ಸಾಮಾಜಿಕ ಕಳಕಳಿಯೆಂದರೆ…..
-ಡಾ.ಅಶೋಕ್ ಕೆ.ಆರ್
ದೇವಾಡಿಗ ಯುನೈಟೆಡ್ ಚಾರಿಟಿ ಶೋ…
– ಲೋಕು ಕುಡ್ಲ
ಪೊರ್ಲು ಬೈಯ್ಯದ ಮುಗಲ್ ಕತ್ತಲೆಡ್ ಕುಡ್ಲದ ಟೌನ್ ಹಾಲ್ ವೇದಿಕೆಡ್ ಉಂದೇ ಶನಿವಾರದಾನಿ 26-5-2012 ನೇ ತಾರೀಖ್ ಗ್ ನಡತ್ತಿನ ದೇವಾಡಿಗ ಚಾರಿಟಿ ಶೋ ಕಾರ್ಯಕ್ರಮದ ಪೊರ್ಲು ವರ್ಣನೆಗ್ ಮೀರ್ದಿನ. ಯುವ ಸೈನ್ಯ ಎಡ್ಡೆ ಬೇಲೆಗ್ ಜತ್ತ್೦ಡ್ ಪಂದಾಂಡ ಆ ಬೇಲೆ ಪೊರ್ಲುಡು ನೆರವೇರುನೆಟ್ಟ್ ವಾ ಸಂಶಯಲಾ ಇಜ್ಜಿ ಪನ್ಪಿನೆನ್ ದೇವಾಡಿಗ ಯುನೈಟೆಡ್ ಯುವ ಸಂಘಟನೆ ತೋಜಾದ್ ಕೊರ್ತೆರ್, ಜತ್ತಿ ಬೆಗರ್ ಪನಿನ್ ಲೆಕ್ಕ ದೀವಂದೆ ದೇವಾಡಿಗ ಯುನೈಟೆಡ್ ಸಂಘಟನೆ ಮಂತಿ ಬೇಲೆ ಶ್ಲಾಘನೀಯ, ದಾನೊಡ್ದು ಮಲ್ಲ ದಾನ ವಿಧ್ಯಾದಾನ ಆ ಮಲ್ಲ ದಾನೊನು ಮಂತಿ ಪುಣ್ಯ ಮಾತ ದೇವಾಡಿಗ ಯುವ ಬಂಧುಲೆಗ್ ಸಂದುಂಡು,
ಕಾನೂರು ಹೆಗ್ಗಡಿತಿ – 75
– ಡಾ| ಬಿ.ಆರ್ ಸತ್ಯನಾರಾಯಣ
ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ ಸಾರ್ಥಕ ೭೫ ವರ್ಷಗಳು ಕಳೆದಿವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ.ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.
ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಸ್ನೇಹಿತರಲ್ಲಿ ನೀವೇಕೆ ಬರೆಯಲು ಪ್ರಯತ್ನಿಸಬಾರದು? ಎಂದು ಪೀಡಿಸುತ್ತಿದ್ದರಂತೆ. ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ನೀವೇ ಏಕೆ ಬರೆಯಬಾರದು? ಎಂದರಂತೆ. ಆಗ ಕುವೆಂಪು ಅವರು ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ! ಎಂದು ನಕ್ಕಬಿಟ್ಟಿದ್ದರಂತೆ. ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!
ಸುಂದರ್ ರಾಜ್ ನೆನಪಿಸಿಕೊಂಡಂತೆ ಅಂಬರೀಷ್ !
