ವಿಷಯದ ವಿವರಗಳಿಗೆ ದಾಟಿರಿ

ಜುಲೈ 23, 2011

5

ಕನ್ನಡಿಗರೆಂದರೆ ನಾಯಿಗಳಾ?

‍ನಿಲುಮೆ ಮೂಲಕ

– ಸಚಿನ್

ಸಿಂಗಮ್ ಚಿತ್ರದಲ್ಲಿ ನಟರಾದ ಅಜಯ್ ದೇವಗನ್ ಹಾಗು ಪ್ರಕಾಶ್ ರೈ ರವರ ಮಧ್ಯೆ ನಡೆಯುವ ಸಂಭಾಷಣೆ ಯಲ್ಲಿ ನಾಯಿಗಳು ಎನ್ನುವ ಪದ ತೂರಿ ಬರುತ್ತೆ.

ಪ್ರಕಾಶ್ ರೈ : ಕರ್ನಾಟಕ ಬಾರ್ಡರ್ ಇಂದ ೧೦೦೦ ಜನರನ್ನು ಕರೆದು ಕೊಂಡು ಬರುತ್ತೇನೆ.
ಅಜಯ್ ದೇವಗನ್: ಆ ಸಾವಿರ ನಾಯಿಗಳಿಗೆ ನಾನೊಬ್ಬ ಸಿಂಹ ಸಾಕು ಎನ್ನುತ್ತಾನೆ. ನನ್ನ ಹಿಂದೆ ಇಡೀ ಒಂದು ಜಿಲ್ಲೆ ಇದೆ ಎಂದು ರಾಜರೋಷವಾಗಿ ಅಜಯ್ ಹೇಳುತ್ತಾನೆ.

ಇದು ನಿಜವಾಗಲೂ ಬೇಕಿತ್ತಾ? ಈ ಮೇಲಿನ ಮಾತುಗಳು ಖಂಡಿತ ಆಕ್ಷೇಪಾರ್ಹ ವಾದದ್ದು.

ಆಗಲೆ ಕರವೇ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿದೆ ಹಾಗು ಬೆಂಗಳೂರಿನ ಪೋಲಿಸರು ಚಿತ್ರ ವೀಕ್ಷಿಸಿ ಆಕ್ಷೇಪಾರ್ಹ ದೃಶ್ಯ ಹಾಗು ಸಂಭಾಷಣೆ ಗಳ ಬಗ್ಗೆ ಪರಿಶೀಲಿಸುತಿದ್ದಾರೆ. ಈ ವಿವಾದದಿಂದ ಖರ್ಚಿಲ್ಲದೆ ಪ್ರಚಾರ ವನ್ನು ಚಿತ್ರ ಗಿಟ್ಟಿಸುತ್ತಿದೆ. ಇಂತಹ ಮಾತುಗಳಿರುವ ಚಿತ್ರವನ್ನು ನೋಡಲು ಮಹರಾಷ್ಟ್ರ ದಾದ್ಯಂತ ಚಿತ್ರ ನೋಡಲು ಜನ ಮುಗಿಬೀಳುತಿದ್ದಾರೆನ್ನುವ ವರದಿಯಿದೆ.
 ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನಾದ್ಯಂತ ಶುಕ್ರವಾರ ಕನ್ನಡ ಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರವನ್ನು ದ್ವಂಸ ಮಾಡಿದ್ದು, ಪ್ರದರ್ಶನ ನಿಲ್ಲಿಸಲಾಗಿದೆ. ಪ್ರತಿಭಟನಾ ನಿರತ 20 ಮಂದಿಯನ್ನು ಬಂಧಿಸಲಾಗಿದೆ. ಆಗಲೆ ಮೊದಲನೇ ಚಿತ್ರ ಪ್ರದರ್ಶನ ರದ್ದಾಗಿದೆ ಹಾಗು ಯಾವುದೇ ಅಹಿತಕರ ಘಟನೆ ಬಾರದಂತೆ ಚಿತ್ರ ಮಂದಿರಗಳಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಚಿತ್ರ ನಿರ್ದೇಶಿಸಿರುವ ಕನ್ನಡಿಗರಾದ ರೋಹಿತ್ ಶೆಟ್ಟಿ ಹಾಗು ನಟರಾದ ಪ್ರಕಾಶ್ ರೈ ಇಂತಹ ಸಂಭಾಷಣೆ ರಾಜ್ಯದಲ್ಲಿ ಘರ್ಶಣೆ ಗೆ ಎಡೆ ಮಾಡಿಕೊಡುತ್ತವೆ ಎನ್ನುವ ಅರಿವಿರಲಿಲ್ಲವೇ? ಸುಖಾ ಸುಮ್ಮನೆ ಅನವಶ್ಯಕ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳುವ ಸಿನಿಮಾ ಮಂದಿಗೆ ಏನೆನ್ನಬೇಕು?
ಪ್ರಕಾಶ್ ರೈ “ಇದು ಇಬ್ಬರು ಮರಾಠಿ ಪಾತ್ರದಾರಿ ಗಳ ನಡುವೆ ನಡೆಯುವ ಸಂಭಾಷಣೆ ಯಾಗಿದ್ದು ಕನ್ನಡಿಗರು ಬೇಸರಿಸಿಕೊಳ್ಳುವ ಅಗತ್ಯ ವಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಮೊದಲೇ ಮಹರಾಷ್ಟ್ರ ದ ಜತೆ ನಮ್ಮ ಸಂಭಂಧ ಸರಿಯಾಗಿಲ್ಲ, ಈಗಲೆ ಹಲವಾರು ವಿವಾದಗಳ ನಡುವೆ ರಾಜ್ಯದ ಗಡಿಭಾಗದಲ್ಲಿರುವ ಜನರು ನೆಮ್ಮದಿ ಯಿಲ್ಲದೆ ಬದುಕುತಿದ್ದಾರೆ, ಈ ಸಂಧರ್ಭದಲ್ಲಿ  ಇಂತಹ ಹೊಸ ವಿವಾದ ಅನವಶ್ಯಕ ವಾಗಿದ್ದು ಮತ್ತೊಮ್ಮೆ ಸಿನಿಮಾ ಮಂದಿ ಹಣವೇ ಮುಖ್ಯ ಎನ್ನುವುದು ಸಾಭೀತಾಗಿದೆ.
ಕರವೇ ಅಧ್ಯಕ್ಷ ನಾರಾಯಣ ಗೌಡರು ವಿವಾದಾತ್ಮಕ ದೃಶ್ಯ ಹಾಗು ಸಂಭಾಷಣೆ ಗಳಿಗೆ ಕತ್ತರಿ ಹಾಕಿದರೆ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಪಡಿಸುವುದಿಲ್ಲವೆಂದು ಹೇಳಿದ್ದಾರೆ. ಆದರೆ ಆಗ ಬೇಕಾದ ಡ್ಯಾಮೇಜ್ ಆಗಿ ಕತ್ತರಿ ಹಾಕಿದರೆ ಪ್ರಯೋಜನವೇನು ಬಂತು.
5 ಟಿಪ್ಪಣಿಗಳು Post a comment
  1. chukkichandira's avatar
    ಜುಲೈ 23 2011

