ಬಿಟ್ಟೇ ಹೋಗುವ ಬೆಂಗಳೂರು ಅರಮನೆ
-ಪ್ರಶಸ್ತಿ ಪಿ ಸಾಗರ
ಬೆಂಗಳೂರು ಅರಮನೆ
ಬೆಂಗಳೂರಲ್ಲಿ ಲಾಲ್ ಬಾಗ್ , ವಿಧಾನ ಸೌಧ, ಕಬ್ಬನ್ ಪಾರ್ಕ್ ಗೊತ್ತು. ಇದೆಲ್ಲಿಂದ ಬಂತಪ ಅರಮನೆ ಅಂದ್ಕಂಡ್ರಾ ? ಮೈಸೂರು ಅರಮನೆ ಬಗ್ಗೆ ಬರೆಯೋಕೆ ಪೀಟಿಕೆ ಹಾಕ್ತಿದೀನಿ ಅಂದ್ಕಂಡ್ರಾ ? ಇಲ್ಲ ಸ್ವಾಮಿ . ನಾ ಹೇಳೋಕೆ ಹೊರಟಿರೋದು ಅರಮನೆ ರೋಡಲ್ಲಿರೋ ಮಹಾರಾಜರ ಬೇಸಿಗೆ ಅರಮನೆ ಬಗ್ಗೆನೇ . ಟಿಪ್ಪು ಅರಮನೆ ಅಂತ ಮಾರ್ಕೆಟ್ ಹತ್ರ ಇದ್ಯಲ ಅಂದ್ರ್ರ ? ಅದ್ರ ಬಗ್ಗೆನೂ.. ಹರಿಕತೇನೆ ನಿಮಗೆ ನಿದ್ದೆ ತರಿಸೋ ಮೊದ್ಲು ಅರಮನೆಗೆ ವಾಪಾಸ್ ಬರೋಣ.
ಹಿಂದಿನ ವಾರ ನಾವು ಗೆಳೆಯರು ಬೆಂಗಳೂರು ಅರಮನೆಗೆ ಹೋಗಿದ್ವಿ .ಮೂರು ಬಣ್ಣದ ರಕ್ಷಕರ ಭದ್ರತೆ ಕಾಣ್ತಿತ್ತು ಹೊರಗಿಂದ . ಗೂಗಲ್ ದೈವ ದಯಪಾಲಿಸಿದ್ದ ಚಿತ್ರಗಳನ್ನ್ನು ನ್ನೋಡಿಯೇ ಕೆರಳಿದ್ದ ನಮ್ಮ ಕುತೂಹಲ ಪೋಲಿಸ್ ಮಾವಂದಿರ ದರ್ಶನದಿಂದ ಇನ್ನು ಹೆಚ್ಚಾಯ್ತು. ಹೊರಗಿನಿಂದಲೂ ಚಿತ್ರ ತೆಗೆಯಕ್ಕೆ ಬಿಡಲಿಲ್ಲ ಅಲ್ಲಿ ಸಿಬ್ಬಂದಿ. ಅದರೂ ಮೊಬೈಲ್ ಕ್ಯಾಮರ ಸಮಾಧಾನಿಸುತ್ತ ಒಳ ಸಾಗಿದ ನಮಗೆ ಮತ್ತೊಂದು ಬೇಸರ ಕಾದಿತ್ತು. ಪ್ರವೇಶ ಶುಲ್ಕ ೨೦೦ ರೂ. ಮೈಸೂರು ಅರಮನೆಯಲ್ಲೂ ನೂರರ ಮೇಲಿಲ್ಲ . ತಾಜಮಹಲ್ , ಕೆಂಪುಕೋಟೆ ಹೀಗೆ ಭಾರತದಲ್ಲೇ ಭಾರತೀಯರಿಗೆ ಎಲ್ಲೂ ಇರದಷ್ಟು ಶುಲ್ಕ ಇಲ್ಲಿ !! ಆದರೆ ಬರೋದು ಬಂದಾಗಿದೆ .ನೋಡ್ಕೊಂಡೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಗೆಳೆಯರ ಹತ್ರ ಇದ್ದ ಬದ್ದ ದುಡ್ಡೆಲ್ಲ ಗುಡ್ಡೆ ಹಾಕಿ ಅಂತೂ ಒಳಗೆ ಸೇರಿದ್ವಿ. ಅಲ್ಲಿರೋ ಎಲ್ಲದರ ಮಾಹಿತಿ ಇದ್ದ ಆಡಿಯೋ ಗೈಡ ಉಚಿತ ಅನ್ನೋದಷ್ಟೇ ಅವಾಗಿದ್ದ ಸಮಾಧಾನ.
ಮೊದಲ್ನೇ ಜಾಗ ಅಂದ್ರೆ ಮತ್ತೆ ಹೊರಬಾಗಿಲಿಗೆ ಬಂದ್ವಿ. ಈ ಅರಮನೆಯನ್ನು ೧೮೭೩ರಲ್ಲಿ ಕಟ್ಟಲಾಯಿತಂತೆ. ಅದನ್ನು ಕಟ್ಟಿದ ಪರಿ, ಆಗಿನ ರಾಜ ವೊಡೆಯರರ ಮೈಸೂರು ಸಂಸ್ಥಾನದ ಪರಿ, ನೀರಾವರಿಯಿಂದ , ಅಭಿವೃದ್ದಿ ಯೋಜನೆಗಳೆಡೆಗೆ ಸಂಸ್ಥಾನ ಗಮನ ಹರಿಸಿದ ರೀತಿಯನ್ನು ಕೇಳುತ್ತ ಅಭಿಮಾನ ಕನಕಣದಲ್ಲೂ ಉಕ್ಕಿದ ಅನುಭವ. “ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು ” .. ಹಾಡಿನ ಹಿಮ್ಮೇಳ ಕೇಳಿದಂತಾಯ್ತು ಒಮ್ಮೆ . ಮತ್ತಷ್ಟು ಓದು 





