ವಿಷಯದ ವಿವರಗಳಿಗೆ ದಾಟಿರಿ

ಜುಲೈ 25, 2011

5

ಆಹಾ ಎಷ್ಟು ಮಜವಾಗಿತ್ತು ಆ ಕಾಲ…….!!!!

‍ನಿಲುಮೆ ಮೂಲಕ

– ಪವನ್ ಪರುಪತ್ತೇದಾರ್

ನಮ್ಮ ತಾತಂದಿರು ಹಳೆ ಕಾಲದ ಕಥೆಗಳನ್ನು ಹೇಳುವಾಗ ಮೊದಲು ಸ್ವಲ್ಪ ಸಮಾಧಾನದಿಂದ ಕೇಳ್ತೇವೆ ಬರು ಬರುತ್ತಾ ಅವರು ಅದೇ ಕಥೆಗಳನ್ನು ಮತ್ತೆ ಮತ್ತೆ ಹೇಳುತ್ತಾರೆ ನಮಗೂ ಬೋರ್ ಅನಿಸಿ ತಾತಾ ಎಷ್ಟು ಸಲಿ ಅದೇ ಕಥೆಗಳನ್ನ ಹೇಳ್ತಿರ ಅಂತ ಗೊಣಗಿಕೊಂಡು ಎದ್ದು ಹೋಗ್ತಿವಿ. ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗು ಆಗ್ತವೆ. ನನಗು ಹಾಗೇ ನಮ್ಮ ತಾತ ಕಥೆಗಳನ್ನ ಹೇಳ್ತಾ ಇದ್ರೂ ಅವರು ತಮ್ಮ ಬ್ರಿಟಿಶ್ ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ ಚಕ್ಕರ್ ಹಾಕಿದ್ದು, ಆಗಿನ ಕಾಲಕ್ಕೆ ಲೋಯರ್ ಸೆಕೆಂಡರಿ ಮುಗಿಸಿ ಕುಟುಂಬದಲ್ಲಿ ಹೆಸರು ಮಾಡಿದ್ದೂ, ಊರಿಗೆ ಮೊದಲನೇ ಎಲೆಕ್ಟ್ರಿಕ್ contractor ಆಗಿದ್ದು, ಊರಿನ ಪ್ರೆಸಿಡೆಂಟ್ ಆಗಿದ್ದು, ಆಗಿನ ಜನ, ಹಾಗೆ ಹೀಗೆ ಹುಹ್! ಇನ್ನು ಬಹಳಾ.

ಆದರೆ ನಾವು ಅವರು ಕಥೆ ಹೇಳುವಾಗ ಮುಗು ಮುರಿದು ಹೋಗುತಿದ್ದೆವಲ್ಲ, ನಮಗೆಲ್ಲಿ ಅರಿವಿತ್ತು ಆಗಿನ ಅ ಕಾಲದ ಬಗ್ಗೆ ಎಷ್ಟು ಹೇಳಿದರು ಮತ್ತೆ ಮತ್ತೆ ನಮ್ಮ ತಾತನವರಿಗೆ ಹೇಳಬೇಕು ಎನಿಸಿತ್ತು ಎಂದು. ಯಾಕಂದರೆ ಅ ಕಾಲವೇ ಹಾಗಿತ್ತು ಎಷ್ಟು ಅದರ ಬಗ್ಗೆ ಕೊಂಡಾಡಿದರು ಸಾಲದಂಥ ಕಾಲ. ನನಗೆ ಯಾಕೆ ಹೀಗನಿಸಿತ್ತು ಅಂದರೆ ನನಗೂ ಸಹ ಕಳೆದ ಹತ್ತು ವರ್ಷಕ್ಕೂ ಇಗ್ಗು ಬಹಳ ವ್ಯತ್ಯಾಸ ಕಾಣುತ್ತಿದೆ. ನನಗೆ ಇತ್ತೀಚಿಗಷ್ಟೇ ಇದರ ಅರಿವಾಯಿತು.

ರಾಗಿ ಬೆಳೆ ಬಲೆ ಚೆನ್ನಾಗೈತೆ ಸ್ವಾಮಿ, ಈ ಸಲ ಒಳ್ಳೆ ಬಂಪರ್ ಕಾಸ್ ಮಾಡ್ತ್ಯ ಅಂತ ಚಿಕ್ಕಣ್ಣ ಹೇಳಿದಾಗ ನಮ್ಮಪ್ಪನಿಗೆ ಒಂಥರಾ ಸಂತೋಷ. ಅಂತು ಟೈಮ್ ಗೆ ಸರ್ಯಾಗಿ ಉಳಿಸಿ, ಬಿತ್ತನೆ ಮಾಡಿಸಿ, ಗೊಬ್ಬರ ಚೆಲ್ಲಿ, ಕಳೆ ಒರೆದು, ಗುಂಟುವೆ ಹಾಕಿಸಿ, ಇರೋ ಮುಕ್ಕಾಲು ಎಕರೆಗೆ 10 ಸಾವಿರ ಖರ್ಚ ಮಾಡಿದ್ದಕ್ಕೆ ಇಷ್ಟ ಮಾತ್ರ ಬೆಳೆ ಆಗಿರೋದು ಚಿಕ್ಕಣ್ಣ ಅಂತ ಸ್ವಲ್ಪ ಬಿಂಕದಿಂದನೆ ಅಂದ್ರು. ಅಂಗಲ್ಲ ಸ್ವಾಮಿ ರೇಟ್ ಚೆನ್ನಾಗೈತೆ ಈಗ ಕೆಂಪು ರಾಗಿ 13 ರೂಪಾಯಿಗೆ ತೊಕೊತಾರೆ ಅಂತ ಚಿಕ್ಕಣ್ಣ ಹೇಳೋವಾಗ ಮಧ್ಯಕ್ಕೆ ಬಾಯಿ ಹಾಕಿ ನಮ್ಮಪ್ಪ ನಂದೊಂದು ೧೫ ಮೂಟೆ ಆಗ್ತದಲ್ಲ ಚಿಕ್ಕಣ್ಣ ಅಂದ್ರು ಸ್ವಲ್ಪ ಹೊತ್ತು ಯೋಚನೆ ಮಾಡಿ ಇನ್ನ ಒಂದು ಹೆಚ್ಚೇ ಆಗ್ತದೆ ಸ್ವಾಮಿ ಅಂದ ಚಿಕ್ಕಣ್ಣ. ನಮ್ಮಪ್ಪ ಸರಿ ಹಾಗಾದ್ರೆ ನಾಳೇನೇ ಕೂಲಿಯವರನ್ನ ಕರೆಸಿಬಿಡು ಕುಯ್ಯಿಸಿಬಿಡನ ಅಂದ್ರು.

ಹಾಗೆ ಮುಂದುವರೆಸಿ, ಕೂಲಿ ಏನ್ ಓದ್ತಾ ಇದೆ ಅಂದ್ರು ಚಿಕ್ಕಣ್ಣ ಗಂಡಿಗೆ ೨೫೦ ಹೆಣ್ಣಿಗೆ ೨೨೦ ಅಂದ ಅಷ್ಟೋಂದ ಅಂದ್ರು ನಮಪ್ಪ ಆಶ್ಚರ್ಯದಿಂದ, ಅದಕ್ಕೆ ಚಿಕ್ಕಣ್ಣ ಇಷ್ಟಕ್ ಸಿಗೋದು ನಮ್ ಕೂಲಿಯವರು ಮಾತ್ರ ಸ್ವಾಮಿ ಅಂದ. ನಮಪ್ಪನು ಸರಿ ಹಾಗೆ ಮಾಡಪ್ಪ ಅಂದ್ರು. ಚಿಕ್ಕಣ್ಣ ಸರಿ ಸ್ವಾಮಿ, ಸ್ವಲ್ಪ ಎಲೆ ಅಡಿಕೆ ತರಕ ಏಳಿ ಅಮ್ಮಣ್ಣಿ ಯವರಿಗೆ ಅನ್ನೋ ಅಷ್ಟರಲ್ಲಿ ನಮ್ಮಮ್ಮ ಒಂದಷ್ಟು ವಿಲ್ಯದೆಲೆ ಅಡಿಕೆ ತಂದು ಕೈಗಿಟ್ರು. ಸರಿ ನಾಳೆಗೆ ಕೂಲಿಯವ್ರನ್ನ ನೋಡ್ಬೇಕು ಬರ್ತೀನಿ ಸ್ವಾಮಿ ಅಂತ ಹೇಳಿ ಚಿಕ್ಕಣ್ಣ ಹೊರಟ.

ರಾಗಿ ತೆನೆ ಬಲಿತಿತ್ತು. ಒಂದೊಂದು ತೆನೆಯು ಹಿಡಿದರೆ ಕೈ ತುಂಬಾ ಸಿಗುವಷ್ಟು ದಪ್ಪ, ನೋಡುತಿದ್ದರೆ ನಮ್ಮ ದೃಷ್ಟಿಯೇ ತಗುಲ ಬಹುದೆಂದು ಮಧ್ಯೆ ಒಂದು ದೃಷ್ಟಿ ಬೊಂಬೆ ಕಟ್ಟಿದ್ದರು ನಮ್ಮಪ್ಪ.ನನ್ನ ಕರೆದು ಮಾರನೆಯ ದಿನ ಚಿಕ್ಕಣ್ಣ ಒಂದು ೧೦ ಜನ ಕೂಲಿಯವರನ್ನ ಕರೆದು ಕೊಂದು ಬರ್ತಾನೆ ಕೂಲಿಯವರಿಗೆ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನ ಮಾಡಿಸಿಬಿಡು ಅಂದ್ರು, ನಮಮ್ಮನಿಗೆ ಕೂಲಿಯವರಿಗೆ ಎಲೆ ಅಡಿಕೆ ತೆಗೆದಿಡು ಅಂತ ಹೇಳಿದ್ರು. ನಾ ಹೋಗಿ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನಕ್ಕೆ ಆರ್ಡರ್ ಕೊಟ್ಟು ಬರುವಷ್ಟರಲ್ಲಿ ನಮ್ಮ ಅಪ್ಪ ಹೊಲದ ಮಧ್ಯ ನಿಂತು ನಾಳೆ ಇದೆಲ್ಲ ಕೂಲಿಯವರು ಕುಯ್ದು ಕಟ್ಟು ಕಟ್ಟುತಾರೋ ಅಂದ್ರು. ಒಹ್! ಹೌದ ಸರಿ ಅಪ್ಪ ಅಂತ ನಾನು ತಲೆ ಆಡಿಸಿದೆ

ಮಾರನೆಯ ದಿನ ಬೆಳಿಗ್ಗೆ 9 ಆಯಿತು ಕೂಲಿಯವರು ಬಂದಿಲ್ಲ! 9 -30 ಆಯಿತು ಬಂದಿಲ್ಲ! ನಮಪ್ಪನಿಗೆ ಯಾಕೋ,ಏನೋ ಎಡವಟ್ಟು ಆಗಿದೆ ಅಂತ ಅನ್ನಿಸ್ತು. ನನ್ನ ಕರೆದು ಹೋಗಿ ಚಿಕ್ಕಣ್ಣನ ಮನೆಗೆ ಹೋಗಿ ನೋಡ್ಕೊಂಡು ಬಾರೋ ಅಂದ್ರು. ನಾ ಸರಿ ಹೊರಡ್ತೀನಿ ಅನ್ನೋ ಅಷ್ಟರಲ್ಲಿ 10 ಆಗಿತ್ತು ಅಷ್ಟರಲ್ಲಿ ಚಿಕ್ಕಣ್ಣ ಸಹ ಒಂದು ತಂಡ ಕಟ್ಕೊಂಡು ಹೊಲದೊಳಗೆ ಕಾಲಿಟ್ಟ. ಒಟ್ಟು ಹತ್ತು ಜನ ೬ ಹೆಂಗಸರು ೪ ಗಂಡಸರು. ನಮಪ್ಪ ಸ್ವಲ್ಪ ಕೋಪದಿಂದ ಏನ್ ಚಿಕ್ಕಣ್ಣ ಇದು ಬರೋ ಟೈಮ್ ಅ ಅಂದ್ರು ಅದಕ್ಕೆ ಆಟ ಸ್ವಾಮಿ ಈಗೆಲ್ಲ ಇಷ್ಟೇ ಸ್ವಾಮಿ ಕೆಲಸಕ್ಕೆ ಹಿಡಿಯೋದೇ ೧೦ ಘಂಟೆಗೆ ಹಳೆ ಕಾಲದ ತರ ೯ ಕ್ಕೆ ಯಾರು ಬರಲ್ಲ ಅಂದ ನಮಪ್ಪಂಗೆ ಸ್ವಲ್ಪ ಕೋಪ ಬಂದ್ರು ಸರಿ ಶುರು ಮಾಡ್ರಿ ಅಂದ್ರು.ಅಪ್ಪನಿಗೆ ಜರೂರು ಕೆಲಸ ಇದ್ದರಿಂದ ನನ್ನ ನೋಡ್ಕೊಳಕ್ಕೆ ಹೇಳಿ ಹೊರಟರು

ಕೆಲಸಕ್ಕೆ ಕೂತವರು ನಾನು ಅಲ್ಲೇ ಇದ್ದದನ್ನ ನೋಡಿ ಹೋಗಿ ಅಮ್ಮನಿಗೆ ಕಾಪಿ ಮಾಡಕ್ಕೆ ಹೇಳಪ್ಪಿ ಅಂದ್ರು. ಸರಿ ಅಂತ ಹೇಳಿ ಕಾಫೀ ಮಾಡಿಸಿಕೊಂಡು ಹೋಗೋ ಅಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಹೋದೊಡನೆ ಕಾಫೀ ಕುಡಿದು ಮತ್ತೆ ಕೆಲಸ ಹಿಡಿದರು ಆಗ ಸುಮಾರು ೧೧ ಆಗಿರಬಹುದು ಹೋಗಪ್ಪ ಎಲೆ ಅಡಿಕೆ ತೆಗೆದುಕೊಂಡು ಬಾ ಅಂದ್ರು ಮತ್ತೆ ಮನೆಗೆ ಬಂದು ಎಲೆ ಅಡಿಕೆ ತೆಗೆದುಕೊಂಡು ಹೋಗುವಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಬಂದಿದ್ದು ನೋಡಿದವರೇ ಕೆಲಸ ಮಾಡುತಿದ್ದಂತೆ ನಟಿಸಿ ಎಲೆ ಅಡಿಕೆ ತೆಗೆದುಕೊಂಡರು. ಮಧ್ಯಾಹ್ನ 12 -45 ಆಯಿತು, ಉಟ ರೆಡಿ ಆಗೈತ ಅಂತ ಚಿಕ್ಕಣ್ಣ ಕೇಳ್ದ. ಗಾಡಿಲಿ ಒಬ್ಬ ಕೂಲಿಯವ್ನ ಕೂಡಿಸ್ಕೊಂದು ರಾಘವೇಂದ್ರ ಭವನ್ ಅಲ್ಲಿ ಆರ್ಡರ್ ಕೊಟ್ಟಿದ್ದ ಚಿತ್ರಾನ್ನ ತಂದೆ. ಎಲ್ಲರು ಚೆನ್ನಾಗಿ ತಿಂದು ಮತ್ತೊಮ್ಮೆ ಎಲೆ ಅಡಿಕೆ ಜಿಗಿಯುತ್ತ ಹರಟೆ ಹೊಡೆಯುತ್ತಾ ಕೂತರು. ಸಮಯ 1 -30 ಆಯಿತು, ನಾನು ಏಳ್ರಿ ಕೆಲಸ ಹಿಡಿರಿ ಅಂದೆ, ಅದಕ್ಕೆ ಚಿಕ್ಕಣ್ಣ ಇರು ಸ್ವಾಮಿ 2 ಘಂಟೆ ಅಗಲಿ ನಮಗೇನು ವಿಶ್ರಾಂತಿ ಬೇಡ್ವ ಅಂದ. ನಾ ಏನೋ ಇವರನ್ನ ಹಿಂಸೆ ಮಾಡ್ತಾ ಇದ್ದಿನೇನೋ ಅನ್ನಿಸ್ಬಿಡ್ತು ನಂಗೆ ಉತ್ತರ ಏನು ಕೊಡಬೇಕು ಅಂತ ತೋಚದೆ ಸರಿ ಸರಿ ಅಂದೆ

2 ಘಂಟೆಗೆ ಶುರು ಮಡಿದ ಕೂಲಿಯವರು 5 -15 ಕ್ಕೆ ಎಲ್ಲ ಹೊರಟರು. ಇನ್ನು ಎಲ್ಲ ಸಾಲುಗಳಲ್ಲೂ 15 ಅಡಿ ಅಷ್ಟು ಮಾತ್ರ ಕೆಲಸ ಉಳಿದಿತ್ತು. ನಾನು ಏನ್ ಚಿಕ್ಕಣ್ಣ ಇನ್ನ 5 -15 ಅಂದೆ. ಸ್ವಾಮಿ ಇನ್ನೇನು 7 ಘಂಟೆ ತನಕ ಕೆಲಸ ಮಾಡ್ತಾರ ಕೂಲಿ ಕೊಡ್ರಿ ಅಂದ ಏನು ಮಾಡಲು ತೋಚದೆ ಮಾತನಾಡಿದಂತೆ ಗಂಡಾಳಿಗೆ 250 ಹೆಂಗಸಿಗೆ 220 ರು ಕೊಟ್ಟೆ. ನಾಳೆ ಇರೋ ಬಾಕಿ ಕೆಲಸಕ್ಕೆ 4 ಅಳು ಬೇಕು ಅಂದ, ನಾನು ಬೇಡಪ್ಪ ಒಪ್ಪಂದ ಕೊಡ್ತೀನಿ ಒಟ್ಟಿಗೆ 600 ತೊಗೊಂಡು ಮಾಡ್ಬಿಡು ಅಂದೆ. ಸರಿ ಅಂತ ಮಾರನೆಯ ದಿನ ಬೆಳಿಗ್ಗೆ ಒಂಭತ್ತಕ್ಕೆ ಬಂದು 11 ಘಂಟೆ ಅಷ್ಟರಲ್ಲಿ ಕೆಲಸ ಮುಗಿಸಿ ದುಡ್ಡು ತೊಗೊಂಡು ಮಾರನೆಯ ದಿನ ಬಂದು ವಾಮೆ ಹಾಕಿ ಕೊಡುತ್ತೇನೆ ಅಂತ ಹೇಳಿ ಹೊರಟೇಬಿಟ್ಟ…

ಮಾರನೆಯ ದಿನ ಚಿಕ್ಕಣ್ಣ ಎಷ್ಟು ಹೊತ್ತಾದರೂ ಬರ್ಲಿಲ್ಲ. ಸಂಜೆ ಹೋದಾಗ ಬೇರೆ ಕಡೆ ಕೂಲಿ ಹೆಚ್ಚು ಕೊಡ್ತಾರೆ ಅಂತಲ್ಲಿ ಹೋಗಿದ್ದೆ ಅಂದ. ಸರಿ ನಾಳೆ ಬಾರಪ್ಪ ಅಂದ್ರೆ ನಾಳೆ ಅಲ್ಲಿ ಕೆಲಸ ಬಾಕಿ ಇದೆ ಮುಗಿಸಿ ನಾಡಿದ್ದು ಬರ್ತೀನಿ ಅಂದ. ಒಣಗಿದಷ್ಟು ಒಳ್ಳೇದು ಎಂದು ನಾವು ಆಯಿತು ಅಂದೆವು. ಎರಡು ದಿನದ ನಂತರೆ ಬೆಳಗಿನ ಜಾವವೇ ಭಾರಿ ಮಳೆ ಶುರುವಾಯಿತು, ನಾನು ನಮಪ್ಪ ಒಂದೆರಡು ಸಾಲು ಕಟ್ಟುಗಳನ್ನ ಎತ್ತಿ ನೆನೆಯದ ಜಾಗಕ್ಕೆ ಹಾಕಿದೆವು. ಮಿಕ್ಕಿದ್ದು ಎತ್ತಲು ಸಾಧ್ಯವಾಗಲಿಲ್ಲ ಮಳೆ ಒಂದೇ ಸಮನೆ ಜಡಿ ಹಿಡಿದು ಮೂರೂ ದಿನ ಸುರಿಯಿತು.ಮಳೆಲಿ ತೆನೆ ಅಷ್ಟೊಂದು ನೆಂದ ಕಾರಣ ರಾಗಿ ಕಪ್ಪಾಯಿತು. ಬರಿ ೭ ಮೂಟೆ ಆಯಿತು. ಹುಲ್ಲು ಮುಗ್ಗಿ ಪುಡಿ ಪುಡಿ ಆಗಿತ್ತು. ಕಟ್ಟು ಕಟ್ಟಿಸಿ ತುಳಿಸಿ ತೂರಿಸಿ ಎಲ್ಲ ಮಾಡಲು ಖರ್ಚು ೫೦೦೦ ದಾಟಿತ್ತು. ಒಟ್ಟು ಸೇರಿ ಸುಮಾರು ೧೫೦೦೦ ಖರ್ಚು ಆದರೆ ಲಾಭ ಮಾತ್ರ ಏನು ಇಲ್ಲ. ನಮ್ಮದು ಬರಿ ಮುಕ್ಕಾಲು ಎಕರೆ 5 ಎಕರೆ 10 ಎಕರೆ ಬೇಸಾಯ ಮಾಡುವವರ ಕಷ್ಟ ಹೇಗಿರಬಹುದು ಎಂದು ಯೋಚಿಸಿ, ಅದಕ್ಕೆ ರೈತ ಆತ್ಮ ಹತ್ಯೆ ಮಾಡಿಕೊಳ್ಳುವುದು ಎಂಬ ಅರಿವಾಯಿತು

10 ವರ್ಷದ ಹಿಂದೆ ಹೀಗಿರಲಿಲ್ಲ ಕೆಲಸಕ್ಕೆ 9 ಘಂಟೆಗೆ ಬರುತಿದ್ದರು. ಮೈ ಗಳ್ಳತನ ಮಾಡುತ್ತಿರಲಿಲ್ಲ, ಅತಿ ಅಸೆ ಪಡುತ್ತಿರಲಿಲ್ಲ, ಹಿಡಿದ ಕೆಲಸ ಮುಗಿಯುವವರೆಗೂ ಬೇರೆ ಕೆಲಸ ಒಪ್ಪಿಕೊಳ್ಳುತ್ತಿರಲಿಲ್ಲ. ಬೇಕೆಂದೇ ಇವತ್ತಿನ ಕೆಲಸ ನಾಳೆಗೆ ಮುಂದೂಡಿ ಹಣಕ್ಕಾಗಿ ಅಸೆ ಪಡುತ್ತಿರಲಿಲ್ಲ. ಆದರೆ ಈಗ ಎಲ್ಲವು ಅಯೋಮಯ ಆಗ ಕೂಲಿಯವರಿಗೆ ನಾವು ಕೆಲಸ ಮಾಡಿ ಎಂದು ಹೇಳಲೇ ಬೇಕಾಗಿರಲಿಲ್ಲ. ತಮ್ಮ ಕೆಲಸ ತಾವು ಮುಗಿಸುತಿದ್ದರು, ಇಲ್ಲವಾದರೆ ತಿಂದ ಅನ್ನ ಮೈಗೆ ಹತ್ತಲ್ಲ ಸ್ವಾಮಿ ಅಂತಾಇದ್ರು. ಬರಿ ಹತ್ತು ವರ್ಷದ ಹಿಂದೆಯೇ ಅಷ್ಟು ನಿಯತ್ತು ಇದ್ದಿದ್ದರೆ ಇನ್ನು ನಮ್ಮ ತಾತ 70 ವರ್ಷದ ಹಿಂದಿನ ವಿಷಯದ ಬಗ್ಗೆ ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಅಲ್ಲವೇ ಗೆಳೆಯರೇ…….!!

(ಚಿತ್ರ ಕೃಪೆ :rediff.com)

5 ಟಿಪ್ಪಣಿಗಳು Post a comment
  1. satya's avatar
    ಜುಲೈ 25 2011

    ನನಗೆ ಈಗ 73 ವರ್ಷ.
    ಹೌದು ಸಾರ್. ಆಗಿನ ಕಾಲ ತುಂಬಾನೇ ಚೆನ್ನಾಗಿತ್ತು. ಆಗಿನ ಕಾಲದ ವಿಷಯದ ಬಗ್ಗೆ ಯೋಚಿಸಿದರೆ ಆಗ ಬೆಲೆಗಳೆಲ್ಲಾ ಎಷ್ಟು ಕಡಿಮೆ ಇತ್ತು, ಜೊತೆಗೆ ನಾವು ತಿನ್ನುವ ಆಹಾರದಲ್ಲಿ ಎಷ್ಟು ಶಕ್ತಿ ಇತ್ತು. ಆಗಿನ ಕಾಲದಲ್ಲಿ ಹೀಗೆಲ್ಲಾ ಬ್ಲಾಗ್ನಲ್ಲಿ ಬರೆಯೋ ಅವಕಾಶ ಇರಲಿಲ್ಲ. ಯಾಕಂದರೆ ನಾವು ಕಂಪ್ಯೂಟರ್ ನೋಡಿರಲಿಲ್ಲ. ಮೊಬೈಲ್ ಹೇಗಿರುತ್ತೇ ಅಂತಾನೂ ಗೊತ್ತಿರಲಿಲ್ಲ. ಈಗ ಎಲ್ಲಾ ಸೌಲಭ್ಯಗಳೂ ಇವೆ. ಆದರೆ ಮನಸ್ಸಿಗೆ ನೆಮ್ಮದಿಯಿಲ್ಲ, ಬೆಲೆಗಳೂ ಜಾಸ್ತಿ, ಈಗಿನ ಆಹಾರದಲ್ಲಿ ಏನೇನೂ ಶಕ್ತಿ ಇಲ್ಲ. ಇದು ಹೀಗೇ ನಡೆಯುತ್ತಾ ಹೋಗುತ್ತದೆ. ಕಾಲ ಚಕ್ರ ಉರುಳುತ್ತಾ, ಉರುಳುತ್ತಾ ಒಂದಾನೊಂದು ದಿನ ಮುಂಚಿನ ಸ್ಥಿತಿಗೆ ತಲಪುತ್ತೇವೆ. ಆದರೆ ಅದನ್ನು ನೋಡಲು ನಾವು ಇರುವುದಿಲ್ಲ ಅಷ್ಟೆ.

    ಸ್ಥಿತಿಗೆ .

    ಉತ್ತರ
    • Pavan Harithasa's avatar
      ಆಗಸ್ಟ್ 1 2011

      ಈಗ ಎಲ್ಲಾ ಸೌಲಭ್ಯಗಳೂ ಇವೆ. ಆದರೆ ಮನಸ್ಸಿಗೆ ನೆಮ್ಮದಿಯಿಲ್ಲ, sariyada matu, igella yantrika baduku hanakkagi kelasa madtaro horatu nambike vishwasagalige beleyilla, nimage 73 andare i can understand, u belong to a golden era sir i solute u 🙂 🙂

      ಉತ್ತರ
  2. V.R.BHAT's avatar
    ಜುಲೈ 25 2011

    ಪಾರುಪತ್ತೇದಾರರೇ, ಈಗಿನ ಕಾಲದಪಾರುಪತ್ತೆಯನ್ನು ನೀವೇ ವಹಿಸಿಕೊಂಡುಬಿಡಿ 🙂
    ಚೆನ್ನಾಗಿದೆ!

    ಉತ್ತರ
  3. ಮೋಹನ's avatar
    ಮೋಹನ
    ಜುಲೈ 25 2011

    ಆಗಿ ಹೋದುದು ನೆನಪಿಸಿಕೊಳ್ಳಲೂ ಎಲ್ಲವೂ ಮಧುರವೇ. ಕಷ್ಟವೂ ಸೇರಿ.

    ಉತ್ತರ
  4. Nanjunda Raju Raju's avatar
    ಆಗಸ್ಟ್ 4 2011

    ಮಿತ್ರರೇ, ರೈತಾಪಿ ಜನರ ಜೀವನ ಕಷ್ಟ ನಿಜ. ಆದರೆ, ಇತ್ತಿತ್ತಲಾಗಿ ದುಡಿದು ತಿನ್ನುವವರು ಕಡಿಮೆಯಾಗಿದ್ದಾರೆ. ಹೊಡೆದು ತಿನ್ನುವವರೇ ಹೆಚ್ಚಾಗಿದ್ದಾರೆ. ಈಗಿನ ಯುವಕರು ದುಡಿದು ತಿನ್ನಬೇಕು ಎಂಬ ನೀತಿಯನ್ನು ಬಿಟ್ಟುಬಿಟ್ಟಿದ್ದಾರೆ. ದುಡಿಯದೇ ಮೋಸಮಾಡಿಯಾದರು ಹಣ ಮಾಡಬೇಕೆಂಬ ಆಸೆ ಹೆಚ್ಚುತ್ತಿದೆ. ಕೆಲವು ತಂದೆ ತಾಯಂದಿರು ತಾವೂ ಈ ನೀತಿಯನ್ನು ಕಲಿತು ತನ್ನ ಮಕ್ಕಳಿಗೂ ಅದನ್ನೇ ಹೇಳಿಕೊಡುತ್ತಾರೆ.
    ಈ ಕಾರಣದಿಂದಲೇ ಕೆಲವು ಹಳ್ಳಿಗಳಲ್ಲಿ ಮುಯ್ಯಿ ಆಳು ಎಂಬ ನೀತಿಯಲ್ಲಿ ಯಾವುದೇ ಕೂಲಿ ಇಲ್ಲದೇ, ಕೇವಲ ಬೆಳಗಿನ ಉಪಹಾರ ಮದ್ಯಹ್ನದ ಊಟ ಮಾತ್ರ ಪಡೆದು ನಿಯತ್ತಿನಿಂದ ಕೆಲಸ ಮಾಡಿ, ಇವರ ಜಮೀನಿನಲ್ಲಿ ಅವರು ಅವರ ಜಮೀನಿನಲ್ಲಿ ಅವರು ದುಡಿದು. ಸಂತೃಪ್ತರಾಗಿರುತ್ತರೆ. ಕಡಿಮೆ ಕಲಾವಧಿಯಲ್ಲಿ ಕೆಲಸ ಮುಗಿಸಿರುತ್ತಾರೆ. ಈ ಪದ್ದತಿ ಸರಿ ಅಲ್ಲವೇ? ಇದರಿಂದ ಯಾವುದೇ ಫಸಲಿನ ನಷ್ಟವಾಗಲಿ ಆರ್ಥಿಕ ನಷ್ಟವಾಗಲಿ ಬೆಳೆದ ರೈತನಿಗೆ ಆಗುವುದಿಲ್ಲ ಅಲ್ಲವೇ ಏನಂತಿರಿ?

    ಉತ್ತರ

Leave a reply to Pavan Harithasa ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments