ಣನವರಿಗೆ ಮಗಳ ಮದುವೆ ಮಾಡುವುದು ಅಷ್ಟೇನೂ ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಮಗಳು ವಿದ್ಯಾವಂತೆ ಅಗಲಿ ಎಂದು ಅಸೆ ಪಟ್ಟಿದ್ದಕ್ಕೆ ಶಾಮಣ್ಣ ನವರಿಗೆ ಸಿಕ್ಕ ಪ್ರತಿಫಲ ಬಹಳ ವಿಷಾದನೀಯ. ಬಹಳ ಕಟ್ಟುನಿಟ್ಟಿನ ಬ್ರಾಹ್ಮಣ ಕುಟುಂಬ ಊರಿನ ಜನ ಮಾತ್ರವಲ್ಲದೆ ನೆಂಟರು ಇಷ್ಟರ ಮಧ್ಯೆ ಸಹ ಅವಮಾನ ಪಡುವಂತಾಯಿತು.

ಇದ್ದ ಒಬ್ಬ ಮಗಳು ಹೀಗಾದಳಲ್ಲ ಅನ್ನೋ ಚಿಂತೆ ಶಾಮಣ್ಣನವರು ಬದುಕಿರೋವರೆಗೂ ಉಳಿಯಿತು.ಆದರೆ ಮಗಳು ಹೇಳುವುದೇ ಬೇರೆ, ೧೭ ವರ್ಷ ಬೆಳೆಸಿದಕ್ಷಣ ನನ್ನ ಇಡಿ ಜೀವನವನ್ನ ಯಾರೋ ಗೊತ್ತು ಗುರಿ ಇಲ್ಲದವನ ಜೊತೆ ಕಳೆಯಬೇಕಾ ಎಂದು, ಕನಸುಗಳ ನುಚ್ಚು ನೂರು ಮಡಿದ ಮೇಲೆ ವಯಸೆಂಬ ಹುಚ್ಚು ಕುದುರೆಯ ಮೇಲೇರಿದಾಗ ಯಾರಿಗೆ ತಾನೆ ತಂದೆ ತಾಯಿಯ ಅಕ್ಕರೆ ನೆನಪಾದೀತು. ತಾಯಿ ಒಂದೊಂದು ತುತ್ತು ಆನ್ನ ತಿನ್ನಿಸುವಾಗ ತನ್ನ ಮಗಳ ಬಗ್ಗೆ ಏನೆಲ್ಲಾ ಆಸೆಗಳನ್ನು ಇಟ್ಟಿರುತ್ತಾಳೆ ಎಂಬ ವಿಷಯ ಮಗಳಿಗೆಲ್ಲಿ ಗೊತ್ತು. ತಂದೆಯು ಗ್ರಾಮದ ಹಿರಿಯರ ಜೊತೆ ಮಾತನಾಡುವಾಗ ನನ್ನ ಮಗಳನ್ನ ಪಟ್ಟಣದ ಕಾಲೇಜ್ ಗೆ ಕಳಿಸುತ್ತಿದ್ದಿನಿ ಎಂದು ಎಷ್ಟು ಸರಿ ಬೀಗಿದ್ದರೆಂಬುದು ಇ ಹುಡಿಗಿಗೆನು ಗೊತ್ತು.

ಅವಳಿಗೆ ಗೊತ್ತಿದ್ದಲ್ಲ ಒಂದೇ ಸಿಂಗಾರವಾದ ಹೊಸ ಆಟೋ ಮೇಲೆ ಇವಳ ಹೆಸರ radium cutting ಇದ್ದರೆ ಅದೇ ಪ್ರೀತಿ, ಕಾಲೇಜ್ ಗೆ ಚಕ್ಕರ್ ಹೊಡೆದು ಅವನ ಜೊತೆ ಸಿನಿಮ ನೋಡಿದರೆ ಅದೇ ಪ್ರೀತಿ, ಅವನ ಎದೆಯ ಮೇಲೆ ಇವಳ ಹೆಸರ ಹಚ್ಚೆ ಹಾಕಿಸಿದ್ದರೆ ಅದೇ ಪ್ರೀತಿ, ಪಟ್ಟಣಕ್ಕೆ ಬಂದಿಳಿದೊಡನೆ ತಾನು ಮಾಡುವ ಕಾಯಕವ ಬಿಟ್ಟು ಇವಳನ್ನು ಊರು ಸುತ್ತಿಸುತಿದ್ದರೆ ಅದೇ ಪ್ರೀತಿ. ಶಾಶ್ವತವಲ್ಲದ ಇ ಮಾಯೆಯ ಹಿಂದೆ ಬಿದ್ದು ತಂದೆ ತಾಯಿಯ ಪ್ರೀತಿಯ ಕಡೆಗಣಿಸಿದಳು ಆದರೆ ಇ ಮಾಯೆ ಹೆಚ್ಚು ದಿನ ಇರುವುದಿಲ್ಲ ಎಂಬ ಅರಿವು ಆಗಲು ಕೇವಲ ೪ ತಿಂಗಳು ಸಾಕಾಯಿತು. ಆಟೋ ಸಂಪಾದನೆಯೆಲ್ಲ ಶೋಕಿ ಮಾಡಲು ಸಿನಿಮ ನೋಡಲು ಸಾಲದ್ದರಿಂದ ಅ ಹುಡುಗ ಮೊದಲಿನಷ್ಟು ಸಮಯ ಮತ್ತು ಪ್ರೀತಿ ಕೊಡಲು ಸಾಧ್ಯವಾಗಲಿಲ್ಲ. ಇದೆ ಕಾರಣಗಳಿಗೆ ಇಬ್ಬರ ನಡುವೆ ಒಡಕು ಉಂಟಾಗಿ ಜಗಳ ಕದನ ನಡೆದು ತಾರಕಕ್ಕೆರಿ ಮತ್ತೆ ತಂದೆಯ ಮನೆ ಬಾಗಿಲಿಗೆ ಬಂದು ನಿಂತಳು.

ಆದರೆ ಅಡಿಕೆಗೆ ಹೋದ ಮನ ಆನೆ ಕೊಟ್ಟರು ಬರುವುದಿಲ್ಲ ಎಂಬಂತೆ, ಶಾಮಣ್ಣನವರು ಮಗಳು ಮನೆಗೆ ಮತ್ತೆ ಬಂದರು ಸಹ, ಅವರು ಸಾಯುವವರೆಗೂ ಮಗಳು ಓಡಿ ಹೋಗಿದ್ದರ ಬಗ್ಗೆ ಉರು ಮಾತನಾಡುವುದ ನಿಲ್ಲಿಸುವುದಿಲ್ಲ. ತಮ್ಮ ಮುದ್ದಿನ ಮಗಳಿಂದ ನೋವನ್ನು ತಮ್ಮ ರೇಷ್ಮೆ ಶಲ್ಯದ ತುದಿಯಲ್ಲೇ ಗಂಟು ಹಾಕಿಕೊಂಡರು ಶಾಮಣ್ಣ..

ಸ್ನೇಹಿತರಲ್ಲಿ ನನ್ನ ವಿನಂತಿ ಎಂದರೆ, ದಯವಿಟ್ಟು ತಮ್ಮ ಪ್ರೀತಿಯ ಆಯ್ಕೆ ಜೋಪಾನವಾಗಿರಲಿ. ಪ್ರೀತಿ ಕುರುಡು ಎಂಬ ಗೊಡ್ಡು logic ಗೆ ಬೆಲೆ ಕೊಟ್ಟು ಕಂಡಕಂಡವರನೆಲ್ಲ ಪ್ರೀತಿಸಬೇಡಿ. ನಮ್ಮದು ಅಮೇರಿಕ ಅಲ್ಲ, dating ಸಂಸ್ಕೃತಿ ಬೇಡ, live in together ಗೆ ಹೊಂದಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ನಮ್ಮ ಭಾರತೀಯರಿಗಿಲ್ಲ. flirt ಆದರು breakup ಮಾಡಿಕೊಂಡಮೇಲೆ ಸ್ವಲ್ಪ ದಿನ ನೋವು ತಿನ್ನುವ ಜನ ನಾವು, ಸೊ ಪ್ಲೀಸ್ ಲವ್ ಅಲ್ಲಿ ಬೀಳುವ ಮುಂಚೆ ಹುಡುಗನ ಅಥವಾ ಹುಡುಗಿಯ ಪುರ್ವಪರದ ಬಗ್ಗೆ ತಿಳಿದಿರಲಿ. ಕುಟುಂಬ ಸಮಾಜ ಎಲ್ಲರು ಒಪ್ಪುವಂತ ಹುಡುಗನ್ನ/ ಹುಡುಗಿಯ ಪ್ರೀತಿಸಿ ನಿಮ್ಮ ಪ್ರೀತಿ ಯಾರದೋ ಪ್ರೀತಿಯನ್ನು ಕಳೆದುಕೊಂಡು ಪಡೆದು ಕೊಳ್ಳುವಂತದ್ದಾಗಿರಬಾರದು, ನಿಮ್ಮ ಪ್ರೀತಿಯಿಂದ ಎಲ್ಲರು ಮತ್ತಷ್ಟು ಬೆರೆತು ಜೀವನ ಸಂತಸಮಯವಗಿರಬೇಕು ಅ ರೀತಿ ಪ್ರೀತಿಸಿ best of luck my dear friends :).