    ತಮಿಳು ಸಿಂಗಮ್ ನಲ್ಲೂ ಇಂತಹ ಡೈಲಾಗ್ ಕೇಳಿದ ನೆನಪು. ಯಾರಾದರೂ ನೋಡಿದ್ದವರಿದ್ರೆ ಕನ್ ಫರ್ಮ್ ಮಾಡಿ

    ಉತ್ತರ
  2. ravimurnad's avatar
    ಜುಲೈ 23 2011

    ಕನ್ನಡಿಗರಿಂದಲೇ ಕನ್ನಡಕ್ಕೆ ಅವಮಾನ.ಕನ್ನಡದ ಮೇಲೆ ನಡೆಯುವಷ್ಟು ಅವಮರ್ಯಾದೆ ಘಟನೆಗಳು ಬೇರೆ ಭಾಷೆಯಲ್ಲಿ ನಡೆದ ಉಲ್ಲೇಖ ಸಿಗುತ್ತಿಲ್ಲ. ಎಲ್ಲಾ ದಿಕ್ಕುಗಳಲ್ಲಿಯೂ ಕನ್ನಡಕ್ಕೆ ಪ್ರಹಾರ ನಡೆಯುತ್ತಿದೆ.ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಕನ್ನಡ ಸಂಸ್ಥೆಗಳು ಇದುವರೆಗೂ ಪಣ ತೊಡದಿರುವುದು ಖೇಧಕರ.ಮೊತ್ತಮೊದಲನೇದಾಗಿ ರಾಜ್ಯ ಸರಕಾರದ ಮೇಲೆ ಒತ್ತಡ ಇಲ್ಲ.ಹೇಳಿಕೆ-ಖಂಡನೆ – ಒಂದೆರಡು ದಿನದ ಅಬ್ಬರದಿಂದ ಕನ್ನಡ ನಿಧಾನವಾಗಿ ಸೊರಗುತ್ತಿದೆ ಅನ್ನೋದು ತುಂಬಾ ದುಃಖ್ಖದ ವಿಚಾರ.

    ಉತ್ತರ
  3. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಜುಲೈ 23 2011

    ಆ ಡಯಲಾಗ್ ತಪ್ಪೇ . ಆದರೂ ಹೆಚ್ಚಿನವರಿಗೆ ಗೊತ್ತಾಗದೆ ತೋಪಾಗುತ್ತಿದ್ದ ಸಿನಿಮಾ ಈಗ ಇ೦ತಹ ಪ್ರತಿಭಟನೆ ಗಳಿ ೦ದಾಗಿ ಸೂಪರ್ ಹಿಟ್ ಆಗೋದಂತೂ ಗ್ಯಾರೆ೦ಟೀ,ಕೊನೆ ಪಕ್ಷ ಮಹಾರಾಷ್ಟ್ರದಲ್ಲಿ ! ಅನಗತ್ಯವಾಗಿ ದುಷ್ಟ ಕಿಡಿಗೆಡಿಗಳಿಗೆ/ಮತಿಹೀನರಿಗೆ ಹುಚ್ಚೆಬ್ಬಿಸಿ,ಅವರ ಬೇಳೆ ಬೇಯಿಸಿಕೊಳ್ಳಲು ನಮ್ಮ ಕೈಯಾರೆ ಆಸ್ಪದ ಮಾಡಿಕೊಟ್ಟ೦ತಾಯಿತು ಅಸ್ಟೇ . ಬೇರೇನೂ ಸಾಧನೆಯಾಗಲಿಲ್ಲ !

    ಉತ್ತರ
  4. ವಿಜಯ ಪೈ's avatar
    ವಿಜಯ ಪೈ
    ಜುಲೈ 23 2011

    ಕ್ಲಾಸಿನಲ್ಲಿ ಗುರುಗಳು ತರ್ಕದ ಬಗ್ಗೆ ಪಾಠ ನಡೆಸಿದ್ದರು ಉದಾಹರಣೆಯ ಸಹಿತ..
    – ಪುಸ್ತಕ ಮೇಜಿನ ಮೇಲಿದೆ.
    – ಮೇಜು ನೆಲದ ಮೇಲಿದೆ.
    ಆದ್ದರಿಂದ ಪುಸ್ತಕ ನೆಲದ ಮೇಲಿದೆ!.
    ಶಿಷ್ಯನೊಬ್ಬನನ್ನು ಎಬ್ಬಿಸಿ ಇದರಂತೆ ಇರುವ ಇನ್ನೊಂದು ಉದಾಹರಣೆ ಕೊಡಲು ಹೇಳಿದರು. ಶಿಷ್ಯ ‘ವಿಚಾರ’ ಮಾಡಿದ..ತಮ್ಮ ಕ್ಲಾಸಿನಲ್ಲೇ ಇರುವ ಗುರುಗಳ ಮಗಳ ನೆನಪು ಬಂತು..ಉದಾಹರಣೆ ಸುರು ಮಾಡಿದ
    – ನಾನು ನಿಮ್ಮನ್ನು ಪ್ರೀತಿಸುತ್ತೇನೆ.
    – ನೀವು ನಿಮ್ಮ ಮಗಳನ್ನು ಪ್ರೀತಿಸುತ್ತೀರಿ
    ಆದ್ದರಿಂದ ನಾನು ನಿಮ್ಮ ಮಗಳನ್ನು ಪ್ರೀತಿಸುತ್ತೇನೆ!.
    —-
    ಈಗ..
    ಈತ : ನಾನು ಸಾವಿರ ಜನರನ್ನು ಕರ್ನಾಟಕದ ಗಡಿಯಿಂದ ಕರೆತರುತ್ತೇನೆ.
    ಆತ : ನೀನು ಕರೆತರುವ ಸಾವಿರ ನಾಯಿಗಳಿಗೆ ನಾನೊಬ್ಬ ಸಿಂಹ ಸಾಕು.
    ಆದ್ದರಿಂದ ಕರ್ನಾಟಕದವರು ನಾಯಿ!!

    ಉತ್ತರ
  5. ಕೃಷ್ಣಪ್ರಕಾಶ ಬೊಳುಂಬು's avatar
    ಕೃಷ್ಣಪ್ರಕಾಶ ಬೊಳುಂಬು
    ಜುಲೈ 26 2011

    ನಮ್ಮಲ್ಲಿ “ಹೇಳುವವರು ಹೇಳಿಕೊಳ್ಳಿ… ನಿನಿಗೆ ಎಂತ ಆಗ್ತದೆ ಮಾರಾಯಾ…” ಎನ್ನುವವರೇ ಹೆಚ್ಚು. ಅಂಥ ಅಭಿಮಾನವಿದ್ದವನಾದರೆ ಅವನು ಅಲ್ಲಿ ಚಿತ್ರೀಕರಣ ನಡೆಯುತ್ತಿರುವಾಗಲೇ ಪ್ರತಿಭಟಿಸಬೇಕಾಗಿತ್ತು. ಉದಾರವಾದದ ಭ್ರಮೆ ತುಂಬಿಸಿಕೊಂಡಿರುವವರು ಇಂಥ ನಟ ಭಯಂಕರರು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments