ಲೇಖನಿ ದುರ್ಯೋಧನನ ಗದೆಯಾಗದಿರಲಿ

ಇಂದು ರಾಜಕೀಯ ಪಕ್ಷಗಳ ಚೇಲಾ ಆಗಿರುವ ಅದೆಷ್ಟೋ ಪತ್ರಿಕೆಗಳು, ಟಿ.ವಿ. ಚಾನೆಲ್ ಗಳು ತಮ್ಮ ಸ್ವಾರ್ಥಸಾಧನೆಗಾಗಿ ವೃತ್ತಿ ಧರ್ಮವನ್ನೇ ಮರೆತು ತಾಂಡವವಾಡುತ್ತಿವೆ. ದೇಶವನ್ನು ಮೇಯುತ್ತಿರುವ ರಾಜಕಾರಣಿಗಳನ್ನು ಹೊಗಳಿ ಬರೆಯುವ ಈ ಬುದ್ಧಿ ಜೀವಿಗಳು, ಇರುವೆಯಂತಹ ವಿಷಯವನ್ನು ಆನೆ ಮಾಡಿ ತೋರಿಸಿ ತನ್ಮೂಲಕ ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸುವಲ್ಲಿ ಪರಿಣಿತರಾಗಿದ್ದಾರೆ. ಸಮಾಜದ ಆಗು ಹೋಗುಗಳನ್ನು, ತೊಡಕುಗಳನ್ನು ಬಿಂಬಿಸಬೇಕಾದ ಮಾಧ್ಯಮಗಳು ತಮಗೆ ಬೇಕಾದ ರೀತಿಯಲ್ಲಿ ವಿಷಯವನ್ನು ತಿರುವು ಮುರುವು ಮಾಡಿ ಬಿತ್ತರಿಸಿ ಜನರನ್ನು ನಂಬಿಸುತ್ತಿದ್ದಾರೆ. ಮಾಧ್ಯಮಗಳೇ ದುಸ್ಶ್ಯಾಸನರಾಗಿ ನಿಂತಾಗ ಸಮಾಜದ ಸ್ವಾಸ್ಥ್ಯ ಬೆತ್ತಲಾಗುವುದರಲ್ಲಿ ಮತ್ತೇನು ಸಂಶಯ?