– ಶ್ರೀಧರ್ ಜಿ ಸಿ ಬನವಾಸಿ
ಅಂಬರೀಷ್ ಜೊತೆಗಿನ ನನ್ನ ಸ್ನೇಹವನ್ನು ಈ ಮೂಲಕ ವರ್ಣಿಸೋದು ತುಂಬಾ ಕಷ್ಟ. ಅಂಬರೀಷ್ ಜೊತೆಗಿನ ನನ್ನ ಒಡನಾಟ, ಸ್ನೇಹ, ಓಡಾಟ, ಕೆಲಸಮಾಡಿದ್ದು ನನಗೆ ಬೆಟ್ಟದಷ್ಟು ಅಪಾರ ನೆನಪುಗಳು ನನ್ನ ಮನಸ್ಸಿನಲ್ಲಿವೆ. ಆತ ಹೀಗೆ ಅಂತ ಹೇಳೋದು ತುಂಬಾ ಕಷ್ಟ, ಆತನ ತರಹ ನೀವಾಗಬೇಕು ಅಂತಾನೂ ಹೇಳೋದು ತುಂಬಾ ಕಷ್ಟ. ಅಂಬರೀಷನಿಗೆ ಅಂಬರೀಷನೇ ಸಾಟಿ. ಅಂಬರೀಷ್ ಯಾಕೆ ಇಷ್ಟವಾಗ್ತಾರೆ ಅಂತ ಅವರನ್ನ ಇಷ್ಟಪಡೋ ಎಲ್ಲರನ್ನು ಕೇಳಿ ಒಬ್ಬೋಬ್ಬರು ಆತನನ್ನು ಒಂದೊಂದು ರೀತಿಯಲ್ಲಿ ವರ್ಣಿಸುತ್ತಾರೆ. ಹಾಗಾಗಿ ಅಂಬರೀಷ್ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ. ಕನ್ನಡಚಿತ್ರರಂಗವೇಕೇ, ರಾಜಕೀಯ, ಬೇರೆ ಚಿತ್ರರಂಗ, ರಾಜ್ಯ ರಾಜಕೀಯ, ದೆಹಲಿ ರಾಜಕೀಯದ ವ್ಯಕ್ತಿಗಳು ಕೂಡ ಆತನನ್ನು ಇಷ್ಟಪಡುತ್ತಾರೆ. ಆತನ ವ್ಯಕ್ತಿತ್ವೇ ಅಂತಹದ್ದು. ಅಜಾತಶತ್ರು, ಹುಂಬತನ, ಎದೆಗಾರಿಕೆ, ಬೇರೆಯವರಿಗೆ ಮರುಗುವ ಮನಸ್ಸು ಆತನ ಗುಣಗಾನ ಮಾಡುವುದು ನಿಜವಾಗಿಯೂ ಕಷ್ಟ ಸಾಧ್ಯ. ಇಂತಹ ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಅನ್ನುವುದೇ ನನ್ನ ಹೆಮ್ಮೆಗೆ ಕಾರಣ.
ಅಂಬಿ ‘ನಾನೊಬ್ಬ ಅದ್ಭುತ ನಟ’ ಅಂತ ಎಲ್ಲೂ, ಯಾರ ಹತ್ತಿರವೂ ಹೇಳಿಕೊಂಡವರಲ್ಲ. ಆದರೆ, ವ್ಯಕ್ತಿಯಾಗಿ, ಸಮಾಜದ ಶಕ್ತಿಯಾಗಿ, ಉತ್ತಮ ಮನುಷ್ಯನಾಗಿ ಅಂಬಿಗೆ ಅಂಬಿಯೇ ಸಾಟಿ. ಇಂಥ ವೈವಿಧ್ಯತೆಯ ಮನುಷ್ಯನನ್ನು ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನನಗೆ ಅಂಬಿ ಕಂಡರೆ ಸಣ್ಣ ಒಳ್ಳೆಯ ಹೊಟ್ಟೆಕಿಚ್ಚಂತೂ ಇತ್ತು, ಏನಪ್ಪಾ ಈ ಮನುಷ್ಯ ಪುಟ್ಟಣ್ಣನಂತಹ ನಿರ್ದೇಶಕರ ಮನಸ್ಸನ ಹೇಗಂಪಾ ಗೆದ್ದು ಬಿಟ್ಟಿದ್ದಾನೆ. ನಾವೇನೋ ಬಾಲಚಂದರ್ ಸಿನಿಮಾಗಳಲ್ಲಿ ಗುರುತಿಸಿಕೊಂಡುಬಿಟ್ಟಿದ್ವಿ. ಆದರೆ ಪುಟ್ಟಣ್ಣರ ಸಿನಿಮಾಗಳಲ್ಲಿ ನಮಗೆ ಅವಕಾಶ ಸಿಕ್ಕಿರಲಿಲ್ಲ. ಈತನ್ನ ನೋಡಿದ್ರೆ ಪುಟ್ಟಣ್ಣನವರ ಹೆಚ್ಚಿನ ಸಿನಿಮಾಗಳಲ್ಲಿ ಚಾನ್ಸ್ ತಗೋತಾ ಇದಾನೆ. ಪುಟ್ಟಣ್ಣ ಕಣಗಾಲ್ ಗುರುಕೃಪೆಗೆ ಹೆಚ್ಚು ಒಳಗಾದ ನಟ ಅಂಬರೀಶ್ನನ್ನು ಕಂಡಾಗ ಈ ರೀತಿಯ ಅವ್ಯಕ್ತ ಅಸೂಹೆಯ ಪ್ರೀತಿ ಆತನ ಮೇಲಿತ್ತು. ಆದರೆ ಅಂಬರೀಷ್ ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನನ್ನು ಗೆದ್ದುಬಿಟ್ಟಿದ್ದ.
ರಾತ್ರಿಯ ಕತ್ತಲಿನ ಮೌನ ನನ್ನಲ್ಲಿನ ಪ್ರಶ್ನೆಗಳಿಗೆ ಸಿಕ್ಕ ಉತ್ತರವಾಗಿತ್ತು
– ಭಾಸ್ಕರ್ ಎಸ್.ಎನ್
ತನ್ನ ಕಂದಮ್ಮನನ್ನು ಕಂಕುಳಲ್ಲಿ ಹೊತ್ತ ಆಕೆಗೆ ಮುಂದಿನ ದಾರಿ ಕಾಣುತ್ತಿಲ್ಲ, ಕೊನೆಯ ಕಣ್ಣ ಹನಿಯೂ ಸಹಾ ಬತ್ತಿ ಹೋಗಿತ್ತು. ಕ್ಷಣದಿಂದ ಕ್ಷಣಕ್ಕೆ ಕಂಕುಳಲ್ಲಿದ್ದ ಮಗುವಿನ ಜ್ವರ ಏರುತ್ತಿತ್ತು.
“ಏನಮ್ಮಾ! ಇಲ್ಲಿ ಸುಮ್ನೆ ನಿಂತಿದ್ರೆ ಕೆಲ್ಷ ಆಗೋಲ್ಲ. ದುಡ್ಡಿದ್ರೆ ಮಾತ್ರ ಇಲ್ಗೆ ಬಾ…ಸುಮ್ನೆ ನಮ್ ತಲೆ ತಿನ್ಬೇಡಾ, ಹೋಗ್..ಹೋಗ್” ಹೀಗೆ ಬಂದ ದ್ವನಿಯಲ್ಲಿದ್ದ ನಿರ್ಭಾವುಕತೆ ಆಕೆಯನ್ನು ಮತ್ತಷ್ಟು ನಿಸ್ಸಹಾಯಕ್ಕೆ ದೂಡುತ್ತಿತ್ತು. ಈ ಮಾತುಗಳನ್ನಾಡಿದವರು ಮತ್ಯಾರೂ ಅಲ್ಲ, ಒಬ್ಬ ಸುಪ್ರಸಿದ್ದ ಡಾಕ್ಟರ್, ಡಾ.ಕಷ್ಯಪ್. “ಅನುಗ್ರಹ ನರ್ಸಿಂಗ್ ಹೋಂ” ನ ಒಡೆಯ.
ಇವೆಲ್ಲವನ್ನು ಗಮನಿಸುತ್ತಿದ್ದ ನನಗೆ ಆಕೆಯ ದಯನೀಯ ಸ್ಥಿತಿ ಕಂಡು ಮಾತು ಹೊರಡದಂತಾಗಿತ್ತು. ಒಂದು ರೀತಿಯ ನಿಸ್ಸಹಾಯತೆ ನನ್ನನ್ನು ಆವರಿಸ ತೊಡಗಿತ್ತು.