ಸ್ನೇಹದಿಂದ ಪವನ್ 🙂

4 ಟಿಪ್ಪಣಿಗಳು Post a comment
  1. ರವಿ ಮೂರ್ನಾಡು's avatar
    ರವಿ ಮೂರ್ನಾಡು
    ಜುಲೈ 1 2011

    ಪವನ್‍, ನಿಮ್ಮ ಪ್ರಶ್ನೆ ಚೆನ್ನಾಗಿದೆ. ಅದೇ ರೀತಿ ಕುರುಡು ಪ್ರೀತಿಯ ಬಗೆಗಿನ ಕಟು ಸತ್ಯದ ಸಂದೇಶವು. ನನ್ನಲ್ಲಿ ಒಂದು ಅನುಮಾನ ಅಂದರೆ, ಮನೆಯ ವಾತಾವರಣದಲ್ಲಿ ಕೆಲವು ಆಚಾರ- ವಿಚಾರದಲ್ಲಿ ಮತ್ತು ತುಂಬಾ ಸಲುಗೆಯ ವ್ಯವಸ್ಥೆಯ ದೋಷಗಳಿದ್ದಲ್ಲಿ ಮಾತ್ರ ಇಂತಹ ಸಮಸ್ಯೆಗಳು ಉದ್ಭವಿಸಬಹುದೋ ಎಂದು. ಏಕೆಂದರೆ, ಯಾರಿಗೆ ತಂದೆ-ತಾಯಿ ಮತ್ತು ಅಲ್ಲಿನ ಬದುಕಿನ ವ್ಯವಸ್ಥೆಗಳ ಬಗ್ಗೆ ಅರಿವು ಇರುವುದಿಲ್ಲವೋ ಅಲ್ಲಿ ಮಾತ್ರ ಇಂತಹ ಸಮಸ್ಯೆಗಳು ತುಂಬಿಕೊಳ್ಳುತ್ತವೆ. ಮಕ್ಕಳೆನ್ನುವ ನೆಪದಲ್ಲಿ ತೋರಿಸುವ ಮಮತೆ- ಪ್ರೀತಿ ಅವರ ಬದುಕು ಮತ್ತು ಕನಸುಗಳನ್ನು ಪ್ರಶ್ನೆ ಮಾಡುವ ಮಟ್ಟಕ್ಕೆ ಬಂದರೆ ವ್ಯವಸ್ಥೆ ಕೆಟ್ಟದಾಗಿರುತ್ತವೆ. ಮುಖ್ಯವಾಗಿ ಇಲ್ಲಿ ಅರಿವಿನ-ವಿವೇಚನೆಯ ಪಾಠ ಮಕ್ಕಳಿಗೆ ತಿಳಿಸುವಂತ ವಾತಾವರಣ ಸೃಷ್ಠಿಯಾಗಬೇಕು. ಮಗ- ಮಗಳು ಇಬ್ಬರಿಗೂ. ಯಾರೂ ಯಾರಿಗೂ ಕಮ್ಮಿಯಿಲ್ಲ. ಮಕ್ಕಳ ಮೇಲೆ ತೋರುವ ತಂದೆಯ ನಡವಳಿಕೆಗೆ ವಿರೋಧ ವ್ಯಕ್ತಪಡಿಸುವ ತಾಯಿಗೆ ಬೆಲೆಯಿಲ್ಲದಿದ್ದರೆ ಅಥವಾ ತಂದೆಗೆ ಬೆಲೆ ಇಲ್ಲದಿದ್ದರೆ ಮನೆಯ ಗೌರವ ವಿರುದ್ಧ ದಿಕ್ಕಿ ಚಲಿಸುತ್ತದೆ.

    ಉತ್ತರ
    • Pavan Harithasa's avatar
      ಜುಲೈ 1 2011

      dhanyavaada ravi anna 🙂 aadare naa kandante esto maegalalli hennu makkalannu bahala preeti inda nodikollutiddaru saha odi hodanta prasanga ive, samanyavagi ivarella dance teacher, auto driver, illave yaradru rowdysm maduva huduga etc ee reetiya hudugara joteye odi hogtare, may be a vayasinalli akarshane idakkella karana embudu nanna anisike.

      ಉತ್ತರ
  2. Rajendra B. Shetty's avatar
    Rajendra B. Shetty
    ಜುಲೈ 1 2011

    In ” Mera naam Joker” Manoj Kumar tells to Smi, ” Teen age is like dawn….neither day nor night”.

    ಉತ್ತರ
  3. Narendra Shetty's avatar
    Narendra Shetty
    ಜುಲೈ 1 2011

    nice one with a piece off advice to the next generation.

    ಉತ್ತರ

Leave a reply to Narendra Shetty ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments