“ತಾವು ಕುಳಿತ ಮರದ ಕೊಂಬೆಯನ್ನು ತಾವೇ ಕಡಿದು ಕೊಳ್ಳುವ ನಮ್ಮ ಸ್ಯಾಂಡಲ್ ವುಡ್ ಮಂದಿ”
-ರತೀಶ
ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ ಯಾರದರನ್ನು ಒಬ್ಬರನ್ನು ‘ನಮ್ಮ ಸ್ಯಾಂಡಲ್ ವುಡ್ ಸಮಸ್ಯೆ ಏನು?’ ಎಂದು ಕೇಳಿ, ‘ಪರಭಾಷೆ ಚಿತ್ರಗಳ ಧಾಳಿ, ಕನ್ನಡಿಗರು ಚಿತ್ರಮಂದಿರಕ್ಕೆ ಬರವುದಿಲ್ಲ, ಕನ್ನಡ ಚಿತ್ರಗಳನ್ನು ನೋಡುವುದಿಲ್ಲ….’ ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋಚುವುದು ಏನೆಂದರೆ ಈ ಎಲ್ಲ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗದವರೇ ಹೊಣೆ! ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.
ನಿನ್ನೆ ನಾನು ಸುವರ್ಣ ಟಿವಿಯಲ್ಲಿ, ಸುವರ್ಣ ಫಿಲಂ ಅವಾರ್ಡ್ಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ, ಬಹಳ ಅಪರೂಪಕ್ಕೆ ಅನ್ನುವಂತೆ ಕನ್ನಡಿಗರಿಗೆ ಇಂಥಹ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಸಿಗುವುದು. ಜೊತೆಗೆ ಕನ್ನಡ ಚಿತ್ರರಂಗದವರಿಗೆ ಇದು ಅತಿ ಮುಖ್ಯ ಹಾಗು ಅತಿ ವಿರಳವಾಗಿ ದೊರಕುವಂತಹ ಅವಕಾಶ, ಇಲ್ಲಿ ಕನ್ನಡ ಚಿತ್ರರಂಗದ ವಿಶೇಷಗಳನ್ನು, ಸಾಧನೆಗಳನ್ನು, ಮುಂದಿನ ಗುರಿಗಳನ್ನು ಹಾಗು ಚಿತ್ರರಂಗದ ಹಿರಿಮೆಯನ್ನು ಜನರಿಗೆ ಹತ್ತಿರವಾಗುವಂತೆ ತಿಳಿಸುವ ಬಹುದಾದಂಥಹ ಬಹು ದೊಡ್ಡ ವೇದಿಕೆ ನಿರ್ಮಾಣವಾಗಿತ್ತು, ಆದರೆ ನಮ್ಮವರು ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದು ಬೇಸರದ ಸಂಗತಿ.
ಸಾಮಾನ್ಯವಾಗಿ ಇಂಥಹ ಕಾರ್ಯಕ್ರಮಗಳು ನಮಗೆ ಬಾಲಿವುಡ್, ಕಾಲಿವುಡ್ ಹಾಗು ಟಾಲಿವುಡ್ ಗಳಲ್ಲಿ ಹೆಚ್ಹಾಗಿ ಕೇಳಿರಿತ್ತೇವೆ ಅಥವಾ ನೋಡಿರುತ್ತೇವೆ, ಅಲ್ಲಿನ ಕಾರ್ಯಕ್ರಮದ ಮನರಂಜನೆ ಕೇವಲ ಅವರ ಭಾಷೆಯ ಚಿತ್ರಗಳ ಹಾಡುಗಳಿಗೆ ಅಥವಾ ತುಣುಕುಗಳಿಗೆ ಮೀಸಲಾಗಿರುತ್ತದೆ, ಆ ಮೂಲಕ ಅವರು ಪ್ರೇಕ್ಷಕರನ್ನು ಪ್ರೇಕ್ಷಕರಿಗೆ ಗೊತ್ತಿಲ್ಲದ ಹಾಗೆ ಆ ಭಾಷೆಯ ಪರಿಧಿಯೊಳಗೆ ಕಟ್ಟಿ ಹಾಕಿರುತ್ತಾರೆ, ಅದರ ಫಲಿತಾಂಶ ಏನೆಂದು ನಾನೇನು ಬೇರೆಯಾಗಿ ಹೇಳಬೇಕಿಲ್ಲ ಅದು ಎಲ್ಲರಿಗು ಗೊತ್ತಿರುವ ವಿಷಯ.
ಆದರೆ ನಮ್ಮಲ್ಲಿ ನಡೆದದ್ದೇನು? “ಸಾಲು ಸಾಲು ಪರಭಾಷೆಯ ಹಾಡುಗಳಿಗೆ ಕುಣಿತ“, (ವಿಪರ್ಯಾಸವೆಂದರೆ ಕನ್ನಡ ಚಿತ್ರ ನಟನೆಗಾಗಿ ಎರೆಡೆರೆಡು ಫಿಲಂ ಫೇರ್ ಪ್ರಶಸ್ತಿ ಪಡೆದ ನಟಿಯರಿಂದ, ಬೇರೆ ಭಾಷೆ ಚಿತ್ರದ ಹಾಡುಗಳಿಗೆ ನರ್ತನ, ಅವರ ಮುಂದಿನ ಚಿತ್ರಗಳಿಗೆ ಕನ್ನಡ ಚಿತ್ರ ರಂಗ ಮತ್ತು ಕನ್ನಡಿಗರು ಬೇಡವೇನೋ?) ಈ ಮೂಲಕ ಅವರು ಅನ್ಯ ಭಾಷೆಯ ಚಿತ್ರಗಳಿಗೆ ಯಾವುದೇ ಖರ್ಚಿಲ್ಲದೆ ನಮ್ಮ ನಾಡಿನಲ್ಲಿ ಮಾರುಕಟ್ಟೆ ಒದಗಿಸಿ ಕೊಡುತ್ತಿದ್ದಾರೆ. ‘ನಮ್ಮ ಸಿನಿಮಾ ಹಾಡುಗಳು ಯಾವದಕ್ಕೂ ಕಮ್ಮಿ ಇಲ್ಲ, ನೋಡಿ, ಕೇಳಿ ಎಂಥೆಂಥಹ ಹಾಡುಗಳಿವೆ ನಮ್ಮಲ್ಲಿ, ಇನ್ನು ಮುಂದೆ ಇವೆಲ್ಲಕ್ಕೂ ಮೀರಿದ ಹಾಡು, ಚಿತ್ರಗಳು ಬರುತ್ತವೆ. ಕನ್ನಡ ಚಿತ್ರರಂಗ ಮನರಂಜನೆಯ ಗಣಿ’ ಎಂಬ ಸೂಕ್ಷ್ಮ ಸಂದೇಶವನ್ನು ಈ ಕಾರ್ಯಕ್ರಮದಲ್ಲಿ ಎಲ್ಲ ಕನ್ನಡಿಗರಿಗೆ ನೀಡಬಹುದಿತ್ತು. ಆದರೆ ಅವರು ಮಾಡಿದ್ದು, ‘ಕನ್ನಡ ಚಿತ್ರಗಳಿಗೆ ಅನ್ಯ ಭಾಷೆಯ ಹೆಸರುಗಳು, ಕನ್ನಡ ಕಾರ್ಯಕ್ರಮಗಳ ನಡುವೆ ಅನ್ಯ ಭಾಷೆಯ ಕುಣಿತಗಳು.’ ಇನ್ನು ಜನರನ್ನು ಹೇಗಪ್ಪ ಕಟ್ಟಿ ಹಾಕಲು ಸಾಧ್ಯ? ಪರಭಾಷೆಯ ಹಾಡುಗಳಿಗೆ ನೃತ್ಯ ಮಾಡುತ್ತಾ, ಅವರಿಗೆ ಪುಕ್ಕಟೆ ಮಾರುಕಟ್ಟೆಯನ್ನು ನಮ್ಮ ನಾಡಿನಲ್ಲಿ ನೀಡುತ್ತ, ಕನ್ನಡ ಚಿತ್ರರಂಗಕ್ಕೆ ಕನ್ನಡಿಗರೇ ಅನ್ಯರ ಧಾಳಿಯನ್ನು ಆಹ್ವಾನಿಸಿರುವುದು ಬೇಸರದ ವಿಷಯ.
ಇಷ್ಟು ಸಾಮನ್ಯ ಜ್ಞಾನ ಇಲ್ಲದ ಇವರು ಕನ್ನಡ ಚಿತ್ರ ರಂಗದ ದುಸ್ತಿತಿಗೆ ಕನ್ನಡಿಗರನ್ನು ಆಕ್ಷೇಪಣೆ ಮಾಡುವ ಯಾವ ಅಧಿಕಾರವು ಹೊಂದಿಲ್ಲ. ಸುವರ್ಣ ಫಿಲಂ ಅವಾರ್ಡ್ಸನಲ್ಲಿ ನಡೆದ ಪ್ರಮಾದಗಳು ಮರುಕಳಿಸಿದರೆ ಪರಭಾಷೆ ಚಿತ್ರಗಳಿಗೆ ನೀವೇ ರತ್ನಗಂಬಳಿ ಹಾಸಿ ಕೊಟ್ಟಹಾಗೆ, ನಿಮ್ಮ ಹೊಂಡವನ್ನು ನೀವೇ ತೆಗೆದು ಕೊಂದ ಹಾಗೆ, ನೀವು ಕುಳಿತ ಮರದ ಕೊಂಬೆಯನ್ನು ನೀವೇ ಕಡಿದ ಹಾಗೆ! ಕನ್ನಡಿಗರನ್ನು ಸೆಳೆಯಲು ಕನ್ನಡೇತರ ಮನರಂಜನೆಯ ಅಗತ್ಯವಿಲ್ಲ.
“ಕನ್ನಡ ಚಿತ್ರರಂಗವನ್ನು ಮೊದಲು ಕನ್ನಡವಾಗಿಸಿ”






ಅದನ್ನು ಪ್ರಸಾರ ಮಾಡಿದ ಟೀವಿ ಚಾನೆಲ್ ಮಾಲೀಕರೂ ಕೂಡ ಕನ್ನಡಿಗರಲ್ಲ ರತೀಶ್. ಅವರಲ್ಲಿ ನಾವು ಕನ್ನಡದ ಪ್ರೀತಿ ನಿರೀಕ್ಷೆ ಮಾಡುವ ಹಾಗಿಲ್ಲ
ಒ೦ದೇ ವಾಕ್ಯದಲ್ಲಿ ಹೇಳಬೇಕಾದರೆ ಕನ್ನಡದ ಕ೦ದ, ಕನ್ನಡವ ಕೊ೦ದ 😦
serious issue the media & film industry should consider your suggestion
ಅಂದು : ಹಚ್ಚೇವು ಕನ್ನಡದ ದೀಪ… ನಾವು … ಹಚ್ಚೇವು ಕನ್ನಡದ ದೀಪ
ಇಂದು: ಹಚ್ಚೆವು ಕನ್ನಡದ ದೀಪ… ನಾವು… ಹಚ್ಚೆವು ಕನ್ನಡದ ದೀಪ
Anna super aagi heldri
ವಿಶ್ವನಾಥ್‍ರವರು ತಿಳಿಸಿರುವಂತೆ ನಮ್ಮ ವಾಹಿನಿಗಳಿಂದ ಕನ್ನಡ ಪ್ರೇಮವನ್ನು ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಜನಪ್ರಿಯ ವಾಹಿನಿಗಳಲ್ಲಿ ಒಂದು ಮಲಯಾಳಿಗಳದ್ದಾದರೆ, ಒಂದು ತಮಿಳರದು, ಎರಡು ತೆಲುಗಿನವರದು ಮತ್ತೊಂದು ಹಿಂದಿ ಭಾಷಿಕರದು. ಇರುವ ಒಂದೇ ಒಂದು ಕನ್ನಡದ ಕಸ್ತೂರಿ ಬೆಳಿಗ್ಗೆ ಪ್ರಾರಂಭವಾಗುವುದೇ ಜಾಹೀರಾತಿನ ಮೂಲಕ! ಮತ್ತು ಅವರಿಗೂ ಅಖಂಡ ಕರ್ನಾಟಕದ ಕಲ್ಪನೆಯೇ ಇಲ್ಲ?! ಇನ್ನು ಕರ್ನಾಟಕದವನೆಂದು ಸಂದರ್ಭ ಬಂದಾಗ – ಅಂದರೆ Royal Challengers, B’luru ಬಗ್ಗೆ ಹೇಳಿಕೊಳ್ಳೂವ ಜಗತ್ತಿನ ಅತೀ ಶ್ರೀಮಂತರೊಬ್ಬರಲ್ಲಾದ ವಿಜಯ್ ಮಲ್ಯಾನ ಚಾನೆಲ್ star vijay ಇರುವುದು ತಮಿಳಿನಲ್ಲಿ! ಹೀಗಿರುವಾಗ ಕನ್ನಡದವರಲ್ಲದ ಕನ್ನಡ ವಾಹಿನಿಗಳಿಂದ ಕನ್ನಾಡಾಭಿಮಾನ್?