ಕಲಾವಿದರೊಳಗಿನ ವಿವಾದಗಳ ಬ್ರಾಂಡ್ ಅಂಬಾಸಿಡರ್
–ಮಂಸೋರೆ ಬೆಂಗಳೂರು
ಈ ಲೇಖನವನ್ನು ನಾನೊಬ್ಬ ಕಲಾವಿದ ಎಂಬ ದೃಷ್ಟಿಕೋನದಿಂದಲೇ ಓದುತ್ತಾರೆ ಎಂಬ ಅರಿವಿನೊಂದಿಗೆ ಬರೆಯುತ್ತಿದ್ದೇನೆ.
ನಾನೀಗ ಬರೆಯುತ್ತಿರುವ ವಿಷಯದ ವ್ಯಕ್ತಿಯ ಕುರಿತಂತೆ ಸಾಕಷ್ಟು ಚರ್ಚೆಗಳಾಗಿವೆ. ಈ ಲೇಖನ ಆ ಚರ್ಚೆ, ಲೇಖನಗಳನ್ನು ವಿರೋದಿಸುವುದೂ ಅಲ್ಲ, ಸಮರ್ಥಿಸಿಕೊಳ್ಳುವುದು ಅಲ್ಲ. ಇದು ನನ್ನ ಸ್ವವಿಚಾರವಷ್ಟೇ.
ಹುಸೇನ್ ನನಗೆ ಈ ಕಲಾವ್ಯಾಸಂಗಕ್ಕೆ ಬರುವ ಮೊದಲಿಂದಲೂ ಗೊತ್ತು. ಈ ವ್ಯಕ್ತಿಯ ಜೊತೆ ಜೊತೆಗೆ ನನಗೆ ಗೊತ್ತಿದ್ದ ಇನ್ನಿತರ ಕಲಾವಿದರೆಂದರೆ ಕೆ.ಕೆ.ಹೆಬ್ಬಾರ್ ಮತ್ತು ರವಿವರ್ಮ ಬಿ.ಕೆ.ಎಸ್.ವರ್ಮ. ಈ ನಾಲ್ವರ ಪರಿಚಯ ನನಗೆ ನಾಲ್ಕು ವಿಭಿನ್ನ ಕಾರಣಗಳಿಂದಾಗಿ ಪರಿಚಿತರಾಗಿದ್ದರು, ಹುಸೇನ್ ಪತ್ರಿಕೆಗಳಲ್ಲಿ ಆಗಾಗ ಬರುತ್ತಿದ್ದ ಸುದ್ದಿಗಳಿಂದಾಗಿ, ಬಿ.ಕೆ.ಎಸ್ ವರ್ಮ ದೂರದರ್ಶನದಲ್ಲಿ ಚಿತ್ರ ಗೀತೆ(ಹಿನ್ನಲೆಯಲ್ಲಿ ಪರಿಸರ ಕುರಿತಾದ ಹಾಡು ಬರುತ್ತಿದ್ದರೆ ಅದಕ್ಕೆ ತಕ್ಕಂತೆ ಪ್ರಾತ್ಯಕ್ಷಿಕೆ ನೀಡುವಂತೆ ಚಿತ್ರ ರಚಿಸುತ್ತಿದ್ದರು), ಕೆ.ಕೆ ಹೆಬ್ಬಾರ್ ಕುರಿತಂತೆ ಪಠ್ಯವೊಂದಿದ್ದ ಕಾರಣದಿಂದಾಗಿ, ರವಿವರ್ಮ ಹಾಡಿನ ಮೂಲಕ(ರವಿವರ್ಮನ ಕುಂಚದ ಕಲೆ). ಇವಿಷ್ಟೇ , ಇವರಿಷ್ಟೇ ನನಗೆ ಗೊತ್ತಿದ್ದ ಕಲಾವಿದರು ಕಲಾಕೃತಿಗಳು. ಮತ್ತಷ್ಟು ಓದು 
ದಕ್ಷಿಣ ಸುಡಾನ್ ಈಗ ಸ್ವತಂತ್ರ
– ಗೋವಿಂದ ಭಟ್
ಸೈಕಲು ಪ್ರವಾಸದಲ್ಲಿ ನಾನು ಕೆನ್ಯಾ ರಾಜದಾನಿ ನೈರೋಬಿಗೆ ಹಾರುವುದು. ಅನಂತರ ಉಗಂಡಾ, ಸುಡಾನ್ ದಾರಿಯಾಗಿ ಈಜಿಪ್ಟ್ ತಲಪುವುದು ನನ್ನ ಗುರಿಯಾಗಿತ್ತು. ಬಹು ಪಾಲು ರಸ್ತೆ ಇಲ್ಲದ ಕಾರಣ ಜುಬಾ ಪಟ್ಟಣದಿಂದ ನೈಲ್ ನದಿಯ ದೋಣಿಯಲ್ಲಿ ಉತ್ತರಕ್ಕೆ ಸಾಗುವುದು ನನ್ನ ಆಲೋಚನೆಯಾಗಿತ್ತು. ನನ್ನ ಉದ್ದೇಶಿತ ಹಾದಿಯಲ್ಲಿ ಬಹು ಕಾಲದಿಂದ ಅಂದರೆ ಅಂದಿಗೆ ಮೂವತ್ತು ವರ್ಷದಿಂದ ಜನಾಂಗಿಯ ಕಲಹ ನಡೆಯುತ್ತಿದ್ದರೂ ಹಲವು ಪ್ರವಾಸಿಗರು ದೋಣಿಯಲ್ಲಿ ದಾಟುವುದರಲ್ಲಿ ಸಫಲರಾಗಿದ್ದರು. ಅಲ್ಲಿನ ಒಂದು ದೋಣಿಯ ಚಿತ್ರ ಇಲ್ಲಿದೆ. ನನ್ನ ಜರ್ಮನಿಯ ಸೈಕಲು ಗೆಳೆಯ ಫ್ರೆಡ್ ಪೋಲ್ ೧೯೬೪ ರಲ್ಲಿ ಇಲ್ಲೆ ದಾಟಿದ್ದರು. ಅದಕ್ಕೆ ನಾನು ಸಾಕಷ್ಟು ತಯಾರಿ ನಡೆಸಿದ್ದೆ.
ಆದರೆ ಕೆನ್ಯಾ ತಲಪುವಾಗ ಪರೀಸ್ಥಿತಿ ಕಠೀಣವಾಗಿರುವುದು ಅರಿವಾಯಿತು. ನನ್ನ ದಾರಿಯಲ್ಲಿದ್ದ ಉಗಂಡಾ ಹಾಗೂ ಸುಡಾನ್ ಅಂತರ್ಯುದ್ದ ಬರ್ಜರಿಯಾಗಿ ನಡೆಯುತ್ತಿದ್ದರೆ ಉತ್ತರದ ಇತಿಯೋಪಿಯ ಸಹಾ ದಾರಿ ಬಿಡುತ್ತಿರಲಿಲ್ಲ. ಹಾಗಾಗಿ ನನ್ನ ಯೋಜನೆಗಳೆಲ್ಲ ತಲೆಕೆಳಗಾಗಿ ಯುರೋಪಿನಿಂದ ಹಿಂತಿರುಗುವ ಬದಲು ಅಮೇರಿಕವನ್ನು ಹಾದು ಜಗತ್ತು ಪೂರ್ತಿ ಸುತ್ತು ಬರಲು ತೀರ್ಮಾನಿಸಿದೆ.
ಸುಡಾನ್ ದೇಶದಲ್ಲಿ ಉತ್ತರದಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯ. ಅದಿಕಾರವೆಲ್ಲ ಅವರ ಕೈಯಲ್ಲಿ ಕೇಂದ್ರಿತ. ದಕ್ಷಿಣದಲ್ಲಿ ವಾಸ್ತವ್ಯ ಇರುವುದು ಕರಿಯ ಕ್ರೈಸ್ತ ಅನುಯಾಯಿಗಳು. ಬ್ರೀಟಿಶರು ಸ್ವಾತಂತ್ರ ಕೊಡುವಾಗ ಈಜಿಪ್ಟ್ ಜತೆ ಒಪ್ಪಂದ ಮಾಡಿ ಒಂದು ಕಿತಾಪತಿ ಮಾಡಿದ್ದರು. ಈ ಕರಿ ಜನರೇ ಜೀವಿಸುವ ದಕ್ಷಿಣ ಸುಡಾನ್ ಪ್ರಾಂತ್ಯವನ್ನು ಪಕ್ಕದ ಕರಿಯ ಜನರಿರುವ ಕೆನ್ಯಾ ಉಗಂಡಾದಿಂದ ಬೇರ್ಪಡಿಸಿ ಬಹುಕಾಲ ಈಜಿಪ್ಟ್ ವಶವಾಗಿದ್ದ ಉತ್ತರ ಸುಡಾನ್ ಜತೆ ಸೇರಿಸಿಬಿಟ್ಟರು. ಚಿತ್ರದಲ್ಲಿ ಕಾಣುವಂತೆ ಉತ್ತರಬಾಗ ಮರುಭೂಮಿಯಾದರೆ ದಕ್ಷಿಣಬಾಗದಲ್ಲಿ ಹುಲ್ಲುಗಾವಲು ಹಾಗೂ ಕುರುಚಲು ಕಾಡು. ಉತ್ತರದವರಿಂದ ಸತತವಾಗಿ ದಬ್ಬಾಳಿಕೆ, ಅನ್ಯಾಯ. ಶ್ರೀಲಂಕದಲ್ಲಿ ಇದ್ದಂತಹ ಪರಿಸ್ಥಿತಿ.