ಆಕೆಯ ಜೊತೆಯಲ್ಲಿದ್ದ ಮಹಿಳೆಯಿಂದ ತಿಳಿದು ಬಂದ ವಿಷಯವೆಂದರೆ, ಆಕೆಗೆ ಇಬ್ಬರು ಹೆಣ್ಣುಮಕ್ಕಳು, ಈಗ ಇರುವ ಮಗುವಿಗೆ ಒಂದು ವರ್ಷ, ಮತ್ತೊಂದು ಮಗು ಈಗ್ಗೆ ೪ ದಿನಗಳ ಹಿಂದೆ ಸಾವನ್ನಪ್ಪಿತ್ತು..! ಅದೂ ಸಹಾ ಜ್ವರದಿಂದ ಅದ್ಯಾವ ಜ್ವರವೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಈಗ ಮಗುವಿಗೆ ಬಂದಿರುವುದೂ ಸಹಾ ಜ್ವರವೇ.
ವೈಜ್ಞಾನಿಕ ಮನೋಧರ್ಮ ಉಳ್ಳ ಶ್ರೀಸಾಮಾನ್ಯ
-ಎ.ವಿ.ಜಿ ರಾವ್
ಶಾಲೆಗೇ ಹೊಗದಿರುವ ಶ್ರೀಸಾಮಾನ್ಯನೂ ವಿಜ್ಞಾನ ಪದವೀಧರನಿಗಿಂತ ಹೆಚ್ಚು ವೈಜ್ಞಾನಿಕ ಮನೋಧರ್ಮ ಉಳ್ಳವನಾಗಿರುವುದು ಸಾಧ್ಯ. ವೈಜ್ಞಾನಿಕ ಮನೋಧರ್ಮ ಅಂದರೇನು ಅನ್ನುವುದರ ಕುರಿತು ಪಾಂಡಿತ್ಯಪೂರ್ಣ ಪ್ರವಚನ ನೀಡಬಲ್ಲವರು, ವೈಜ್ಞಾನಿಕ ಸಂಶೋಧನೆ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ‘ವೃತ್ತಿಪರ’ ವಿಜ್ಞಾನಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ವೈಜ್ಞಾನಿಕ ಮನೋಧರ್ಮ ಪ್ರದರ್ಶಿಸದಿರುವ ಅಸಂಖ್ಯ ನಿದರ್ಶನಗಳು ಲಭಿಸುತ್ತವೆ. ವೈಜ್ಞಾನಿಕ ಮನೋಧರ್ಮ ಅಂದರೇನು ಎಂಬುದನ್ನು ತಿಳಿಯದೆಯೂ (ನೋಡಿ:ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು) ವಿಜ್ಞಾನದ ಗಂಧಗಾಳಿ ಇಲ್ಲದೆಯೂ ನಿತ್ಯಜೀವನದಲ್ಲಿ ವೈಜ್ಞಾನಿಕ ಮನೋಧರ್ಮ ಉಳ್ಳವರಾಗಿರುವುದು ಸಾಧ್ಯ.
ಈ ಮುಂದೆ ವಿವರಿಸಿರುವ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವೂ ವೈಜ್ಞಾನಿಕ ಮನೋಧರ್ಮ ಉಳ್ಳವರು. ಇಲ್ಲದೇ ಇದ್ದರೆ ಅವನ್ನು ಪ್ರಜ್ಞಾಪೂರ್ವಕವಾಗಿ ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ, ಮುಂದೊಂದು ದಿನ ನಿಮಗರಿವಿಲ್ಲದೆಯೇ ವೈಜ್ಞಾನಿಕ ಮನೋಧರ್ಮ ಉಳ್ಳವರು ನೀವಾಗಿರುತ್ತೀರಿ.
ಈ ಮುಂದಿನ ಕಾಲ್ಪನಿಕ ವಿದ್ಯಮಾನದ ನಿದರ್ಶನದಲ್ಲಿ ವರ್ಣಿಸಿದ ವ್ಯಕ್ತಿ ನೀವಾಗಿರಬಹುದೇ—–
ಪೆಟ್ರೋಲ್ ದರ ಹೆಚ್ಚಳ ಮತ್ತು ನಾವು
– ಪ್ರಶಸ್ತಿ.ಪಿ,ಸಾಗರ
ಇದೇ ಏಪ್ರಿಲ್ ಒಂದರಲ್ಲಿ ೭೩.೫ ಇದ್ದ ಪೆಟ್ರೋಲು ಈಗ ೮೧.೭ ಮುಟ್ಟಿದೆ.ಒಂದೇ ತಿಂಗಳಲ್ಲಿ ಅಂದಾಜು ೭ ರೂ ಹೆಚ್ಚಳ! ಪ್ರತೀ ಬಾರಿ ಹೆಚ್ಚಾದಾಗ್ಲೂ ಕೇಂದ್ರ ಸರ್ಕಾರ ಏನ್ಮಾಡ್ತಾ ಇದೆ? ರಾಜ್ಯ ಸರ್ಕಾರ ಏಕೆ ಸುಮ್ನಿದೆ ಅಂತ ಬೊಬ್ಬೆ ಹಾಕೋದು, ಸೈಕಲ್ ಸವಾರಿ ಮಾಡ್ಬೇಕು ಇನ್ಮುಂದೆ, ನಟರಾಜ ಸರ್ವೀಸು ಮಾಡೋಣ ಅಂತ ಸುಮ್ನೆ ಉಡಾಫೆ ಮಾಡೋದೆ ಆಯ್ತು. ಯಾರೆಷ್ಟೇ ಪ್ರತಿಭಟನೆ ಮಾಡಿದ್ರೂ ಇವ್ರು ಬಗ್ಗೊಲ್ಲ ಅಂತ ಅವ್ರಿಗೆ ಹಿಡಿಶಾಪ ಹಾಕಿದ್ರೆ ಪರಿಸ್ಥಿತಿ ಸರಿ ಆಗತ್ಯೆ? ನಮ್ಮ ಭೂಮಿಯಲ್ಲಿರೋ ನವೀಕರಿಸಲಾಗದ (ಪೆಟ್ರೋಲು, ಡೀಸೆಲು ಮುಂತಾದ)ಇಂಧನ ಮೂಲಗಳನ್ನ ಹೀಗೆ ಉಪಯೋಗಿಸ್ತಾ ಹೋದ್ರೆ ಇನ್ನು ಅಂದಾಜು ಮೂವತ್ತು ವರ್ಷಗಳಲ್ಲಿ ಅವುಗಳೆಲ್ಲಾ ಖಾಲಿ ಆಗುತ್ತೆ ಅಂತ ಹೈಸ್ಕೂಲಿನಲ್ಲೇ ಓದಿದ ನೆನಪು . ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ ಏಕೆ? ಸುಧಾರಣೆ ಆಗಲಿ, ಆದರೆ ಅದು ನಮ್ಮಿಂದ ಅಲ್ಲ, ಶಂಕರಾಚಾರ್ಯರು ಹುಟ್ಟಲಿ, ಆದರೆ ಪಕ್ಕದ ಮನೆಯಲ್ಲಿ ಎಂಬಂತ ಧೋರಣೆ ಏಕೆ?
ಕೆಲವೇ ವರ್ಷಗಳ ಹಿಂದೆ ಜತ್ರೋಪಾದಂತಹ ಗಿಡಗಳಿಂದ ಜೈವಿಕ ಇಂಧನ ತಯಾರಿಸೋ ಬಗ್ಗೆ ಚರ್ಚೆ ನಡೆದಿತ್ತು. ಅವುಗಳನ್ನು ಮರುಭೂಮಿಯಂತಹ ನೀರಿಲ್ಲದ ಕಡೆಯೂ ಬೆಳೆಸಬಹುದು ಎಂಬ ವದಂತಿಯೂ/ಸುದ್ದಿಯೂ ಹಬ್ಬಿತ್ತು. ನಮ್ಮ ಕಡೆಯೂ ಅದನ್ನ ಬೇಲಿ ಬದಿಯಲ್ಲಿ ಅದನ್ನು ಹಾಕಿದ್ದೆವು. ಆಮೇಲೆ ಅದರ ಬೀಜವನ್ನು ಖರೀದಿಸುವ ಬಗ್ಗೆಯಾಗಲಿ, ಎಣ್ಣೆ ಮಾಡುವ ಸುದ್ದಿಯಾಗಲಿ ಬರಲೇ ಇಲ್ಲ. ಇಂಥಹ ಪ್ರಯತ್ನಗಳೆಲ್ಲಾ ನಿರಂತರವಾಗಿರಬಾರದೇ? ಪೆಟ್ರೋಲ್ ದರ ಜಾಸ್ತಿ ಆದಾಗ ಮಾತ್ರ ಎಲ್ಲಿ ಜತ್ರೋಪಾದವರು ಎಂದು ಗುಟುರು ಹಾಕಬೇಕೇ ? ಮತ್ತಷ್ಟು ಓದು
ಐಪಿಎಲ್ 5 – ಈ ದುರಂತಕ್ಕೆ ಏನ್ ಅಂತೀರಿ?
– ಗಣೇಶ್ ಕೆ. ದಾವಣಗೆರೆ
ಆತ ಎಂಜಿನಿಯರಿಂಗ್ ಕಾಲೇಜು ಹುಡುಗ. ಕಾಲೇಜು ಫೀಸ್ ಕಟ್ಟು ಅಂತಾ 50,000 ಕೊಟ್ಟರು. ಆದರೆ, ಆತ ಐಪಿಎಲ್ ಬೆಟ್ಟಿಂಗ್ ಆಡಿ ಐವತ್ತನ್ನ ಲಕ್ಷ ಮಾಡಿಕೊಂಡರೆ ಹೇಗೆ ಅಂತಾ ಯೋಚಿಸಿ, ಬೆಟ್ಟಿಂಗೆ ಕಟ್ಟಿದ. ಪರಿಣಾಮ? ಅವರಪ್ಪ ಕಷ್ಟಪಟ್ಟು ವರ್ಷವೆಲ್ಲ ದುಡಿದ 50,000 ಯಾವನದೋ ಪಾಲಾಯಿತು. ಅವರ ಅಪ್ಪ ಅಮ್ಮ ಈಗ ಗೋಳಾಡ್ತಾ ಇದಾರೆ. ಇದು ನಾನು ಕಣ್ಣಾರೆ ಕಂಡ ಸತ್ಯ ಘಟನೆ.
ಒಂದೇ ಒಂದು ಬಾರಿ ಹುಡುಗರ ಪಿಜಿಗಳು, ಕಾಲೇಜು ಬಾಯ್ಸ್ ಹಾಸ್ಟೆಲ್ ಗಳು, ನಾಲ್ಕು ಜನ ಸೇರುವ ವೃತ್ತಗಳು ಎಲ್ಲವನ್ನ ಒಮ್ಮೆ ಅಡ್ಡಾಡಿ ಬನ್ನಿ. ನಿಮಿಷ ನಿಮಿಷಕ್ಕೂ ಬೆಟ್ಟಿಂಗ್. ಐನೂರಕ್ಕೆ D ಅನ್ನೋ ಕೋಡ್ ವರ್ಡ್. ಸಾವಿರಕ್ಕೆ S ಅನ್ನೋ ಕೋಡ್ ವರ್ಡ್. 1 D ಅಂದ್ರೆ 500. 2 D ಅಂದ್ರೆ 1000, 1 S ಅಂದ್ರೆ 1000. 2 S ಅಂದ್ರೆ 2000 ಹಿಂಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರಲ್ಲೂ ಫ್ಯಾನ್ಸಿ ಅನ್ನೋ ಆಟ ಬೇರೆ ಇದೆ. ಪ್ರತಿ ಬಾಲ್ ಮೇಲೆ ಬೆಟ್ಟಿಂಗ್. ಈ ಬಾಲ್ ಫೋರ್ ಹೋಗುತ್ತೆ. ಬೆಟ್ ಕಟ್ತೀಯಾ? ಹಳ್ಳಿಯಲ್ಲಿ ಕೂತಿರುವ ಬುಕ್ಕಿಯ ದನಿ. ಈತ ಇಲ್ಲಿಂದ 2 S ಅಂದ್ರೆ ಎರಡು ಸಾವಿರ ಬೆಟ್ಟಿಂಗ್. ಬಂತು ಅಂದ್ರೆ 4000. ಹೋಯ್ತು ಅಂದ್ರೆ 2000 ಖತಂ. ಸುಮ್ನೆ ಒಂದು ಆಟ ಆಡಿ ರೊಕ್ಕ ಮಾಡಿಕೊಂಡು ಹೋಗುವಂತಿಲ್ಲ. ಸೀಸನ್ ಮುಗಿಯುವವರೆಗೂ ಆಡಬೇಕು. ಹೊಸಬರಾದರೆ 50,000 ಠೇವಣಿ ಕೂಡಾ ಇಡಬೇಕು. ಅಮೇಲೆ ಆಟ.
ಇಷ್ಟೆಲ್ಲಾ ಮಾತುಕತೆಗಳು ನಾಲ್ಕೈದು ಸೆಕೆಂಡುಗಳಲ್ಲಿ ಆಗುವಂಥದ್ದು. ಬುಕ್ಕಿಗಳು ಜಾಸ್ತಿ ಹೊತ್ತು ಮಾತಾಡಲ್ಲ. ನಿರ್ಧರಿಸಲು ನಿಮಿಷಗಟ್ಲೇ ಟೈಮ್ ಕೂಡಾ ಕೊಡಲ್ಲ. ಬರೀ Guess work ಮೇಲೆ ಹೌದು ಇಲ್ಲಾ ಅನ್ಬೇಕು.
ಗಾಳ..
– ಅನಿತ ನರೇಶ್ ಮಂಚಿ
ಎಫ್ ಬಿ ತೆರೆಯುತ್ತಿದ್ದಂತೆ ಬದಿಯಲಿ ಬಂದ ಫ್ರೆಂಡ್ ರಿಕ್ವೆಷ್ಟ್ ಗಳನ್ನು ನೋಡಿದ. ಅಲ್ಲಿ ಕಾಣಿಸಿದ ಸುಂದರಿಯೊಬ್ಬಳ ಭಾವಚಿತ್ರ ನೋಡಿ ದಂಗಾದ ಲಲಿತ್..
ಹೆಸರು ನಿವೇದಿತಾ.. ಕಾಲೇಜು ಕನ್ಯೆ.. ತುಂಟ ನಗುವಿನ ಆ ಮುಖ ತನ್ನ ಗಾಳಕ್ಕೆ ಬೀಳಬಹುದೇ… !! ಅರೆಕ್ಷಣ ಚಿಂತಿಸಿ ,ಕೂಡಲೆ ಕನ್ ಫರ್ಮ್ ಮಾಡಿದ.
ಜೊತೆಗೆ ‘ಬಿ ಮೈ ಫ್ರೆಂಡ್ ಫಾರ್ ಎವರ್’ ಎಂದು ಮೆಸೇಜ್ ಕಳುಹಿಸಿದ.
ಕೂಡಲೇ ಆ ಕಡೆಯಿಂದ ‘ಇಟ್ ಈಸ್ ಮೈ ಪ್ಲೆಶರ್’ ಎಂಬ ಪ್ರತ್ಯುತ್ತರ.
ಕುಳಿತಲ್ಲೇ ನಸುನಗೆ ಬೀರಿದ. ಲಲಿತ್ ಅಗರ್ವಾಲ್ ಹೆಸರು ಯುವ ಪೀಳಿಗೆಗೆ ಪರಿಚಿತವೇ. ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲೂ ರಾರಾಜಿಸುತ್ತಿದ್ದ ತನ್ನ ಮುಖ. ಅಪ್ಪನ ಉದ್ಯಮದ ಕೋಟಿಗಟ್ಟಲೆ ಹಣದ ಏಕೈಕ ವಾರಸುದಾರ, ಯುವತಿಯರ ನಿದ್ದೆ ಕದಿಯುವಂತಿರುವ ಸುಂದರ ಮೊಗ.. ಇಷ್ಟು ಸಾಲದೇ ನನ್ನನ್ನು ಗುರುತಿಸಲು.. ಹೆಮ್ಮೆಯಿಂದ ಬೀಗಿತ್ತು ಮನ.
ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು …
– ಎಸ್.ಎನ್ ಭಾಸ್ಕರ್
ಸರಿಸುಮಾರು ೧೦೦ ಕೆ.ಜಿಗೆ ತೂಗುವ ಆತನ ಮೈಯೆಲ್ಲಾ ವಿಭೂತಿಮಯ. ಕೊರಳಿನಿಂದ ಹೊಟ್ಟೆಯ ಹೊಕ್ಕುಳನ್ನು ತಾಕುವಷ್ಟು ಉದ್ದದ ಹಲವು ರುದ್ರಾಕ್ಷಿ ಮಾಲೆಗಳು. ಎತ್ತರದ ಆಕರ್ಷಕ ಆಸನದ ಮೇಲೆ ಪ್ರತಿಷ್ಟಾಪಿಸಲ್ಪಟ್ಟಿರುವ ವ್ಯಕ್ತಿಯ ಬಾಯಲ್ಲಿ ಅನಿಯಮಿತವಾಗಿ ಬರುತ್ತಿರುವ ಹಿತೋಪದೇಷಗಳು.
ಅಲ್ಲೆಲ್ಲೋ ಒಂದು ಗುಹೆ, ಅದರಲ್ಲಿದೆ ಅಚ್ಚರಿಯ ಕಲ್ಲು, ಮುಟ್ಟಿದರೆ ನಿಮ್ಮ ಪಾಪವೆಲ್ಲಾ ಮಾಯ….ಮತ್ತಿನ್ನಲ್ಲೋ ಇದೆ ಒಂದು ಕೆರೆ ಅದರ ನೀರಿನಲ್ಲಿ ಮಿಂದೆದ್ದರೆ ನಿಮ್ಮ ಕಷ್ಟ ಕಾರ್ಪಣ್ಯ ಅಷ್ಟ ದರಿದ್ರಗಳಿಗೂ ವಿರಾಮ.. ಹೀಗೂ ಉಂಟೇ..????
ಮುಂದೆ ಕಾದಿದೆ…..ಬರಲಿದೆ ಭೀಕರ ಪ್ರಳಯ, ಇದರಿಂದ ಜಗತ್ತು ಸರ್ವನಾಷ. ಅಲ್ಲೋಲ-ಕಲ್ಲೋಲ ಎಬ್ಬಿಸಲಿದೆ ಸುನಾಮಿ..ಇಡೀ ವಿಶ್ವವೇ ಮುಳಗಲಿದೆ ಸಮುದ್ರದಲ್ಲಿ..
ಕ್ಷಮಿಸಿ… ಇವೆಲ್ಲಾ ನಮ್ಮ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವಂತ ಕಾರ್ಯಕ್ರಮಗಳ ಒಂದು ಪಕ್ಷಿನೋಟ. ಇಂದು ಹುಟ್ಟಿಕೊಂಡಿರುವ ಟಿ.ವಿ ದೃಶ್ಯ ಮಾಧ್ಯಮಗಳ ಲೆಕ್ಕ ಬೆಳೆಯುತ್ತಲೇ ಇದೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಈ ಮಾದ್ಯಮಗಳಿಗೆ ಯಾವುದೇ ಬೇಲಿಯೇ ಇದ್ದಂತಿಲ್ಲ. ಟಿ.ವಿ೯, ಟಿವಿ೫, ನ್ಯೂಸ್೯, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಆ ಟಿವಿ, ಈ ಟಿವಿ. ಇತ್ಯಾದಿ..ಇತ್ಯಾದಿ..೨೪ ಘಂಟೆಗಳ ನಿರಂತರ ಸುದ್ದಿಪ್ರಸಾರಕ್ಕಾಗಿ ಈ ಚಾನೆಲ್‌ಗಳು ಮೀಸಲು. ಅದೆಂತಹ ಸುದ್ದಿಯೇ ಆಗಿರಬಹುದು ಅಥವಾ ಅಸಲು ಸುದ್ದಿಯೇ ಅಲ್ಲದಿರಬಹುದು, ಒಟ್ಟಿನಲ್ಲಿ ಹೇಳಲಿಕ್ಕೊಂದು ವಿಷಯ, ಬಿತ್ತರಿಸಲೊಂದು ಮಾಧ್ಯಮ, ನೋಡಲಿಕ್ಕೆಂದು ಪ್ರೇಕ್ಷಕರು…